ವರದಕ್ಷಣೆ ಎಂಬ ಬೂತ ಅದೇಕೋ ಇನ್ನು ಭಾರತವನ್ನು ಬಿಟ್ಟು ತೋಳುಗುತ್ತಿಲ್ಲ, ಅಂತವ ಅಟ್ಟಹಾಸ ಇನ್ನು ನಿಲ್ಲುತ್ತಿಲ್ಲ, ಅದು ನಿಲ್ಲ ಬೇಕಾದರೆ ಹೆಣ್ಣಿನ ಮನೆಯವರು ಒಂದು ದಿಟ್ಟ ನಿರ್ದಾರವನ್ನ ಮಾಡಲೇ ಬೇಕಿದೆ, ಹೆಣ್ಣು ಹೊತ್ತ ಪೋಷಕರು ಓದಲೇ ಬೇಕಾದ ಘಟನೆ ಒಂದು ಉತ್ತರ ಪ್ರದೇಶದ ಖುರ್‍ಮನಗರದಲ್ಲಿ ನಡೆದಿದೆ.
ಅದೇನೆಂದರೆ ವರದಕ್ಷಿಣೆಯಾಗಿ ನೀಡಿದ್ದ ಬೈಕ್ ಚೆನ್ನಾಗಿಲ್ಲ, ಬೇರೆ ಬೈಕ್ ಬೇಕೆಂದು ಹಠ ಹಿಡಿದು ಮದುವೆ ಮಂಟಪದಿಂದ ಹೊರ ಬಂದ ಅಹಂಕಾರಿ ವರ ಮತ್ತು ಆತನ ಸಂಬಂಧಿಕರ ತಲೆ ಬೋಳಿಸಿದ್ದಾರೆ.
ಸಂಪೂರ್ಣ ವಿವರ : ಖುರ್‍ಮನಗರದ ಜಿಯಾಉಲ್ ಪಾರ್ಕ್ ಕ್ಷೇತ್ರದ ವಧುವಿನೊಂದಿಗೆ ಧೋಕಲಾಪುರದ ಅಬ್ದುಲ್ ಕಲಾಮ್ ಎಂಬ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು, ಹೆಣ್ಣಿನ ತಂದೆ ಒಬ್ಬ ತರಕಾರಿ ವ್ಯಾಪಾರೀ, ಆದರೂ ಮಗಳ ಮದುವೆಯನ್ನ ಅಚ್ಚುಕಟ್ಟಾಗಿ ಮಾಡಬೇಕು ಅನ್ನುವ ಆಸೆಯನ್ನು ಇಟ್ಟುಕೊಂಡಿದ್ದರು, ಇತ್ತ ಹುಡುಗ ವರದಕ್ಷಣೆಯಾಗಿ 25 ಸಾವಿರ, ಬೈಕ್ ಹಾಗು 40 ಗ್ರಾಂ ಬಂಗಾರವನ್ನ ನೀಡ ಬೇಕಾಗಿ ಕಡಾಖಂಡಿತವಾಗಿ ಹೇಳಿ ಬಿಟ್ಟಿದ್ದರು ಅದರಂತೆ ನಿಶ್ಚಿತವೂ ನಡೆದಿತ್ತು.
ಮದುವೆಗೆ ತನ್ನ ಕೆಲವು ಸಂಬಂಧಿಕರನ್ನು ಮಾತ್ರ ಕೆರೆದು ತರ್ತೀನಿ ಅಂತ ಹೇಳಿದ್ದ ಹುಡುಗ ಸುಮಾರು 250 ಜನರನ್ನು ಕರೆತಂದಿದ್ದಾನೆ, ಜೊತೆಯಲ್ಲಿ ಮೊದಲ ಮಾತಿಗಿಂತ ಹೆಚ್ಚಿನ ಬಂಗಾರವನ್ನು ನೀಡ ಬೇಕಾಗಿ ಒತ್ತಾಯ ಮಾಡಿದ್ದಾನೆ, ಕೊನೆಯಲ್ಲಿ 85 ಸಾವಿರ ವೆಚ್ಚ ಮಾಡಿ ತಂದ ಬೈಕ್ ಬೇಡ ನನಗೆ ಪಲ್ಸರ್ ಬೇಕೇ ಬೇಕು ಇಲ್ಲವೇ ಮಾಡುವೆ ಮನೆಯಿಂದ ಹೊರ ನಡೆಯುವುದಾಗಿ ಗಲಾಟೆ ಮಾಡಿದ್ದಾನೆ, ಜೊತೆಯಲ್ಲಿ ಬಂದ ಇವನ ಸ್ನೇಹಿತರು ಸಹ ಕುಡಿದು ರಾದ್ದಾಂತ ಮಾಡಿದ್ದಾರೆ, ತಾಳ್ಮೆಯ ಘಟ್ಟವನ್ನ ಮೀರಿದ ಹೆಣ್ಣಿನ ಮನೆಯವರು ಗಂಡು ಮತ್ತು ಅವರ ಸಹೋದರ ಹಾಗು ಒಬ್ಬ ಸಂಬಂಧಿಕನ್ನು ರೂಮಿನಲ್ಲಿ ಕುಡಿ ಹಾಕಿ ಅರ್ಧ ತಲೆ ಬೊಡಿಸಿದ್ದಾರೆ, ಹೆದರಿ ಕಕ್ಕಾಬಿಕ್ಕಿಯಾದ ಗಂಡು ಅಲ್ಲಿಂದ ಪರಾರಿಯಾಗಿದ್ದಾನೆ.
ಇಷ್ಟೆಲ್ಲಾ ವರದಕ್ಷಣೆ ಕೇಳಿದ ಗಂಡು ಮುಂಬೈ ರಸ್ತೆಯಲ್ಲಿ ನಿಂಬೆ ಹಣ್ಣಿನ ಜ್ಯೂಸು ಮಾರುತ್ತಿದ್ದ, ಹೆಣ್ಣಿನ ತಂದೆ ಇಷ್ಟೆಲ್ಲಾ ನೆಡೆದಿದ್ದು ಒಳ್ಳೆಯದೇ ಆಯಿತು ಮದುವೆಯ ಮುಂಚೆಯೇ ಇವನ ಅಸಲಿ ಬಣ್ಣ ತಿಳಿಯಿತು ಎಂದು ಪ್ರತಿಕ್ರಿಯೆ ನೀಡಿದ್ದಾರೆ, ಈ ಮಾಹಿತಿಯನ್ನ ಆದಷ್ಟು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ವರದಕ್ಷಿಣೆ ಬೂತ ದೇಶ ಬಿಟ್ಟು ತೊಲಗಲಿ.