ಆಯುರ್ವೇದದಲ್ಲಿ ಬಹಲ ಪ್ರಮುಖ ಸ್ಥಾನವನ್ನ ಹೊಂದಿರುವ ಹಾಗು ಮಸಾಲೆಗಳ ರಾಣಿಯಂದೇ ಖ್ಯಾತಿ ಪಡೆದಿರುವ ಕಾಳು (ಕರಿ) ಮೆಣಸಿನ ಅರೋಗ್ಯ ಲಾಭಗಳು ಅತ್ಯಧಿಕ, ಅಡುಗೆ ಮನೆಯಲ್ಲಿ ಇದರದ್ದೇ ಕಾರು ಬಾರು, ಸಾರಾಗಲಿ ಅಥವಾ ಚೆಟ್ನಿಯಾಗಲಿ ಸಾಮಾನ್ಯವಾಗಿ ಇದನ್ನ ಮಸಾಲೆ ಪದಾರ್ಥವಾಗಿ ಬಳಸುತ್ತಾರೆ, ಇದು ಅಡುಗೆಯ ರುಚಿಯನ್ನ ಹೆಚ್ಚಿಸುತ್ತದೆ, ಇದು ಬಹಳ ಕಾರವಾಗಿದ್ದು ಇದರ ಸೇವನೆ ಆರೋಗ್ಯಕ್ಕೆ ಬಹಳ ಉಪಯುಕ್ತಕಾರಿ ಎನ್ನುವುದನ್ನ ಮರೆಯುವಾಗಿಲ್ಲ, ಕಾಳು ಮೆಣಸು ನಮ್ಮ ದೇಹದ ಅನೇಕ ರೋಗಗಳನ್ನ ಕಡಿಮೆ ಮಾಡುವಲ್ಲಿ ತನ್ನದೇ ಆದ ಜವಾಬ್ದಾರಿಯನ್ನ ಹೊಂದಿದೆ.
ಹೊಟ್ಟೆ ಸಮಸ್ಯೆ : ಹೊಟ್ಟೆಗೆ ಸಂಬಂಧಿಸಿದ ಹೊಟ್ಟೆ ನೋವು, ಹೊಟ್ಟೆಯಲ್ಲಿ ಉರಿ, ಗ್ಯಾಸ್ ಸಮಸ್ಯೆ ಅಥವಾ ಇತರ ಹೊಟ್ಟೆ ಸಮಸ್ಯೆಯಿರುವವರು ಒಂದು ಗ್ರಾಂ ಕಾಳು ಮೆಣಸಿನ ಪುಡಿಗೆ ನಿಂಬೆ ರಸ ಹಾಗೂ ಶುಂಠಿ ರಸ ಬೆರೆಸಿ ಕುಡಿದ್ರೆ ಒಂದೇ ದಿನದಲ್ಲಿ ಸಮಸ್ಯೆ ಮಾಯವಾಗುತ್ತದೆ.
ಎಸಿಡಿಟಿ : ಹೊಟ್ಟೆ ಉಬ್ಬರ, ಹುಳಿ ತೇಗು, ಗಂಟಲು ಸೋಂಕಿದ್ದಲ್ಲಿ ಕಾಳು ಮೆಣಸಿನ ಪುಡಿಗೆ ನಿಂಬೆ ರಸ, 1/2 ಚಮಚ ಉಪ್ಪನ್ನು ನೀರಿಗೆ ಸೇರಿಸಿ ಕುಡಿಯುವುದ್ರಿಂದ ಎಸಿಡಿಟಿ ಕಡಿಮೆಯಾಗುತ್ತದೆ.
ರಕ್ತಸ್ರಾವ : ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ ಕಾಳು ಮೆಣಸಿನ ಪುಡಿಯನ್ನು ಮೊಸರು ಹಾಗೂ ಬೆಲ್ಲದ ಜೊತೆ ಸೇರಿಸಿ ತಿನ್ನುವುದ್ರಿಂದ ರಕ್ತ ಸೋರುವುದು ಕಡಿಮೆಯಾಗುತ್ತದೆ.
ಶೀತ ನೆಗಡಿ : 2 ಗ್ರಾಂ ಕಾಳು ಮೆಣಸಿನ ಪುಡಿಯನ್ನು ಬೆಲ್ಲದ ಜೊತೆ ಸೇರಿಸಿ ತಿನ್ನುವುದ್ರಿಂದ ಶೀತ ನೆಗಡಿ ಕಡಿಮೆಯಾಗುತ್ತದೆ, ಕಾಳು ಮೆಣಸಿನ ಪುಡಿಯ ವಾಸನೆಯನ್ನು ತೆಗೆದುಕೊಳ್ಳುವುದ್ರಿಂದ ಸೀನು, ತಲೆನೋವು ನಿಯಂತ್ರಣಕ್ಕೆ ಬರುತ್ತದೆ.
ಕಣ್ಣಿನ ಸಮಸ್ಯೆ : ಕಣ್ಣಿನ ದೋಷವಿರುವವರು ಪ್ರತಿದಿನ ಬೆಳಿಗ್ಗೆ ಕಾಳು ಮೆಣಸಿನ ಪುಡಿ ಜೊತೆ ಸಕ್ಕರೆ ಹಾಗೂ ತುಪ್ಪ ಬೆರೆಸಿ ತಿನ್ನುವುದು ಒಳ್ಳೆಯದು, ಇದು ದೃಷ್ಟಿಯನ್ನು ಚುರುಕುಗೊಳಿಸುತ್ತದೆ.
ಜೊತೆಯಲ್ಲಿ ಇದನ್ನು ಒಮ್ಮೆ ಓದಿ ಮೂಲವ್ಯಾಧಿಯಾಗಿ ಗುದದ್ವಾರದಲ್ಲಿ ರಕ್ತ ಬಂದ್ರೆ ಮತ್ತು ಮೂಲವ್ಯಾದಿ ಆಗದಂತೆ ನೋಡಿಕೊಳ್ಳಬೇಕು ಅಂದ್ರೆ ಈ ನಿಂಬೆ ಚಿಕಿತ್ಸೆ ಅನಿವಾರ್ಯ ಹೇಗೆ ಮಾಡಬೇಕು ಗೊತ್ತಾ.
ಹೌದು ಇತ್ತೀಚಿನ ದಿನಗಳಲ್ಲಿ ಮೂಲವ್ಯಾದಿ ಅನ್ನೋದು ಒಂದು ಸಾಮಾನ್ಯವಾದ ಕಾಯಿಲೆಯಾಗಿದೆ ಹಾಗಾಗಿ ಇದಕ್ಕೆ ಹಲವು ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆಯುರ್ವೇದದ ಪ್ರಕಾರ ಮೂಲವ್ಯಾಧಿಗೆ ನಿಂಬೆ ಹಣ್ಣಿನ ಚಿಕಿತ್ಸೆ ಉತ್ತಮ ಯಾವ ರೀತಿಯಾಗಿ ಅನ್ನೋದು ಇಲ್ಲಿದೆ ನೋಡಿ.
ಮೂಲವ್ಯಾದಿಯಿಂದಾಗಲಿ ಅಥವಾ ಇತರೆ ಕಾರಣದಿನದ ನಿಮ್ಮ ಗುದದ್ವಾರದಲ್ಲಿ ರಕ್ತ ಸ್ರಾವಾಗುತಿದ್ದರೆ ಹೀಗೆ ಮಾಡಿ, ನಿಮ್ಮ ಊಟ ಮುಗಿದ ಕೂಡಲೇ ಒಂದು ನಿಂಬೆ ಹಣ್ಣನು ನಿಮ್ಮ ಬಾಯಿಯಲ್ಲಿ ಹಾಕಿಕೊಂಡು ಹಲ್ಲಿನಿಂದ ಚೆನ್ನಾಗಿ ಹಾಗಿದು ಅದರ ಪೂರ್ಣ ರಸವನ್ನು ಕುಡಿಯಬೇಕು ಇದರಿಂದ ನಿಮ್ಮ ಮೂಲವ್ಯಾದಿ ಸಮಸ್ಯೆಯ ಜೊತೆಗೆ ರಕ್ತ ಪಿತ್ತ ಕೂಡ ಪರಿಹಾರವಾಗುತ್ತದೆ, ಈ ರೀತಿಯಾಗಿ ಎರಡು ಅಥವಾ ಮೂರೂ ವಾರಗಳ ಮಾಡಬೇಕು.
ಇನ್ನು ೫೦ ಗ್ರಾಂ ನಷ್ಟು ನಿಂಬೆಯ ಚಿಗುರು ಎಲೆಯನ್ನು ನುಣ್ಣಗೆ ಅರೆದು ೧೫೦ ಗ್ರಾಂ ಹಸಿವಿನ ಬೆಣ್ಣೆಯೊಂದಿಗೆ ಮಿಶ್ರಣ ಮಾಡಿ ಒಂದು ರಾತ್ರಿ ಅದನ್ನು ಬಿಟ್ಟು ಮಾರನೇ ದಿನ ಅದರಲ್ಲಿ ತುಪ್ಪ ಕಾಯಿಸಿಕೊಂಡು ಮೊಳಕೆ ಬಂದಿರುವ ಜಾಗಕ್ಕೆ ಹಚ್ಚುತ್ತಾ ಬಂದರೆ ಎರಡು ಅಥವಾ ಮೂರೂ ವಾರಗಳಲ್ಲಿ ನಿಮ್ಮ ಮೊಳಕೆ ಮಾಯವಾಗಲಿದೆ.