Categories
devotional Information

ನಿಮ್ಮ ಶತ್ರುಗಳು ಬಂದು ನಿಮ್ಮ ಕಾಲಿಗೆ ಬೀಳುವ ಹಾಗೆ ಮಾಡುತ್ತೆ ಈ ಒಂದು ಎಲೆ .. ಈ ಗಿಡದ ಎಲೆಗಳನ್ನು ಯಾವಾಗ್ಲೂ ನಿಮ್ಮ ಹತ್ತಿರ ಇಟ್ಕೊಳಿ .ಎಷ್ಟೇ ಶತ್ರುಗಳಿದ್ದರೂ ನಿಮಗೆ ಅವರಿಂದ ಯಾವುದೇ ತೊಂದರೆಯಾಗಲ್ಲ …!!!

ಈ ಚಮತ್ಕಾರ ಎಲೆಗಳು ನಿಮ್ಮ ಹತ್ತಿರ ಇದ್ದರೆ ನಿಮಗೆ ಯಾವುದೇ ಶತ್ರುಗಳ ಕಾಟ ಬರುವುದಿಲ್ಲ ಶತ್ರುಗಳು ನಿಮಗೆ ಶರಣಾಗಿ ಇರುತ್ತಾರೆ.
ಹಾಯ್ ಸ್ನೇಹಿತರೆ ಮನುಷ್ಯರಿಗೆ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳು ಇರುತ್ತವೆ ಮನುಷ್ಯರಿಗೆ ಎನ್ನುವುದಕ್ಕಿಂತ ಭೂಮಿಯಲ್ಲಿರುವ ಪ್ರತಿಯೊಂದು ಜೀವಿಗಳಿಗೂ ಒಂದೊಂದು ರೀತಿಯ ಸಮಸ್ಯೆಗಳು ಇರುತ್ತವೆ. ಕೆಲವೊಬ್ಬರಿಗೆ ನೆಮ್ಮದಿ ಇರುತ್ತದೆ ಆದರೆ ಬಡತನ ಅವರನ್ನು ಕಾಡುತ್ತದೆ ಹಾಗೆ ಇನ್ನೂ ಒಬ್ಬರು ತುಂಬಾ ಶ್ರೀಮಂತರಾಗಿರುತ್ತಾರೆ ಆದರೆ ನೆಮ್ಮದಿ ಇರುವುದಿಲ್ಲ ಇನ್ನು ಕೆಲವೊಬ್ಬರಿಗೆ ಶ್ರೀಮಂತಿಕೆಯ ನೆಮ್ಮದಿ ಎಲ್ಲವೂ ಇದ್ದರೂ ಆರೋಗ್ಯ ಇರುವುದಿಲ್ಲ. ಇನ್ನೂ ಹೇಳಬೇಕೆಂದರೆ ಎಲ್ಲವನ್ನೂ ಗಳಿಸಿಕೊಂಡವರು ಅಂದರೆ ಆರೋಗ್ಯ ನೆಮ್ಮದಿ ಹಣ ಸುಖ-ಶಾಂತಿ ಎಲ್ಲಾ ಇರುತ್ತದೆ ಇಂಥವರನ್ನು ನೆರೆಹೊರೆಯವರು ಚೆನ್ನಾಗಿ ಇರಲು ಬಿಡುವುದಿಲ್ಲ.

ಸ್ನೇಹಿತರೆ ಹಿತಶತ್ರುಗಳಿಂದ ಆಗುವ ನೋವು ಯಾವ ರೋಗದಲ್ಲಿಯೂ ಇರುವುದಿಲ್ಲ ರೋಗಗಳು ದೇಹವನ್ನು ಹಾಳು ಮಾಡಿದರೆ ಇಂತಹ ಹಿತಶತ್ರುಗಳ ನೋವುಗಳು ಮನಸ್ಸನ್ನು ಹಾಳುಮಾಡುತ್ತವೆ. ಇವರು ನಮ್ಮ ಹತ್ತಿರನೇ ಇದ್ದು ನಮ್ಮ ಬೆನ್ನಿಗೆ ಚೂರಿ ಹಾಕಿರುತ್ತಾರೆ. ಕೆಲವೊಂದು ಸಲ ಇವರು ನಮಗೆ ಕೆಟ್ಟದ್ದನ್ನು ಬಯಸುತ್ತಾರೆ ಎಂದು ತಿಳಿಯುವುದಿಲ್ಲ ಹಾಗೆ ಕೆಲವೊಮ್ಮೆ ತಿಳಿದರು ಅವರಿಗೆ ನಾವು ಏನನ್ನು ಮಾಡಲು ಆಗದಂತಹ ಪರಿಸ್ಥಿತಿಯಲ್ಲಿ ನಾವು ಇರುತ್ತೇವೆ. ಹೀಗೆ ದಿನೇ ದಿನೇ ಶತ್ರುಗಳ ಕಾಟ ನಮಗೆ ಹೆಚ್ಚಾಗಿ ನಮ್ಮ ಜೀವನದಲ್ಲಿ ನೆಮ್ಮದಿ ಇಲ್ಲದಂತೆ ಆಗುತ್ತದೆ.

ಅವರು ನಮಗೆ ವ್ಯಾಪಾರದಲ್ಲಿ ಆರೋಗ್ಯದಲ್ಲಿ ಮನೆಯಲ್ಲಿ ನಮ್ಮ ಎಲ್ಲರ ಮನಸ್ಸಿನಲ್ಲಿ ನೋವುಗಳನ್ನು ಮಾಡುತ್ತಾರೆ ಆದರೆ ಇಂತಹದಕ್ಕೆಲ್ಲಾ ನಾವು ತಲೆಕೆಡಿಸಿಕೊಳ್ಳದೆ ದೇವರನ್ನು ನಂಬಿ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಬೇಕು. ಮನೆಯಲ್ಲಿ ನಾವೇನಾದರೂ ಚೆನ್ನಾಗಿದ್ದರೆ ನೆರೆಹೊರೆಯವರು ಅಥವಾ ಸಂಬಂಧಿಕರು ನಮ್ಮ ಮುಂದೆ ಖುಷಿಯಾಗಿಯೇ ಇರುತ್ತಾರೆ ಆದರೆ ಮನಸ್ಸಿನಲ್ಲಿ ಹೊಟ್ಟೆಕಿಚ್ಚು ಪಡುತ್ತಾರೆ. ಮನಸ್ಸಿನಲ್ಲಿ ಒಂದು ಮಾತು ಬಾಯಿಯಲ್ಲಿ ಒಂದು ಮಾತು ಇವರಲ್ಲಿ ಇರುತ್ತದೆ. ಸಂಬಂಧಿಕರು ಸ್ನೇಹಿತರು ಯಾರೇ ಆಗಲಿ ಒಂದಲ್ಲ ಒಂದು ದಿನ ತಮ್ಮ ಸ್ವಾರ್ಥಕ್ಕಾಗಿ ನಮಗೆ ಮೋಸ ಮಾಡುತ್ತಾರೆ ಆದರೆ ಪ್ರಾಣಿಗಳು ನಮಗೆ ನಂಬಿಕೆ ದ್ರೋಹ ಮಾಡುವುದಿಲ್ಲ

ಹಾಗಾಗಿ ಮನುಷ್ಯರಿಗಿಂತ ಪ್ರಾಣಿಗಳೇ ಉತ್ತಮ ಎಂದು ಅನಿಸುತ್ತದೆ. ಶತ್ರುಗಳ ಬಾಧೆಯಿಂದ ಕೆಲವೊಬ್ಬರು ತುಂಬಾ ನೋವನ್ನು ಅನುಭವಿಸಿ ಜೀವನದಲ್ಲಿ ಸೋತಿರುತ್ತಾರೆ ಅಂಥವರು ಒಂದು ಪರಿಹಾರವನ್ನು ಮಾಡಿದರೆ ಶತ್ರುಗಳೇ ನಿಮ್ಮ ಮನೆಗೆ ಬಂದು ತಪ್ಪನ್ನು ಒಪ್ಪಿಕೊಂಡು ನಿಮ್ಮ ಜೊತೆ ಚೆನ್ನಾಗಿ ಇರುತ್ತಾರೆ ಈ ಪರಿಹಾರ ಹೇಗೆ ಮಾಡುವುದು ಮತ್ತು ಏನು ಮಾಡಬೇಕು ಎಂದು ನಾನು ನಿಮಗೆ ಹೇಳುತ್ತೇನೆ. ಸ್ನೇಹಿತರೆ ಹಿಂದೂ ಧರ್ಮದಲ್ಲಿ ದೇವರಿಗೆ ಅಷ್ಟೇ ಅಲ್ಲದೆ ಮರಗಳಿಗೂ ಕೂಡ ದೇವರ ರೂಪವನ್ನು ಕೊಟ್ಟು ಪೂಜೆಯನ್ನು ಮಾಡುವುದನ್ನು ನಾವು ಕಂಡಿದ್ದೇವೆ

ಅದರಲ್ಲೂ ಅರಳಿ ಮರ ಅಶ್ವತಮರ ಬನ್ನಿ ಮರ ಬೇವಿನ ಮರ ಮಾವಿನ ಮರ ಹಾಗೂ ಇನ್ನೂ ಅನೇಕ ಮರಗಳನ್ನು ನಾವು ವಿಶೇಷವಾಗಿ ಪೂಜೆ ಮಾಡುತ್ತೇವೆ. ಸ್ನೇಹಿತರೆ ಯಾವುದಾದರೂ ಒಂದು ಬೇವಿನ ಮರದಲ್ಲಿ ಕೊಂಬೆಯ ಮೇಲೆ ಒಂದು ಸಣ್ಣ ಗಿಡ ಬೆಳದಿರುವಂತೆ ನೀವು ನೋಡಿದರೆ ಆ ಗಿಡದ ಎಲೆಗಳನ್ನು ನೀವು ಮನೆಗೆ ತೆಗೆದುಕೊಂಡು ಹೋಗಬೇಕು ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಿ ಬೇವಿನ ಮರದ ಕೊಂಬೆಯ ಮೇಲೆ ಬೆಳೆದ ಇನ್ನೊಂದು ಗಿಡದ ಎಲೆ ಈ ಪರಿಹಾರಕ್ಕೆ ಬೇಕು ಇದನ್ನು ಮಂಗಳವಾರ ಅಥವಾ ಶನಿವಾರ ಮಾತ್ರ ಮನೆಗೆ ಬರಬೇಕು. ತಂದ ಮೇಲೆ ಇದನ್ನು ನಾಲ್ಕು ಬಾರಿ ಉಫ್ ಎಂದು ಊದಿ ನಿಮಗೆ ಯಾರ ಕಾಟ ಇರುತ್ತದೆ ಅಂದರೆ ಯಾವ ಶತ್ರುಗಳ ಕಾಟ ಇರುತ್ತದೆಯೋ ಅವರ ಮನೆಯ ಹತ್ತಿರ ಹಾಕಬೇಕು

ಇಲ್ಲವಾದರೆ ಅವರು ನಡೆದಾಡುವ ಸ್ಥಳದಲ್ಲಿ ಹಾಕಬೇಕು ನಿಮಗೆ ಶತ್ರುಗಳು ಯಾರು ಎಂದು ತಿಳಿಯದಿದ್ದರೆ ಯಾವುದಾದರೂ ಖಾಲಿ ಜಾಗದಲ್ಲಿ ಇದನ್ನು ಹಾಕಬಹುದು. ಸ್ನೇಹಿತರೇ ಒಂದು ಸಲ ಹೀಗೆ ಮಾಡಿ ನೋಡಿ ಶತ್ರುಗಳು ನಿಮ್ಮನ್ನು ಮಿತ್ರರಂತೆ ಕಾಣುತ್ತಾರೆ ಹಾಗೆ ಅವರಿಂದ ನಿಮಗೆ ಯಾವುದೇ ತೊಂದರೆಗಳಾಗುವುದಿಲ್ಲ. ಇವಂದು ಪರಿಹಾರವನ್ನು ನಂಬಿಕೆಯಿಂದ ಮಾಡಬೇಕು. ಹೌದು ಸ್ನೇಹಿತರೆ ಇನ್ನೊಂದು ಪರಿಹಾರವೆಂದರೆ ಮನೆಯಲ್ಲಿ ಒಂದು ಆಮೆಯ ಮೂರ್ತಿ ತರಬೇಕು ಇದನ್ನು ಉತ್ತರದಿಕ್ಕಿನಲ್ಲಿ ಅಥವಾ ದೇವರ ಕೋಣೆಯಲ್ಲಿ ಒಂದು ಪಿಂಗಾಣಿ ಪ್ಲೇಟ್ನಲ್ಲಿ ಶುದ್ಧವಾದ ನೀರನ್ನು ಹಾಕಿ ಆಮೆಯ ಕಾಲು ಮುಳುಗುವಷ್ಟು ನೀರನ್ನು ಹಾಕಿ ಇಡಬೇಕು

ನಿತ್ಯವೂ ಇದನ್ನು ಪೂಜಿಸಿದರೆ ಆಮೆ ಹೇಗೆ ಶತ್ರುಗಳಿಂದ ಪಾರಾಗುತ್ತದೆ ಹಾಗೆ ನೀವು ಕೂಡ ನಿಮ್ಮ ಶತ್ರು ಬಾಧೆಯಿಂದ ದೂರ ಇರುತ್ತೀರ. ಸ್ನೇಹಿತರೆ ಹೀಗೆ ಮಾಡುವುದರಿಂದ ನಿಮ್ಮ ಮನೆಯ ವಾಸ್ತು ಕೊಡ ಸರಿ ಹೋಗುತ್ತದೆ ನಿಮ್ಮ ಮನೆಯಲ್ಲಿ ಯಾವಾಗಲೂ ನೆಮ್ಮದಿ ಸಿರಿಸಮೃದ್ಧಿ ಶಾಂತಿ ಸದಾ ನೆಲೆಸುತ್ತದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಎಲ್ಲರಿಗೂ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ