Categories
devotional Information

ಅಕ್ಕಿಯಲ್ಲಿ ನೀವು ಈ ಒಂದು ವಸ್ತುವನ್ನು ಬಚ್ಚಿಟ್ಟರೆ ಸಾಕು ಜನುಮದಲ್ಲಿ ನಿಮಗೆ ಬಡತನ ಬರಲ್ಲ ….!!!

ಅಕ್ಕಿಯಲ್ಲಿ ಇದನ್ನು ನೀವು ಬಚ್ಚಿಟ್ಟರೆ ಖಂಡಿತವಾಗಿಯೂ ನಿಮ್ಮ ಮನೆಗೆ ಕೊನೆವರೆಗೂ ಬಡತನವೆಂಬುದು ಇರುವುದಿಲ್ಲ.ಹಾಯ್ ಸ್ನೇಹಿತರೆ ಬಡತನದಲ್ಲಿ ಇರಬೇಕು ಎಂದು ಅಂದುಕೊಳ್ಳುವರೋ ಯಾರಿದ್ದಾರೆ ಹೇಳಿ ಎಲ್ಲರೂ ನಾವು ಚೆನ್ನಾಗಿರಬೇಕು ಶ್ರೀಮಂತರಾಗಬೇಕು ಆರೋಗ್ಯವಂತರಾಗಿರಬೇಕು ವಿದ್ಯೆಯನ್ನು ಪಡೆಯಬೇಕು ಕೆಲಸ ಮಾಡಬೇಕು ನೆಮ್ಮದಿಯಾಗಿ ಮಲಗಬೇಕು ಎಂದು ಅಂದುಕೊಳ್ಳುತ್ತಾರೆ ಆದರೆ ಎಲ್ಲರಿಗೂ ಎಲ್ಲವೂ ಸಿಗುವುದಿಲ್ಲ. ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇದ್ದರೆ ಮನೆಯ ಸದಸ್ಯರಲ್ಲಿ ಮನಸ್ತಾಪಗಳು ಹೆಚ್ಚುತ್ತವೆ ಬರೀ ಜಗಳಗಳು ಕದನಗಳು ಇರುತ್ತವೆ. ಹಾಗೇ ನೀವು ಮಾಡಿದ ಯಾವುದೇ ಕೆಲಸಗಳನ್ನು ಇರುವುದಿಲ್ಲ. ನಮ್ಮ ಮನೆಗೆ ಏನಾದರೂ ದೃಷ್ಟಿದೋಷ ನರದೋಷ ಹೀಗೆ ಆಗಿದ್ದರೆ ನಾವು ಎಂದಿಗೂ ಸುಖವಾಗಿರುವುದಕ್ಕೆ ಆಗುವುದಿಲ್ಲ.

ಹಾಗಾದರೆ ಮನೆಯಲ್ಲಿ ಬಡತನ ಕಾಡಬಾರದು ಊಟಕ್ಕೆ ಕೊರತೆ ಬಾರದು ಮನೆಯಲ್ಲಿ ಎಲ್ಲರಿಗೂ ನೆಮ್ಮದಿ ಬೇಕು ಎಂದರೆ ಈ ರೀತಿಯಾದ ಒಂದು ಪರಿಹಾರವನ್ನು ನೀವು ಮನೆಯಲ್ಲಿ ಮಾಡಿ. ಈ ಪರಿಹಾರ ತುಂಬಾ ಸುಲಭವಾಗಿದೆ. ಅಕ್ಕಿಯನ್ನು ಸಾಕ್ಷಾತ್ ಅನ್ನಪೂರ್ಣೆಯ ರೂಪವೆಂದು ಹೇಳುತ್ತಾರೆ. ಇಂತಹ ಅಕ್ಕಿಗೆ ಸ್ವಲ್ಪ ಅರಿಶಿಣ ಸ್ವಲ್ಪ ತುಪ್ಪ ಹಾಗೂ ಸ್ವಲ್ಪ ನೀರನ್ನು ಹಾಕಿ ಅಕ್ಷತೆ ಕಾಳನ್ನು ಸಿದ್ಧಪಡಿಸಿಕೊಳ್ಳಬೇಕು ಇದನ್ನು ದೇವರ ಮನೆಯಲ್ಲಿ ಒಂದು ಡಬ್ಬಿಯಲ್ಲಿ ಹಾಕಿ ಪ್ರತಿನಿತ್ಯ ಪೂಜಿಸಬೇಕು. ಮಹಾಲಕ್ಷ್ಮಿ ದೇವಿಗೆ ಪ್ರತಿ ಶುಕ್ರವಾರ ಅಕ್ಷತೆ ಕಾಳುಗಳನ್ನು ಹಾಕಿ ಪೂಜೆ ಮಾಡಬೇಕು.

ನೀವು ಎಲ್ಲಿಗಾದರೂ ಹೊರಟಾಗ ಹಿರಿಯರಿಂದ ಅಕ್ಷತೆ ಕಾಳುಗಳನ್ನು ನಿಮ್ಮ ತಲೆಗೆ ಹಾಕಿಕೊಂಡು ಹೋಗಬೇಕು. ಇದರಿಂದ ನೀವು ಯಾವುದೇ ಕೆಲಸಕ್ಕೆ ಹೊರಟರು ಜಯ ಎಂಬುದು ನಿಮ್ಮ ಬೆನ್ನ ಹಿಂದೆಯೇ ಬರುತ್ತದೆ. ಅದೇ ರೀತಿಯಾಗಿ ಇವುಗಳನ್ನು ಪ್ರತಿನಿತ್ಯ ಪೂಜಿಸಿಕೊಂಡು ಇರಬೇಕು. ಲಕ್ಷ್ಮೀದೇವಿ ಅನುಗ್ರಹ ನಿಮಗೆ ಹೆಚ್ಚಾಗುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿರುವ ನಕರಾತ್ಮಕ ಶಕ್ತಿಗಳು ದೂರವಾಗುತ್ತದೆ. ಇನ್ನು ಮತ್ತೊಂದು ಪರಿಹಾರ ಏನೆಂದರೆ ಅಕ್ಕಿಯಲ್ಲಿ ಒಂದು ರೂಪಾಯಿ ಎರಡು ರೂಪಾಯಿ ಕಾಯಿನ್ಗಳನ್ನು ಹಾಕಿಕೊಂಡು ಬರಬೇಕು. ಇಲ್ಲವಾದರೆ ಅದರಲ್ಲಿ ಒಂದು ಪ್ಲಾಸ್ಟಿಕ್ ಅಥವಾ ಸ್ಟೀಲ್ ಕಪ್ಪನ್ನು ಇಡಬೇಕು ಅದರಲ್ಲಿ ನಾಣ್ಯಗಳನ್ನು ಹಾಕಬೇಕು.

ನಂತರ ಸ್ವಲ್ಪ ಅಕ್ಕಿಯನ್ನು ಪಕ್ಷಿಗಳಿಗೆ ಹಾಕಬೇಕು. ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಬಡತನ ಹಾಗೂ ಧಾನ್ಯಗಳ ಕೊರತೆ ಎಂದಿಗೂ ಬರುವುದಿಲ್ಲ. ಸ್ನೇಹಿತರೆ ಎಲ್ಲಾ ದಾನಕ್ಕಿಂತಲೂ ಅನ್ನದಾನ ಎಂಬುದು ತುಂಬಾ ಶ್ರೇಷ್ಠವಾದದ್ದು ಏಕೆಂದರೆ ಜಗತ್ತಿನಲ್ಲಿ ಎಲ್ಲವನ್ನೂ ಸಹಿಸಿಕೊಳ್ಳಬಹುದು ಆದರೆ ಹಸಿವನ್ನು ಸಹಿಸಿಕೊಳ್ಳುವುದು ಆಗುವುದಿಲ್ಲ. ಈ ರೀತಿಯಾಗಿ ರೂಪಾಯಿಯನ್ನು ಅಕ್ಕಿ ಡಬ್ಬಿಯಲ್ಲಿ ಹಾಕುವುದರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತದೆ. ಹಾಗಾದರೆ ಮನೆಯಲ್ಲಿ ಅಕ್ಕಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಮತ್ತು ಯಾವ ದಿಕ್ಕಿನಲ್ಲಿ ಇಡಬಾರದು ಎಂಬುದನ್ನು ಈಗ ನಿಮಗೆ ತಿಳಿಸುತ್ತೇನೆ. ಮನೆಯಲ್ಲಿ ಯಾವುದಾದರೂ ಒಂದು ದಿಕ್ಕಿಗೆ ಅಕ್ಕಿ ಡಬ್ಬಿಯನ್ನು ಇಡಬಹುದು ಎಂದು ನೀವು ಅಂದುಕೊಂಡಿದ್ದರೆ ತುಂಬಾ ದೊಡ್ಡ ತಪ್ಪು ಅಕ್ಕಿಯನ್ನು ಮನೆಯಲ್ಲಿ ನೈರುತ್ಯ ದಿಕ್ಕಿಗೆ ಇಡಬಾರದು.

ಬದಲಾಗಿ ಅಡುಗೆಮನೆಯಲ್ಲಿ ಅಂದರೆ ಆಗ್ನೇಯ ದಿಕ್ಕಿನಲ್ಲಿ ಅಕ್ಕಿಯನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಮನೆಯಲ್ಲಿ ರೀತಿಯಾದ ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ಕೆಟ್ಟ ಶಕ್ತಿಗಳು ಹಾಗೂ ನಕಾರಾತ್ಮಕ ಶಕ್ತಿ ಎಂದಿಗೂ ಇರುವುದಿಲ್ಲ. ಇನ್ನೊಂದು ವಿಷಯವೇನೆಂದರೆ ಮನೆಯಲ್ಲಿ ಅಕ್ಕಿ ಕಾಲಿ ಆಗುತ್ತಿದ್ದಂತೆ ಬೇರೆ ಅಕ್ಕಿಯನ್ನು ಮತ್ತೆ ಸ್ವಚ್ಛ ಮಾಡಿ ಡಬ್ಬಿ ಖಾಲಿ ಆಗುವುದರೊಳಗೆ ಹಾಕಿಕೊಳ್ಳಬೇಕು. ಪೂರ್ತಿಯಾಗಿ ಖಾಲಿಯಾಗಲು ಎಂದಿಗೂ ಬಿಡಬಾರದು. ಹಿಂದಿನ ಕಾಲದಲ್ಲಿ ಈ ರೀತಿಯಾದ ಉಪಾಯಗಳನ್ನು ಮನೆಯಲ್ಲಿ ಮಾಡುತ್ತಿದ್ದರು ಆದ್ದರಿಂದ ಹಿರಿಯರಲ್ಲಿ ಆರೋಗ್ಯ ಸದಾ ಇರುತ್ತಿತ್ತು. ಅಕ್ಕಿಯನ್ನು ಎಲ್ಲೆಂದರಲ್ಲಿ ಇಡುವುದರಿಂದ ಹಿರಿಯರಲ್ಲಿ ಆರೋಗ್ಯದ ಸಮಸ್ಯೆ ಕಾಡುತ್ತದೆ.

ಸ್ನೇಹಿತರೆ ಹಾಗಾದರೆ ಮಾಹಿತಿಯಲ್ಲಿ ನಿಮಗೆ ಅಕ್ಕಿಯಲ್ಲಿ ರೂಪಾಯಿಯನ್ನು ಬಚ್ಚಿಟ್ಟರೆ ಬಡತನ ಕಾಡುವುದಿಲ್ಲ ಎಂದು ತಿಳಿದಿದೆ ಹಾಗಾದರೆ ಮಾಹಿತಿ ಇಷ್ಟ ಆಗಿದ್ದರೆ ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ