ನಿಮಗೆ ದಮ್ಮು ಉಸಿರಾಟದ ತೊಂದರೆ ಕಫ ಕೆಮ್ಮು ಹಾಗೂ ಎದೆಭಾರ ಆಗುತ್ತಿದ್ದರೆ ಈ ಪರಿಹಾರವನ್ನು ಮಾಡಿಕೊಳ್ಳಿ ಬೇಗನೆ ವಾಸಿ ಆಗುತ್ತೀರಾ.ಹಾಯ್ ಸ್ನೇಹಿತರೆ ಈ ಮಾಹಿತಿಯು ನಿಮಗೆ ಹಾಗೂ ನಿಮ್ಮ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ ತಪ್ಪದೇ ಮಾಹಿತಿಯನ್ನು ಓದಿ. ಈ ನಾಲ್ಕು ವಸ್ತುಗಳನ್ನು ಉಪಯೋಗಿಸಿ ನಿಮ್ಮ ಉಸಿರಾಟದ ತೊಂದರೆ ಕೆಮ್ಮು ಹಾಗೂ ನೆಗಡಿಯಂತಹ ಎಲ್ಲಾ ರೋಗಗಳನ್ನು ವಾಸಿ ಮಾಡಿಕೊಳ್ಳಬಹುದು. ಹಾಗಾದರೆ ಈ ಪರಿಹಾರ ಏನು ಮತ್ತು ಯಾವಾಗ ಮಾಡಬೇಕು ಇದರಿಂದ ಆಗುವ ಉಪಯೋಗಗಳೇನು ಎಂದು ಒಂದೊಂದಾಗಿಯೇ ನೋಡೋಣ.ಸ್ನೇಹಿತರೆ ಈಗೀಗ ಮನುಷ್ಯನಿಗೆ ತುಂಬಾ ರೋಗಗಳು ಹೆಚ್ಚುತ್ತಿವೆ ಹಣವಿದ್ದರೂ ಊಟವಿದ್ದರೂ ಆರೋಗ್ಯ ಇರುವುದಿಲ್ಲ.
ಎಲ್ಲರ ಮನೆಯಲ್ಲೂ ಒಬ್ಬೊಬ್ಬರು ಒಂದೊಂದು ರೋಗದಿಂದ ಬಳಲುತ್ತಿದ್ದಾರೆ ಅಂತಹ ರೋಗಗಳಲ್ಲಿ ಈ ದಮ್ಮು ಕೂಡ ಒಂದು. ಈ ರೋಗದಿಂದ ತುಂಬಾ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ ಹಾಗೆಯೇ ಜೀವಂತವಿರುವಾಗಲೇ ತುಂಬಾ ನೋವನ್ನು ಅನುಭವಿಸುತ್ತಿರುತ್ತಾರೆ ಇವರಿಗೆ ಮಲಗಿದರೆ ನಿದ್ದೆ ಬರುವುದಿಲ್ಲ ಹೆಚ್ಚಾಗಿ ತಿಂದರೆ ಅರಗಿಸಿಕೊಳ್ಳುವ ಶಕ್ತಿ ಇರುವುದಿಲ್ಲ ಇಂಥವರಿಗೆ ಈ ಪರಿಹಾರ ತುಂಬಾ ಉಪಯೋಗಕಾರಿ.ಸ್ನೇಹಿತರೇ ಯಾರಿಗಾದರೂ ದಮ್ಮು ಕೆಮ್ಮು ಹಾಗೂ ಎದೆಭಾರ ಕಂಡುಬಂದರೆ ಈ ಮಾಹಿತಿಯನ್ನು ನೀವು ಅವರಿಗೆ ತಿಳಿಸಿ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಸಹಾಯ ಮಾಡಿ.
ಇಂತಹ ಕಾಯಿಲೆಗಳು ಪ್ರತಿನಿತ್ಯ ಆಸ್ಪತ್ರೆಗೆ ಹೋಗುವುದರಿಂದ ಮತ್ತು ಗುಳಗಿ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಹೋಗುವುದಿಲ್ಲ ಇದಕ್ಕಾಗಿ ನೀವು ಮನೆಯಲ್ಲೇ ಕೆಲವೊಂದು ಔಷಧಿಗಳನ್ನು ತಯಾರಿಸಿಕೊಳ್ಳಬಹುದು. ನಿಮ್ಮ ಮನೆಯಲ್ಲಿ ಲವಂಗಗಳಂತೂ ಇದ್ದೇ ಇರುತ್ತವೆ ಮಸಾಲೆ ಪದಾರ್ಥಗಳಲ್ಲಿ ಲವಂಗ ಕೂಡ ಒಂದು ಇದು ತುಂಬಾ ರೋಗಗಳಿಗೆ ಔಷಧಿಯಾಗಿದೆ.ಅದರಲ್ಲೂ ಕೆಮ್ಮಿಗೆ ದಮ್ಮಿಗೆ ಇದು ತುಂಬಾ ಉಪಯೋಗವಾಗುತ್ತದೆ. ಇಂತಹ 5 ಲವಂಗಗಳನ್ನು ತೆಗೆದುಕೊಳ್ಳಿ ಲವಂಗಗಳಿಗೆ ಮೇಲೆ ಹೂವು ಇರಬೇಕು ಇಂತಹ ಲವಂಗಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೆ 5 ಮೆಣಸಿನ ಕಾಳುಗಳನ್ನು ತೆಗೆದುಕೊಳ್ಳಬೇಕು ಮೆಣಸಿನ ಕಾಳುಗಳು ಕೂಡ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ಇವು ನಮ್ಮ ದೇಹಕ್ಕೆ ಉಷ್ಣವನ್ನು ನೀಡುತ್ತವೆ ನೀವು ತುಂಬಾ ಶೀತ ಹಾಗೂ ನೆಗಡಿಯಿಂದ ತುಂಬಾ ಸುಸ್ತಾಗಿದ್ದರು ಈ ಮೆಣಸಿನ ಕಾಳುಗಳು ನಿಮಗೆ ಆರೋಗ್ಯವನ್ನು ಕೊಡುತ್ತವೆ. ಜೊತೆಗೆ ಹಸಿಶುಂಠಿಯನ್ನು ಚೆನ್ನಾಗಿ ತೊಳೆದು ಮೇಲಿನ ಪದರನ್ನು ಚೆನ್ನಾಗಿ ತೆಗೆಯಬೇಕು.ಇದನ್ನು ಬೆಳೆಯುವಾಗ ಒಂದು ಪೌಡರನ್ನು ಮಿಕ್ಸ್ ಮಾಡಿರುತ್ತಾರೆ ಇದು ನಮ್ಮ ಆರೋಗ್ಯಕ್ಕೆ ಹಾನಿಕರವಾಗಿರುತ್ತದೆ ಅದಕ್ಕಾಗಿ ಶುಂಠಿಯನ್ನು ಚೆನ್ನಾಗಿ ತೊಳೆದುಕೊಳ್ಳಿ. ಶುಂಠಿಯೂ ನಮ್ಮದೇಹಕ್ಕೆ ಉಷ್ಣವನ್ನು ಕೊಡುತ್ತದೆ ಶ್ವಾಸಕೋಶದ ರೋಗಗಳಿಗೆ ರಾಮಬಾಣವಾಗಿದೆ ಎದೆಯಲ್ಲಿರುವ ಕಫವನ್ನು ತೆಗೆಯಲು ತುಂಬಾ ಸಹಕಾರಿಯಾಗಿದೆ.
5 ತುಳಸಿ ಎಲೆಗಳನ್ನು ಕೂಡ ತೆಗೆದುಕೊಳ್ಳಬೇಕು ತುಳಸಿಗಿಡ ಯಾರ ಮನೆಯಲ್ಲಿ ಇರುವುದಿಲ್ಲ ನೀವೇ ಹೇಳಿ ಹೆಚ್ಚಾಗಿ ಎಲ್ಲರ ಮನೆಯಲ್ಲೂ ತುಳಸಿಗಿಡ ಇರುತ್ತದೆ ತುಳಸಿಯು ಸಾಕ್ಷಾತ ಲಕ್ಷ್ಮಿ ದೇವಿಯ ಸ್ವರೂಪವಾಗಿದೆ ತುಳಸಿ ಎಲೆಯಲ್ಲಿರುವ ಔಷಧೀಯ ಗುಣಗಳು ತುಂಬಾ ರೋಗಗಳಿಗೆ ಪರಿಹಾರವಾಗಿವೆ. ಹಾಗಾದರೆ ಇವುಗಳನ್ನೆಲ್ಲಾ ಬಳಸಿಕೊಂಡು ಏನು ಮಾಡಬೇಕು ಎಂಬುದನ್ನು ಈಗ ತಿಳಿಸುತ್ತೇನೆ.1 ಕಪ್ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ಬಿಸಿಮಾಡಬೇಕು ಸ್ವಲ್ಪ ನೀರು ಉಗುರುಬೆಚ್ಚಗಿನ ಹಾಗೆ ಕಾಯುವಾಗ ಮೊದಲು 5 ಲವಂಗಗಳನ್ನು ಹಾಕಬೇಕು ನಂತರ ಕಾಳುಮೆಣಸುಗಳನ್ನು ಹಾಕಬೇಕು ಇವು ಚೆನ್ನಾಗಿ ಕುದ್ದ ಮೇಲೆ ಐದು ನಿಮಿಷದ ನಂತರ ತುರಿದ ಶುಂಠಿಯನ್ನು ನೀರಿಗೆ ಹಾಕಬೇಕು ನಂತರ ತುಳಸಿ ಎಲೆಯನ್ನು ಹಾಕಬೇಕು
ಒಂದು ಕಪ್ ನೀರು ಅರ್ಧ ಕಪ್ ಆಗುವವರೆಗೂ ಚೆನ್ನಾಗಿ ಕುದಿಸಬೇಕು. ಈ ನೀರು ಉಗುರು ಬೆಚ್ಚಗೆ ಇರುವಾಗ ಸ್ವಲ್ಪ ಜೇನುತುಪ್ಪವನ್ನು ಹಾಕಬೇಕು ಜೇನುತುಪ್ಪವು ಆರೋಗ್ಯಕ್ಕೆ ತುಂಬಾ ಒಳ್ಳೆಯದು ದಮ್ಮು ಇರುವವರು ಜೇನುತುಪ್ಪವನ್ನು ಪ್ರತಿನಿತ್ಯ ಬಳಸಬೇಕು ಶುಗರ್ ಇರುವವರು ಜೇನುತುಪ್ಪವನ್ನು ಬಳಸದೆ ಈ ಕಷಾಯವನ್ನು ಕುಡಿಯಬಹುದು.ಚಿಕ್ಕ ಮಕ್ಕಳಾಗಿದ್ದರೆ ಕಾಲ್ ಕಪ್ಪಿನಷ್ಟು ಕಷಾಯವನ್ನು ಕುಡಿಸಬೇಕು ದೊಡ್ಡವರಾಗಿದ್ದಾರೆ ಅರ್ಧ ಕಪ್ ಬೆಳಿಗ್ಗೆ ಹಾಗೂ ಅರ್ಧ ಕಪ್ ರಾತ್ರಿ ಕುಡಿಯಬೇಕು ಹೀಗೆ ಮಾಡುವುದರಿಂದ ಕ್ರಮೇಣ ನಿಮಗೆ ಹಳೆಯ ದಮ್ಮು ಹಾಗೂ ಕೆಮ್ಮು ಕಡಿಮೆಯಾಗುತ್ತಾ ಬರುತ್ತದೆ ಈ ರೀತಿಯಾಗಿ ಒಂದು ವಾರ ಮಾಡಿನೋಡಿ ನಿಮಗೆ ಎದೆಭಾರ ಕಡಿಮೆಯಾಗುತ್ತದೆ ಹಾಗೂ ನಿದ್ದೆ ಚೆನ್ನಾಗಿ ಆಗುತ್ತದೆ. ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಾಗಾದರೆ ಸ್ನೇಹಿತರೇ ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ನೀವು ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ ದೇವರು ನಿಮಗೆ ಆರೋಗ್ಯಭಾಗ್ಯವನ್ನು ಆಶೀರ್ವದಿಸಲಿ ಎಂದು ನಾನು ಸಹ ಕೇಳುತ್ತೇನೆ ಧನ್ಯವಾದಗಳು.