ಯೋಗಾಸನದಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಹಲವಾರು ಕಾಯಿಲೆಗಳನ್ನು ಕೂಡ ವಾಸಿ ಮಾಡಿಕೊಳ್ಳಬಹುದು. ಹಾಗೂ ರೋಗಗಳು ನಮ್ಮ ದೇಹಕ್ಕೆ ಬಾರದಂತೆ ತಡೆಯಲು ಕೂಡ ಯೋಗಾಸನ ಸಹಾಯಕವಾಗಿದೆ.ಪ್ರತಿದಿನವೂ ಯೋಗಾಸನ ಮಾಡಿದರೆ ಅದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ.ಯೋಗ ಬಂಗಿಗಳು ಮಾತ್ರವಲ್ಲದೆ ಕೆಲವೊಂದು ಯೋಗ ಮುದ್ರೆಯನ್ನು ಕೂಡ ಪಾಲಿಸಿದರೆ ಅದರಿಂದ ಹಲವಾರು ರೋಗಗಳಿಂದ ಮುಕ್ತಿ ಹೊಂದಬಹುದು.ಯೋಗ ಮುದ್ರೆಗಳು ಯೋಗದಲ್ಲಿ ಅತಿ ಪ್ರಾಮುಖ್ಯತೆಯನ್ನು ವಹಿಸುತ್ತವೆ. ಇದ್ದ ಮುದ್ರೆಗಳನ್ನು ಬಳಸಿಕೊಂಡು ನಮ್ಮ ದೇಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು.ಋಷಿಮುನಿಗಳು ಮನಸ್ಸನ್ನು ತುಂಬಾ ನಿಯಂತ್ರಣದಲ್ಲಿಟ್ಟುಕೊಳ್ಳುವುದಕ್ಕೇ ಕಾರಣ ಯೋಗ ಮುದ್ರೆಗಳು.
ಹೃದಯದ ಆರೋಗ್ಯಕ್ಕೆ ಪೂರಕ ಜೀವನಶೈಲಿ ಅತ್ಯಗತ್ಯ. ಹೃದಯದ ಆರೋಗ್ಯಕ್ಕೆ ಮುಖ್ಯವಾಗಿ ಬೇಕಾಗಿದ್ದು ವ್ಯಾಯಾಮ, ಉತ್ತಮ ಆಹಾರ ಪದ್ಧತಿ. ಒತ್ತಡಮುಕ್ತ ಜೀವನ. ಶರೀರಕ್ಕೆ ಅಗತ್ಯ ಕ್ಯಾಲೋರಿ ಪೂರೈಕೆ, ಸರಿಯಾದ ದೇಹ ತೂಕ ಕಾಪಾಡುವುದು, ಬೊಜ್ಜು ನಿಯಂತ್ರಣ, ಧೂಮಪಾನ ಹಾಗೂ ಮದ್ಯಪಾನ ನಿಯಂತ್ರಣದ ಜೊತೆಗೆ, ಕೆಲವೊಂದು ಯೋಗಾಸನಗಳನ್ನು ಮಾಡುವುದರ ಮುಲಕ ಹೃದಯವನ್ನು ಜೋಪಾನವಾಗಿಡುವಲ್ಲಿ ಸಹಕಾರಿಯಾಗಲಿದೆ.ನಿಮ್ಮ ಕಾಲುಗಳನ್ನು ಚಾಚಿಕೊಂಡು ಚಾಪೆಯ ಮೇಲೆ ಕುಳಿತುಕೊಳ್ಳಿ.ಈಗ ನಿಮ್ಮ ಮೊಣಕಾಲುಗಳನ್ನು ಬಗ್ಗಿಸಿ. ಬಲ ಮೊಣಕಾಲನ್ನು ಚಾಪೆಗೆ ಒತ್ತುವಂತೆ ಇರಿಸಿ ಮತ್ತು ಬಲ ಪಾದವನ್ನು ನಿಮ್ಮ ಎಡ ಸೊಂಟದ ಹತ್ತಿರ ತರಿ.
ನಿಮ್ಮ ಎಡ ಪಾದವನ್ನು ಬಲ ಮೊಣಕಾಲಿನ ಹತ್ತಿರ ತರಲು ಪ್ರಯತ್ನಿಸಿ.ನಿಮ್ಮ ಸೊಂಟವು ಚಾಪೆಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ, ನಿಮ್ಮ ಎಡಗೈಯನ್ನು ಮೇಲಕ್ಕೆತ್ತಿ. ಈಗ, ಅದನ್ನು ಹಿಂದಕ್ಕೆ ತೆಗೆದುಕೊಂಡು ನಿಮ್ಮ ಸೊಂಟದ ಹಿಂದೆ ಚಾಪೆಯ ಮೇಲೆ ಕೈ ಇರಿಸಿ.ಬಲಗೈಯನ್ನು ಮೇಲಕ್ಕೆತ್ತಿ. ಈಗ, ನೀವು ಎಡಕ್ಕೆ ಮುಖಕ್ಕೆ ತಿರುಗಿಸುವಾಗ ಅದನ್ನು ಎಡ ಹೊರಗಿನ ತೊಡೆಯವರೆಗೆ ಇಳಿಸಿ.ನಿಮಗೆ ಸಾಧ್ಯವಾದರೆ, ನಿಮ್ಮ ಹಿಂದೆ ನೋಡಲು ನಿಮ್ಮ ಕುತ್ತಿಗೆಯನ್ನು ತಿರುಗಿಸಿ.ಈ ಭಂಗಿಯಲ್ಲಿ ಸುಮಾರು ಒಂದು ನಿಮಿಷವಾದರೂ ಹಾಗೇ ಇರಲು ಯತ್ನಿಸಿ. ನಿಧಾನವಾಗಿ ಮೊದಲ ಹಂತಕ್ಕೆ ಬನ್ನಿ.
ಯೋಗಮುದ್ರೆ ಏನು ಹೆಚ್ಚಾಗಿ ಧ್ಯಾನದ ಸಮಯದಲ್ಲಿ ಬಳಸಲಾಗುತ್ತದೆ. ಕೆಲವೊಂದು ಯೋಗ ಮುದ್ರೆಗಳು ಯೋಗ ಭಂಗಿಯನ್ನು ಹೇಳಿಕೊಡುತ್ತದೆ.ಇದರಿಂದ ನಿಯಮಿತವಾಗಿ ಅಭ್ಯಾಸ ಮಾಡಿಕೊಂಡರೆ ಆರೋಗ್ಯದ ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದು.ಹೃದಯದ ಆರೋಗ್ಯಕ್ಕಾಗಿ ನೀವು 5 ಯೋಗ ಮುದ್ರೆಗಳನ್ನು ಅಭ್ಯಾಸ ಮಾಡಿ ಕೊಳ್ಳಬೇಕು. ಮೊದಲನೆಯದಾಗಿ ಅಪಾನವಾಯು ಮುದ್ರೆ, ಈ ಮುದ್ರೆ ಹೃದಯ ರೋಗಗಳಿಗೆ ತುಂಬಾನೇ ಲಾಭದಾಯಕವಾಗಿದೆ.ಹೃದಯ ಗಾದೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಇದು ತಕ್ಷಣವೇ ಪರಿಹಾರವನ್ನು ಸೂಚಿಸುತ್ತದೆ. ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ. ಗ್ಯಾಸ್ಟಿಕ್ ಸಮಸ್ಯೆಯನ್ನು ಕೂಡ ಇದು ಗುಣಪಡಿಸುತ್ತದೆ.
ಬೆನ್ನು ನೋವಿನಿಂದ ಬಳಲುತ್ತಿರುವವರು ಕೂಡ ಯೋಗ ಮುದ್ರೆಯನ್ನು ಉಪಯೋಗಿಸಿಕೊಳ್ಳಬಹುದು ಇದರಿಂದ ಬೆನ್ನು ನೋವು ಕೂಡ ಕಡಿಮೆಯಾಗುತ್ತದೆ. ಇದನ್ನು ಮಾಡಲು ಪದ್ಮಾಸನ ದಂತೆ ಕುಳಿತುಕೊಳ್ಳಬೇಕು. ಎರಡು ಕೈಯನ್ನು ಮೊಣಕಾಲಿನ ಮೇಲೆ ಇಡಬೇಕು.ಎರಡನೆಯದಾಗಿ ಪ್ರಾಣಮುದ್ರೆ ಈ ಪ್ರಾಣ ಮುದ್ರೆಯು ಪ್ರಾಣಶಕ್ತಿಯ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಮತ್ತು ಇದರ ಲಾಭವೆಂದರೆ ಅಪಧಮನಿಗಳನ್ನು ಆರೋಗ್ಯವಾಗಿರಲು ಸಹಾಯಕವಾಗುತ್ತದೆ. ಹೃದಯಕ್ಕೆ ಸಂಬಂಧಿಸಿದ ಅಪಾಯವನ್ನು ತಡೆಯುತ್ತದೆ.ಇದನ್ನು ಮಾಡುವುದರಿಂದ ಪ್ರತಿರೋಧಕ ಶಕ್ತಿಯು ಕೂಡ ಹೆಚ್ಚಾಗುತ್ತದೆ. ಮೂರನೆಯದಾಗಿ ಸೂರ್ಯ ಮುದ್ರೆ, ನೀವು ಪ್ರತಿನಿತ್ಯವೂ ಸೂರ್ಯ ಮುದ್ರೆಯನ್ನು ಅಭ್ಯಾಸಮಾಡಿದರೆ ಅದರಿಂದ ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚಾಗುತ್ತದೆ. ಮತ್ತು ಉದಾಸೀನತೆಯನ್ನು ದೂರಮಾಡುತ್ತದೆ.
ಸೂರ್ಯ ಮುದ್ರೆಯನ್ನು ಅಭ್ಯಾಸ ಮಾಡಿದರೆ ಅದರಿಂದ ಬೊಜ್ಜು ಮಧುಮೇಹ ಥೈರಾಡ್ ಸಮಸ್ಯೆಗಳಿಂದ ದೂರವಾಗಬಹುದು. ಪುರುಷತ್ವದ ಸಂಕೇತವನ್ನು ಹೇಳಲಾ ನಾಲ್ಕನೆಯದಾಗಿ ಲಿಂಗಮುದ್ರೆ.ಈ ಮುದ್ರೆಯು ಪುರುಷತ್ವದ ಸಂಕೇತವಾಗಿದೆ. ಇದರಿಂದಾಗಿ ಇದನ್ನು ಲಿಂಗಮುದ್ರೆ ಎಂದು ಕರೆಯಲಾಗುತ್ತದೆ.ಇದು ಮಧುಮೇಹದಿಂದ ಬಳಲುತ್ತಿರುವವರಿಗೆ ತುಂಬಾನೆ ಒಳ್ಳೆಯದು ಮಧುಮೇಹ ಹಾಗೂ ಬೊಜ್ಜು ಇದ್ದವರು ಇದನ್ನು ಮಾಡಿದರೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ಈ ಮುದ್ರೆಯನ್ನು ಅಭ್ಯಾಸಮಾಡಿದರೆ ಇದರಿಂದ ಮಧುಮೇಹ ಮತ್ತು ತೂಕವನ್ನು ಕೂಡ ಇಳಿಸಿಕೊಳ್ಳಬಹುದು. ಹೀಗಾಗಿ ಹೃದಯದ ಆರೋಗ್ಯವು ನಿಯಂತ್ರಣ ವಾಗಿರುತ್ತದೆ. ಐದನೆಯದಾಗಿ ಗಣೇಶ ಮುದ್ರೆ ಈ ಗಣೇಶ ಮುದ್ರೆಯು ದೇಹಕ್ಕೆ ಶಕ್ತಿ ನೀಡುವುದು ಹಾಗೂ ನಮಗೆ ವಿಶ್ವಾಸವನ್ನು ಹೆಚ್ಚಿಸುವುದು.
ಈ ಭಂಗಿಯಿಂದ ಇಂದ ಸಿಗುವ ಲಾಭಗಳು ಈ ರೀತಿಯಾಗಿವೆ. ಈ ಭಂಗಿಯು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ಹಾಗೂ ದುರ್ಬಲ ಹೃದಯದ ವರಿಗೆ ಲಾಭವಾಗುತ್ತದೆ. ಇದು ಶ್ವಾಸನಾಳದ ಕೊಳವೆಯನ್ನು ತೆರೆಯುತ್ತದೆ ಮತ್ತು ರಕ್ತಸಂಚಾರವನ್ನು ಸುಧಾರಿಸುತ್ತದೆ.ಮತ್ತು ಇದು ಹೃದಯವನ್ನು ಬಲಗೊಳಿಸುತ್ತದೆ.ನೋಡಿದ್ರಲ್ಲ ಸ್ನೇಹಿತರೆ ನಿಮಗೆ ಉಪಯುಕ್ತ ಮಾಹಿತಿ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ