ಪಾದ ರಕ್ಷೆ ಎಂದರೆ ಪಾದವನ್ನು ರಕ್ಷಣೆ ಮಾಡುವುದು ಎಂದರ್ಥ, ಮುಲ್ಲಾ ಗಲಿ ಅಥವಾ ಯಾವುದೇ ಚುಚ್ಚುವ ವಸ್ತುವಾಗಲಿ, ಉರಿದ ವಸ್ತುವಾಗಲಿ ಯಾವುದೇ ಬರೀ ಕಾಲಿಗೆ ತಗುಲಿದರೂ ಅಪಾಯ ಕಟ್ಟಿಟ್ಟ ಬುತ್ತಿ,
ಕಾಲಿಗೆ ತೊಂದರೆಯಾಗದಿರಲಿ ಎಂದೇ ಪಾದರಕ್ಷೆಗಳನ್ನು ಮಾಡಿದ್ದಾರೆ, ಕೆಲವು ಸೂಕ್ಷ್ಮ ದುಷ್ಟ ಪ್ರಾಣಿಗಳು ಪ್ರವೇಶ ಮಾಡಬಾರದು ಎಂಬ ಉದ್ದೇಶಕ್ಕೆ ನಾವು ಪಾದರಕ್ಷೆಗಳನ್ನು ಧರಿಸಿ ಬೇಕಿದೆ, ಪ್ರಾಣಿಗಳಿಂದ ಆಗುವ ಗಾಯದಿಂದ ಇಡೀ ಕಾಲನ್ನೇ ಕಿತ್ತೊಗೆಯುವ ಪರಿಸ್ಥಿತಿ ಬಂದೊದಗುತ್ತದೆ .
ಹಾಗೂ ಅಕಸ್ಮಾತ್ ಏನಾದರೂ ತುಳಿದರೆ ಅದರಲ್ಲಿರುವ ರೋಗಾಣುಗಳು ನಮ್ಮಲ್ಲಿ ಸೇರಿ ಅನೇಕ ತೊಂದರೆಗಳನ್ನು ಉಂಟು ಮಾಡುವವು ಎಂಬ ಕಾರಣಕ್ಕೆ ನಾವು ಚಪ್ಪಲಿಯನ್ನು ಧರಿಸಬೇಕಾಗುತ್ತದೆ.
ಪವಿತ್ರವಾದ ಮಂದಿರಗಳಲ್ಲಿ ಚಪ್ಪಲಿ ಧರಿಸುವುದು ಸಮಂಜಸವಲ್ಲ ಎಂಬುದು ಒಂದಾದರೆ ಪಾದರಕ್ಷೆಯನ್ನು ಪ್ರಾಣಿಗಳ ಚರ್ಮದಿಂದ ಅಥವಾ ಪ್ಲಾಸ್ಟಿಕ್ ನಿಂದ ತಯಾರಿಸುತ್ತಾರೆ ಇದು ಸಹ ಒಂದು ಕಾರಣ, ಅಂತಹ ಪಾದರಕ್ಷೆಗಳನ್ನು ಹಾಕಿಕೊಂಡು ಒಳಗೆ ಹೋದರೆ ದೈವೀ ಶಕ್ತಿಯುಳ್ಳ ಆ ಪವಿತ್ರವಾದ ಸ್ಥಳ ಪವಿತ್ರವಾಗಿ ಮಲಿನ ವಾಗುವುದು ಎಂಬ ನಂಬಿಕೆ.
ಪಾದರಕ್ಷೆಯನ್ನು ಧರಿಸಿ ನಡೆಯುವಾಗ ಬರುವ ಶಬ್ದ ಏಕಾಗ್ರತೆಗೆ ಕೊರತೆ ಬರುವುದು, ಗುಡಿಯಲ್ಲಿ ಧರಿಸಿಕೊಂಡು ಹೋದರೆ ಏಕಾಗ್ರತೆಯಿಂದ ಭಗವಂತನನ್ನು ಧ್ಯಾನಿಸುತ್ತಾ ಇರುವ ಭಕ್ತರಿಗೆ ತೊಂದರೆ ಆಗಬಹುದೆಂದು ಚಪ್ಪಲಿಯನ್ನು ದೇವಸ್ಥಾನದ ಒಳಗೆ ಹಾಕಿಕೊಂಡು ಹೋಗುವುದಿಲ್ಲ.
ಪಾದ ರಕ್ಷೆ ಬಿಟ್ಟು ಹುಲ್ಲಿನ ಮೇಲೆ ನಡೆದರೆ ಒಳ್ಳೆಯ ರಕ್ತ ಸಂಚಾರವಾಗುತ್ತದೆ ಎಂದಾದರೆ ಪವಿತ್ರ ಮಂದಿರಗಳಲ್ಲಿ ಸದಾ ಸಕಾರಾತ್ಮಕ ಚಿಂತನೆಯು ಹರಿಯುತ್ತಿರುತ್ತದೆ, ಅದು ನಾವು ಬರಿಗಾಲಿನಲ್ಲಿ ಹೋದಾಗ ಮಿಂಚಿನಂತೆ ನಮ್ಮಲ್ಲಿ ಪ್ರವೇಶಿಸಿ ನಮ್ಮಲ್ಲೂ ಸಕಾರಾತ್ಮಕ ಚಿಂತನೆಯನ್ನು ತುಂಬಿಸಿ ನಮ್ಮ ಎಲ್ಲಾ ಕೆಲಸ ಕಾರ್ಯಗಳು ಸುಲಭವಾಗುವಂತೆ ಮಾಡುತ್ತದೆ.
ಧಾರ್ಮಿಕವಾದ ಚಿಂತನೆಯನ್ನು ಹೊಂದಿರುವ ಈ ಉಪಯುಕ್ತ ಮಾಹಿತಿ ಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯ ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ.