ಮೃತ್ಯುಂಜಯ ಮಂತ್ರದ ಬಗ್ಗೆ ನೀವು ಕೇಳಿರದೆ ಇದ್ದರೆ ಈ ಮಂತ್ರದ ಮಹತ್ವವು ನಿಮಗೆ ತಿಳಿಯದೇ ಇದ್ದರೆ ಇಂದಿನ ಮಾಹಿತಿಯಲ್ಲಿ ಈ ಒಂದು ಮೃತ್ಯುಂಜಯ ಮಂತ್ರದ ವಿಶೇಷತೆಯ ಬಗ್ಗೆ ಮತ್ತು ಇದರ ರಚನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ .ತಪ್ಪದೇ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಹಾಗೂ ಕೊನೆಯಲ್ಲಿ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ನಮಗೆ ತಪ್ಪದೇ ಕಾಮೆಂಟ್ ಮಾಡಿ.ಬ್ರಹ್ಮ ವದಂತಿಗಳಲ್ಲಿ ತಿಳಿಸಲಾಗಿದೆ ಈ ಒಂದು ಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಸಾಕ್ಷಾತ್ ಯಮಧರ್ಮರಾಯನ ಹೆದರಿ ಹಿಂದಿರುಗಿ ಹೋಗಿದ್ದರಂತೆ .
ಅಂತಹ ಶಕ್ತಿಶಾಲಿಯುಳ್ಳ ಈ ಮಂತ್ರದ ಮಹತ್ವದ ಬಗ್ಗೆ ತಿಳಿಸಿಕೊಡುತ್ತೇನೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಈ ಮಂತ್ರದ ಮಹತ್ವವನ್ನು ಒಂದು ಕತೆಯ ಮುಖಾಂತರ ತಿಳಿಯೋಣ ಈ ಮಂತ್ರ ಹೇಗೆ ರಚನೆಯಾಯಿತು ಇದರ ಮಹತ್ವ ಎಷ್ಟಿದೆ ಎಂದು ಈ ಕಥೆಯೇ ತಿಳಿಸುತ್ತದೆ.ಒಮ್ಮೆ ಮುಖಂಡ ಋಷಿಗಳು ಸಂತಾನ ಭಾಗ್ಯವಿಲ್ಲದೆ ಈಶ್ವರನನ್ನು ಕುರಿತು ತಪಸ್ಸನ್ನು ಮಾಡುತ್ತಾರೆ ಈ ತಪಸ್ಸಿನಲ್ಲಿ ಈಶ್ವರನು ಪ್ರತ್ಯಕ್ಷವಾಗಿ ಋಷಿಗೆ ಬೇಕಾಗಿರುವ ವರವನ್ನು ಕರುಣಿಸುತ್ತಾರೆ.ಆ ವರವೂ ಏನಾಗಿತ್ತು ಅಂದರೆ ಗಂಡು ಮಗುವಿನ ಪ್ರಾಪ್ತಿ ಆಗಬೇಕೆಂದಿತ್ತು ನಂತರ ಈಶ್ವರ ಒಂದು ಷರತ್ತನ್ನು ಕೂಡ ಹಾಕುತ್ತಾರೆ ಅದೇನೆಂದರೆ
ನಿನಗೆ ಪುತ್ರ ಪ್ರಾಪ್ತಿ ಆಗುವುದರ ಜೊತೆಗೆ ಆ ಪುತ್ರನಿಗೆ ಆಯಸ್ಸು ಕಡಿಮೆ ಇರುತ್ತದೆ ಅಂತ ಕೂಡಾ ಹೇಳಿರುತ್ತಾರೆ.ಋಷಿಗೆ ಪುತ್ರ ಪ್ರಾಪ್ತಿಯಾಯಿತು ಇದರ ಖುಷಿಯಲ್ಲಿಯೇ ಇದ್ದ ಖುಷಿಗೆ ಈಶ್ವರನು ಹೇಳಿದ ಮಾತು ಮರೆತೇ ಹೋಗಿರುತ್ತದೆ.ಪುತ್ರ ಬೆಳೆದು ದೊಡ್ಡವನಾಗುತ್ತಾನೆ ಇನ್ನೇನು ಹನ್ನೆರಡು ವರುಷ ಆಗಿಬಿಡುತ್ತದೆ ಮಗನನ್ನು ಕಳೆದುಕೊಳ್ಳಬೇಕು ಅನ್ನೋ ದುಃಖ ಆಗ ಶುರುವಾಗುತ್ತದೆ. ಈ ಒಂದು ವಿಚಾರವನ್ನು ತನ್ನ ಪತ್ನಿಗೂ ತಿಳಿಸಿದ ಋಷಿ ಇಬ್ಬರು ಕೂಡ ಚಿಂತೆಗೊಳಗಾಗಿದ್ದರು .
ಈ ಋಷಿಯ ಪುತ್ರನ ಹೆಸರು ಮಾರ್ಕಂಡಯ್ಯ ಪುತ್ರ ತಾಯಿಯ ಶ್ಲೋಕವನ್ನು ಕಂಡು ಏನೆಂದು ವಿಚಾರಿಸಿದಾಗ ಇರುವ ವಿಚಾರವನ್ನು ಮಗನಿಗೆ ತಿಳಿಸುತ್ತಾಳೆ ತಾಯಿ.ಅಷ್ಟೇ ಅಲ್ಲದೆ ಋುಷಿ ಮುನಿಯೂ ತನ್ನ ಮಗನಿಗೆ ಶಿವ ಮಂತ್ರದ ದೀಕ್ಷೆಯನ್ನು ಕೂಡ ನೀಡಿರುತ್ತಾರೆ.ತಾಯಿಯಿಂದ ಎಲ್ಲ ವಿಚಾರವನ್ನು ತಿಳಿದ ಮಾರ್ಕಂಡಯ್ಯ ತಾನು ಯಾರಿಂದ ವರವನ್ನು ಪಡೆದುಕೊಂಡಿದ್ದೇನೆ ಅವರಿಂದಲೇ ನನ್ನ ಆಯಸ್ಸನ್ನು ಕೂಡ ಪಡೆದುಕೊಳ್ಳುತ್ತೇನೆ ಎಂದು ಪಣ ತೊಟ್ಟು ಶಿವಾಲಯಕ್ಕೆ ಹೋಗಿ ತಪಸ್ಸನ್ನು ಮಾಡುತ್ತಾರೆ ಹಾಗೆ ಮೃತ್ಯುಂಜಯ ಮಂತ್ರವನ್ನು ಕೂಡ ರಚಿಸುತ್ತಾರೆ.
“ಓಂ ತ್ರಯಂಬಕಂ ಯಜಾಮಹೇ..ಸುಗಂಧಿ೦ ಪುಷ್ಟಿವರ್ಧನಂ ಉರ್ವಾರುಕಮಿವ ಬಂಧನಾತ್ ಮೃತ್ಯೋರ್ಮುಕ್ಷೀಯಮಾಮೃತಾತ್ “ಈ ಮಂತ್ರವನ್ನು ಪಠಿಸುತ್ತಾ ಮಾರ್ಕಂಡಯ್ಯ ಶಿವನ ಆಲಯದಲ್ಲಿ ತಪಸ್ಸು ಮಾಡುತ್ತಿರುತ್ತಾರೆ ಇನ್ನೇನು ಪುತ್ರನಿಗೆ ಹನ್ನೆರಡು ವಯಸ್ಸು ತುಂಬುತ್ತದೆ .ಯಮ ಕಿಂಕರರು ಮಾರ್ಕಂಡಯ್ಯ ನನ್ನು ಯಮಲೋಕಕ್ಕೆ ಕರೆದುಕೊಂಡು ಬರಲು ಭೂಲೋಕಕ್ಕೆ ಬರುತ್ತಾರೆ. ಆಗ ಮಾರ್ಕಂಡಯ್ಯ ನು ಮೃತ್ಯುಂಜಯ ಮಂತ್ರವನ್ನು ಪಠಿಸುತ್ತಿರುವುದನ್ನು ಕೇಳಿಸಿಕೊಂಡು ಹೆದರಿ ಮತ್ತೆ ಹಿಂದಿರುಗುತ್ತಾರೆ.
ಮತ್ತೆ ನಡೆದ ವಿಚಾರವನ್ನೆಲ್ಲಾ ಯಮನಿಗೆ ತಿಳಿಸಿ ಹೇಳುತ್ತಾರೆ ಇದನ್ನೆಲ್ಲ ಕೇಳಿದ ಯಮನು ತಾನೇ ಭೂಲೋಕಕ್ಕೆ ಬಂದು ಮಾರ್ಕಂಡಯನನ್ನು ಕರೆದುಕೊಂಡು ಹೋಗಲು ಸಿದ್ಧರಾಗಿರುತ್ತಾರೆ.ತಪಸ್ಸನ್ನು ಭಂಗ ಮಾಡಿದ ಯಮರಾಜನು ಮಾರ್ಕಂಡನನ್ನು ಪಾಶ ಹಾಕಲು ಮುಂದಾಗುತ್ತಾರೆ ಶಿವಲಿಂಗವನ್ನು ಅಪ್ಪಿದ ಮಾರ್ಕಂಡಯ್ಯ ಯಮನನ್ನು ನೋಡುತ್ತಾ ಮತ್ತೆ ಮಂತ್ರವನ್ನು ಪಠಿಸುತ್ತಿರುತ್ತಾರೆ.ಮಾರ್ಕಂಡಯ್ಯ, ತಪಸ್ಸನ್ನು ಭಂಗ ಮಾಡಿದ್ದಕ್ಕೆ ಸಾಕ್ಷಾತ್ ಶಿವನೇ ಪ್ರತ್ಯಕ್ಷನಾಗಿ ಯಮರಾಜನಿಗೆ ಭಯಭೀತರಾಗಿಸುತ್ತಾರೆ. ಅಂದಿನಿಂದಲೂ ಈ ಮೃತ್ಯುಂಜಯ ಮಂತ್ರಕ್ಕೆ ಸಾಕ್ಷಾತ್ ಶಿವನ ಆಶೀರ್ವಾದವೇ ಇದೆ ಎಂಬುದನ್ನು ನಾವು ಇದರಿಂದ ತಿಳಿಯಬಹುದು.ಅಂದಿನಿಂದಲೂ ಮೃತ್ಯುಂಜಯ ಮಂತ್ರಕ್ಕೆ ಬಹಳ ವೈಶಿಷ್ಟ್ಯತೆಯನ್ನು ನೀಡಲಾಗಿದೆ
ಇನ್ನು ಇತ್ತ ಮಾರ್ಕಂಡಯ್ಯನಿಗೆ ಆಯಸ್ಸನ್ನು ವರವಾಗಿ ನೀಡುತ್ತಾರೆ .ಈಶ್ವರ ದೇವ.ಮೃತ್ಯುಂಜಯ ಮಂತ್ರವನ್ನು ಪಠಿಸುವುದಕ್ಕೆ ಕೂಡ ಕೆಲವೊಂದು ನಿಯಮಗಳಿವೆ ಆ ನಿಯಮವನ್ನು ಅನುಸರಿಸಿಕೊಂಡು ಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಯಮನನ್ನೇ ಗೆಲ್ಲಬಹುದು ಎಂಬ ಮಾತಿದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ