Categories
devotional Information

ಭೂಮಿಯ ಮೇಲೆ ಇರುವ ಅಮೃತ ಈ ಗಿಡದ ಎಲೆ … ಎಲ್ಲಿ ಸಿಕ್ಕರೂ ಈ ಗಿಡವನ್ನು ಬಿಡಬೇಡಿ .. ಲಕ್ಷಾಂತರ ರುಪಾಯೀ ದುಡ್ಡು ಕೊಟ್ಟರು ಈ ಗಿಡದ ಎಲೆ ಅಷ್ಟು ಸುಲಭವಾಗಿ ಸಿಗಲ್ಲ …!!!

ಭೂಮಿಯ ಮೇಲಿನ ಅಮೃತವೇ ಎನ್ನಬಹುದು ಈ ಗಿಡದ ಎಲೆಗಳಿಗೆ. ನೀವು ಪದೇಪದೇ ಆಸ್ಪತ್ರೆಗೆ ಹೋಗುವುದೇ ಬೇಡ.ಎಷ್ಟೆಲ್ಲಾ ರೋಗಗಳು ವಾಸಿಯಾಗುತ್ತವೆ ಎಂದು ಈ ಮಾಹಿತಿಯಲ್ಲಿ ತಿಳಿದುಕೊಳ್ಳಿ.ಹಾಯ್ ಸ್ನೇಹಿತರೆ ಇವತ್ತು ನಿಮಗೊಂದು ತುಂಬಾ ಉಪಯೋಗಕಾರಿಯಾದ ಮಾಹಿತಿಯನ್ನು ನಾನು ನಿಮಗೆ ತಿಳಿಸುತ್ತಿದ್ದೇನೆ ಹಾಗಾದ್ರೆ ಅದು ಏನು ಅಂತ ಕೇಳ್ತೀರಾ ಹೌದು ಸ್ನೇಹಿತರೆ ಇದು ಒಂದು ಭೂಮಿಯ ಮೇಲಿನ ಅಮೃತವೇ ಸರಿ ಎಷ್ಟೆಲ್ಲಾ ರೋಗಗಳನ್ನು ವಾಸಿ ಮಾಡುತ್ತದೆ ಅಂದರೆ ನೀವು ಕೇಳಿದರೆ ಶಾಕ್ ಆಗ್ತೀರಾ.

ಹಾಗಾದ್ರೆ ಈ ಗಿಡದ ಹೆಸರೇನು ಮತ್ತು ಯಾವುದು ಈ ಗಿಡ ಇದರಿಂದ ಆಗುವ ಉಪಯೋಗಗಳು ಏನು ಎಂದು ಈಗಲೇ ತಿಳಿಯೋಣ. ಮನೆಯಲ್ಲಿ ನಾವು ಈ ಗಿಡವನ್ನು ಹಚ್ಚಿಕೊಳ್ಳಬಹುದು. ಪದೇ ಪದೇ ಆಸ್ಪತ್ರೆಗೆ ಹೋಗುವ ಬದಲು ಮನೆಯಲ್ಲಿ ನಾವು ಮನೆಮದ್ದುಗಳನ್ನು ಮಾಡಿಕೊಳ್ಳುವುದರಿಂದ ತುಂಬಾ ಉಪಯೋಗವಾಗುತ್ತದೆ ಅಂತಹದರಲ್ಲಿ ಇದು ತುಂಬಾ ಸಹಕಾರಿ. ಸ್ನೇಹಿತರೆ ಈ ಗಿಡದ ಹೆಸರು ದೊಡ್ಡ ಪತ್ರೆ ಗಿಡ ಇದಕ್ಕೆ ಅಜ್ವಾನದ ಗಿಡ ಎಂದು ಸಹ ಕರೆಯುತ್ತಾರೆ. ಹೌದು ಸ್ನೇಹಿತರೆ ಈ ಗಿಡದ ಎಲೆಗಳನ್ನು ಉಪಯೋಗಿಸುವುದರಿಂದ ನೆಗಡಿ ಶೀತ ಕೆಮ್ಮು ಇಂತಹ ಎಲ್ಲಾ ರೋಗಗಳಿಗೂ ಇದು ಔಷಧಿಯಾಗಿದೆ.

ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಗೆ ತುಂಬಾ ಉಪಯೋಗಕಾರಿ ಯಾರಿಗಾದರೂ ವಾಯ ನೋವು ಮಂಡಿ ನೋವು ಇದ್ದರೆ ಇದನ್ನು ಬಳಸಬಹುದು. ಯಾರಿಗಾದರೂ ಕೈಗಳಲ್ಲಿ ಅಥವಾ ಯಾವುದೇ ಸ್ಥಳದಲ್ಲಿ ರೆಡ್ಡಿಸ್ ಆಗಿ ಕಡಿಯುತ್ತಿದ್ದರೆ ಈ ಎಲೆಯ ರಸವನ್ನು ಹಚ್ಚಿಕೊಳ್ಳುವುದರಿಂದ ಬೇಗನೆ ವಾಸಿಯಾಗುತ್ತದೆ. ಸ್ನೇಹಿತರೆ ಹಾಗಾದರೆ ಮೊದಲು ನೆಗಡಿ ಶೀತ ಕೆಮ್ಮಿಗೆ ಯಾವ ರೀತಿಯಾಗಿ ಪರಿಹಾರವನ್ನು ಮಾಡಿಕೊಳ್ಳಬೇಕು ನೋಡೋಣ 8 ಅಥವಾ 10 ದೊಡ್ಡಪತ್ರೆ ಎಲೆಗಳನ್ನು ತೆಗೆದುಕೊಂಡು ಒಲೆಯ ಮೇಲೆ ಹಂಚನ್ನು ಇಟ್ಟು ಎಲೆಗಳನ್ನು ಬಿಸಿಮಾಡಿಕೊಂಡು ಚೆನ್ನಾಗಿ ಕುಟ್ಟಬೇಕು

ಇದರಿಂದ ಬರುವ ರಸವನ್ನು 1 ಸ್ಪೂನ್ ಜೇನುತುಪ್ಪದೊಂದಿಗೆ ಮಿಕ್ಸ್ ಮಾಡಿ 5 ಅಥವಾ ಹತ್ತು ವರ್ಷದ ಮಕ್ಕಳಿಗೆ ಬೆಳಿಗ್ಗೆ ಹಾಗೂ ಸಾಯಂಕಾಲ 1 ಸ್ಪೂನ್ ಕುಡಿಸಬೇಕು ದೊಡ್ಡವರು ಇದನ್ನು ಬೆಳಿಗ್ಗೆ ಹಾಗೂ ಸಾಯಂಕಾಲ 2 ಸ್ಪೂನ್ ಕುಡಿಯಬೇಕು ಹೀಗೆ ಮಾಡುವುದರಿಂದ ನೆಗಡಿ ಶೀತ ಕೆಮ್ಮು ಹಾಗೂ ಎಲ್ಲಾ ಕಡಿಮೆಯಾಗುತ್ತದೆ ಎದೆಯಲ್ಲಿರುವ ಕಫ ಕೂಡ ಕರಗುತ್ತದೆ. ಈ ದೊಡ್ಡಪತ್ರೆ ಎಲೆಗಳಲ್ಲಿ ವಿಟಮಿನ್ ಎ ಹಾಗೂ ವಿಟಮಿನ್ ಸಿ ಇರುವುದರಿಂದ ನಿಮಗೆ ರೋಗನಿರೋಧಕ ಶಕ್ತಿಯು ಕೂಡ ಹೆಚ್ಚುತ್ತದೆ ಹಾಗೆ ಇಮ್ಯೂನಿಟಿ ಬೂಸ್ಟ್ ಆಗುತ್ತದೆ.

ಸ್ನೇಹಿತರೆ ದೊಡ್ಡಪತ್ರೆ ಎಲೆಗಳನ್ನು ಬಳಸುವುದರಿಂದ ದೊಡ್ಡ ಆಸ್ಪತ್ರೆಗೆ ಹೋಗುವುದು ತಪ್ಪುತ್ತದೆ ಎಂದು ಹಿರಿಯರು ಹೇಳುತ್ತಿದ್ದರು. ಇದು ಹೊಟ್ಟೆ ನೋವಿಗೂ ಕೂಡ ರಾಮಬಾಣವಾಗಿದೆ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳಿಗೆ ಪ್ರಾರಂಭದಲ್ಲೇ ದೊಡ್ಡಪತ್ರೆ ಎಲೆಗಳನ್ನು ತಿನ್ನುವುದರಿಂದ ಪರಿಹಾರವನ್ನು ಕಂಡುಕೊಳ್ಳಬಹುದು. ದೊಡ್ಡಪತ್ರೆ ಎಲೆಗಳಿಗೆ ಜೀರ್ಣಿಸುವ ಶಕ್ತಿ ತುಂಬಾ ಇರುತ್ತದೆ.ಹಾಗೆ ಇನ್ನೂ ಕೆಲವರಿಗೆ ಮಂಡಿ ನೋವು ಬೆನ್ನು ನೋವು ಸಂದುನೋವು ವಾಯು ಹೀಗೆ ಇನ್ನೂ ನೋವುಗಳು ಕಾಣಿಸುತ್ತಿದ್ದರೆ ಈ ಎಲೆಗಳ ರಸವನ್ನು ಹಚ್ಚಿಕೊಳ್ಳುವುದರಿಂದ ತುಂಬಾನೇ ಲಾಭ ಪಡೆಯುತ್ತೀರಿ. ಎಲೆಗಳನ್ನು ಬಳಸಿಕೊಂಡು ಚಟ್ನಿ-ಗೊಜ್ಜು ಹಾಗೂ ತಂಬುಳಿ ಅಂತಹ ಆಹಾರ ಪದಾರ್ಥಗಳನ್ನು ಸಿದ್ದ ಮಾಡಬಹುದು

ಈ ರೀತಿಯಾಗಿ ಇದನ್ನು ಪ್ರತಿನಿತ್ಯ ಬಳಸುತ್ತಿದ್ದರೆ ನಿಮಗೆ ಯಾವುದೇ ಇಂತಹ ಕಾಯಿಲೆಗಳು ಬರುವುದಿಲ್ಲ. ಇನ್ನೂ ಗ್ಯಾಸ್ ಹಾಗೂ ಅಸಿಡಿಟಿಅಂತಹ ತೊಂದರೆ ಇದ್ದರೆ 2 ಅಥವಾ 3 ದೊಡ್ಡಪತ್ರೆ ಎಲೆಗಳನ್ನು ಬೆಳಿಗ್ಗೆ ಜಗಿಯುವುದರಿಂದ ನಿಮಗೆ ಬೇಗನೇ ಇಂತಹ ಕಾಯಿಲೆಗಳು ದೂರಾಗುತ್ತವೆ ಈಗಂತೂ ಗ್ಯಾಸ್ ಹಾಗೂ ಅಸಿಡಿಟಿ ತುಂಬಾ ಜನರಲ್ಲಿ ಕಾಣಿಸುತ್ತಿದೆ. ದೊಡ್ಡಪತ್ರೆಯ ಎಲೆಯನ್ನು ಮೆಕ್ಸಿಕನ್ ಮಿಂಟ್ ಎಂದು ಕೂಡ ಕರೆಯುತ್ತಾರೆ. ಈ ಗಿಡವನ್ನು ನೀವು ಮನೆಯಲ್ಲೇ ಬೆಳಸಬಹುದು ಇದನ್ನು ಮನೆಯ ಸುತ್ತಲು ಬೆಳೆಸುವುದರಿಂದ ನಿಮ್ಮ ಮನೆಗೆ ಸೊಳ್ಳೆಗಳ ಕಾಟವೂ ಇರುವುದಿಲ್ಲ.

ಸ್ನೇಹಿತರೆ ಪ್ರತಿ ರೋಗಗಳಿಗೂ ಆಸ್ಪತ್ರೆಗೆ ಹೋಗುವ ಬದಲು ಈ ಒಂದು ದೊಡ್ಡಪತ್ರೆ ಎಲೆಗಳನ್ನು ಉಪಯೋಗಿಸಿ ನೋಡಿ. ಇದು ಆಯುರ್ವೇದಿಕ್ ಆಗಿರುವುದರಿಂದ ನಿಮಗೆ ಯಾವುದೇ ಸೈಡ್ ಎಫೆಕ್ಟ್ ಕೂಡ ಇರುವುದಿಲ್ಲ ಇದನ್ನು ಯಾರಾದರೂ ಉಪಯೋಗಿಸಬಹುದು. ಸ್ನೇಹಿತರೆ ಹಾಗಾದರೆ ದೊಡ್ಡಪತ್ರೆ ಎಲೆಯ ವಿಶೇಷತೆ ಏನೆಂದು ನಿಮಗೆ ಈಗ ತಿಳಿದಿದೆ ನೀವು ಮನೆಯಲ್ಲಿ ದೊಡ್ಡಪತ್ರೆಯ ಗಿಡವನ್ನು ಬೆಳೆಸಿ ಮನೆಮದ್ದಾಗಿ ಉಪಯೋಗಿಸಿಕೊಳ್ಳಿ ಹಾಗೆಯೇ ಈ ಮಾಹಿತಿ ನಿಮಗೆ ತುಂಬಾ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ