Categories
Uncategorized

ನಿಮ್ಮ ಮನೆಗೆ ಏನಾದ್ರು ಸಾವಿರಕಾಲು ಮತ್ತು ಜರಿಹುಳಗಳು ಪ್ರವೇಶ ಮಾಡಿದರೆ ಅದರ ಅರ್ಥ ಏನು ಗೊತ್ತ …!!!!

ನಮ್ಮ ಪ್ರಕೃತಿ ಅಲ್ಲಿ ಪ್ರಾಣಿ ಪಕ್ಷಿಗಳು ಕ್ರಿಮಿ ಕೀಟಗಳು ಇವೆಲ್ಲವೂ ಕೂಡ ಪರಿಸರದ ದೃಷ್ಟಿಯಲ್ಲಿ ಒಂದೇ ಹಾಗೆ ಪ್ರತಿಯೊಂದು ಜೀವಿಗೂ ಕೂಡ ಈ ಪ್ರಕೃತಿಯಲ್ಲಿ ಬದುಕುವ ಹಕ್ಕಿದೆ ಇನ್ನು ಮನುಷ್ಯ ಸಂಘ ಜೀವಿ .ಆತ ತನ್ನ ಒಳಿತಿಗಾಗಿ ತನ್ನ ಉಳಿವಿಗಾಗಿ ಕೆಲವೊಂದು ಮೂಲಭೂತ ಸೌಕರ್ಯಗಳನ್ನು ಮಾಡಿಕೊಂಡಿದ್ದಾರೆ ಅಂತಹ ಮೂಲಭೂತ ಸೌಕರ್ಯಗಳಲ್ಲಿ ಮನೆಯೂ ಕೂಡ ಒಂದು ಆದರೆ ನಮ್ಮ ಪರಿಸರದಲ್ಲಿ ಕ್ರಿಮಿ ಕೀಟ ಪಕ್ಷಿ ಪ್ರಾಣಿಗಳು ಎಲ್ಲವೂ ಇವೆ,ಅಂತಹ ಕ್ರಿಮಿ ಕೀಟ ಪಕ್ಷಿ ಪ್ರಾಣಿಗಳಲ್ಲಿ ಮನೆಗೆ ಕೆಲವೊಂದು ಪಕ್ಷಿಗಳು ಪ್ರಾಣಿಗಳು ಕ್ರಿಮಿ ಕೀಟಗಳು ಬಂದರೆ ಒಳಿತಾಗುತ್ತದೆ ಎಂದು ನಂಬಲಾಗಿದೆ ಇನ್ನೂ ಕೆಲ ಜೀವಿಗಳು ಮನೆಯನ್ನು ಪ್ರವೇಶಿಸಿದರೆ ಅಶುಭ ಜರುಗುತ್ತದೆ ಅಂತ ಕೂಡ ಹಿರಿಯರು ಹೇಳ್ತಾ ಇದ್ರು ಹಾಗೇ ಇದನ್ನು ನಂಬ್ತ ಇದ್ರು ಕೂಡ.

ಹೀಗಾಗಿ ಮನೆಗೆ ಯಾವ ಜೀವಿ ಪ್ರವೇಶಿಸಿದರೆ ಒಳ್ಳೆಯದು ಯಾವ ಜೀವಿಯ ಮನೆಯನ್ನು ಪ್ರವೇಶಿಸಬಾರದು ಅನ್ನುವುದನ್ನು ತಿಳಿಯೋಣ. ಇಂದಿನ ಈ ಮಾಹಿತಿಯಲ್ಲಿ ಹಾಗೆ ಈ  ಒಂದು ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅನ್ನು ಮಾಹಿತಿಯ ಕೊನೆ ಅಲ್ಲಿ ಕಾಮೆಂಟ್ ಮಾಡಿ.ನೀವು ಗಮನಿಸಿರಬಹುದು ಮನೆಗೆ ಆಗಾಗ ಇರುವೆಗಳು ಬಂದಿರುತ್ತದೆ ಅಥವಾ ಕಪ್ಪೆಗಳು ಹೀಗೆ ಯಾವುದಾದರೂ ಕ್ರಿಮಿ ಕೀಟಗಳು ಮನೆಯನ್ನು ಪ್ರವೇಶಿಸುತ್ತಲೇ ಇರುತ್ತದೆ, ಹಾಗೆ ಕೆಲವರಿಗೆ ಮನೆಯಲ್ಲಿ ಹಲ್ಲಿಗಳು ಕಾಣಿಸಿಕೊಳ್ಳುವುದು ಇಷ್ಟ ಆಗುವುದಿಲ್ಲ .ಹಲ್ಲಿಯನ್ನು ಲಕ್ಷ್ಮೀಯ ಸ್ವರೂಪ ಅಂತ ಕೂಡ ಕೆಲವರು ಕರೆಯುತ್ತಾರೆ.

ಹೀಗಾಗಿ ಮನೆಗೆ ಕಪ್ಪು ಇರುವೆಗಳು ಬಂದರೆ ಲಕ್ಷ್ಮಿ ಪ್ರವೇಶಿಸಿದ್ದಾಳೆ ಎಂಬುದನ್ನು ಇದು ಸೂಚನೆ ನೀಡಿದರೆ. ಮನೆಗೆ ಯಾವತ್ತಿಗೂ ಕೂಡ ಬಾವಲಿಗಳು ಬರಬಾರದು ಅವರು ಈ ಬಾವಲಿಗಳು ಮನೆಗೆ ಬಂದರೆ ಅದು ಅಶುಭ ಮನೆಗೆ ಯಾವುದಾದರೂ ಕೆಡಕು ಉಂಟಾಗಬಹುದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕುಮನೆಗೆ ಸಾವಿರ ಕಾಲು ಪ್ರವೇಶಿಸಿದರೆ ಅಂದರೆ ಜರಿ ಈ ಒಂದು ಜರಿ ಮನೆಯನ್ನು ಪ್ರವೇಶಿಸಿದರೆ ಅದು ಶುಭದ ಸಂಕೇತ ಸಾಕ್ಷಾತ್ ಲಕ್ಷ್ಮಿ ದೇವಿಯು ಪ್ರವೇಶಿಸಿದ್ದಾಳೆ ಎಂದು ಹಿರಿಯರು ನಂಬುತ್ತಿದ್ದರು,

ಯಾವುದೇ ಪ್ರಾಣಿಗಳಿದ್ದರೂ ಅವುಗಳಿಗೆ ಎಂಟು ಅಥವಾ ಅದಕ್ಕಿಂತ ಹೆಚ್ಚು ಕಾಲುಗಳಿವುದು ಅಪರೂಪ. ಆದರೆ, ಈ ಜೀವಿಯ ಕಾಲುಗಳು ಎಷ್ಟಿವೆ ಎಂದು ಎಣಿಸುವುದೇ ಕಷ್ಟ. ಮುಟ್ಟಿದರೆ ಮುನಿ ಗಿಡದಂತೆ ಇವು ಕೂಡಾ ಯಾರಾದರೂ ಮುಟ್ಟಿದರೆ, ಚಕ್ಕುಲಿಯಂತೆ ದೇಹವನ್ನು ಸುತ್ತಿಕೊಂಡು ಸ’ತ್ತಂತೆ ನಟಿಸುತ್ತವೆ ಸಹಸ್ರಪದಿಗಳು ಬಹು ಕಾಲುಗಳುಳ್ಳ ಕೀಟಗಳ ಜಾತಿಗೆ ಸೇರಿವೆ. ಹೀಗಾಗಿ ಸಹಸ್ರಪದಿ ಎನ್ನುವ ಹೆಸರನ್ನು ನೀಡಲಾಗಿದೆ. ನಿಜವಾಗಲೂ ಇವು  ಸಾವಿರ ಕಾಲುಗಳನ್ನು ಹೊಂದಿರುವುದಿಲ್ಲ. ಕೆಲವೊಂದಕ್ಕೆ 400ಕ್ಕೂ ಹೆಚ್ಚು ಕಾಲುಗಳಿರುತ್ತವೆ. ಆದರೆ ಯಾವುದಕ್ಕೂ 750ಕ್ಕಿಂತ ಹೆಚ್ಚಿನ ಕಾಲಿರುದಿಲ್ಲ. ಇದನ್ನು ಆಂಗ್ಲ ಭಾಷೆಯಲ್ಲಿ ಮಿಲ್ಲಿಪೀಡ್ ಎನ್ನುತ್ತಾರೆ. ಗ್ರಾಮ್ಯ ಭಾಷೆಯಲ್ಲಿ ಚೋರಟೆ ಎಂದು ಕರೆದು ರೂಢಿ.
ಮಲೆನಾಡು ಪ್ರದೇಶದಲ್ಲಿ ಮಳೆಗಾಲದಲ್ಲಿ ಕಂಡುಬರುವ  ಚಿತ್ರವಿಚಿತ್ರ ಜೀವಿಗಳಲ್ಲಿ ಸಹಸ್ರಪದಿಯೂ ಒಂದು. ರಸ್ತೆ, ತೋಟ, ಮನೆಯಂಗಳ, ಹೀಗೆ ಎಲ್ಲೆಂದರಲ್ಲಿ ನೂರೆಂಟು ಕಾಲುಳಿಂದ ಓಡಾಡುತ್ತಿರುತ್ತವೆ. ಉದ್ದವಾದ ಮತ್ತು ಕೊಳವೆಯಾಕಾರದ ದೇಹ ರಚನೆ ಹೊಂದಿವೆ. ತಲೆ ಹೊಲೆ ಹೊರತುಪಡಿಸಿ ದೇಹದ ಒಂದೊಂದು ಭಾಗಕ್ಕೂ ಎರಡು ಜತೆ ಕಾಲುಗಳಿರುತ್ತವೆ. ಕಾಲುಗಳ ಸಂಖ್ಯೆ ಜಾಸ್ತಿ ಇರುವುದರಿಂದ ನಡಿಗೆ ನಿಧಾನ. ಸಹಸ್ರಪದಿಗಳಲ್ಲಿ ಜಗತ್ತಿನಾದ್ಯಂತ ಸುಮಾರು 10 ಸಾವಿರಕ್ಕೂ ಅಧಿಕ ಪ್ರಜಾತಿಗಳಿವೆ. ಭೂಮಿಯ ಮೇಲೆ ಮಾನವರಿಗಿಂತ ನೂರಾರು ಮಿಲಿಯನ್ ವರ್ಷಗಳಿಂದ ಇವು ಬದುಕಿವೆ.

ಸಾವಿರ ಕಾಲುಳ್ಳ ಈ ಜರಿ ವಿ’ಷಪೂರಿತ ಜಂತುವೇ ಆಗಿರಬಹುದು ಆದರೆ ಇದು ಮನೆಯನ್ನು ಪ್ರವೇಶಿಸಿದರೆ ಮುಂದಿನ ದಿನಗಳಲ್ಲಿ ಮನೆಗೆ ಒಳಿತಾಗಬಹುದು ಮನೆಗೆ ಶುಭ ಆಗುತ್ತದೆ ಅಂತೆಲ್ಲಾ ನಂಬುತ್ತಿದ್ದರು ಹಾಗೆ ಈ ಜರಿ ಮನೆಗೆ ಪ್ರವೇಶಿಸಿದರೆ ಅದನ್ನು ಸಾಯಿಸದೇ ತೆಗೆದುಕೊಂಡು ಹೋಗಿ ಮನೆಯಿಂದ ಆಚೆ ಹಾಕುವುದು ಒಳ್ಳೆಯದು.ಉಡದ ಹೆಸರು ಕೇಳಿರುತ್ತೀರಾ ಆದರೆ ಇತ್ತೀಚಿನ ದಿನಗಳಲ್ಲಿ ಅದು ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ ಆದರೆ ಈ ಕೂಡ ಕೂಡ ಮನೆಗೆ ಪ್ರವೇಶಿಸಿದರೆ ಮನ ಸರ್ವನಾಶ ಆಗುತ್ತದೆ ಅಂತ ಹಿರಿಯರು ನಂಬುತ್ತಿದ್ದರು. ಮನೆಯೊಳಗೆ ಕಾಗೆ ಪ್ರವೇಶಿಸಬಾರದು ಅದು ಅಶುಭದ ಸಂಕೇತ ಹಾಗೆ ಮನೆಯೊಳಗೆ ಹಾವು ಬಂದರೂ ಕೂಡ ಅದನ್ನು ಅಶುಭ ಸಂಕೇತ ಅಂತ ಹೇಳ್ತಾರೆ.

ಈ ರೀತಿಯಾಗಿ ಕೆಲವೊಂದು ನಂಬಿಕೆಗಳನ್ನು ಹಿರಿಯರು ನಂಬುತ್ತಿದ್ದರು ತನ್ನ ಪಾಲಿಸಿಕೊಂಡು ಬರುತ್ತಿದ್ದರು ಇದಕ್ಕೆ ಯಾವುದೇ ನಿರ್ದಿಷ್ಟವಾದ ಕಾರಣಗಳು ಇಲ್ಲದಿದ್ದರೂ ನಮ್ಮ ಹಿರಿಯರು ಮಾಡಿರುವ ಈ ಒಂದು ನಂಬಿಕೆಗಳು ಮಾತ್ರ ಇಂದಿಗೂ ಕೂಡ ಜೀವಂತವಾಗಿದೆ.ಇನ್ನು ಕೆಲವರು ನಂಬುತ್ತಾರೆ ಕೂಡಾ. ನಮ್ಮ ಹಿರಿಯರು ಏನೇ ಮಾಡಿದ್ದರೂ ಅದಕ್ಕೆ ಅರ್ಥವಿರುತ್ತದೆ ಅದು ಅವರ ಜೀವನದ ಅನುಭವದ ಮೇಲೆ ತಿಳಿಸಲಾಗಿರುವ ಒಂದು ಪಾಠ ಅಂತ ಅಂದುಕೊಂಡು ನಾವು ಅವರ ಹಾದಿಯನ್ನು ಪಾಲಿಸಿದರೆ ಉತ್ತಮ ಜೀವನ ನಮ್ಮದಾಗುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ