ಮನುಷ್ಯನಿಗೆ ಅಭಿವೃದ್ಧಿ ಜಾಸ್ತಿ ಅದರಂತೆಯೇ ಭೂಮಿ ಮೇಲೆ ಆಯ್ಕೆಗಳು ಜಾಸ್ತಿ, ಮನುಜ ನನಗೆ ಏನು ಬೇಕು ಅದನ್ನು ಆಯ್ಕೆ ಮಾಡಿಕೊಳ್ಳುವ ಬುದ್ಧಿವಂತಿಕೆ, ಮನಸ್ಥಿತಿ ಹಾಗೂ ಅತಿ ಮುಖ್ಯವಾಗಿ ಸ್ವಾತಂತ್ರ್ಯವನ್ನು ಹೊಂದಿದ್ದಾನೆ ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಮನುಷ್ಯನನ್ನು ಹೊರತು ಭೂಮಿಯ ಮೇಲೆ ಯಾವುದೇ ಪ್ರಾಣಿ ಪಕ್ಷಿ ಗಳಿಗೆ ಆಗಲಿ ಈ ಅನುಕೂಲ ಇಲ್ಲ, ಬೇಕಾದ್ದನ್ನು ಕೇಳಿ ಪಡೆಯುವ ಮಾತು ಸಹ ಮನುಜನಿಗೆ ಮಾತ್ರ ಸ್ವಂತ, ಅದರಂತೆ ಮನುಜ ತನ್ನ ಅಭಿವೃದ್ಧಿಯನ್ನು ಭಿನ್ನವಾಗಿ ಹೊಂದಿರುತ್ತಾನೆ, ಒಂದೇ ಮನೆಯಲ್ಲಿ ನಾಲ್ಕು ಜನ ಅಣ್ಣ ತಮ್ಮಂದಿರು ಬೆಳೆದರು ನಾಲ್ಕು ಜನರ ಆಯ್ಕೆ, ಅಭಿವೃದ್ಧಿ ಹಾಗೂ ಮನಸ್ಥಿತಿಗಳು ಒಂದೇ ರೀತಿಯಲ್ಲಿ ಇರುವುದಿಲ್ಲ, ಏಕೆಂದರೆ ಶಾಸ್ತ್ರದ ಪ್ರಕಾರ ದಲ್ಲಿ ಅವನ ರಾಶಿ ಗ್ರಹಗಳ ಅನುಸಾರವಾಗಿ ಅವನ ಆಯ್ಕೆಗಳು ಹಾಗೂ ನಡತೆ ಇರುತ್ತದೆಯಂತೆ, ಇನ್ನು ಶಾಸ್ತ್ರದ ಪ್ರಕಾರ ಪ್ರತಿವಾರವೂ ಒಂದು ಬಣ್ಣವನ್ನು ನಿಗದಿ ಮಾಡಲಾಗಿದೆ ಅದರಂತೆ ಬಟ್ಟೆ ತೊಟ್ಟರೆ ಅದೃಷ್ಟ ನಿಮ್ಮದಾಗುವುದು.
ಭಾನುವಾರ : ಭಾನುವಾರ ಸೂರ್ಯನ ವಾರ ಅಂದು ಸೂರ್ಯನಿಗೆ ಸಕಲ ಪೂಜೆಗಳನ್ನು ಮರ್ಯಾದೆಗಳನ್ನು ಸಲ್ಲಿಸಬೇಕಾದ ವಾರ, ಭಾನುವಾರದಂದು ಸೂರ್ಯನಿಗೆ ಸಮರ ಬೆಟ್ಟ ಕೆಂಪು ಬಣ್ಣದ ಬಟ್ಟೆಯನ್ನು ಅಥವಾ ಕೆಂಪು ಬಣ್ಣದ ಡಿಸೈನ್ ಹೊಂದಿರುವ ಬಟ್ಟೆಯನ್ನು ತೊಟ್ಟರೆ ಆ ದಿನ ಬಹಳ ಶುಭಕರ.
ಸೋಮವಾರ : ಭಾನುವಾರ ಸೂರ್ಯನ ವಾರವಾದರೂ ಸೋಮವಾರ ಚಂದ್ರನನ್ನು ಅಷ್ಟೇ ಅಲ್ಲದೆ ಶಿವನಿಗೆ ಬಲು ಪ್ರೀತಿಯ ವಾರ ಅದು ಸೋಮವಾರ, ಈ ಸೋಮವಾರದಂದು ನೀವು ನೀಲಿ, ಲೈಟ್ ಗ್ರೇ, ಬೆಳ್ಳಿ ಬಣ್ಣದ ಬಟ್ಟೆಯನ್ನು ತೊಟ್ಟರೆ ನಿಮ್ಮ ಕಾರ್ಯ ಸಿದ್ಧಿ ಕೈಗೂಡುವುದು.
ಮಂಗಳವಾರ : ಅಂಗಕಾರಕನು ಅಧಿಪತಿಯಾಗಿರುವ ವಾರ ಮಂಗಳವಾರ, ಕೆಂಪು ಮತ್ತು ಆರೆಂಜ್ ಬಣ್ಣದ ಬಟ್ಟೆಯನ್ನು ತೊಟ್ಟರೆ ಈ ಮಂಗಳವಾರ ನಿಮ್ಮ ಅದೃಷ್ಟದ ವಾರ ವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಬುಧವಾರ : ಬುಧವಾರ ಬುದ್ಧದೇವನ ವಾರ ಎಂಬುದು ನಿಮಗೆ ತಿಳಿದಿರುವ ವಿಷಯವೇ ಈ ದಿನ ನಿಮಗೆ ಯಶಸ್ಸು ಪ್ರಾಪ್ತಿಯಾಗಲಿ ಹಸಿರು ಬಣ್ಣದ ಬಟ್ಟೆಯನ್ನು ಕೊಟ್ಟರೆ ಉತ್ತಮ ಪ್ರತಿಫಲ ದೊರೆಯುವುದು.
ಗುರುವಾರ : ಗುರುವಾರ ಬೃಹಸ್ಪತಿಯ ವಾರ ಹಾಗಾಗಿ ಅವನಿಗೆ ಪ್ರಿಯವಾದ ಅರಿಶಿಣ ಬಣ್ಣದ ಬಟ್ಟೆಯನ್ನು ತೊಟ್ಟರೆ ಆ ದಿನ ನೀವು ಮಾಡಲು ಹೊರಟ ಯಾವ ಕೆಲಸದಲ್ಲೂ ಸೋಲನ್ನು ಕಾಣಲು ಸಾಧ್ಯವೇ ಇಲ್ಲ.
ಶುಕ್ರವಾರ : ಈ ವಾರ ಶುಕ್ರನು ಅಧಿಪತಿಯಾಗಿರುತ್ತಾನೆ, ಹಾಗಾಗಿ ಸುಖ ದೇವನಿಗೆ ಪ್ರಿಯವಾದ ಅಣ್ಣ ಎಂದರೆ ಹಸಿರು, ಸಮುದ್ರ ನೀಲಿ, ಹಾಗೂ ಬಿಳಿ ಬಣ್ಣದ ವಸ್ತ್ರಗಳಲ್ಲಿ ಯಾವುದನ್ನು ತೊಟ್ಟರು ಆ ದಿನದ ಯಶಸ್ಸು ನಿಮಗೆ ಲಭಿಸುವುದು ಖಂಡಿತ.
ಶನಿವಾರ : ಕಪ್ಪು, ನೀಲಿ ಹಾಗೂ ಬೂದಿ ಬಣ್ಣದ ವಸ್ತ್ರವನ್ನು ಮರೆಯದೆ ಧರಿಸಬೇಕು, ಕಾರಣ ನಿಮಗೆಲ್ಲಾ ಗೊತ್ತಿರುವಂತೆ ಶನಿವಾರ ಶನಿದೇವನ ಅಧಿಪತಿಯಾಗಿರುತ್ತಾನೆ ಹಾಗಾಗಿ ಮೇಲೆ ತಿಳಿಸಿದ ಬಣ್ಣದ ಬಟ್ಟೆಗಳನ್ನು ತೊಟ್ಟರೆ ಆ ದಿನದ ಯಶಸ್ಸು.
ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಹಂಚಿಕೊಳ್ಳುವುದು ಒಳ್ಳೆಯ ವಿಷಯ.