ನಮ್ಮ ಹಿಂದೂ ಸಂಪ್ರದಾಯದಲ್ಲಿ ಸಾಕಷ್ಟು ತರಹದ ನಂಬಿಕೆಗಳು ಇವೆ ಆದರೆ ಈ ನಂಬಿಕೆಗಳಲ್ಲಿ ಕೆಲವೊಂದು ಮೂಢ ನಂಬಿಕೆಗಳು ಕೂಡ ಇವೆ ಆದರೆ ನಾವು ಎಲ್ಲ ರೀತಿಯ ನಂಬಿಕೆಗಳನ್ನು ನಂಬಬೇಕು ಅನ್ನೋದು ಏನೂ ಇಲ್ಲ .ಆದರೆ ನಂಬಿಕೆಗಳು ನಮ್ಮ ಜೀವನಕ್ಕೆ ಒಳ್ಳೆಯ ದಾರಿಯನ್ನು ರೂಪಿಸಿಕೊಡುವ ವಿಚಾರಗಳಿದ್ದರೆ ಮಾತ್ರ ಅವುಗಳು ನಮ್ಮ ಜೀವನಕ್ಕೆ ಒಳಿತು ಮಾಡುತ್ತದೆ ಆದ್ದರಿಂದ ಅಂತಹ ನಂಬಿಕೆಗಳನ್ನು ನಂಬುವುದರಿಂದ ಯಾವ ಕೆಡುಕು ಆಗುವುದಿಲ್ಲ .ಆದರೆ ಒಂದು ವಿಚಾರವನ್ನು ನಾವು ಯಾವಾಗಲೂ ಕೂಡ ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಯಾವ ನಂಬಿಕೆಗಳು ನಮಗೆ ಕೆಡುಕನ್ನು ಉಂಟುಮಾಡುತ್ತವೆ ಯಾವ ನಂಬಿಕೆಗಳು ನಮ್ಮ ಅವನತಿಗೆ ಕಾರಣವಾಗುತ್ತವೆ ಅಂತಹ ನಂಬಿಕೆಗಳು ಮೂಢನಂಬಿಕೆಗಳು .
ಅದನ್ನು ನಂಬುವುದರಿಂದ ನಮ್ಮ ಜೀವನ ಇನ್ನು ಕೆಳಮಟ್ಟಕ್ಕೆ ಹೋಗುತ್ತದೆ ಹೊರತು ಅದರಿಂದ ಯಾವ ಪ್ರಯೋಜನವೂ ಸಿಗುವುದಿಲ್ಲ ಅಂತಹ ನಂಬಿಕೆಗಳನ್ನು ಆಚರಿಸಲು ಮುಂದಾಗಬೇಡಿ .ವೈಕುಂಠ ಏಕಾದಶಿಯ ದಿನ ತಿರುಪತಿಯಲ್ಲಿಯು ಕೂಡ ಒಂದು ಮೂಢನಂಬಿಕೆಯನ್ನು ನಂಬಿದ್ದರಿಂದ ಆ ವ್ಯಕ್ತಿ ತನ್ನ ಜೀವನವನ್ನೇ ಕಳೆದುಕೊಳ್ಳಬೇಕಾಯಿತು ಅದು ಏನು ಅಂತ ಹೇಳ್ತೀನಿ ತಪ್ಪದೇ ಈ ನಮ್ಮ ಮಾಹಿತಿಯನ್ನು ಓದಿ .ತಿರುಪತಿಯ ತಿರುಮಲನನ್ನು ನೆನೆದರೆ ಏನೋ ಒಂದು ಭಕ್ತಿ ನಮ್ಮಲ್ಲಿ ಮೂಡುತ್ತದೆ.ಇನ್ನು ಆ ಭಕ್ತಿ ನಮ್ಮ ವಿಕಾಸಕ್ಕೂ ಕಾರಣವಾಗುತ್ತದೆ ಅದೇ ರೀತಿಯಲ್ಲಿ ಅಲ್ಲಿ ನಮ್ಮ ಭಾರತ ದೇಶದಲ್ಲಿ ಲಕ್ಷಾಂತರ ಜನ ಪ್ರತಿ ದಿನ ತಿರುಪತಿ ತಿರುಮಲ ವೆಂಕಟೇಶ್ವರನ ದರುಶನವನ್ನು ಪಡೆದು ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುತ್ತಿದ್ದಾರೆ .
ವೈಕುಂಠ ಏಕಾದಶಿಯಂದು ತಿರುಪತಿ ತಿರುಮಲ ದೇವಾಲಯದಲ್ಲಿ ವಿಶೇಷವಾದ ಪೂಜೆ ನೆರವೇರುತ್ತದೆ ಈ ದಿನದಂದು ಸುಮಾರು ಎರಡು ಲಕ್ಷದಷ್ಟು ಜನರು ತಿರುಪತಿ ತಿರುಮಲಗೆ ಭೇಟಿ ನೀಡಿ ದರ್ಶನವನ್ನು ಪಡೆದರು ಆದರೆ ಈ ದಿನದಂದು ತಿರುಪತಿಯಲ್ಲಿ ಒಂದು ಘಟನೆ ನಡೆದಿತ್ತು .ಅದೇ ರೀತಿಯಲ್ಲಿ ಪ್ರತಿ ದಿನದಂತೆ ತಿರುಪತಿಯಲ್ಲಿ ವೈಕುಂಠ ಏಕಾದಶಿಯ ದಿನದಂದು ಕೂಡ ಬಂದಂತಹ ಭಕ್ತಾದಿಗಳಿಗೆ ಊಟದ ವ್ಯವಸ್ಥೆಯನ್ನು ಕೂಡ ಏರ್ಪಡಿಸಲಾಗಿತ್ತು . ಈ ವೈಕುಂಠ ಏಕಾದಶಿಯ ದಿನ ಬೆಳಗಿನ ೪ ಗಂಟೆಯ ಸಮಯದಂದು ಹಾಲಿನ ಟ್ಯಾಂಕರ್ ತಿರುಪತಿಯಿಂದ ತಿರುಮಲ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಆ ಟ್ಯಾಂಕರ್ ಗೆ ಒಬ್ಬ ವ್ಯಕ್ತಿ ಅಡ್ಡ ಬರುತ್ತಾನೆ .
ಈ ರೀತಿ ಅಡ್ಡ ಬಂದ ವ್ಯಕ್ತಿ ದುರದೃಷ್ಟವಶಾತ್ ಸಾವನ್ನಪ್ಪುತ್ತಾರೆ ನಂತರ ಆ ವ್ಯಕ್ತಿಯ ಬಗ್ಗೆ ವಿಚಾರಿಸಿದಾಗ ವೈಕುಂಠ ಏಕಾದಶಿಗೆ ಮೂರ್ನಾಲ್ಕು ದಿನ ಹಿಂದೆ ತಿರುಮಲನ ದರ್ಶನವನ್ನು ಪಡೆದುಕೊಂಡಿದ್ದ ಆ ವ್ಯಕ್ತಿ .ಆದರೆ ವೈಕುಂಠ ಏಕಾದಶಿಯ ದಿನದಂದು ಇಹಲೋಕ ತ್ಯಜಿಸಿದರೆ ಸ್ವರ್ಗಪ್ರಾಪ್ತಿಯಾಗುತ್ತದೆ ಅನ್ನೊ ಒಂದು ನಂಬಿಕೆಯಿಂದಾಗಿ ಈ ವ್ಯಕ್ತಿ ಆ ದಿನದಂದು ತಿರುಪತಿಯಲ್ಲಿ ಪ್ರಾಣವನ್ನು ಬಿಡಬೇಕೆಂದು ನಿರ್ಧರಿಸಿ ಹಾಲಿನ ಟ್ಯಾಂಕರ್ಗೆ ಸಿಕ್ಕಿ ಸಾವನ್ನಪ್ಪುತ್ತಾನೆ .ವೈಕುಂಠ ಏಕಾದಶಿಯ ದಿನದಂದು ತಿರುಪತಿಯಲ್ಲಿ ಈ ಒಂದು ಘಟನೆ ಜರುಗಿತ್ತು ಈ ಒಂದು ಘಟನೆ ಜರುಗಲು ಆ ವ್ಯಕ್ತಿಯಲ್ಲಿದ್ದ ಮೂಢನಂಬಿಕೆಗೆ ಕಾರಣವಾಗಿತ್ತು ಅಂದರೆ ತಪ್ಪಾಗಲಾರದು . ಅದೇನೇ ಇರಲಿ ಸ್ನೇಹಿತರೇ ಮನುಷ್ಯ ತನ್ನ ಜೀವನದಲ್ಲಿ ದಾನ ಧರ್ಮಗಳನ್ನು ಮಾಡುತ್ತಾ ಬೇರೆಯವರಿಗೆ ಉಪಕಾರವನ್ನು ಮಾಡುತ್ತಾ ಜೀವನವನ್ನು ನಡೆಸಿದರೆ ಆತ ಸತ್ತ ನಂತರ ಒಳ್ಳೆಯ ಮುಕ್ತಿಯನ್ನು ಪಡೆದುಕೊಳ್ಳುತ್ತಾನೆ ಆದರೆ ಜೀವನಪರ್ಯಂತ ಬೇರೆಯವರಿಗೆ ಕಷ್ಟಗಳನ್ನು ನೀಡುತ್ತಾ ಬದುಕಿದರೆ ಆತ ಸತ್ತ ನಂತರವೂ ಕೂಡ ನರಕವನ್ನು ಅನುಭವಿಸಬೇಕಾಗುತ್ತದೆ .ಆದ್ದರಿಂದ ಜೀವನದಲ್ಲಿ ಒಳ್ಳೆಯದನ್ನೇ ಮಾಡಿ ಒಳ್ಳೆಯದನ್ನೇ ಬಯಸಿ ಧನ್ಯವಾದಗಳು .