ಸಾಕಷ್ಟು ಜನ ರಾಶಿಫಲಗಳನ್ನು ನಂಬುತ್ತಾರೆ, ಅದೇ ರೀತಿ ತನ್ನ ಈ ದಿನ ಏನೆಲ್ಲಾ ಆಗುತ್ತದೆ ಎನ್ನುವುದನ್ನು ನೋಡಲು ರಾಶಿಫಾಲವನ್ನು ಕೆಲವರು ಓದುತ್ತಾರೆ. ರಾಶಿಫಾಲಗಳು ಎಷ್ಟು ನಿಜ ಹಾಗೂ ಎಷ್ಟು ಸುಳ್ಳು ಎಂಬುದು ಅವರವರ ಸಂಬಿಕೆಗೆ ಬಿಟ್ಟಿದ್ದು. ಇನ್ನು ನಮ್ಮ ಹಿಂದೂ ಸಂಸೃತಿಯ ಪ್ರಕಾರ 12 ರಾಶಿಗಳಿವೆ. ಇನ್ನು ಈ ಹನ್ನೆರಡು ರಾಶಿಗಳಲ್ಲಿ 10 ನೆಯ ರಾಶಿ ಮಕರ ರಾಶಿ. ಮಕರ ರಾಶಿಯವರು ಬೇರೆ ರಾಶಿಯವರಿಗಿಂತ ತುಂಬಾ ಸೂಕ್ಶ್ಮ ಹಾಗೂ ತುಂಬಾ ರಹಸ್ಯಗಳನ್ನು ಇಟ್ಟುಕೊಂಡಿರುತ್ತಾರೆ. ಇನ್ನು ಇಂದು ನಾವು ಮಕರ ರಾಶಿಯವರ ಬಗ್ಗೆ ಸಂಪೂರ್ಣವಾಗಿ ತಿಳಿಸುತ್ತೇವೆ. ಈ ಪುಟವನ್ನು ಪೂರ್ತಿಯಾಗಿ ಓದಿ..
ಮಕರ ರಾಶಿ, ರಾಶಿಚಕ್ರಗಳಲ್ಲಿ 10ನೆಯ ರಾಶಿ ಚಕ್ರ ಮಕರ ರಾಶಿ. ಮಕರ ರಾಶಿಯ ಅಂಶ ಭೂಮಿ ಹಾಗೂ ಆಳುವ ಗ್ರಹ ಶನಿ. ಇದರ ಬಣ್ಣ ಕಪ್ಪು ಹಾಗೂ ಇದರ ಗುಣ ಧಾನ, ಹಾಗೂ ದಿನ ಶನಿವಾರ. ಈ ರಾಶಿಯವರ ಅದೃಷ್ಟ ಸಂಖ್ಯೆ 4, 8, 13, ಹಾಗೂ 22. ಇನ್ನು ಮಕರ ರಾಶಿಯನ್ನ ಆಳುವ ಗ್ರಹ ಶನಿ. ಶನಿದೇವರಂತೆ ಈ ರಾಶಿಯವರು ಕೂಡ ನ್ಯಾಯವನ್ನ ಪ್ರೀತಿಸುವವರಾಗಿರುತ್ತಾರೆ. ಇನ್ನು ಮಕರ ರಾಶಿಯ ಅಂಶ ಭೂಮಿಯಾಗಿರುವ ಕಾರಣ, ಈ ರಾಶಿಯವರು ತುಂಬಾ ಶ್ರಮಶೀಲರು. ಇವರ ಅದೃಷ್ಟ ಸಂಖ್ಯೆ ನಾಲ್ಕು, ಹಾಗೂ ಈ ರಾಶಿಯವರ ಶುಭ ದಿನ ಶನಿವಾರ.
ಏಕೆಂದರೆ ಇದು ಶನಿ ದೇವರ ದಿನವಾಗಿದೆ. ಹಾಗೂ 39 ವರ್ಷದಿಂದ 59 ವರ್ಷದ ಒಳಗಿನ ಸಮಯ ಈ ರಾಶಿಯವರಿಗೆ ತುಂಬಾ ಉತ್ತಮವಾಗಿರುತ್ತದೆ.ಮಕರ ರಾಶಿಯವರು ತುಂಬಾ ಮುಗ್ದ ಮನಸ್ಸಿನವರು ಹಾಗೂ ತಮ್ಮ ಪ್ರತಿಯೊಂದು ಸಮಂಧವನ್ನು ತುಂಬಾ ಪ್ರಾಮಾಣಿಕವಾಗಿ ನಿಭಾಯಿಸುತ್ತಾರೆ. ಇದು ಅವರ ಮಿತಿಗಳನ್ನು ಹಾಗೂ ಅವರ ಕಾಲಾವಕಾಶಗಕನ್ನ ಪ್ರತಿನಿಧಿಸುತ್ತದೆ. ಹುಟ್ಟಿದಾಗಿನಿಂದಲೇ ಮಕರ ರಾಶಿಯವರು ಬೇರೆ ರಾಶಿಯವರಂತೆ ಕೆಲವೊಂದು ವಿಶೇಷ ಗುಣಗಳನ್ನು ಹೊಂದಿರುತ್ತಾರೆ. ಮಕರ ರಾಶಿಯವರ ಕೆಲವೊಂದು ಗುಣಗಳ ಬಗ್ಗೆ ಕೆಲವರು ತಪ್ಪು ಅರ್ಥ ಮಾಡಿಕೊಂಡಿರುತ್ತಾರೆ.
ಮಕರ ರಾಶಿಯವರು ತುಂಬಾ ದೃಢ ಮನಸ್ಸಿನವರು. ಇವರು ಯಾವುದೇ ಕೆಲಸಕ್ಕೆ ಕೈ ಹಾಕಿದರೆ ಅದನ್ನು ಪೂರ್ಣಗೊಳಿಸದೆ ಹಿಂದೇಟು ಹಾಕುವುದಿಲ್ಲ. ಇನ್ನು ಮಕರ ರಾಶಿಯವರು ತಮ್ಮ ಪ್ರತಿಯೊಂದು ವಿಷಯದ ಬಗ್ಗೆ ಕೂಡ ಹೆಚ್ಚಿನ ಘಮನ ಹರಿಸುತ್ತಾರೆ.ಮಕರ ರಾಶಿ ಕಠಿಣ ಪರಿಶ್ರಮದ ಸಂಕೇತ, ತಮಗೆ ಬೇಕಾಗಿರುವುದನ್ನು ಸಾಧಿಸೋಕೆ ಈ ರಾಶಿಯವರು ಏನು ಬೇಕಾದರೂ ಮಾಡುತ್ತಾರೆ. ಸಾಧನೆಗಾಗಿ ಇಂತಹ ಎಷ್ಟು ಕಷ್ಟಗಳನ್ನು ಬೇಕಾದರೂ ಈ ರಾಶಿಯವರು ಎದುರಿಸುತ್ತಾರೆ. ಸಾಧನೆಯ ಧಾರಿಯಿಂದ ಹೊರ ಹೋಗೋಕೆ ಈ ರಾಶಿಯವರು ಎಂದೂ ಬಯಸುವುದಿಲ್ಲ.
ಸುಮ್ಮನೆ ಕೂತು ಕನಸ್ಸು ಕಾಣುವ ಬದಲು ಮಕರ ರಾಶಿಯವರು ತಾವು ಮಾಡುವ ಕಾರ್ಯಗಳ ಮೇಲೆ ಹೆಚ್ಚು ಘಮನ ಹರಿಸುತ್ತಾರೆ. ಈ ರಾಶಿ ಚಕ್ರದ ಜನರು ತುಂಬಾ ಶ್ರಮಶೀಲರು ಮತ್ತು ಮಹಾತ್ವಾಕಾಂಕ್ಷೆಗಳನ್ನು ಪೂರೈಸುವುದಕ್ಕೆ ತುಂಬಾ ಶ್ರಮಿಸುತ್ತಾರೆ.ಈ ರಾಶಿಯವರು ತಮ್ಮ ಜೀವನವನ್ನು ಅರ್ಥ ಪೂರ್ಣವಾಗಿಸೋಕೆ ಪ್ರಯತ್ನಿಸುತ್ತಾರೆ. ಶನಿಯ ಒಡೆತನದ ಮಕರ ರಾಶಿಯ ಜನರು ಉತ್ತಮ ಗುರುಗಳನ್ನು ಪಡೆಯುತ್ತಾರೆ. ಅಲ್ಲದೆ ಈ ರಾಶಿಚಕ್ರದವರು ಕೃಷಿಗೆ ಸಂಬಂಧಿಸಿದ ಕೆಲಸಗಳಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ. ಇನ್ನು ಈ ರಾಶಿಯವರ ನಡುವಳಿಕೆ ತುಂಬಾ ಸೌಮ್ಯವಾಗಿರುವ ಕಾರಣ ಇವರು ಉತ್ತಮ ಉದ್ಯಮಿ ಹಾಗೂ ವ್ಯಾಪಾರಿ ಕೂಡ ಆಗಬಹುದು.
ಮಕರ ರಾಶಿಯವರು ಬಹಳ ನಿಷ್ಠಾವಂತರು, ಇವರ ನಿಷ್ಠೆಗೆ ಸರಿಸಮಾನರು ಯಾರು ಇಲ್ಲ. ಈ ರಾಶಿಯವರು ಒಂದು ಸಾರಿ ಯಾರಿಗಾದರೂ ಮಾತು ಕೊಟ್ಟರೆ ಅದನ್ನು ಏನೇ ಆಗಲಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ.ಇನ್ನು ಮಕರ ರಾಶಿಯವರ ಜೊತೆ ಸ್ನೇಹ ಬೆಳೆಸಿದರೆ, ಇವರ ಜೋತೆ ಇರುವ ಸಮಯದಲ್ಲಿ ಜೀವನದ ನಿಜವಾದ ಸ್ನೇಹವನ್ನು ತಿಳಿಯಲು ಸಾಧ್ಯವಾಗುತ್ತದೆ. ಆಕಾಶಕ್ಕೆ ಮಿತಿ ಇಲ್ಲ, ಅದೇ ರೀತಿ ಮಕರ ರಾಶಿಯವರಿಗೂ ಸಹ ತೃಪ್ತಿ ಇಲ್ಲ. ಹೆಚ್ಚಿನ ಧನ ಸಾಧಿಸೋಕೆ ಇವರು ಪ್ರಯತ್ನಿಸುತ್ತಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ, ಒಮ್ಮೆ ಈ ರಾಶಿಯವರು ಯಾವುದನ್ನಾದರೂ ಸಾಧಿಸಬೇಕು ಎಂದು ನಿರ್ಧರಿಸಿದರೆ, ಅದನ್ನು ಯಾರಿಂದಲೂ ಸಹ ತಾಡಿಯೋಕೆ ಸಾಧ್ಯವಾಗುವುದಿಲ್ಲ. ಇನ್ನು ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…