ಕಾಮಾಕ್ಷಿ ದೀಪ ಎಂದು ನೀವೆಲ್ಲರೂ ಕೇಳಿರುತ್ತೀರಾ, ದೀಪದ ಮೇಲೆ ಕಾಮಾಕ್ಷಿ ಪ್ರತಿಮೆ ಇರುವುದು ದೀಪವೇ ಕಾಮಾಕ್ಷಿ ದೀಪ. ಸಾಮಾನ್ಯವಾಗಿ ಕಾಮಾಕ್ಷಿ ದೀಪ ಕಂಚಿನಲ್ಲಿ ಸಿಗುತ್ತದೆ. ಇನ್ನು ಇತ್ತೀಚೆಗೆ ದೀಪದ ಮೇಲೆ ಲಕ್ಷ್ಮಿ ದೇವಿಯು ಕಮಲದ ಮೇಲೆ ಕುಳಿತುಕೊಂಡು ಎರಡು ಕಡೆಯಿಂದ ಆನೆಗಳು, ಶ್ರೀರಭಿಷೇಕ ಮಾಡುತ್ತಿರುವ ಹಾಗೆ ಕಾಣುವ ದೀಪವನ್ನು ನಾವು ಗಜಲಕ್ಷ್ಮಿ ಕಾಮಾಕ್ಷಿ ದೀಪ ಎಂದು ಕರೆಯುತ್ತೇವೆ. ಇನ್ನು ದೀಪದ ಮೇಲೆ ಕಾಮಾಕ್ಷಿ ದೇವಿ ನೆಲೆಸಿರುತ್ತಾಳೆ, ಕಾಮಾಕ್ಷಿ ದೇವಿಯು ಎಲ್ಲಾ ದೇವತೆಗಳಿಗೂ ಶಕ್ತಿ ನೀಡುವಂಥವಳು ಎಂದು ನಮ್ಮ ಪುರಾಣಗಳು ಹೇಳುತ್ತವೆ.
ಇನ್ನು ವಿಶೇಷ ಇಲ್ಲವೆಂದರೆ ಕಾಮಾಕ್ಷಿ ದೇವಿಯ ದೇವಸ್ಥಾನವನ್ನು ಬೇರೆ ಎಲ್ಲ ದೇವಸ್ಥಾನಗಳಿಗಿಂತ ಮುಂಚಿತವಾಗಿ ತೆರೆಯಲಾಗುತ್ತದೆ ಹಾಗೂ ಕಾಮಾಕ್ಷಿ ದೇವಿಯ ದೇವಸ್ಥಾನವನ್ನು ಎಲ್ಲಾ ದೇವಸ್ಥಾನಗಳು ಮುಚ್ಚಿದ ಬಳಿಕ ಮುಚ್ಚಲಾಗುತ್ತದೆ. ಮನೆಯಲ್ಲಿ ಕಾಮಾಕ್ಷಿ ದೀಪ ಬೆಳಗುವದರಿಂದ ಆ ಮನೆಯಲ್ಲಿ ಅಖಂಡ ಐಶ್ವರ್ಯ ಕೂಡಿರುತ್ತದೆ ಎನ್ನಲಾಗುತ್ತದೆ. ಕಾಮಾಕ್ಷಿ ದೇವಿಯ ದೀಪವನ್ನು ಬೆಳಗ್ಗಿನ ಜಾವ ಐದರಿಂದ ಆರರ ಒಳಗೆ ಹಚ್ಚಬೇಕು. ಈ ರೀತಿ ಹಚ್ಚುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಹಾಗೂ ಲಕ್ಷ್ಮೀದೇವಿಯ ಸಂಪೂರ್ಣ ಅನುಗ್ರಹ ಸಿಗಲಿದೆ ಎಂದು ಹೇಳಲಾಗುತ್ತದೆ.
ಇನ್ನು ಸಂಜೆಯ ಸಮಯದಲ್ಲಿ ಆರರಿಂದ ಏಳು ರ ಒಳಗೆ ಕಾಮಾಕ್ಷಿ ದೀಪವನ್ನು ಹಚ್ಚಬೇಕು ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿಯ ಸಂಪೂರ್ಣ ಕೃಪೆ ಆ ಮನೆಯವರಿಗೆ ಸಿಗಲಿದೆ ಎನ್ನಲಾಗುತ್ತದೆ. ಇನ್ನು ಕಾಮಾಕ್ಷಿ ದೀಪವನ್ನು ಹಚ್ಚುವುದರಿಂದ ಆಗುವ ಲಾಭಗಳೇನು ಎನ್ನುವುದನ್ನು ತಿಳಿಯೋಣ ಬನ್ನಿ. ದೀಪ ಎನ್ನುವುದು ದೀಪ ಎನ್ನುವುದು ಲಕ್ಷ್ಮಿ ದೇವಿಯ ಸ್ವರೂಪ, ಅದರಲ್ಲೂ ಕಾಮಾಕ್ಷಿ ದೇವಿ ದೀಪ ಎನ್ನುವುದು ಸಾಕ್ಷಾತ್ ಲಕ್ಷ್ಮಿ ಎನ್ನುವ ನಂಬಿಕೆ ಇದೆ. ಇನ್ನು ದೀಪವನ್ನು ನಿಯಮ ನಿಷ್ಠೆಗಳಿಂದ ಹಚ್ಚುವುದರಿಂದ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸರಿಹೋಗುತ್ತದೆ ಹಾಗೂ ಎಲ್ಲಾ ಕಷ್ಟಗಳು ದೂರವಾಗಿ ಸಕಾರಾತ್ಮಕ ಹೆಚ್ಚಾಗುತ್ತದೆ.
ಇನ್ನು ಕಾಮಾಕ್ಷಿ ದೀಪವನ್ನು ಕೊಳ್ಳುವಾಗ ಸರಿಯಾಗಿ ಪರೀಕ್ಷೆ ಮಾಡಿ ತೆಗೆದುಕೊಳ್ಳಬೇಕು, ಕಾಮಾಕ್ಷಿ ದೀಪದಲ್ಲಿ ಬೆಸಸಂಖ್ಯೆಯಲ್ಲಿ ಗೆರೆಗಳು ಇರಬೇಕು ಹಾಗೂ ಮುಕ್ಕಾಗಿರಬಾರದು ಹಾಗೂ ಎಲ್ಲಿಯೂ ಒಂದು ಸಣ್ಣ ಪೆಟ್ಟು ಕೂಡ ಬಿದ್ದಿರಬಾರದು. ಜೊತೆಗೆ ಕಾಮಾಕ್ಷಿ ದೀಪ ಶುದ್ಧವಾಗಿರಬೇಕು ಏಕೆಂದರೆ ಕಾಮಾಕ್ಷಿ ದೀಪದಲ್ಲಿ ಕಪ್ಪು ತಲೆಯಾದರೆ ಮನೆಯ ಹೆಣ್ಣು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ ಎಂದು ಹೇಳುತ್ತಾರೆ. ಕಾಮಾಕ್ಷಿ ದೀಪವನ್ನು ನೆಲದ ಮೇಲೆ ಇಡಬಾರದು ಮಣ್ಣಿನ ಅಥವಾ ಕಂಚಿನ ಅಥವಾ ಬೆಳ್ಳಿಯ ತಟ್ಟೆ ಮೇಲೆ ಕಾಮಾಕ್ಷಿ ದೀಪವನ್ನು ಇಡಬೇಕು. ಇನ್ನು ಕಾಮಾಕ್ಷಿ ದೀಪಕ್ಕೆ ಹರಿಶಿನ ಕುಂಕುಮ ಹಚ್ಚಿ ಹೂ ಇಟ್ಟು ಪೂಜೆ ಮಾಡಿ ನಂತರ ದೀಪ ಹಚ್ಚಬೇಕು
ಇನ್ನು ಮಂಗಳವಾರ ಹಾಗೂ ಶುಕ್ರವಾರ ಯಾವುದೇ ಕಾರಣಕ್ಕೂ ಕಾಮಾಕ್ಷಿ ದೀಪವನ್ನು ತೊಳೆಯಬಾರದು. ಇನ್ನು ಕಾಮಾಕ್ಷಿ ದೀಪಕ್ಕೆ ಎಳ್ಳೆಣ್ಣೆ ಅಥವಾ ಹಸುವಿನ ತುಪ್ಪದಿಂದ ದೀಪ ಹಚ್ಚಿದರೆ ತುಂಬಾ ಒಳ್ಳೆಯದು. ಕಾಮಾಕ್ಷಿ ದೀಪವನ್ನು ಬೆಳಗಿದಾಗ ಹೇಗೆ ಬತ್ತಿ ನಿದಾನವಾಗಿ ಸುಡುತ್ತದೆಯೋ ಅದೇ ರೀತಿ ಮನೆಯಲ್ಲಿ ನಕಾರಾತ್ಮಕ ಶಕ್ತಿ ನಿಧಾನವಾಗಿ ತೊಲಗಿ ಹೋಗುತ್ತದೆ. ಇನ್ನು ಕಾಮಾಕ್ಷಿ ದೀಪ ಯಾವಾಗಲೂ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡುವಂತೆ ಇಡಬೇಕು. ಇನ್ನು ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಕಾಮಾಕ್ಷಿ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯ ಜೊತೆಗೆ ಸಕಲ ಸಿದ್ಧಿ ಲಭಿಸುತ್ತದೆ ಎನ್ನಲಾಗುತ್ತದೆ.