Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಎಲ್ಲಾ ವಿಷಯಕ್ಕೂ ಮನೆಯಲ್ಲಿ ಪದೇ ಪದೇ ಜಗಳ ನೆಮ್ಮದಿನೇ ಇಲ್ಲ ಅನ್ನುವವರು ಅಮಾವಾಸ್ಯೆಯ ದಿನದಂದು ಹೀಗೆ ಮಾಡಿ ನಿಮ್ಮ ಮನೆ ಶಾಂತವಾಗಿ ಮನೆಯಲ್ಲಿ ನೆಮ್ಮದಿಯ ವಾತಾವರಣ ನೆಲೆಸುತ್ತೆ …!!!

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಮ್ಮ ಅಕ್ಕ ಪಕ್ಕ ನಮ್ಮ ಸುತ್ತ ಮುತ್ತಲು ಯಾರ್ಯಾರು ಇದ್ದಾರೆ ಯಾರ್ಯಾರ ಕಣ್ಣು ಯಾವ ಯಾವ ರೀತಿಯಲ್ಲಿ ನಮ್ಮ ಮೇಲೆ ಬೀಳುತ್ತದೆ ಎಂದು ಹೇಳಲು ನಮಗೆ ಸಾಧ್ಯವಿರುವುದಿಲ್ಲ ಹಾಗಾಗಿ ಆ ರೀತಿಯಾಗಿ ಕೆಟ್ಟ ಕಣ್ಣು ಮತ್ತು ನೆಗೆಟಿವ್ ಥಾಟ್ಸ್ ಈ ಎಲ್ಲವೂ ಕೂಡ ನಮ್ಮ ಮೇಲೆ ಬರುವುದು ನಾವು ಅದಕ್ಕೆ ಪರ್ಯಾಯವಾಗಿ ಒಂದು ಪರಿಹಾರವನ್ನು ಹುಡುಕಿ ಇಟ್ಟುಕೊಳ್ಳುವುದು ಒಳ್ಳೆಯದು ಆ ರೀತಿಯಾಗಿ ಹಲವು ಪರಿಹಾರಗಳನ್ನು ನಾವು ಕಾಣಬಹುದು ಆದರೆ ಆ ಎಲ್ಲವೂ ಕೂಡ ನಮಗೆ ಸರಿಯಾಗಿ ಹೊಂದುತ್ತದೆಯೇ ಇಲ್ಲವೋ ಎಂಬುದು ಕೂಡ ಮುಖ್ಯ. ಇದರ ಜೊತೆಗೆ ನಾವು ಹಲವು ರೀತಿಯಾದಂತಹ ವಿಧಾನಗಳನ್ನು ನಮ್ಮ ಹಿರಿಯರು ನಮಗೆ ತಿಳಿಸಿಕೊಟ್ಟಿರುತ್ತಾರೆ ಆದರೂ ಅವೆಲ್ಲವನ್ನು ಕೂಡ ನಾವು ಮಾಡಲು ಹೋಗುವುದಿಲ್ಲ ಆದರೆ ಅದರಲ್ಲಿ ಕೆಲವು ವಿಧಾನಗಳು ನಿಜಕ್ಕೂ ನಮ್ಮ ಜೀವನದಲ್ಲಿ ನಡೆಯುವಂತಹ ಎಲ್ಲ ಕೆಟ್ಟ ದೃಷ್ಟಿಗಳನ್ನು ಕೂಡ ದೂರ ಮಾಡುತ್ತದೆ ಆದರೆ ಅಂತಹ ವಿಧಾನಗಳು ಯಾವುದು ಎಂಬುದರ ಬಗ್ಗೆ ನಿಮಗೆ ಸರಿಯಾದ ಅರಿವು ಮತ್ತು ಮಾಹಿತಿ ಇರಬೇಕು.

ಆದ್ದರಿಂದ ಹಲವು ರೀತಿಯಾದಂತಹ ವಿಚಾರಗಳು ನಮಗೆ ನಮ್ಮ ಜೊತೆಯಲ್ಲಿ ಇರುವವರು ತಿಳಿಸಿಕೊಟ್ಟಿರುತ್ತಾರೆ. ಇದರ ಮೂಲಕ ನಮಗೆ ಸರಿಯಾದ ಮಾಹಿತಿ ಇದೆಯೇ ಇಲ್ಲವೇ ಎಂಬುದನ್ನು ಹಲವು ಪಂಡಿತರ ಮೂಲಕ ತಿಳಿದುಕೊಳ್ಳಬಹುದು. ಇದರ ಜೊತೆಗೆ ಹಲವಾರು ಉಪಾಯಗಳನ್ನು ನಮಗೆ ಹಲವರು ನೀಡಿದರು ಸಹ ಅವೆಲ್ಲವೂ ಕೂಡ ನಮ್ಮ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಆದರೆ ಕೆಲವೊಂದು ಉಪಾಯಗಳು ಮಾತ್ರ ನಿಜವಾಗಿಯೂ ನಮ್ಮ ಸಮಸ್ಯೆಗಳನ್ನು ನಿವಾರಣೆ ಮಾಡುವಲ್ಲಿ ಬಹು ದೊಡ್ಡ ಪಾತ್ರವನ್ನು ವಹಿಸುತ್ತದೆ ಅಂತಹ ಒಂದು ಪರಿಹಾರದಲ್ಲಿ ನಾವು ಕಾಣಬಹುದಾದಂತಹ ಒಂದು ವಿಧಾನವೆಂದರೆ ಅದು ಕಪ್ಪು ಬಟ್ಟೆಯಿಂದ ಮಾಡುವಂತಹ ಒಂದು ಉಪಾಯದ ಮೂಟೆ. ಆ ರೀತಿಯಾದಂತಹ ಉಪಾಯದ ವಿಧಾನ ಯಾವುದು ಎಂದು ಮತ್ತು ಅದು ಯಾವ ರೀತಿಯಾಗಿ ಸಹಾಯ ಮಾಡುತ್ತದೆ ಎಂದು ನೋಡೋಣ ಬನ್ನಿ.

ಒಂದು ದೃಷ್ಟಿ ನಮ್ಮ ಮೇಲೆ ಬೀಳುತ್ತದೆ ಎಂದರೆ ಅದರಲ್ಲಿ ಅನೇಕ ರೀತಿಯಾದಂತಹ ವಿಧಗಳು ಇರುತ್ತದೆ ಕೆಲವೊಬ್ಬರು ಒಳ್ಳೆಯ ದೃಷ್ಟಿಯಿಂದ ನಮಗೆ ಹೇಳಿದರೆ ನಾವು ಅವರಿಗಿಂತ ಮುಂದೆ ಸಾಗುತ್ತೇವೆ ಎಂಬ ಕೆಟ್ಟ ದೃಷ್ಟಿಯಿಂದ ಕೆಟ್ಟ ಅಭಿಪ್ರಾಯದಿಂದ ಹೇಳಿರುತ್ತಾರೆ. ಈ ರೀತಿಯಾಗಿ ಇರುವಂತಹ ಎರಡು ತರಹದ ಜೀವಿಗಳು ನಮ್ಮೊಟ್ಟಿಗೆ ಇರುತ್ತಾರೆ ಅಂತಹ ಜೀವಿಗಳಲ್ಲಿ ನಾವು ಕೆಟ್ಟ ದೃಷ್ಟಿಯನ್ನು ಬೀಳುವವರ ಕಣ್ಣಿನಿಂದ ತಪ್ಪಿಸಿಕೊಳ್ಳಬೇಕಾದರೆ ಮಂಗಳವಾರ ಗುರುವಾರ ಇಲ್ಲ ಭಾನುವಾರ ಅಥವಾ ಅಮಾವಾಸ್ಯೆ ಪೌರ್ಣಮಿ ಎಂದು ಈ ರೀತಿಯಾದಂತಹ ಒಂದು ವಿಧಾನವನ್ನು ಮಾಡಿ ಪರಿಹಾರ ಕಂಡುಕೊಳ್ಳಬಹುದು.

ಹಾಗಾದರೆ ಆ ವಿಧಾನ ಹೇಗೆ ಮಾಡಬೇಕು ಎಂದು ಕೇಳಿ ತಿಳಿದುಕೊಳ್ಳೋಣ ಅದಕ್ಕೆ ಬೇಕಾದಂತಹ ಸಾಮಗ್ರಿಗಳು ಯಾವುದು ಎಂದರೆ ಬೇವಿನ ಸೊಪ್ಪು ಸಾಸಿವೆ ಆರು ಮೆಣಸು ಮತ್ತು ಕಲ್ಲುಪ್ಪು ಕಪ್ಪು ಬಟ್ಟೆ ಇದರ ಜೊತೆಗೆ ದೀಪ ಈ ರೀತಿಯಾದಂತಹ ಎಲ್ಲ ಸಾಮಗ್ರಿಗಳು ಕೂಡ ನಮ್ಮ ಬಳಿಯಲ್ಲಿ ಸಿಗುತ್ತದೆ ಮತ್ತು ಎಲ್ಲವೂ ಕೂಡ ನಮಗೆ ಹತ್ತಿರವಾಗಿರುವಂತಹ ವಸ್ತುಗಳು ಆಗಿವೆ. ಇದನ್ನು ಬಳಸುವ ಮುನ್ನ ನಾವು ಸರಿಯಾದ ಸಮಯಕ್ಕೆ ಬಳಸುವುದು ಉತ್ತಮ ಅಂದರೆ ಬೆಳಗ್ಗೆ ಸರಿ ಸುಮಾರು ಐದೂವರೆಯಿಂದ ಏಳು ಏಳುವರೆಗೆ ಮತ್ತು ಸಾಯಂಕಾಲ 5:30 ರಿಂದ ಏಳು ಕಾಲು ಅಥವಾ ಏಳು ಗಂಟೆಯವರೆಗೆ ನಾವು ಈ ಉಪಾಯವನ್ನು ಬಳಸಬೇಕು.

ಈ ಉಪಾಯವನ್ನು ಬಳಸುವಾಗ ನಾವು ಸ್ನಾನ ಮಾಡಿರಬೇಕು ಒಂದು ಕಪ್ಪು ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಮೊದಲು ಸಾಸಿವೆ ಆನಂತರ ಆರು ಮೆಣಸು ಇಲ್ಲವೇ ಐದು ಮೆಣಸು, ಅದರ ಮೇಲೆ ಕಲ್ಲುಪ್ಪು ಅದರ ಮೇಲೆ ಬೇವಿನ ಎಲೆಗಳನ್ನು ಇಟ್ಟು ಅದನ್ನು ಚಿಕ್ಕದಾಗಿ ಒಂದು ಮೂಟೆ ಕಟ್ಟಿ ಮನೆಯ ಸಿಂಹದ ದ್ವಾರದಲ್ಲಿ ನೇತು ಹಾಕಬೇಕು ನೇತು ಹಾಕುವುದಕ್ಕೆ ಮುಂಚೆ ಅದನ್ನು ಅಂದರೆ ಕಟ್ಟಿರುವಂತಹ ಮೂಟೆಯನ್ನು ದೀಪ ದೂಪ ದ ಮೂಲಕ ಪ್ರಾರ್ಥಿಸಿ ಅದನ್ನು ಮನೆಯ ಸಿಂಹದ್ವಾರಕ್ಕೆ ಕಟ್ಟಿದಾಗ ನಮಗೆ ಬೀಳುವಂತಹ ಕೆಟ್ಟ ದೃಷ್ಟಿ ಮತ್ತು ಚೂಡ ದೃಷ್ಟಿ ಎಂಬಂತದ್ದು ದೂರವಾಗುತ್ತದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ