ಹೌದು ಕರಾವಳಿ ಪ್ರದೇಶಗಳ ಕಡೆ ಅಂದರೆ ಉಡುಪಿ ಮಂಗಳೂರಿನ ಕಡೆ ನಾಗಾರಾಧನೆ ಮಾಡುವುದನ್ನು ನಾವು ಹುತ್ತ ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ ಈ ನಾಗಾರಾಧನೆ ಮಾಡುವ ಪೂಜಾ ವಿಧಾನವನ್ನು ನಿಜಕ್ಕೂ ನೋಡುವುದಕ್ಕೆ ಬಹಳ ಚೆನ್ನಾಗಿರುತ್ತದೆ .ಮತ್ತು ನಾಗಾರಾಧನೆ ಮಾಡುವ ಆ ಕಾರ್ಯವನ್ನು ನೋಡಿದರೆ ಪುಣ್ಯ ಬರುತ್ತದೆ ಮತ್ತು ನಾಗಾರಾಧನೆ ಮಾಡುವುದರಿಂದ ಕೂಡ ಪುಣ್ಯ ಸಂಪಾದನೆಯಾಗುತ್ತದೆ ಎಂದು ಹೇಳುವುದುಂಟು ಹಾಗೆ ಈ ಕರಾವಳಿ ಪ್ರದೇಶಗಳಲ್ಲಿ ನಾಗಾರಾಧನೆ ಮಾಡುವುದಕ್ಕೆ ಬಹಳ ಮಹತ್ವವನ್ನು ಮತ್ತು ವೈಶಿಷ್ಟ್ಯತೆಯನ್ನು ನೀಡಲಾಗುತ್ತದೆ.
ಇನ್ನು ಶಕುನ ಶಾಸ್ತ್ರ ಎಂಬುದು ಕೂಡ ಶಾಸ್ತ್ರಗಳಲ್ಲಿ ಒಂದಾಗಿದ್ದು ಈ ರೀತಿ ಶಕುನ ಶಾಸ್ತ್ರವು ಹೇಳುತ್ತದೆ ಮನೆಯಲ್ಲಿ ಕೆಲವೊಂದು ಘಟನೆಗಳು ನಡೆದರೆ ಅದಕ್ಕೆ ಇಂತಹ ಒಂದು ಕಾರಣವಿರುತ್ತದೆ ಇದಕ್ಕೆ ಪರಿಹಾರವನ್ನು ಕೂಡ ಈ ಶಕುನ ಶಾಸ್ತ್ರದಲ್ಲಿ ನಾವು ಪಡೆದುಕೊಳ್ಳಬಹುದು .ಆದರೆ ಮನೆಯ ಮುಂದೆ, ಮನೆಯ ಒಳಗೆ ಹುತ್ತ ಕಟ್ಟುವುದು ಅಥವಾ ಮನೆಯ ಮುಂಭಾಗದಲ್ಲಿ ಜೇನು ಕಟ್ಟುವುದು ಇಂತಹ ಸನ್ನಿವೇಶಗಳಿಗೆ ಶಕುನ ಶಾಸ್ತ್ರವು ಏನನ್ನು ತಿಳಿಸಿ ಹೇಳುತ್ತದೆ ಎಂಬುದನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ,
ತಪ್ಪದೇ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ನೀವು ಕೂಡ ಮಾಹಿತಿ ತಿಳಿದು ಬೇರೆಯವರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ ಕೊನೆಗೆ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಫ್ರೆಂಡ್ಸ್ .ಮೊದಲನೆಯದಾಗಿ ಹುತ್ತದಲ್ಲಿ ಹಾವುಗಳು ವಾಸಿಸುತ್ತವೆ ಎಂದು ಹೇಳಲಾಗುತ್ತದೆ ಆದರೆ ಹುತ್ತಗಳನ್ನು ಹಾವು ಕಟ್ಟದೇ ಇದ್ದರೂ ಇದನ್ನು ಗೆದ್ದಲು ಹುಳುಗಳು ಕಟ್ಟುತ್ತವೆ ಆ ನಂತರ ಈ ಹುತ್ತದಲ್ಲಿ ಹಾವುಗಳು ಬಂದು ಸೇರಿಕೊಳ್ಳುತ್ತವೆ,
ಈ ಮಾಹಿತಿ ಪ್ರತಿಯೊಬ್ಬರಿಗೂ ಕೂಡ ತಿಳಿದಿರುತ್ತದೆ. ಆದರೆ ಮನೆಯಲ್ಲಿ ಹುತ್ತ ಕಟ್ಟುವುದರಿಂದ ಮನೆಯ ಮುಂಭಾಗದಲ್ಲಿ ಹುತ್ತ ಕಟ್ಟುವುದರಿಂದ ಅದು ಶುಭ ಸಂಕೇತ ಇನ್ನು ಕರಾವಳಿಯ ಪ್ರದೇಶಗಳಲ್ಲಿ ಈ ರೀತಿ ಹುತ್ತ ಕಟ್ಟಿದ ಮನೆಯನ್ನು ಬಿಡಬೇಕು ಎಂಬ ಪದ್ಧತಿಯೂ ಕೂಡ ಇದೇ ಶಾಸ್ತ್ರವೂ ಕೂಡ ಇದೆ ಇದನ್ನು ಜನರು ಕೂಡ ಪಾಲಿಸುತ್ತಾರೆ.ಇನ್ನು ಮನೆಯ ಅಕ್ಕಪಕ್ಕದಲ್ಲಿ ಮುಂಭಾಗದಲ್ಲಿ ಜೇನುಗಳು ಕಟ್ಟುವುದರಿಂದ ಒಳ್ಳೆಯದಾಗುತ್ತದೆ ಎಂದು ಕೂಡ ಹೇಳಲಾಗುತ್ತದೆ ಆದರೆ ಅದು ಯಾವ ಭಾಗದಲ್ಲಿ ಕಟ್ಟಿದ ಯಾವ ದಿಕ್ಕಿನಲ್ಲಿ ಕಟ್ಟಿದೆ ಎಂಬ ಆಧಾರದ ಮೇಲೆಯೂ ಕೂಡ ಕೆಲವೊಂದು ಕಾರಣಗಳನ್ನು ತಿಳಿಸಲಾಗುತ್ತದೆ.
ಹಾಗಾದರೆ ಮನೆಯ ಯಾವ ದಿಕ್ಕಿನಲ್ಲಿ ಹುತ್ತ ಕಟ್ಟಿದರೆ ಅದು ಒಳ್ಳೆಯದು ಕೆಟ್ಟದ್ದು ಎಂದು ಶಕುನ ಶಾಸ್ತ್ರ ತಿಳಿಸುತ್ತದೆ ಎಂಬುದನ್ನು ಈ ಕೆಳಗಿನ ಮಾಹಿತಿಯಲ್ಲಿ ತಿಳಿಸುತ್ತೇನೆ ತಪ್ಪದೆ ಮಾಹಿತಿಯನ್ನು ತಿಳಿಯಿರಿ.ಮನೆಯ ಪೂರ್ವ ದಿಕ್ಕಿನಲ್ಲಿ ಹುತ್ತ ಕಟ್ಟಿದರೆ ಅದು ಉತ್ತಮವಾದ ಶಕುನ ಒಳ್ಳೆಯ ಶಕುನ ಎಂದು ಹೇಳಿದರೆ ಅತ್ತೆಯ ದಿಕ್ಕಿನಲ್ಲಿ ಕಟ್ಟಿದರೆ ಮನೆಗೆ ಬಂಧು ಬಳಗದವರು ಬರುತ್ತಾರೆ ಬಂದು ಬಳಗದವರು ಶುಭ ಸುದ್ದಿಯನ್ನು ತರುತ್ತಾರೆ ಎಂಬ ಸೂಚನೆ ದಕ್ಷಿಣ ದಿಕ್ಕಿನಲ್ಲಿ ಕಟ್ಟಿದರೆ ಶುಭ ಮತ್ತು ನೈರುತ್ವ ದಿಕ್ಕಿನಲ್ಲಿ ಇದ್ದರೆ ಅದು ದಾರಿದ್ರ್ಯದ ಸಂಕೇತವಾಗಿರುತ್ತದೆ ಎಂದು ಹೇಳಲಾಗಿದೆ.
ಪಶ್ಚಿಮ ದಿಕ್ಕಿನಲ್ಲಿ ಇದ್ದರೆ ಅದು ಶುಭದ ಸಂಕೇತವಾದರೆ ವಾಯುವ್ಯ ದಿಕ್ಕಿನಲ್ಲಿ ಇದ್ದರೆ ಅದು ಕೆಲಸ ಕೈಗೊಳ್ಳುವುದರ ಬಗ್ಗೆ ಸೂಚನೆಯನ್ನು ನೀಡುತ್ತಿರುತ್ತದೆ ಉತ್ತರ ದಿಕ್ಕಿನಲ್ಲಿ ಹುತ್ತ ಬೆಳೆದರೆ ಅದು ದ್ರವ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರೆ ಈಶಾನ್ಯ ದಿಕ್ಕಿನಲ್ಲಿ ಇದ್ದರೆ ಅದು ಕೂಡ ಶುಭದ ಸಂಕೇತ ಮತ್ತು ಮಧ್ಯ ಭಾಗದಲ್ಲಿ ಕಟ್ಟಿದರೆ ಅದು ಸ್ತ್ರೀಯಿಂದ ಶುಭವಾಗುತ್ತದೆ ಎಂಬುದನ್ನು ತಿಳಿಸುತ್ತಿರುತ್ತದೆ.