ಹೆಂಗಸರಲ್ಲಿ ಬಹಳಷ್ಟು ಜನ ಮಾಡುವ ತಪ್ಪು ಅಂದ್ರೆ ತಮ್ಮ ತಲೆಯನ್ನ ಎಲ್ಲೆಂದರಲ್ಲಿ ನಿಂತುಕೊಂಡು ಬಾಚುವುದು, ಮನೆಯ ಹಾಲ್ ನಲ್ಲಿ, ರೂಮ್ ನಲ್ಲಿ, ಬಾಲ್ಕನಿ ಹಾಗು ಎಲ್ಲೆಂದರಲ್ಲಿ ತಮ್ಮ ಕೂದಲನ್ನ ಬಿಚ್ಚಿಕೊಂಡು ಬಾಚಿಕೊಳ್ಳುತ್ತಾರೆ ಇದರಿಂದ ಮನೆಯ ತುಂಬೆಲ್ಲ ಕೂದಲು ತುಂಬಿಕೊಳ್ಳುತ್ತದೆ, ಕೂದಲು ಉದುರುವುದು ಸಹಜ ಆದರೆ ಎಲ್ಲೆಂದರಲ್ಲಿ ಕೂದಲು ಹರಡುವುದು ತಪ್ಪು.
ಕಾರಣ ಕೂದಲುಗಳು ಗಾಳಿಗೆ ಸುತ್ತಾಡಿ ಅಲೆದಾಡಿ ಮನೆಯ ಮೂಲೆಗಳಿಗೆ ಸೇರಿಬಿಡುತ್ತವೆ, ಹೀಗೆ ಮೂಲೆ ಗುಂಪಾದ ಕೂದಲಿಂದ ನಿಮ್ಮ ಮನೆಗೆ ದಾರಿದ್ರ್ಯ ಸುತ್ತಿ ಕೊಳ್ಳುತ್ತದೆ, ಆದ್ದರಿಂದ ಒಂದು ಪದ್ದತಿಯ ಪ್ರಕಾರ ಕೂದಲನ್ನ ಬಾಚಿಕೊಂಡು, ಉದುರಿದ ಕೂದಲನ್ನ ಸರಿಯಾದ ಕ್ರಮದಲ್ಲಿ ವಿಸರ್ಜಿಸ ಬೇಕು, ಸಾಧ್ಯವಾದರೆ ಉದುರಿದ ಕೂದಲನ್ನ ಮಣ್ಣಿನಲ್ಲಿ ಹೂತಿಡ ಬೇಕು, ಸಾಧ್ಯವಾಗದಿದ್ದರೆ ಸರಿಯಾದ ರೀತಿಯಲ್ಲಿ ವಿಸರ್ಜನೆ ಮಾಡಬೇಕು.
ಮನೆ ಮುಂದೆ ಬರುವ ಕೂದಲಿಗೆ ಪಾತ್ರೆಗಳನ್ನ ಕೊಡುವ ಜನರಿಗೆ ಕೂದಲನ್ನ ತೂಕದಲ್ಲಿ ಮಾರ್ಲೇ ಬಾರದು, ಹಾಗೆ ಮಾಡುವುದರಿಂದ ಅಷ್ಟ ದಾರಿದ್ರ್ಯ ಸುತ್ತುವುದೇ ಅಲ್ಲದೆ ದಾರಿದ್ರ್ಯವನ್ನ ಕರೆದು ಆಹ್ವಾನಿಸಿದ್ದಂತೆ, ಏಕೆಂದರೆ ಮನೆಯ ಗೃಹಿಣಿಯರೇ ಮನೆಯ ಲಕ್ಷ್ಮಿ ಆಕೆ ತನ್ನ ಕೂದಲನ್ನ ಮಾರಿಕೊಂಡು ಪಾತ್ರೆಗಳನ್ನ ಅಥವಾ ಇತರ ವಸ್ತುಗಳನ್ನ ಕೊಂಡು ಕೊಳ್ಳುವುದು ಶ್ರೇಯಸ್ಸಲ್ಲ.
ಇದು ಕೇವಲ ಧಾರ್ಮಿಕ ವಿಚಾರವಷ್ಟೇ ಅಲ್ಲದೆ ವೈಜ್ಞಾನಿಕವಾಗಿಯೂ ಉದುರಿದ ಕೂದಲು ತಿನ್ನು ಅಡುಗೆ ಅಥವ ಆಹಾರದಲ್ಲಿ ಸೇರಿಕೊಂಡರೆ ಅದರಿಂದ ಉಂಟಾಗುವ ಅರೋಗ್ಯ ಸಮಸ್ಯೆಗಳು ನಿಮಗೆ ಗೊತ್ತಿರುವ ವಿಷಯವೇ, ಮನೆಯ ಮಹಿಳೆಯರು ತಮ್ಮ ಉದುರಿದ ಕೂದಲನ್ನ ಎಲ್ಲೆಂದರಲ್ಲಿ ಹರಿದಾಡುವಂತೆ ಮಾಡಬೇಡಿ, ಒಂದು ವೇಳೆ ನಿಮ್ಮ ಮನೆಯಲ್ಲಿ ಸುತ್ತುತ್ತಿರುವ ಕೂದಲು ಕಂಡು ಬಂದ್ರೆ ಅದು ದರಿದ್ರ ದೇವತೆ ನಿಮ್ಮ ಮನೆಯಲ್ಲಿ ನಾಟ್ಯವಾಡಿದಂತೆ.
ಈ ಮಾಹಿತಿ ನಿಮಗೆ ಇಷ್ಟವಾದಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿನಿಗೆ ಹಂಚಿಕೊಳ್ಳಿ.