ಹೆಬ್ಬೆರಳು ಕತ್ತರಿಸಿಕೊಟ್ಟ ನಂತರ ಏನಾದ ಗೊತ್ತಾ ಏಕಲವ್ಯ..? ರೋಚಕದ ವಿಡಿಯೋ ಇಲ್ಲಿದೆ ನೋಡಿ …

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮಗೆಲ್ಲರಿಗೂ ಗುರು ಶಿಷ್ಯ ಅಂತ ಹೇಳಿದರೆ ಮೊದಲು ನೆನಪಿಗೆ ಬರುವುದು ದ್ರೋಣಾಚಾರ್ಯ ಮತ್ತು ಏಕಲವ್ಯ ಅಲ್ಲವಾ ಸ್ನೇಹಿತರೇ ಇನ್ನು ಏಕಲವ್ಯ ಗುರುಗಳು ಪ್ರತ್ಯಕ್ಷವಾಗಿ ನಿಂತು ವಿದ್ಯಾ ಧಾರಣೆ ಮಾಡಲಾಗದೆ ಇದ್ದರೂ ಅವರ ಪ್ರತಿಮೆಯನ್ನು ಮುಂದಿರಿಸಿಕೊಂಡು ಬಿಲ್ವಿದ್ಯೆಯನ್ನು ಕಲಿತ ಮಹಾನ್ ಶಿಷ್ಯ ಎಂದು ಹೇಳಬಹುದು ಇನ್ನು ಏಕಲವ್ಯನ ಬಗ್ಗೆ ಹೆಚ್ಚಾಗಿ ತಿಳಿಸಿಕೊಡುತ್ತೇವೆ ಸ್ನೇಹಿತರೇ ಕೇಳಿ
ಹಿರಣ್ಯ ಧಾನ್ಯ ಮತ್ತು ಸುಲೇಖಾ ಈ ದಂಪತಿಗಳಿಗೆ ಹುಟ್ಟಿದ ಮಗುವೇ ಏಕಲವ್ಯ ಇನ್ನು ಏಕಲವ್ಯನು ನಿಷೇಧ ಜನಾಂಗದಲ್ಲಿ ಹುಟ್ಟಿದ್ದು ಅಂದರೆ ಅಂದಿನ ಬೇಡ ಜಾತಿ ಅಥವಾ ವಾಲ್ಮೀಕಿ ಜನಾಂಗದವರು ಎಂದರ್ಥ . ಇನ್ನು ಹಿರಣ್ಯ ಧನ್ಯನು ಈ ಜನಾಂಗದ ನಾಯಕನಾಗಿದ್ದನು ಮತ್ತು ಜರಾಸಂಧನ ಸಾಮಂತರಾಗಿದ್ದರು . ಬೇಡರು ಗಳಾದ ಇವರುಗಳಿಗೆ ಶಸ್ತ್ರಾಭ್ಯಾಸ ಚೆನ್ನಾಗಿಯೇ ಆಗಿರುತ್ತದೆ ಇನ್ನು ತಂದೆಯ ಜೊತೆ ಹೋಗಿ ಏಕಲವ್ಯನು ಸಹ ಈ ವಿದ್ಯೆಯನ್ನು ಕಲಿತುಕೊಂಡಿದ್ದ .

ಜರಾಸಂಧನ ಸಾಮಂತನಾಗಿದ್ದ ಹಿರಣ್ಯನು ಯುದ್ಧಭೂಮಿಯಲ್ಲಿ ಸಾವನ್ನಪ್ಪುತ್ತಾನೆ . ಈ ನಂತರ ಏಕಲವ್ಯ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ನಾಯಕತ್ವದ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಹಾಗೆ ಆಯಿತು ಇನ್ನು ಹೆಚ್ಚಿನ ವಿದ್ಯೆ ಕಲಿಯಲು ಹಂಬಲಿಸುತ್ತಿದ್ದ ಏಕಲವ್ಯನು ದ್ರೋಣರ ಬಗ್ಗೆ ತಿಳಿದುಕೊಂಡು ಇನ್ನು ದ್ರೋಣ ರಿದ್ದ ಕಾಡಿಗೆ ಹುಡುಕಿಕೊಂಡು ಹೋದ ಏಕಲವ್ಯ . ದ್ರೋಣ ರಿಂದ ವಿದ್ಯೆ ಕಲಿಸಲು ಆಗಲ್ಲ ಎಂಬ ವಿಷಯವನ್ನು ಅರಿತು ಇದೆ ಛಲದಿಂದ . ಈ ಸಮಯದಲ್ಲೇ ಈಗಾಗಲೇ ದ್ರೋಣರು ಪಾಂಡವ ಪುತ್ರರಿಗೆ ವಿದ್ಯೆಯನ್ನು ಕಲಿಸುತ್ತಿದ್ದ ಸಂದರ್ಭ ಒಮ್ಮೆ ದ್ರೋಣರು ಏಕಲವ್ಯನಿದ ಕಾಡಿಗೆ ರಾಜ್ ಪುತ್ರರ ಜೊತೆ ಹೋದರು ಇನ್ನು ಅವರ ಜೊತೆ ಬಂದಿದ್ದ ಬೇಟೆ ನಾಯಿಯ ಸದ್ದಿನಿಂದ ಏಕಾಗ್ರತೆಗೆ ತೊಂದರೆಯಾಗಿದ್ದರಿಂದ ಶಬ್ದವೇಧಿ ವಿದ್ಯೆಯನ್ನು ಬಳಸಿ ಆ ನಾಯಿಗಳ ಮೇಲೆ ಬಿಲ್ಲುಗಳನ್ನು ಪ್ರಯೋಗಿಸುತ್ತಾನೆ.

Untold story of Ekalavya Mahabharath kannada news

ಇದನ್ನು ಕಂಡ ದ್ರೋಣರಿಗೆ ಬಹಳ ಖುಷಿಯಾಗಿ ಏಕಲವ್ಯನನ್ನು ಹುಡುಕುತ್ತಾ ಬಂದರು ಯಾರೆಂದು ತಿಳಿದು ಏಕಲವ್ಯನನ್ನು ಮಾತನಾಡಿಸಿದರು ಹಾಗೂ ನಿನ್ನ ಗುರು ಯಾರೆಂದು ಕೇಳಿದ ದ್ರೋಣರಿಗೆ ಏಕಲವ್ಯನು ದ್ರೋಣರ ಪ್ರತಿಮೆಯನ್ನು ತೋರಿಸಿ ದ್ರೋಣರ ಆಶಿರ್ವಾದವನ್ನು ಪಡೆದುಕೊಳ್ಳುತ್ತಾನೆ ಇದನ್ನು ಕಂಡು ಖುಷಿಯಾದರೂ ದ್ರೋಣರಿಗೆ ತಕ್ಷಣ ಅರ್ಜುನನಿಗೆ ಕೊಟ್ಟ ಮಾತು ನೆನಪಾಯಿತು ಇಷ್ಟರಲ್ಲಿ ಅರ್ಜುನನಿಗೆ ಆಗಲೇ ಕೋಪ ಬಂದಿತ್ತು ನಂತರ ದ್ರೋಣರು ಗುರು ಕಾಣಿಕೆಯನ್ನು ನಿರೀಕ್ಷಿಸಿದ್ದರೂ ಅದೇನೆಂದರೆ ಏಕಲವ್ಯನ ಬಲಗೈನ ಒಂದು ಬೆರಳು . ದ್ರೋಣರಿಗೆ ಹೆಬ್ಬೆರಳು ಇಲ್ಲದಿದ್ದರೆ ಬಿಲ್ಲು ವಿದ್ಯೆ ಕಷ್ಟ ಎಂದು ತಿಳಿದಿದ್ದರೂ ಹೆಬ್ಬೆರಳನ್ನು ಕೇಳಿದರು ಆದರೆ ಹಿಂದೂ ಮುಂದು ನೋಡದೆ ಏಕಲವ್ಯ ಗುರುಗಳ ಕಾಣಿಕೆಯನ್ನು ನೀಡುತ್ತಾನೆ . ಈ ಘಟನೆಯ ನಂತರ ದ್ರೋಣರು ಮತ್ತೆ ಅವನ ಶಿಷ್ಯರು ಏಕಲವ್ಯನನ್ನು ಮರೆತುಬಿಡುತ್ತಾರೆ ಆದರೆ ಏಕಲವ್ಯನು ನಾಲ್ಕು ಬೆರಳನ್ನೇ ಇಟ್ಟುಕೊಂಡು ಮತ್ತೆ ಕಲಿತುಕೊಳ್ಳುತ್ತಾರೆ ನಂತರ ಈ ವಿದ್ಯೆಯಲ್ಲಿ ಪಾರಂಗತನಾದ ಅವನು ಮತ್ತೆ ತನ್ನ ಜನಾಂಗದ ಬಳಿ ಹಿಂದಿರುಗುತ್ತಾನೆ ನಂತರ ಜರಾಸಂಧನ ಸಂತನಾದ ಇವನು ಮತ್ತೆ ಯುದ್ಧ ಭೂಮಿಗೆ ಯಾದವರ ವಿರುದ್ಧ ಹೋಗುತ್ತಾನೆ .

ಯಾದವ ವಂಶಸ್ಥರು ಯಾರೆಂದರೆ ಕೃಷ್ಣನ ವಂಶಸ್ಥರು ಏಕಲವ್ಯನ ಸಹಾಯದಿಂದ ಜರಾಸಂಧನು ಯಾದವರ ಅಂಶದ ಮೇಲೆ ಗೆಲುವು ಸಾಧಿಸುತ್ತಾನೆ . ನಂತರ ಸ್ವತಃ ಶ್ರೀಕೃಷ್ಣನ ಯುದ್ಧ ಭೂಮಿಗೆ ಬಂದು ಯುದ್ಧ ಮಾಡಿ ಏಕಲವ್ಯನನ್ನು ಸಂಹರಿಸುತ್ತಾನೆ ಎಂದು ಹೇಳಲಾಗಿದೆ ನೋಡಿದ್ರ ಸ್ನೇಹಿತರೇ ಸ್ವತಃ ಶ್ರೀಕೃಷ್ಣನೇ ಬರಬೇಕಾಯಿತು ಏಕಲವ್ಯನನ್ನು ಸಂಹಾರ ಮಾಡಲು ಇದು ಏಕಲವ್ಯನ ಹಿರಿಮೆಯನ್ನು ಸಾರುತ್ತದೆ ಅಲ್ಲವೇ ಸ್ನೇಹಿತರೇ ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ ಶುಭವಾಗಲಿ ಧನ್ಯವಾದಗಳು .

ವಿಡಿಯೋ ಕೆಳಗೆ ಇದೆ…

Leave a Reply

Your email address will not be published. Required fields are marked *