Categories
devotional Information

ನಿಮ್ಮ ವ್ಯಪಾರ ವ್ಯವಹಾರದಲ್ಲಿ ತುಂಬಾ ನಷ್ಟ ಅನುಭವಿಸುತ್ತಿದ್ದೀರಾ ಹಾಗಾದ್ರೆ ನಿಂಬೆಹಣ್ಣಿನಿಂದ ಈ ಒಂದು ತಂತ್ರ ಮಾಡಿ ಸಾಕು ಎಂತಹ ದೋಷ ಇದ್ದರೂ ಕೂಡ ನಿವಾರಣೆಯಾಗುತ್ತದೆ ,,,,!!!!

ನೀವು ಅಂಗಡಿಯನ್ನು ಇಟ್ಟುಕೊಂಡಿದ್ದೀರಾ ಹಾಗೆಯೇ ನಿಮ್ಮ ಅಂಗಡಿಗೆ ಅದೃಷ್ಟಿ ಹಾಗಿದ್ದರೆ ಬರೀ ಒಂದು ನಿಂಬೆಹಣ್ಣಿನಿಂದ ಈ ದೋಷವನ್ನು ಪರಿಹಾರ ಮಾಡಿಕೊಳ್ಳಿ.ಮಾನವನು ಆಹಾರಕ್ಕಾಗಿ ವಿಧವಿಧವಾದ ವ್ಯವಹಾರಗಳನ್ನು ಮಾಡುತ್ತಾನೆ. ಕೆಲವೊಬ್ಬರು ಡಾಕ್ಟರ,ಇಂಜಿನಿಯರ್, ಪೊಲೀಸ್,ಡ್ರೈವರ್ ಇನ್ನು ಮುಂತಾದವುಗಳು ಆಗುತ್ತಾರೆ ಹಾಗೆ ಕೆಲವೊಬ್ಬರು ಅಂಗಡಿಗಳನ್ನು ಇಟ್ಟುಕೊಂಡಿರುತ್ತಾರೆ ಅಂಗಡಿಗಳೆಂದರೆ ಕೇವಲ ಆಹಾರ ಪದಾರ್ಥಗಳು ಸಿಗುವ ಅಂಗಡಿ ಮಾತ್ರ ಅಲ್ಲ ಬಟ್ಟೆ ಅಂಗಡಿ, ಬಂಗಾರದ ಅಂಗಡಿ, ಚಪ್ಪಲಿ ಅಂಗಡಿ ಇನ್ನೂ ಅನೇಕ ರೀತಿಯಾದ ಅಂಗಡಿ ಗಳಿರುತ್ತವೆ.

ಇವುಗಳು ಒಂದು ಸಮಯದಲ್ಲಿ ತುಂಬಾ ಚೆನ್ನಾಗಿ ಲಾಭವನ್ನು ತರುತ್ತವೆ ಇನ್ನೂ ನಮ್ಮ ಸಮಯ ಕೆಟ್ಟದ್ ಇದ್ದಾಗ ಅಥವಾ ಬೇರೆಯವರು ನಮಗೆ ದೃಷ್ಟಿಯನ್ನು ಬಿಟ್ಟರೆ ಈ ವ್ಯವಹಾರಗಳೆಲ್ಲ ನಷ್ಟಗಳನ್ನು ಉಂಟುಮಾಡುತ್ತವೆ. ನಮ್ಮವರೇ ನಮಗೆ ಮಾಟ-ಮಂತ್ರಗಳನ್ನು ಮಾಡಿಸಿ ನಷ್ಟವಾಗುವ ಹಾಗೆ ಮಾಡುತ್ತಾರೆ ಇಂತಹ ಸಮಯದಲ್ಲಿ ನಮಗೆ ತುಂಬಾ ಕಷ್ಟ ಇರುತ್ತದೆ ಮತ್ತು ನಷ್ಟಗಳು ಇರುತ್ತವೆ. ನಾವು ಎಷ್ಟೇ ಪೂಜಿಸಿದರು ಅಂಗಡಿಗಳಲ್ಲಿ ನಷ್ಟ ಆಗುತ್ತಾ ಇರುತ್ತದೆ. ಇಂತಹ ಸಮಯದಲ್ಲಿ ಜೀವನ ಕಷ್ಟಸಾಧ್ಯವಾಗುತ್ತದೆ.

ಈಗ ನಾನು ಹೇಳುವ ತಂತ್ರದಿಂದ ನೀವು ಲಾಭವನ್ನು ಪಡೆಯುವಿರಿ ಹಾಗೆಯೇ ಮಹಾಲಕ್ಷ್ಮಿ ನಿಮಗೆ ಆಶೀರ್ವದಿಸುವಳು. ಹಾಗಾದರೆ ಈ ತಂತ್ರಸಾರ ಮಾಡುವುದನ್ನು ನಾನು ನಿಮಗೆ ತಿಳಿಸುತ್ತೇನೆ ಇದನ್ನು ಮಾಡುವುದರಿಂದ ನಿಮಗೆ ತುಂಬಾ ಲಾಭವಾಗುತ್ತದೆ.ಈ ತಂತ್ರ ಸಾರವನ್ನು ಮಾಡಲು ನಿಮಗೆ ಒಂದು ನಿಂಬೆಹಣ್ಣು ಅರಿಶಿನ-ಕುಂಕುಮ ಮಾತ್ರ ಸಾಕು ಮತ್ತು ನೀವು ಮಾಡುವ ತಂತ್ರಸಾರದ ಮೇಲೆ ನಂಬಿಕೆಯಿರಲಿ. ನಿಂಬೆಹಣ್ಣನ್ನು ಬಹಳಷ್ಟು ತಂತ್ರಸಾರಗಳಿಗೆ ಉಪಯೋಗಿಸುತ್ತಾರೆ ಮತ್ತು ನಿಂಬೆಹಣ್ಣು ತುಂಬಾ ಶಕ್ತಿಯುತವಾದದ್ದು. ಒಂದು ನಿಂಬೆಹಣ್ಣು ತಂತ್ರಸಾರಕ್ಕೆ ಬಳಸಿದರೆ ಆ ಪೂಜೆಯ ಕೂಡ ಫಲಿಸುವುದು. ಶಕ್ತಿ ದೇವತೆ ದುರ್ಗೆಯನ್ನು ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಭಕ್ತಿಯಿಂದ ಪೂಜಿಸಲಾಗುತ್ತದೆ.

ಸಾಕಷ್ಟು ಕಾರಣಗಳಿಂದಾಗಿ, ಅವಳ ಮಹಿಮೆಗಳಿಂದಾಗಿ ದುರ್ಗೆ ಬಹಳ ಬಲಶಾಲಿ, ಪ್ರಭಾವಶಾಲಿ ದೇವತೆ. ಒಂದು ರೀತಿಯಲ್ಲಿ ಅವಳು ಕರುಣಾಳು ತಾಯಿ ಎಂದು ಕರೆಯಲ್ಪಡುತ್ತಿದ್ದರೆ, ಇನ್ನೊಂದು ರೀತಿಯಲ್ಲಿ ಅವಳು ತನ್ನ ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ಎಲ್ಲಾ ದುಷ್ಟ, ನೀಚ ಜೀವಿಗಳ ವಿರುದ್ಧ ಹೋರಾಡಲು ಸಿದ್ಧಳಾಗಿರುವವಳು, ನಾಶಮಾಡುವ ಸಂಹಾರಕಿ ಎಂದೂ ಕರೆಯುತ್ತಾರೆ.ಮನುಷ್ಯನ ಮನಸ್ಸಿನಲ್ಲಿರುವ ಎಲ್ಲಾ ರೀತಿಯ ಭಯ, ಕೆಡುಕುಗಳನ್ನು ದುರ್ಗಾ ದೇವಿ ನಿವಾರಣೆ ಮಾಡಿ ಅಲ್ಲಿ ಪ್ರೀತಿ, ಕರುಣೆ, ಅನುಕಂಪವೆಂಬ ಅಮೃತವನ್ನು ತುಂಬುತ್ತಾಳೆ. ಭಕ್ತಿ ಮನದಲ್ಲಿದ್ದರೆ, ಅಹಂಕಾರ, ಮತ್ಸರ, ಹಗೆತನ ಮತ್ತು ಕೆಟ್ಟ ಶಕ್ತಿಗಳನ್ನು ಬಡಿದೋಡಿಸುತ್ತಾಳೆ.ದುರ್ಗಾ ದೇವಿಯನ್ನು ತ್ರಯಂಬಕೆ ಎಂದು ಕರೆಯಲಾಗುತ್ತದೆ,

ಕಾರಣ ಅವಳಿಗೆ ಮೂರು ಕಣ್ಣುಗಳಿವೆ. ಅವಳ ಮೂರು ಕಣ್ಣುಗಳು ಅಗ್ನಿ, ಸೂರ್ಯ ಮತ್ತು ಚಂದ್ರನನ್ನು ಸೂಚಿಸುತ್ತವೆ. ದುರ್ಗಾವನ್ನು ಸರ್ವೋಚ್ಚ ಶಕ್ತಿ ಎಂದು ಭಾವಿಸಬಹುದು. ‘ದುರ್ಗಾ’ ಎಂಬ ಪದದ ಅರ್ಥ ಅಜೇಯ. ಇಂತಹ ಶಕ್ತಿದೇವತೆ ದುರ್ಗೆಯನ್ನು ಮನಸ್ಸಿನಲ್ಲಿ ಪ್ರಾರ್ಥಿಸಿ ಒಂದು ನಿಂಬೆಹಣ್ಣನ್ನು ಎರಡು ಭಾಗವಾಗಿ ಮಾಡಿಕೊಂಡು ಅದಕ್ಕೆ ಮೊದಲು ಅರಿಶಿನವನ್ನು ಪೂರ್ತಿಯಾಗಿ ಹಚ್ಚಿ ನಂತರ ಮಧ್ಯಭಾಗದಲ್ಲಿ ಕುಂಕುಮವನ್ನು ಹಚ್ಚಬೇಕು. ಈ ರೀತಿಯಾಗಿ ಮಾಡಿಕೊಂಡ ನಿಂಬೆಹಣ್ಣನ್ನು ಅಂಗಡಿಯ ಹೊರ ಬಾಗಿಲಿನ ಮುಂದೆ ಬಲಗಡೆ ಮತ್ತು ಎಡಗಡೆ ಇಡಬೇಕು.

ಪ್ರತಿ ಅಮಾವಾಸ್ಯೆ ದಿನ ಹೀಗೆ ಮಾಡಬಹುದು ನಿಂಬೆಹಣ್ಣುಗಳನ್ನು ಇಡುವಾಗ 11 ಬಾರಿ ಓಂ ನಮೋ ದುರ್ಗಾದೇವಿ ಅನ್ನಬೇಕು. ಈ ಪೂಜೆಯನ್ನು ಬೆಳಿಗ್ಗೆ ಆರರಿಂದ ಹತ್ತು ಗಂಟೆಯವರೆಗೆ ಅಥವಾ ಸಾಯಿಂಕಾಲ ಆರರಿಂದ ಗಂಟೆಯೊಳಗೆ ಮಾಡಬಹುದು. ಹಾಗಾದರೆ ಈ ಪೂಜೆ ಮಾಡಿದರೆ ಏನು ಲಾಭವಾಗುತ್ತದೆ ಎಂದು ನಾನು ನಿಮಗೆ ಹೇಳುತ್ತೇನೆ. ಈ ಪೂಜೆಯನ್ನು ಮಾಡುವುದರಿಂದ ನಿಮ್ಮ ಅಂಗಡಿಯಲ್ಲಿ ಲಾಭ ಹೆಚ್ಚುತ್ತದೆ ಮತ್ತು ಯಾರ ದೃಷ್ಟಿಯು ನಿಮ್ಮ ಅಂಗಡಿ ಮೇಲೆ ಬೀಳುವುದಿಲ್ಲ.

ಈ ಮಾಹಿತಿಯನ್ನು ನಿಮ್ಮ ಕುಟುಂಬದವರಿಗೂ ತಿಳಿಸಿರಿ. ಈ ಪೂಜೆಯ ಲಾಭದಿಂದ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ. ಪೂಜೆ ಮಾಡಿದ ನಂತರ ಸುತ್ತಮುತ್ತಲಿನ ಮಕ್ಕಳಿಗೆ ಮತ್ತು ವೃದ್ಧರಿಗೆ ಪ್ರಸಾದವನ್ನು ನೀಡಿ. ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ