Categories
devotional Information

ನಿಮ್ಮ ಹೊಟ್ಟೆಯಲ್ಲಿ ಇರುವ ಕಲ್ಮಶವೆಲ್ಲ ಹೋಗಿ ಫುಲ್ ಕ್ಲೀನ್ ಆಗಬೇಕಾ ಹಾಗಾದ್ರೆ ಒಂದು ಚಿಟಕಿ ಇದನ್ನು ಹೀಗೆ ಮಾಡಿಕೊಂಡು ಕುಡಿಯಿರಿ …!!!

ಹಾಯ್ ಸ್ನೇಹಿತರೆ ಆರೋಗ್ಯವೇ ಭಾಗ್ಯ ಎಂದು ಗಾದೆಯಿದೆ. ನಾವು ಏನನ್ನಾದರೂ ಸಾಧಿಸಬೇಕು ಜೀವನದಲ್ಲಿ ನೆಮ್ಮದಿಯಾಗಿ ಇರಬೇಕು ಎಂದರೆ ಮೊದಲು ನಮಗೆ ಬೇಕಾಗಿರುವುದು ಆರೋಗ್ಯ. ದುಡ್ಡಿನಿಂದ ನಾವು ಎಲ್ಲವನ್ನೂ ಕೊಂಡುಕೊಳ್ಳಬಹುದು ಆದರೆ ಆರೋಗ್ಯವನ್ನು ಎಷ್ಟೇ ದುಡ್ಡಿದ್ದರೂ ಕೊಂಡುಕೊಳ್ಳಲು ಆಗುವುದಿಲ್ಲ. ಆದರೆ ಇಂತಹ ಮಾಹಿತಿ ಎಲ್ಲರಿಗೂ ತಿಳಿದಿದ್ದರೂ ಅದೇ ತಪ್ಪನ್ನು ಮಾಡುತ್ತಿರುತ್ತಾರೆ ಏಕೆಂದರೆ ಜೀವನ ನಡೆಸಲು ದುಡ್ಡು ಅನಿವಾರ್ಯವಾಗಿದೆ ಎಂದು.

ಸ್ನೇಹಿತರೆ ನಿಮಗೂ ಕೂಡ ಅನಿಸಿರಬಹುದು ನಮ್ಮ ಅಜ್ಜ ಅಜ್ಜಿ ಎಷ್ಟು ಗಟ್ಟಿಯಾಗಿ ಇರುತ್ತಿದ್ದರು ನಾವು ಅವರಷ್ಟು ಗಟ್ಟಿಯಾಗಿಲ್ಲ ಎಂದು ಅವರಿಗೆ ತಮ್ಮ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಲು ಕೆಲವು ಮನೆಮದ್ದುಗಳು ಇದ್ದವು ಅವರು ಇಂತಹದನ್ನೆಲ್ಲ ಮಾಡುತ್ತಿದ್ದರು ಹಾಗಾದರೆ ಅದು ಏನು ಎಂದು ತಿಳಿಯೋಣ. ಸ್ನೇಹಿತರೆ ಜೀವನಪೂರ್ತಿ ನಾವು ದುಡಿಯುವುದೇ ಒಂದು ಕೆಲಸವನ್ನು ಮಾಡಬಾರದು ಜೊತೆಗೆ ನಮ್ಮ ಸಂಸಾರ ನಮ್ಮ ಆರೋಗ್ಯದ ಬಗ್ಗೆಯೂ ಕೂಡ ಕಾಳಜಿ ವಹಿಸಬೇಕು ಆಗಿನ ಕಾಲದಲ್ಲಿ ಬಿಪಿ ಶುಗರ್ ಹಾರ್ಟ್ ಅಟ್ಯಾಕ್ ಅಂತಹ ಕಾಯಿಲೆಗಳು ಹೆಚ್ಚಾಗಿ ಕಾಣಿಸುತ್ತಿಲ್ಲ

ಆದರೆ ಈಗ ಈ ರೋಗಗಳು ಹೆಚ್ಚಾಗಿ ಎಲ್ಲರಿಗೂ ಕಾಣಿಸಿಕೊಳ್ಳುತ್ತಿದೆ ಏಕೆಂದರೆ ನಮ್ಮಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಹಾಗೂ ನಮ್ಮ ಆಹಾರ ಪದ್ಧತಿಯಿಂದ ಆಗಿರುವುದು. ಇಂತಹ ಎಲ್ಲಾ ರೋಗಗಳಿಗೂ ಈ ಒಂದು ಚಿಟಿಕೆ ಅರಿಶಿನದಿಂದ ಪರಿಹಾರ ಮಾಡಿಕೊಳ್ಳಬಹುದು. ಹೌದು ಸ್ನೇಹಿತರೆ ಒಂದು ಚಿಟಿಕೆಯಷ್ಟು ಅರಿಶಿನವನ್ನು ಉಗುರುಬೆಚ್ಚಗಿನ ನೀರಿನಲ್ಲಿ ರಾತ್ರಿ ಮಲಗುವಾಗ ಸೇವಿಸುವುದರಿಂದ ನಿಮಗೆ ನೆಗಡಿ ಕೆಮ್ಮು ಜ್ವರ ಇಂತಹ ಯಾವುದೇ ಕಾಯಿಲೆಗಳು ಬರುವುದಿಲ್ಲ. ಯಾರ ದೇಹವು ತುಂಬಾ ಉಷ್ಣದಿಂದ ಕೂಡಿರುತ್ತದೆ

ಅವರು ತಣ್ಣೀರಿನಲ್ಲಿ ಅರಿಶಿನವನ್ನು ಕುಡಿಯಬಹುದು ಅಂದರೆ ಯಾರು ತುಂಬಾ ಹೀಟಾಗಿ ಇರುತ್ತಾರೆ ಅವರು. ಅರಿಶಿನದ ಕೊಂಬನ್ನು ಚೆನ್ನಾಗಿ ಮನೆಯಲ್ಲೇ ನಾವು ಕೊಟ್ಟುಕೊಳ್ಳಬೇಕು ಸ್ವಲ್ಪ ಪುಡಿ ಆದನಂತರ ಅದನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಪೌಡರ್ ಮಾಡಿಕೊಳ್ಳಬೇಕು. ಇದಕ್ಕೆ ಯಾವುದೇ ಮಸಾಲೆ ಪದಾರ್ಥಗಳನ್ನು ಕುಡಿಸಬಾರದು. ಪ್ರತಿನಿತ್ಯ ರಾತ್ರಿ ಮಲಗುವಾಗ ಬಿಸಿನೀರಲ್ಲಿ ಕುಡಿಯುವುದರಿಂದ ನಮ್ಮ ರೋಗನಿರೋಧಕ ಶಕ್ತಿ ತುಂಬಾ ಹೆಚ್ಚುತ್ತದೆ ಹಾಗೆ ನಮ್ಮ ಜೀರ್ಣಾಂಗ ವ್ಯವಸ್ಥೆಯು ಕೂಡ ಚೆನ್ನಾಗಿರುತ್ತದೆ.

ಅರಿಶಿಣದ ಪುಡಿ ಚರ್ಮರೋಗಗಳಿಗೆ ರಾಮಬಾಣವಾಗಿದೆ. ನಿಮಗೆ ಚರ್ಮದಲ್ಲಿ ಯಾವುದೇ ತೊಂದರೆ ಇದ್ದರೆ ಅಥವಾ ಫಂಗಲ್ ನಂತಹ ಯಾವುದೇ ಲಕ್ಷಣಗಳು ನಿಮ್ಮ ದೇಹದಲ್ಲಿ ಕಂಡರೆ ಸ್ನಾನ ಮಾಡುವ ನೀರಿನಲ್ಲಿ ಒಂದು ಚಿಟಿಕೆ ಅರಿಶಿನದ ಪುಡಿಯನ್ನು ಹಾಕಿಕೊಳ್ಳಬೇಕು ಇಂತಹ ನೀರನ್ನು ಸ್ನಾನ ಮಾಡುವುದರಿಂದ ನಿಮಗೆ ಯಾವುದೇ ಕೆಟ್ಟ ಬ್ಯಾಕ್ಟೀರಿಯ ಗಳು ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ ಇದರಿಂದ ನಿಮ್ಮ ಚರ್ಮದ ರೋಗವು ಕೂಡ ನಿವಾರಿಸುತ್ತದೆ. ಇನ್ನೂ ಇದು ಮುಖದ ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ ಅದಕ್ಕಾಗಿಯೇ ಅರಿಶಿನವನ್ನು ತುಂಬಾ ಕ್ರೀಮ್ ಗಳಲ್ಲಿ ಉಪಯೋಗಿಸುತ್ತಾರೆ. ಅರಿಶಿಣವನ್ನು ಇಂಗ್ಲಿಷ್ನಲ್ಲಿ ಟರ್ಮರಿಕ್ ಎಂದು ಕರೆಯುತ್ತಾರೆ. ನಾವು ಪ್ರತಿನಿತ್ಯ ಆಹಾರಪದ್ಧತಿಯಲ್ಲಿ ಅರಿಶಿಣವನ್ನು ಬಳಸಬೇಕು

ಅಂಗಡಿಯಲ್ಲಿ ತಂದ ಅರಿಶಿನದ ಪುಡಿ ಅಷ್ಟು ಆರೋಗ್ಯಕ್ಕೆ ಒಳ್ಳೆಯದಲ್ಲ ಮನೆಯಲ್ಲಿಯೇ ನಾವು ತಯಾರಿಸಿಕೊಂಡು ಪ್ರತಿನಿತ್ಯ ಉಪಯೋಗಿಸುತ್ತಿದ್ದರೆ ನಮಗೆ ನೆಗಡಿ ಶೀತ ಕೆಮ್ಮು ಜ್ವರ ಹಾಗೂ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಬರುವುದಿಲ್ಲ. ಸ್ನೇಹಿತರೆ ಅರಿಶಿಣವೆಂಬುದು ತುಂಬಾ ಶಕ್ತಿ ಶಾಲಿಯಾದದ್ದು. ಮದುವೆ ಶಾಸ್ತ್ರದಲ್ಲೂ ಕೂಡ ಅರಿಶಿನ ಶಾಸ್ತ್ರವೆಂದು ಮಾಡುತ್ತಾರೆ ಅರಿಶಿಣಕ್ಕೆ ತುಂಬಾ ವಿಶೇಷತೆ ಇದೆ. ಇದು ನಮ್ಮಲ್ಲಿರುವ ದರಿದ್ರವನ್ನು ಸಹ ಓಡಿಸುತ್ತದೆ. ಮದುವೆಯಲ್ಲಿ ಅರಿಶಿಣವನ್ನು ಹಚ್ಚುವುದಕ್ಕೆ ವಧು ಹಾಗು ವರರ ತುಂಬಾ ಲಕ್ಷಣವಾಗಿ ಕಾಣಿಸುತ್ತಾರೆ

ಹಾಗೆ ಅವರಿಗೆ ಉತ್ಸಾಹ ಹೆಚ್ಚುತ್ತದೆ ಅವರು ಯಾವಾಗಲೂ ತುಂಬಾ ಆಕ್ಟಿವ್ ಆಗಿರುವಂತೆ ಮಾಡುತ್ತದೆ ಮದುವೆ ಕಾರ್ಯಗಳಲ್ಲಿ ಅರಿಶಿಣವನ್ನು ಬಳಸಲು ತುಂಬಾ ವೈಜ್ಞಾನಿಕ ಕಾರಣಗಳಿವೆ ಹಾಗೂ ವಾಸ್ತು ಪ್ರಕಾರದಲ್ಲೂ ಕೂಡ ಅರಿಶಿಣವನ್ನು ಬಳಸಲು ತುಂಬಾ ಕಾರಣಗಳಿವೆ ಅರಿಶಿಣ ಯಾವಾಗಲೂ ನಮಗೆ ಒಳ್ಳೆಯದನ್ನೇ ಮಾಡುತ್ತದೆ ಅಂದರೆ ದೆವ್ವ ಭೂತಗಳು ಕೂಡ ಅರಿಶಿಣವನ್ನು ಕಂಡರೆ ಭಯ ಪಡುತ್ತವೆ. ಹಾಗೂ ತುಂಬಾ ಆರೋಗ್ಯಕ್ಕೆ ಸಹಕಾರಿಯಾಗಿದೆ. ಒಂದು ಚಿಟಿಕೆ ಅರಿಶಿಣ ನಮ್ಮ ಆರೋಗ್ಯವನ್ನು ಭವಿಷ್ಯದಲ್ಲಿ ಕಾಪಾಡುತ್ತದೆ ಎಂದರೆ ಇದಕ್ಕಿಂತ ಉತ್ತಮವಾದದ್ದು ಏನು ಇಲ್ಲ

ನಾವು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದರೆ ಮುಂದೆ ನಮ್ಮ ವಯಸ್ಸಾದ ಕಾಲದಲ್ಲಿ ನಾವು ಸ್ವಲ್ಪ ಶಕ್ತಿಯಿಂದ ಇರಬಹುದು ಅದಕ್ಕಾಗಿ ನಾವು ನಮ್ಮ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬೇಕು. ಸ್ನೇಹಿತರೆ ಅರಿಶಿಣದಿಂದ ಇನ್ನೂ ತುಂಬಾ ಉಪಯೋಗಗಳು ಇವೆ ಪ್ರತಿನಿತ್ಯ ಅರಿಶಿಣವನ್ನು ಬಳಸಿ ನಿಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ ಈ ಮಾಹಿತಿಯಲ್ಲಿ ನಿಮಗೆ ಅರಿಶಿನದ ಬಗ್ಗೆ ಹಾಗೂ ಅದರ ಉಪಯೋಗದ ಬಗ್ಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ