ನಮಸ್ಕಾರ ವೀಕ್ಷಕರೇ ನಮ್ಮೆಲ್ಲರಿಗೂ ಕೂಡ ಸಿದ್ದಿ ವಿನಾಯಕನೆಂದರೆ ಬಹಳ ಇಷ್ಟ ಸಿದ್ಧಿ ವಿನಾಯಕನ ನಮನ ಮಾಡುವುದು ಮತ್ತು ವಿನಾಯಕನಕೆಂದು ಮೋದಕಗಳನ್ನು ಮಾಡುವುದು ಸಿದ್ಧಿ ವಿನಾಯಕನ ಸ್ತೋತ್ರಗಳನ್ನು ಪಠಿಸುವುದು ಹೀಗೆ ಹಲವು ವಿಚಾರಗಳಲ್ಲಿ ಸಿದ್ಧಿವಿನಾಯಕನನ್ನು ನಾವು ಬಹಳ ಅಚ್ಚುಮೆಚ್ಚಿನಿಂದ ಪ್ರಾರ್ಥಿಸುತ್ತೇವೆ.ಹೀಗಾಗಿ ಸಿದ್ಧಿವಿನಾಯಕ ಎಂದರೆ ಸಂಕಟ ವಿಮೋಚನ ಎಂದು ಕೂಡ ಹೇಳಬಹುದು ಮತ್ತು ಸ್ಮರಿಸುವಾಗ ಕೆಲವು ಆಚಾರ ವಿಚಾರವನ್ನು ಕೂಡ ನಾವು ಅನುಸರಿಸಬೇಕು. ಹಾಗಾದರೆ ಅಂತಹ ಆಚಾರ-ವಿಚಾರಗಳು ಏನು ಸಿದ್ಧಿವಿನಾಯಕನೇಗೂ ಕೂಡ ಇಂತಹ ನಿಬಂಧನೆಗಳು ಇರುತ್ತವೆಯ ಎಂದು ತಿಳಿದುಕೊಳ್ಳೋಣ ಬನ್ನಿ.
ಇನ್ನು ಸಿದ್ಧಿ ವಿನಾಯಕನ ಸ್ಥಾಪನೆಯನ್ನು ನಾವು ಗಣೇಶ ಚತುರ್ಥಿ ದಿನದಂದು ಮಾಡುತ್ತೇವೆ ಗಣೇಶ ಚತುರ್ಥಿ ದಿನ ನಾವು ಬಯಸಿದ್ದೆಲ್ಲವನ್ನು ಕೂಡ ಸಿದ್ಧಿವಿನಾಯಕ ನಮಗೆ ಕೊಡುತ್ತಾನೆ ಮತ್ತು ನಮಗೆ ಆ ದಿನ ಶುಭದಿನ ವಾಗಿರುತ್ತದೆ ಹಾಗಾಗಿಯೇ ಎಲ್ಲರೂ ಕೂಡ ಗಣೇಶ ಚತುರ್ಥಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ ಮತ್ತು ಸಿದ್ಧಿ ವಿನಾಯಕ ಎಂದರೆ ಸಂಕಟ ವಿಮೋಚನ ಎಂದೇ ಕರೆಯಬಹುದು ಹೀಗೆ ಒಮ್ಮೆ ಕೈಲಾಸದಲ್ಲಿರುವಂತಹ ಶಿವನು ಪಾರ್ವತಿಯು ದೇವಾನುದೇವತೆಗಳ ಸಹಾಯಕ್ಕಾಗಿ ಯಾರು ಹೋಗಬೇಕು ಎಂಬ ಶರತ್ತನ್ನು ಕಾರ್ತಿಕ್ ಕೆಯ ಮತ್ತು ಸಿದ್ಧಿವಿನಾಯಕನಿಗೆ ಹುಟ್ಟಿದಾಗ ಒಂದು ಪಂದ್ಯ ಬರುತ್ತದೆ
ಆ ಪಂದ್ಯದಲ್ಲಿ ಯಾರು ಏಳು ಬಾರಿ ಭೂಲೋಕವನ್ನು ಸುತ್ತಿ ಬರುತ್ತಾರೋ ಅವರಿಗೆ ದೇವಾನುದೇವತೆಗಳ ಸಹಾಯಕ್ಕಾಗಿ ಹೋಗುವ ಅವಕಾಶ ಸಿಕ್ಕುತ್ತದೆ ಎಂದು ಹೇಳಲಾಗುತ್ತದೆ ಇಲ್ಲಿ ಕಾರ್ತಿಕೇಯ ಅವರ ವಾಹನ ನವಿಲು ಆಗಿದ್ದರಿಂದ ಅವರು ಹೊರಟುಬಿಡುತ್ತಾರೆ ಆದರೆ ಯೋಚನೆ ಮಾಡಿದಂತಹ ಸಿದ್ದಿ ವಿನಾಯಕ ಗಣೇಶ ತನ್ನ ವಾಹನ ಇಲಿ ಆದದರಿಂದ ಬಹಳ ಯೋಚನೆ ಮಾಡಿ ಮುಂದಕ್ಕೆ ಕೈ ಹಾಕುತ್ತಾರೆ ಆಗ ಅವರು ಶಿವ ಪಾರ್ವತಿ ಅವರನ್ನು ಏಳು ಬಾರಿ ಸುತ್ತು ಬಂದು ಅವರಿಗೆ ನಮನ ಸಲ್ಲಿಸುತ್ತಾರೆ. ನೀನು ಭೂಲೋಕವನ್ನು ಸುತ್ತಲೂ ಹೋಗಲಿಲ್ಲ ಏಕೆ ಎಂದು ಶಿವ ಪ್ರಶ್ನೆಸಿದಾಗ ಶ್ರೀ ಗಣೇಶ ಹೇಳುತ್ತಾರೆ ತಂದೆ ತಾಯಿಗಳ ಪಾದದಡಿಯಲ್ಲಿಯೇ ಎಲ್ಲವೂ ಕೂಡ ಅಡಗಿದೆ ಎಂದು.
ತಂದೆ ತಾಯಿಗಳ ಪಾದದಡಿಯಲ್ಲಿ ಸಮಸ್ತ ಭೂಲೋಕವು ಅಡಗಿದೆ ಈ ಮಾತನ್ನು ಕೇಳಿದ ಶಿವನು ಬಹಳ ಖುಷಿಗೊಂಡು ಅವರಿಗೆ ದೇವಾನುದೇವತೆಗಳಿಗೆ ಸಹಾಯ ಮಾಡಲು ಕಳಿಸುತ್ತಾರೆ ನಂತರ ಅವರ ಆ ದಿನವನ್ನು ಗಣೇಶ ಚತುರ್ಥಿ ಎಂದು ಆಚರಿಸಲಾಗುತ್ತದೆ ಮತ್ತು ಅದನ್ನು ಶಿವ ಅವರು ಕೊಟ್ಟಂತಹ ವರದಂತೆ ಗಣೇಶ ಚತುರ್ಥಿ ದಿನದಂದು ನಿನ್ನನ್ನು ನಿನ್ನ ಬಳಿ ಯಾರ್ಯಾರು ಏನೇನು ಬೇಡಿಕೊಳ್ಳುತ್ತಾರೋ ಅದೆಲ್ಲವೂ ಅವರಿಗೆ ದೊರಕಲಿ ಮತ್ತು ಅವತ್ತಿನ ದಿನ ಅವರಿಗೆ ಶುಭವೂ ಪ್ರಾಪ್ತವಾಗಲಿ ಎಂದು ಹೇಳುತ್ತಾರೆ. ಗಣೇಶ ಚತುರ್ಥಿಯು ನಮಗೆ ಬಹಳಷ್ಟು ಉತ್ತಮವಾದಂತಹ ಹಬ್ಬವಾಗಿದೆ ಮತ್ತು ಗಣೇಶ ಚತುರ್ಥಿಯ ದಿನದಂದು..
ನಾವು ಗಣೇಶ ಮೂರ್ತಿಯ ಸ್ಥಾಪನೆಯನ್ನು ಮಾಡುತ್ತೇವೆ ಹಾಗಾದರೆ ಅದನ್ನು ತೆಗೆದುಕೊಂಡು ಬರಬೇಕಾದರೆ ಕೆಲವೊಂದು ನಿಯಮಗಳಿವೇ ಅವುಗಳು ಏನಪ್ಪಾ ಎಂದರೆ ಗಣೇಶನ ಸೊಂಡಿಲು ಯಾವಾಗಲೂ ಕೂಡ ಎಡ ಭಾಗಕ್ಕೆ ಇರಬೇಕು ಬಲ ಭಾಗಕ್ಕೆ ಇರುವ ಗಣೇಶನ ಸೊಂಡಿಲು ಅಪಶಕುನ ಎಂದು ನಂಬಲಾಗಿದೆ. ಇನ್ನು ಗಣೇಶನನ್ನು ತೆಗೆದುಕೊಂಡು ಬರುವ ಮುಂಚೆಯೇ ಗಣೇಶನ ಮೂರ್ತಿ ಒಳಗೆ ಬರುವ ಸರಿಯಾದ ಸಮಯಕ್ಕೆ ಶಂಕದ ನಾದವನ್ನು ಪ್ರಯೋಗ ಮಾಡಬೇಕು ಆ ರೀತಿಯಾಗಿ ಮಾಡಿದಾಗ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳು ಕೂಡ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಮತ್ತು ಇದರ ಜೊತೆಗೆ ಗಣೇಶನನ್ನು ಪ್ರತಿಷ್ಠಾಪನೆ ಮಾಡಬೇಕಾದರೆ..
ಹಳದಿ ಬಣ್ಣ ಈ ರೀತಿಯಾಗಿ ಪ್ರತಿಷ್ಠಾಪನೆ ಮಾಡುತ್ತಾರೆ ಆದರೆ ಇತ್ತೀಚಿನ ದಿನಗಳಲ್ಲಿ ವಿವಿಧ ಬಣ್ಣಗಳಿಂದ ಗಣೇಶನ ಪ್ರತಿಷ್ಠಾಪನೆ ನಡೆಯುತ್ತದೆ ಹಾಗಾಗಿ ಗಣೇಶನನ್ನು ವಿಸರ್ಜನೆ ಮಾಡುವಂತಹ ಸಮಯದಲ್ಲಿ ಎಷ್ಟು ದಿನ ನಾವು ಸಂಕಲ್ಪ ಮಾಡಿಕೊಂಡಿರುತ್ತೇವೆ ಅಷ್ಟು ದಿನವೂ ಕೂಡ ಶ್ರದ್ಧಾ ಭಕ್ತಿ ನಿಷ್ಠೆ ಮತ್ತು ನಂಬಿಕೆಯಿಂದ ಗಣೇಶನನ್ನು ಪ್ರಾರ್ಥಿಸಿ ನಾವು ಕೊನೆಯಲ್ಲಿ ಗಣೇಶನನ್ನು ವಿಸರ್ಜನೆ ಮಾಡಿದರೆ ನಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಪರಿಹಾರವಾಗಿ ಒಳ್ಳೆಯ ಸಮಯಗಳು ಪ್ರಾರಂಭವಾಗುತ್ತದೆ ಮತ್ತು ಅದರ ಜೊತೆಗೆ ನಮಗೆ ಒಳ್ಳೆಯ ಶಕುನವೂ ಕೂಡ ಬಂದುಬಿಡುತ್ತದೆ ಹೀಗಾಗಿ ಗಣೇಶನನ್ನು ನಾವು ತುಂಬಾ ಭಕ್ತಿಯಿಂದ ಪೂಜಿಸಬೇಕು.