ಪ್ರತಿದಿನ ಬೆಳಗ್ಗೆ ಹಾಸಿಗೆಯಿಂದ ಎದ್ದಕೂಡಲೇ ಮುಖ ತೊಳೆದು ಒಂದು ಬಟ್ಟಲು ಶುದ್ಧವಾದ ನೀರು ಕುಡಿಯುವುದರಿಂದ ಅನೇಕ ಜಠರ ದೋಷಗಳು ನಿವಾರಣೆಯಾಗುವುದು .
ಹೊರಗೂ ಒಳಗೂ ಚೆನ್ನಾಗಿ ತೊಳೆದ ತಾಮ್ರದ ಪಾತ್ರೆಯಲ್ಲಿ ರಾತ್ರಿ ಸಂಗ್ರಹಿಸಿಟ್ಟ ನೀರನ್ನು ಕುಡಿಯುವುದರಿಂದ ಹೆಚ್ಚಿನ ಪ್ರಯೋಜನ ಉಂಟು ಆದರೆ ರಾತ್ರಿ ಮಲಗಿದ ನಂತರ ಆವೇಳೆಲ್ಲಿ ಎದ್ದು ನೀರು ಕುಡಿಯುವುದು ಅನಾರೋಗ್ಯಕರ.
ಹೆಚ್ಚು ಹೆಚ್ಚು ನೀರು ಸೇವಿಸುವುದರಿಂದ ಉರಿಮೂತ್ರ ರೋಗ ಸ್ವಲ್ಪ ಮಟ್ಟಿಗೆ ನಿವಾರಣೆಯಾಗುವುದು ಆದರೆ ಒಂದು ಬಟ್ಟಲು ನೀರಿಗೆ ಅರ್ಧ ಹೋಳು ನಿಂಬೆ ರಸ ಹಿಂಡಿ ಒಂದು ಚಿಟಿಕೆ ಉಪ್ಪಿನ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ಹೆಚ್ಚು ಪ್ರಯೋಜನ ಉಂಟು.
ದೇಹಕ್ರಿಯೆಗಳು ಚೆನ್ನಾಗಿ ನಡೆಯಬೇಕಾದರೆ ನೀರಿನ ಅಗತ್ಯಉಂಟು ಆದುದರಿಂದ ನಾವು ಪ್ರತಿದಿನವೂ ಏಳೆಂಟು ಬಟ್ಟಲು ಶುದ್ಧವಾದ ನೀರನ್ನು ಕುಡಿಯಲೇಬೇಕು ಕುದಿಸಿ ಆರಿಸಿದ ನೀರು ಕುಡಿಯುವುದು ಆರೋಗ್ಯಕರ ಶೀತ ಗೊಳಿಸಿದ ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚು ತಣ್ಣಗಿರುವ ನೀರು ಕುಡಿಯುವುದು ಅತ್ಯಂತ ಹಾನಿಕರ.
ಪ್ರತಿದಿನ ಪ್ರಾತಃಕಾಲ ತಣ್ಣೀರು ಸ್ನಾನ ಮಾಡುವುದರಿಂದ ನರಮಂಡಲ ಜಾಗೃತಗೊಳ್ಳುವುದು ದೇಹದಲ್ಲಿರುವ ಕಶ್ಮಲಗಳು ಹೆಚ್ಚು ಪ್ರಮಾಣದಲ್ಲಿ ವಿಸರ್ಜಿಸಲ್ಪಡುವ ಕಾರಣ ದೇಹಾರೋಗ್ಯ ವೃದ್ಧಿಯಾಗುವುದು ತಲೆಗೆ ತಣ್ಣೀರು ಸ್ನಾನ ಮಾಡುವುದರಿಂದ ಕೂದಲು ಚೆನ್ನಾಗಿ ಬೆಳೆಯುವುದು ತಲೆಯಲ್ಲಿ ಹೊತ್ತು ಏಳುವುದಿಲ್ಲ.
ರಾತ್ರಿ ಮಲಗುವುದಕ್ಕಿಂತ ಮುಂಚೆ ತಣ್ಣೀರು ಸ್ನಾನ ಮಾಡುವುದರಿಂದ ಅನಿದ್ರಾವಸ್ಥೆಯಿಂದ ಪಾರಾಗಬಹುದು ಆದರೆ ಹೃದ್ರೋಗಿಗಳು ತಣ್ಣೀರು ಸ್ನಾನ ಮಾಡದಿರುವುದು ಲೇಸು.
ಬಿಸಿ ನೀರಿನ ಸ್ನಾನ ದೇಹದಲ್ಲಿ ಲವಲವಿಕೆಯನ್ನು ಉಂಟುಮಾಡುವುದು ಆದರೆ ಬಹಳ ಬಿಸಿಯಾದ ನೀರಿನಿಂದ ಸ್ನಾನ ಮಾಡುವುದರಿಂದ ಹಾನಿ ಉಂಟು ತಣ್ಣೀರಿನ ಸ್ನಾನ ಒಗ್ಗದವರು ಸಾಧಾರಣ ಉಷ್ಣತೆಯಿಂದ ಕೂಡಿದ ನೀರಿನಿಂದ ಸ್ನಾನ ಮಾಡುವುದು ಕ್ಷೇಮ.
ಗುಪ್ತಾಂಗಗಳು ಮೇಲೆ ಬಹಳ ಬಿಸಿಯಾದ ನೀರು ಸುರಿಯುವುದರಿಂದ ನಪುಂಸಕತ್ವ ಪ್ರಾಪ್ತವಾಗುವುದು.
ಅಗತ್ಯವೆನಿಸಿದಾಗ ಮಾತ್ರ ಬಿಸಿ ನೀರಿನ ಸ್ನಾನ ಮಾಡಬೇಕು ಬಿಸಿ ನೀರಿನಿಂದ ಸ್ನಾನ ಮಾಡಿದ ನಂತರ ಚಳಿಗಾಳಿಗೆ ಮೈಯೊಡ್ಡಬಾರದು ಸ್ನಾನದ ನಂತರ ಮಲಗಿದರೆ ನಿದ್ದೆ ಚೆನ್ನಾಗಿ ಹತ್ತುವುದು ಮತ್ತು ಆಯಾಸ ಪರಿಹಾರವಾಗುವುದು.
ಬಿಸಿ ನೀರಿನ ಸ್ನಾನ ನೆಗಡಿ ಗುಣವಾಗಲು ಸಹಕಾರಿ ಕಣ್ಣುರಿ ಇದ್ದರೆ ತಲೆಗೆ ಬಿಸಿ ನೀರಿನ ಸ್ನಾನ ಮಾಡುವುದರಿಂದ ಗುಣ ಕಂಡುಬರುವುದು ಆದರೆ ತಲೆ ಮೇಲೆ ಬಹಳ ಬಿಸಿಯಾದ ನೀರನ್ನು ಎಂದು ಸುರಿಯಬಾರದು.
ದಿನದಲ್ಲಿ ಹಲವಾರು ಬಾರಿಯಾಗಲೀ ದಣಿದಿರುವಾಗಲಾಗಲೀ ಊಟದ ನಂತರವಾಗಲೀ ಸ್ನಾನ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ.
ಅಪಸ್ಮಾರ ರೋಗಿಯು ಪ್ರಜ್ಞಾಹೀನ ಸ್ಥಿತಿಯಲ್ಲಿಇರುವಾಗ ರೋಗಿಯ ಬೆನ್ನುಮೂಳೆ ಹಣೆ ಮತ್ತು ನೆತ್ತಿಗೆ ತಣ್ಣೀರು ತಟ್ಟುವುದರಿಂದ ಬೇಗ ಎಚ್ಚರ ಉಂಟಾಗಬಹುದು ಜ್ವರದ ತಾಪ ಅತಿಯಾದಾಗ ಹಣೆಯ ಮೇಲೆ ತಣ್ಣೀರಿನಲ್ಲಿ ತೋಯಿಸಿದ ಬಟ್ಟೆಯ ಮಡಿಕೆನ್ನಿಡುವುದರಿಂದ ರೋಗಿಗೆ ಸ್ವಲ್ಪ ಆರಾಮ ಅನಿಸುವುದು ತಲೆಶೂಲೆ ಇದ್ದ ಪಕ್ಷದಲ್ಲಿ ಪರಿಹಾರವಾಗುವುದು.
ಹೊಟ್ಟೆ ತೊಳಸುವಿಕೆ ಮತ್ತು ವಾಕರಿಕೆ ರೋಗಿಯ ಅನುಭವಕ್ಕೆ ಬಂದಾಗ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡರೆ ಶೀಘ್ರ ಗುಣ ಕಂಡು ಬರುವುದು.
ಉಳುಗಕಿರುವ ಅಥವಾ ಪೆಟ್ಟು ಬಿದ್ದ ಊದಿಕೊಂಡಿರುವ ಭಾಗಕ್ಕೆ ಬಿಸಿನೀರಿನ ಶಾಖ ಕೊಡುವುದರಿಂದ ನೋವು ಶಾಂತವಾಗುವುದು.
ಶರೀರದ ಮೇಲೆ ಬೆವರು ಮತ್ತು ಕೊಳೆ ತೆಗೆಯಲು ಸ್ನಾನ ಅಗತ್ಯ ಸ್ನಾನ ಮಾಡುವಾಗ ಅಂಗಾಂಗಗಳನ್ನು ಸಾಬೂನು ಅಥವಾ ಸೀಗೆಕಾಯಿ ಪುಡಿ ಯಿಂದ ಚೆನ್ನಾಗಿ ತೊಳೆಯುತ್ತೇವೆ.