ನಮ್ಮ ಹಿಂದೂ ಪುರಾಣದ ಪ್ರಕಾರ ಶಿವನ ಮೂರನೇ ಕಣ್ಣು ತೆರೆದಿದ್ದು ಪ್ರತಿಯೊಬ್ಬರಿಗೂ ಗೊತ್ತೇ ಇರುವಂತಹ ವಿಚಾರ, ಶಿವ ಎನ್ನುವ ಒಂದು ಪದವನ್ನು ಕೇಳಿದರೆ ಪ್ರತಿಯೊಬ್ಬ ಮನುಷ್ಯನಿಗೂ ಗೊತ್ತಾಗುವುದು ಇಡೀ ಪ್ರಪಂಚದ ಅಧಿಪತಿ ಎಂದು. ಶಿವ ಏನಾದರೂ ತನ್ನ ಮೂರನೇ ಕಣ್ಣು ಬಿಟ್ಟರೆ ನಮ್ಮ ಪ್ರಪಂಚ ಅಲ್ಲೋಲ ಕಲ್ಲೋಲವಾಗುತ್ತದೆ ಸುನಾಮಿ ಬರುತ್ತದೆ ಹಾಗೂ ದೇಶದಲ್ಲಿ ಬರಗಾಲ ಬರುತ್ತದೆ ಹಾಗೂ ಜ್ವಲಮುಖಿ ಉದ್ಭವಿಸುತ್ತದೆ. ನಮ್ಮ ಪುರಾಣದಲ್ಲಿ ಉಲ್ಲೇಖವಿರುವ ಹಾಗೆ ಒಂದು ಸಾರಿ ಶಿವನ ಮೂರನೇ ಕಣ್ಣು ತೆರೆದರಂತೆ ಅದರ ಒಂದು ಪರಿಣಾಮವಾಗಿ ಅಲ್ಲಿ ಇರುವಂತಹ ಸ್ಥಳ ಸಂಪೂರ್ಣವಾಗಿ ಭಸ್ಮವಾಗಿತ್ತು, ಆ ಸ್ಥಳ ಯಾವುದು ಹಾಗೂ ಇವಾಗಲು ಆ ಸ್ಥಳ ಎಲ್ಲಿದೆ ಇರುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಅದಲ್ಲದೆ ಇವಾಗಲು ಕೂಡ ಭಸ್ಮವಾಗಿರುವ ಗಿಡವನ್ನು ನಾವು ನೋಡಬಹುದಾಗಿದೆ.

ಈ ಪ್ರದೇಶ ಇರುವುದು ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಕಾಮೇಶ್ವರ ಧಾಮದಲ್ಲಿ, ಒಂದಾನೊಂದು ಕಾಲದಲ್ಲಿ ತರಕಾಸುರ ಎನ್ನುವಂತಹ ಒಬ್ಬ ಒಬ್ಬ ರಾಕ್ಷಸ ಶಿವನಿಂದ ವರವನ್ನು ಪಡೆದುಕೊಂಡು ದೇವಾನುದೇವತೆಗಳಿಗೆ ಕಷ್ಟವನ್ನು ಕೊಡಲು ಶುರು ಮಾಡುತ್ತಾನೆ, ನನಗೆ ದೇವಾನು ದೇವತೆಗಳಿಂದ ಯಾವುದೇ ತರಹದ ಸಂಹಾರ ಆಗುವುದಿಲ್ಲ ಎನ್ನುವಂತಹ ಕೆಟ್ಟ ಉದ್ದೇಶದಿಂದ ಆಗಿ ಎಲ್ಲರಿಗೂ ಕಷ್ಟವನ್ನು ಕೊಡಲು ಶುರು ಮಾಡಿದ, ಈ ರಾಕ್ಷಸನ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ ಇದರಿಂದಾಗಿ ದೇವರು ದೇವತೆಗಳು ದಿಕ್ಕೆಟ್ಟು ಹೋಗುತ್ತಾರೆ ಏನು ಮಾಡಬೇಕು ಅನ್ನುವುದು ಅವರಿಗೆ ಅರ್ಥವಾಗುವುದಿಲ್ಲ.

ಅದಕ್ಕಾಗಿ ಅವರು ಬ್ರಹ್ಮನನ್ನು ಕೇಳ್ತಾರೆ ಇದನ್ನು ಹೇಗೆ ನಾವು ಪರಿಹಾರ ಮಾಡಿಕೊಳ್ಳಬೇಕು ಎನ್ನುವಂತಹ ಪ್ರಶ್ನೆಯನ್ನು ಬ್ರಹ್ಮನಿಗೆ ಹಾಕುತ್ತಾರೆ, ಅವಾಗ ಬ್ರಹ್ಮ ಹೇಳುತ್ತಾನೆ ಶಿವನ ಮಗನಿಂದ ಅವನ ಸಂಹಾರವನ್ನು ಮಾಡಬಹುದು ಆದರೆ ಶಿವನು ಇನ್ನೂ ಬ್ರಹ್ಮಚಾರಿ ಮದುವೆಯಾಗಿಲ್ಲ, ಈ ಸಂದರ್ಭದಲ್ಲಿ ಶಿವನನ್ನು ಹೇಗಾದರೂ ಮಾಡಿ ಮದುವೆ ಮಾಡುವುದಕ್ಕೆ ದೇವಾನುದೇವತೆಗಳು ಪ್ರಯತ್ನ ಪಡುತ್ತಾರೆ ಇದಕ್ಕಾಗಿ ಒಂದು ಯೋಜನೆಯನ್ನು ಕೂಡ ಮಾಡುತ್ತಾರೆ.

ಒಂದು ಸಂದರ್ಭದಲ್ಲಿ ಶಿವನು ತಪಸ್ಸಿಗೆ ಕುಳಿತಿರುವುದು ಆ ಸಂದರ್ಭದಲ್ಲಿ ಹೇಗಾದರೂ ಮಾಡಿ ತಪಸ್ಸನ್ನು ಭಂಗ ಬಳಸಿ ಪಾರ್ವತಿಯನ್ನು ಮದುವೆ ಮಾಡಿಸಲೇ ಬೇಕು ಎನ್ನುವಂತಹ ಪ್ರಯತ್ನವನ್ನು ಮಾಡಬೇಕು ಎಂದು, ಮನ್ಮಥನನ್ನು ಶಿವನ ತಪಸ್ಸನ್ನು ಭಂಗಗೊಳಿಸಲು ಕಳಿಸುತ್ತಾರೆ ಹೀಗೆ ಹೊರಟಂತಹ ಮನ್ಮಥನು ಹೂವಿನ ಬಾಣವನ್ನು ಶಿವನ ಮೇಲೆ ಪ್ರಯೋಗ ಮಾಡುತ್ತಾನೆ, ಇದರಿಂದಾಗಿ ಶಿವನ ತಪಸ್ಸು ಬಂಗಗೊಳಿಸುತ್ತದೆ ಇದರಿಂದ ಕುಪಿತಗೊಂಡ ಅಂತಹ ಶಿವ ತನ್ನ ಮೂರನೇ ಕಣ್ಣು ಬಿಡುತ್ತಾನೆ ಇದರಿಂದಾಗಿ ಮನ್ಮಥನ ಸಂಪೂರ್ಣವಾಗಿ ಸುಟ್ಟು ಭಸ್ಮವಾಗುತ್ತಾನೆ.

ಹೀಗೆ ಬಸ್ಮ ವಾದಂತಹ ಸ್ಥಳವೇ ಈ ಪ್ರದೇಶ ಸಾವಿರಾರು ವರ್ಷಗಳ ಹಿಂದೆ ಘಟನೆ ನಡೆದ ಈ ಸ್ಥಳ ನೀವು ಈಗಲೂ ನೋಡಬಹುದು ನಿಜಕ್ಕೂ ಆಚರ ಧರ್ಮ ನಂಬದೆ ಇರೋ ಜನಕ್ಕೆ ಇಲ್ಲಿದೆ ಸಾಕ್ಷಿ ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಹಾಗೂ ನಮ್ಮ ಪ್ರೀತಿ ಮಾಡುವುದನ್ನು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

 

Leave a Reply

Your email address will not be published. Required fields are marked *

%d bloggers like this: