Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ತಿಂದಿದ್ದು ಸರಿಯಾಗಿ ಜೀರ್ಣ ಆಗುತ್ತಿಲ್ವ ಹಾಗಾದ್ರೆ ಮಲಗುವುದಕ್ಕೂ ಮೊದಲು ಈ ಯೋಗ ಮಾಡಿ ನೋಡಿ ತಕ್ಷಣ ಜೀರ್ಣ ಆಗುತ್ತೆ ..!!!

ನಮಸ್ಕಾರ ಸ್ನೇಹಿತರೇ ,ಇಂದಿನ ಆಹಾರ ಪದ್ದತಿಗಳ ವ್ಯತ್ಯಾಸದಿಂದ ಹಲವಾರು ಕಾರಣಗಳಿಂದ ನಾವು ತಿಂದ ಆಹಾರ ಸರಿಯಾಗಿ ಜೀರ್ಣ ಆಗುವುದಿಲ್ಲ . ಹೀಗೆ ತಿಂದ ಆಹಾರ ಜೀರ್ಣ ಆಗದೇ ಇದ್ದಾರೆ ನಮ್ಮ ಅರೋಗ್ಯ ಹದಗೆಟ್ಟು ಹಲವಾರು ರೋಗಗಳು ನಮ್ಮನ್ನು ಭಾದಿಸುತ್ತವೆ .ಹಾಗಾಗಿ ನಾವು ತಿಂದ ಆಹಾರ ಸರಿಯಾಗಿ ಜೀರ್ಣ ಆಗುವ ಹಾಗೆ ನಾವು ನೋಡಿಕೊಳ್ಳಬೇಕಾಗುತ್ತದೆ . ಹೌದು ಸ್ನೇಹಿತರೇ ,ನೀವು ರಾತ್ರಿಯ ಸಮಯದಲ್ಲಿ ಈ ಒಂದು ರೀತಿಯ ಯೋಗವನ್ನು ಅಭ್ಯಾಸ ಮಾಡಬೇಕಾಗುತ್ತದೆ . ಆ ಒಂದು ಯೋಗ ಯಾವುದು ಎನ್ನುವ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ..

ಈಗಿನ ಕಾಲದಲ್ಲಿ ಅಜೀರ್ಣತೆ ಎನ್ನುವುದು ಸಾಕಷ್ಟು ಜನರಿಗೆ ಶಾಪವಾಗಿ ಪರಿಣಮಿಸುತ್ತದೆ. ಯಾವುದಾದರೂ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದ ನಂತರ ಅದು ಹೊಟ್ಟೆಯ ಭಾಗದಲ್ಲಿ, ಅಜೀರ್ಣತೆಗೆ ಕಾರಣವಾಗುತ್ತದೆ.ಸಾಕಷ್ಟು ಜನರಿಗೆ ಹೊಟ್ಟೆ ಉಬ್ಬರ ಉಂಟಾಗುತ್ತದೆ. ಕೆಲವರಿಗೆ ಎದೆಯುರಿ ಮತ್ತು ಜೀರ್ಣಾಂಗಕ್ಕೆ ಸಂಬಂಧಪಟ್ಟಂತೆ ಇನ್ನೂ ಕೆಲವು ಸಮಸ್ಯೆಗಳು ಕಂಡು ಬಂದು ರಾತ್ರಿಯ ಸಮಯದಲ್ಲಿ ನಿದ್ರೆ ಬರುವುದಿಲ್ಲ.ಒಂದು ವೇಳೆ ಇಂತಹ ಸಂದರ್ಭ ನಿಮಗೂ ಸಹ ಎದುರಾಗಿದ್ದರೆ, ಇನ್ನು ಮುಂದೆ ಯೋಗ ಮಾಡಲು ಪ್ರಾರಂಭ ಮಾಡಿ.

ಇದು ನಿಮ್ಮ ದೇಹವನ್ನು ವಿಷಕಾರಿ ಅಂಶಗಳಿಂದ ಮುಕ್ತವಾಗಿಸಿ, ನಿಮ್ಮ ಹೊಟ್ಟೆಯ ಭಾಗದ ಮಾಂಸಖಂಡಗಳನ್ನು ಶಾಂತಗೊಳಿಸುತ್ತದೆ.ಇದರಿಂದ ಅಂತರಿಕವಾಗಿ ನಿಮ್ಮ ಜೀರ್ಣಾಂಗ ವ್ಯವಸ್ಥೆ ಕೂಡ ಅಭಿವೃದ್ಧಿಯಾಗಲಿದೆ. ಯೋಗ ಅಥವಾ ವ್ಯಾಯಾಮದಿಂದ ನಿಮ್ಮ ದೇಹದಲ್ಲಿ ಉತ್ತಮವಾದ ರಕ್ತಸಂಚಾರ ಕೂಡ ಉಂಟಾಗುವುದರಿಂದ ನಿಮ್ಮ ದೇಹದ ಎಲ್ಲ ಅಂಗಾಂಗಗಳು ನಿಮಗೆ ಸಹಕಾರಿಯಾಗಿ ಕಾರ್ಯನಿರ್ವಹಿಸಲು ಪ್ರಾರಂಭ ಮಾಡುತ್ತವೆ.ಹಾಗಾದರೆ ಅಜೀರ್ಣತೆ ಇನ್ನು ಹೋಗಲಾಡಿಸುವ ಯೋಗಾಭ್ಯಾಸ ಯಾವುದು ಎಂದು ನೀವು ಕೇಳುವುದಾದರೆ, ಈ ಲೇಖನದಲ್ಲಿ ಎರಡು ಬಗ್ಗೆ ಯೋಗಾಸನಗಳ ಬಗ್ಗೆ ನಾವು ತಿಳಿಸಿ ಕೊಟ್ಟಿದ್ದೇವೆ.​ಮೊದಲನೆಯದು ವಜ್ರಾಸನ,ರಾತ್ರಿಯ ಊಟದ ಸಮಯಕ್ಕೆ ಹೇಳಿಮಾಡಿಸಿದ ಯೋಗಾಭ್ಯಾಸ ಎಂದು ಇದನ್ನು ಕರೆಯಬಹುದು.

ಏಕೆಂದರೆ ಯೋಗಾ ಭ್ಯಾಸದಲ್ಲಿ ನಿಮ್ಮ ಮೇಲ್ಭಾಗದ ದೇಹ ವಿಸ್ತಾರಗೊಂಡು, ನಿಮ್ಮ ಉಸಿರಾಟ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯುವುದು ಮಾತ್ರವಲ್ಲದೆ ನಿಮ್ಮ ಹೊಟ್ಟೆಯ ಭಾಗದ ಮಾಂಸಖಂಡಗಳು ಶಾಂತವಾಗುತ್ತದೆ ಮತ್ತು ನೀವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗಲು ಸಹಾಯವಾಗುತ್ತದೆ.ವಜ್ರಾಸನ ಯೋಗಾಭ್ಯಾಸವನ್ನು ಮಾಡುವುದು ಹೇಗೆ ಎನ್ನುವುದಾದ್ರೆ ,ಮೊದಲು ನೀವು ನಿಮ್ಮ ಎರಡು ಕಾಲುಗಳನ್ನು ಮಡಿಸಿಕೊಂಡು ನಿಮ್ಮ ಸೊಂಟದ ಮೇಲೆ ಕುಳಿತುಕೊಳ್ಳಬೇಕು.ಈಗ ನಿಮ್ಮ ಎರಡು ಮಂಡಿಗಳ ಮೇಲೆ ನಿಮ್ಮ ಅಂಗೈಗಳನ್ನು ಇಡಿ.ಈ ಸಮಯದಲ್ಲಿ ನಿಮ್ಮ ಬೆನ್ನುಹುರಿ ನೇರವಾಗಿರಬೇಕು ಮತ್ತು ದೀರ್ಘವಾಗಿ ಉಸಿರು ತೆಗೆದುಕೊಳ್ಳುವ ಕಡೆಗೆ ನೀವು ಗಮನ ಹರಿಸಬೇಕು.ಈ ಭಂಗಿಯಲ್ಲಿ ನೀವು ಸುಮಾರು ಎಂಟರಿಂದ ಹತ್ತು ನಿಮಿಷಗಳು ಉಳಿಯಬೇಕು.

​ಎರಡನೆಯದು ಗೋಮುಖಾಸನ,ಹೇಳುವಂತೆ ಇದನ್ನು ಹಸುವಿನ ಭಂಗಿ ಎಂದು ಕರೆಯಬಹುದು.ಈ ಯೋಗಾಭ್ಯಾಸವನ್ನು ಮಾಡುವುದರಿಂದ ನಿಮ್ಮ ಬೆನ್ನುಹುರಿ ನೇರವಾಗಿ ವಿಸ್ತಾರವಾಗುತ್ತದೆ ಮತ್ತು ನಿಮ್ಮ ಹೊಟ್ಟೆಯ ಭಾಗದ ಮಾಂಸಖಂಡಗಳು ಶಾಂತ ಗೊಳ್ಳಲು ನೆರವಾಗುತ್ತದೆ ಇದರಿಂದ ನಿಮ್ಮ ಜೀರ್ಣಶಕ್ತಿ ಹೆಚ್ಚಾಗುವ ಸಾಧ್ಯತೆ ಇದೆ. ಈ ಅಭ್ಯಾಸವನ್ನು ಮಾಡಿದ ನಂತರ ನಿಮಗೆ ಆರಾಮದಾಯಕ ಅನುಭವ ಉಂಟಾಗುತ್ತದೆ.ಮೊದಲು ನಿಮ್ಮ ಎಡಗಾಲನ್ನು ಮಡಿಸಿಕೊಂಡು ನಿಮ್ಮ ಅಂಗಾಲು ನಿಮ್ಮ ಸೊಂಟದ ಭಾಗಕ್ಕೆ ಬರುವಂತೆ ಇಟ್ಟುಕೊಳ್ಳಿ.ಈಗ ನಿಮ್ಮ ಬಲಗಾಲನ್ನು ನಿಮ್ಮ ಎಡಗಾಲಿನ ಮೇಲೆ ಎರಡು ಮಂಡಿಗಳು ಟಚ್ ಆಗುವಂತೆ ಇಟ್ಟುಕೊಳ್ಳಿ.

ಈಗ ನಿಮ್ಮ ಎರಡು ಕೈಗಳನ್ನು ನಿಮ್ಮ ಹಿಂಬದಿಗೆ ಇಟ್ಟುಕೊಂಡು ಒಂದನ್ನೊಂದು ಹಿಡಿದುಕೊಳ್ಳಬೇಕು.ಈ ಸಮಯದಲ್ಲಿ ನಿಮ್ಮ ಬೆನ್ನುಹುರಿ ನೇರವಾಗಿರಬೇಕು ಮತ್ತು ನೀವು ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಬೇಕು.ಈ ರೀತಿ ಸ್ವಲ್ಪ ಹೊತ್ತು ಹಾಗೆ ಇದ್ದು ಆನಂತರ ನಿಮ್ಮ ಭಂಗಿಯನ್ನು ಬದಲಿಸಿ ಮತ್ತೊಮ್ಮೆ ಇದೇ ರೀತಿ ಮಾಡಿ.ಹೀಗೆ ಮಾಡುವುದರಿಂದ ನಿಮ್ಮ ಜೀರ್ಣಶಕ್ತಿ ಹೆಚ್ಚಾಗುತ್ತದೆ ಮತ್ತು ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ ಧನ್ಯವಾದಗಳು ಶುಭ ದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ