Categories
devotional Information

ಹೆಚ್ಚಾಗಿ ದೇವರ ಪೂಜೆ ಮತ್ತು ವೃತ ಮಾಡುವವರಿಗೆ ಯಾಕೆ ಅತಿಯಾದ ಕಷ್ಟಗಳು ಎದುರಾಗುತ್ತವೆ ಗೊತ್ತ …ಇದರ ಬಗ್ಗೆ ಶ್ರೀ ಕೃಷ್ಣ ಪರಮಾತ್ಮ ದೊಡ್ಡ ರಹಸ್ಯ!!!!

ಒಳ್ಳೆಯವರಿಗೆ ಯಾಕೆ ಹೆಚ್ಚು ಕಷ್ಟ ಬರುತ್ತೆ ಅನ್ನುವ ಈ ಪ್ರಶ್ನೆಗೆ ಶ್ರೀಕೃಷ್ಣಪರಮಾತ್ಮ ಅರ್ಜುನನಿಗೆ ಈ ಮಾತನ್ನ ಹೇಳಿದ್ದಾರೆ.ಹೌದು ಇಂದಿನ ಈ ಸಮಾಜದಲ್ಲಿ ಒಳ್ಳೆಯವರಿಗೆ ಕಷ್ಟದ ಮೇಲೆ ಕಷ್ಟ ಬರುತ್ತಾ ಇರುತ್ತದೆ, ಆದರೆ ಕೆಟ್ಟದ್ದನ್ನು ಮಾಡಿದರೂ ಕಣ್ಣು ಮುಂದೆಯೇ ಬಹಳಷ್ಟು ಮಂದಿ ಸಂತೋಷದಿಂದ ಇರ್ತಾರೆ ಅದನ್ನ ನೋಡಿ ಒಳ್ಳೆಯವರಿಗೆ ಮನಸ್ಸಿನಲ್ಲಿ ಬರುವ ಪ್ರಶ್ನೆ ನನಗೆ ಯಾಕೆ ಈ ಕಷ್ಟ ನಾನು ಮಾಡಿರುವುದಾದರೂ ಏನು ಒಳ್ಳೆಯದೇ ಬಯಸಿದರೂ ಯಾಕೆ ನನಗೆ ನೋವಾಗುತ್ತಿದೆ ಅಂತ ಅಂದುಕೊಳ್ತಾರೆ.

ಆದರೆ ಒಳ್ಳೆಯವರ ಮನಸ್ಸಿನಲ್ಲಿ ಬರುವ ಈ ಪ್ರಶ್ನೆಗೆ ಕೃಷ್ಣ ಪರಮಾತ್ಮ ಚಿಕ್ಕ ಕಥೆಯೊಂದನ್ನ ಹೇಳಿ ಒಳ್ಳೆಯವರ ಮನಸ್ಸಿನಲ್ಲಿ ಬರುವ ಈ ಗೊಂದಲಕ್ಕೆ ಪರಿಹಾರ ನೀಡಿದ್ದರೂ ಅದನ್ನು ನಾವು ಕೂಡ ಈ ಪುಟದಲ್ಲಿ ನಿಮಗೆ ತಿಳಿಸುತ್ತೇವೆ ಬನ್ನಿ ಹಾಗಾದ್ರೆ ಶ್ರೀಕೃಷ್ಣಪರಮಾತ್ಮರ ಆ ಮಾತುಗಳನ್ನ ತಿಳಿಯೋಣ.ಅಮೈ ದೇವಸ್ಥಾನವೊಂದರಲ್ಲಿ ವ್ಯಾಪಾರಿ ಪ್ರತಿದಿನ ಬಂದು ವ್ಯಾಪಾರ ಮಾಡಿ ಹೋಗುತ್ತಿದ್ದರಂತೆ ಅದೇ ದೇವಸ್ಥಾನದಲ್ಲಿ ಒಬ್ಬ ಕಳ್ಳ ಬಂದು ಯಾರೂ ಇಲ್ಲದ್ದನ್ನು ನೋಡಿ ಗಮನಿಸಿ ದೇವಸ್ಥಾನದ ಹುಂಡಿಯಲ್ಲಿ ಹಣ ಕದ್ದು ಓಡಿ ಹೋಗಿರ್ತಾನೆ. ಆದರೆ ದೇವಸ್ಥಾನಕ್ಕೆ ಬಂದು ಪುರೋಹಿತರು ನೋಡುವ ಸಮಯದಲ್ಲಿ ಅಲ್ಲಿ ವ್ಯಾಪಾರಿ ಇದ್ದ ಕಾರಣ, ಆ ಆರೋಪವನ್ನು ವ್ಯಾಪಾರಿ ಮೇಲೆ ಹಾಕಿ, ಬಂದ ಭಕ್ತಾದಿಗಳ ಮುಂದೆ ಅವಮಾನ ಮಾಡಿ ಕಳುಹಿಸುತ್ತಾರೆ.

ಅವಮಾನಕ್ಕೊಳಗಾದ ವ್ಯಾಪಾರಿ ನೊಂದು ಜೊತೆಗೆ ಕೋಪದಿಂದ ಮನೆ ಕಡೆಗೆ ಹೋಗುವಾಗ ರಸ್ತೆಯಲ್ಲಿ ಆತನಿಗೆ ಅಪಘಾತವೊಂದು ಉಂಟಾಗುತ್ತೆ ವಾಹನ ಗುದ್ದಿ, ವ್ಯಾಪಾರಿಗೆ ಸ್ವಲ್ಪ ಪೆಟ್ಟು ಕೂಡ ಆಗುತ್ತೆ ಅಲ್ಲಿಂದ ಹೇಗೋ ಸಮಾಧಾನ ಮಾಡಿಕೊಂಡು ಮನೆ ಕಡೆ ಬರುವಾಗ ಕಳ್ಳನೊಬ್ಬನಿಗೆ ನೂರು ಚಿನ್ನದ ನಾಣ್ಯಗಳು ಸಿಕ್ಕಿದ್ದನ್ನ ಕಣ್ಣಾರೆ ವ್ಯಾಪಾರಿಯೇ ಕಾಣುತ್ತಾನೆ.ಇದನ್ನ ಕಂಡು ಕೂಡ ತನ್ನ ದುರಾದೃಷ್ಟ ಹೇಗಿದೆ ನೋಡಿ ತಾನೂ ಒಳ್ಳೆಯವನಾಗಿದ್ದರೂ ನನಗೆ ಬರಿ ಅವಮಾನಗಳೇ ಆಗುತ್ತಿದೆ ಆದರೆ ಆ ಕಳ್ಳ ಬೇರೆಯವರಿಗೆ ಮೋಸ ಮಾಡುತ್ತಿದ್ದರೂ, ಆತ ಖುಷಿಯಾಗಿದ್ದಾನೆ ಎಂದು ಅದೇ ಕೋಪದಲ್ಲಿ ಮನೆಗೆ ಹೋಗಿ ಮನೆಯೊಳಗೆ ಇದ್ದ ತಾನು ಪೂಜೆ ಮಾಡುತ್ತಿದ್ದ ಎಲ್ಲಾ ದೇವರ ಫೋಟೋಗಳನ್ನು ಮನೆಯಿಂದ ಆಚೆ ಹಾಕಿ ತನ್ನ ಮುಂದಿನ ಜೀವನವನ್ನು ದೇವರ ಮೇಲೆ ನಂಬಿಕೆ ಇಲ್ಲದೆ ಸಾಗಿಸುತ್ತಾನೆ.

ವ್ಯಾಪಾರಿ ಗೂ ವಯಸ್ಸು ಆಗುತ್ತೆ ಹಾಗೆ ಕಳ್ಳನಿಗೂ ವಯಸ್ಸು ಇಬ್ಬರಿಗೂ ಆಯಸ್ಸು ಮುಗಿದ ಮೇಲೆ, ಇಬ್ಬರು ಸಹ ಯಮಲೋಕದಲ್ಲಿ ಯಮನ ಕಣ್ಮುಂದೆ ನಿಂತಿರುತ್ತಾರೆ ವ್ಯಾಪಾರಿ ಕಳ್ಳನನ್ನ ಕಂಡು ಕೋಪದಲ್ಲಿ ಯಮನ ಮುಂದೆ, ಕಳ್ಳ ಮಾಡಿದ್ದ ಎಲ್ಲಾ ಆರೋಪಗಳನ್ನು ಚಾಚೂತಪ್ಪದೆ ಯಮದೇವನಿಗೆ ತಿಳಿಸುತ್ತಾರೆ.ಆಗ ಮೃ’ತ್ಯುದೇವ ವ್ಯಾಪಾರಿಗೆ ಹೇಳ್ತಾರೆ, ಅಂದು ನೀನು ನಿನ್ನ ಜೀವನದಲ್ಲಿ ನಡೆದ ಘಟನೆಯಿಂದ ದೇವರ ಮೇಲೆ ನಂಬಿಕೆ ಕಳೆದುಕೊಂಡ ಅದರಲ್ಲಿನ ಒಳ್ಳೆಯತನವನ್ನು ಬಿಡಲಿಲ್ಲ ಒಳ್ಳೆಯತನದಿಂದಲೇ ನಿನ್ನ ಜೀವನ ನಡೆಸಿದ. ನಿನ್ನ ಮೇಲೆ ಆರೋಪ ಬಂದ ದಿನವೇ ನಿನ್ನ ಆಯಸ್ಸು ಕೊನೆ ಆಗಿತ್ತು ಅಂದು ನಡೆದ ವಾಹನ ಅಪಘಾತದಲ್ಲಿ ನಿನ್ನ ಪ್ರಾಣ ಪಕ್ಷಿ ಹಾರಿ ಹೋಗಬೇಕಿತ್ತು, ಆದರೆ ನಿನ್ನ ಒಳ್ಳೆಯತನದಿಂದ ನೀನು ಇನ್ನಷ್ಟು ದಿನಗಳ ಕಾಲ ಬದುಕುವ ಅರ್ಹತೆಯನ್ನು ಹೊಂದಿದೆ ಹಾಗಾಗಿ ನಿನ್ನ ಆಯಸ್ಸು ವೃದ್ಧಿಯಾಗಿ ಇಂದು ನಿನ್ನ ಪ್ರಾಣ ಪಕ್ಷಿ ಹಾರಿ ಇಲ್ಲೇ ಇದ್ದೀಯಾ.

ಹಾಗೆ ಆ ದಿನ ಕೂಡ ಕಳ್ಳನಿಗೆ ನೂರು ಚಿನ್ನದ ನಾಣ್ಯ ಸಿಕ್ಕ ಕಾರಣ ಅವನು ಅಷ್ಟರಲ್ಲಿಯೇ ತೃಪ್ತಿಪಟ್ಟು, ತಪ್ಪು ದಾರಿ ಹಿಡಿದ. ಆದರೆ ಅವನ ಜಾತಕದ ಪ್ರಕಾರ ಅದೇ ಮಾರನೇ ದಿನದಿಂದ ಅವನಿಗೆ ರಾಜಯೋಗ ಪ್ರಾಪ್ತಿ ಆಗಬೇಕಿತ್ತು.ಅವನು ಮಾಡಿದ ಎಲ್ಲಾ ತಪ್ಪುಗಳಿಂದ ಅಂದು ಅವನಿಗೆ ರಾಜಯೋಗವೇ ಪ್ರಾಪ್ತಿಯಾಗಲಿಲ್ಲ ಜೀವನಪರ್ಯಂತ ಕಳ್ಳನಾಗಿಯೆ, ಆತನಿಗೆ ಬಂದಷ್ಟು ಪಾಲಿನಲ್ಲಿ ಆತ ಖುಷಿ ಪಡಬೇಕಾ ಯಿತು ಅಂದು ಅವನು ಒಳ್ಳೆಯ ಕೆಲಸ ಮಾಡುತ್ತಾ ಬಂದಿದ್ದರೆ. ಅದೇ ಮಾರನೇ ದಿನದಿಂದ ಅವನಿಗೆ ರಾಜಯೋಗ ಪ್ರಾಪ್ತಿಯಾಗ ಬೇಕಿತ್ತು, ಆದರೆ ಜೀವನದಲ್ಲಿ ತಪ್ಪುಗಳನ್ನೇ ಮಾಡುತ್ತ ಬಂದವನಿಗೆ ರಾಜಯೋಗವೇ ಸಿಗಲಿಲ್ಲ.

ಎಂದ ಮೃ’ತ್ಯುದೇವ ಒಳ್ಳೆಯತನದಿಂದ ಬದುಕುವವರಿಗೆ ಸದಾ ಒಳ್ಳೆಯತನ ಅವರಿಗೆ ಸದಾ ಒಳ್ಳೆಯ ಹೆಜ್ಜೆ ಇಡುವ ಅವಕಾಶವನ್ನೇ ಕೊಡುತ್ತೆ. ಆದರೆ ಕೆಟ್ಟದ್ದನ್ನ ಮಾಡುವವರಿಗೆ ಬದುಕು ಮುಂದೆ ಆಗಬಹುದಾದ ಸುಖವನ್ನು ಸಿಗದಿರುವ ಹಾಗೆ ಮಾಡಿ, ಜೀವನ ಪರ್ಯಂತ ಅವರು ಮಾಡುವ ಪಾಪದಿಂದಲೇ ಅವರು ಹೆಜ್ಜೆ ಹಾಕುತ್ತ ನಡೆಯಬೇಕಿರುತ್ತೆ ಇಷ್ಟೆ.ನೋಡಿದ್ರಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮುಖಾಂತರ ನಮಗೆ ತಿಳಿಸಿಕೊಡಿ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ