ಕೆಲವೊಮ್ಮೆ ನಾಲಿಗೆಗೆ ಜಡತ್ವ ಹಿಡಿದಾಗ, ಉಪ್ಪು, ಹುಲಿ ಹಾಗು ಕಾರ ಎಷ್ಟೇ ಹೆಚ್ಚಾಗಿ ಬಳಸಿ ಅಡುಗೆ ಮಾಡಿದರು ನಿಮ್ಮ ನಾಲಿಗೆಗೆ ಮಾತ್ರ ರುಚಿ ತಾಗದಿದ್ದಾಗ ತಾಜಾ ಪುದೀನಾ ಎಲೆಯನ್ನು ತಿನ್ನುವುದರಿಂದ ನಾಲಿಗೆಗೆ ರುಚಿ ಗ್ರಹಣ ಶಕ್ತಿ ಹೆಚ್ಚಾಗುತ್ತದೆ ಹಾಗು ದೇಹದಲ್ಲಿ ರೋಗ ನಿರೋಧಕ ಸಾಮಥ್ಯ ವೃದ್ಧಿಯಾಗುತ್ತದೆ.
ಪುದೀನಾ ಸೊಪ್ಪಿನ ಹಲವು ಆರೋಗ್ಯ ಉಪಯೋಗಗಳಿಗೆ ಮುಂದೆ ಓದಿ.
ಪುದಿನ ಸೊಪ್ಪಿನ ಚಟ್ನಿ ತಿನ್ನುವುದರಿಂದ ಉಂಡ ಆಹಾರ ಚೆನ್ನಾಗಿ ಜೀರ್ಣವಾಗುವುದು ಹೀರೆಕಾಯಿ ಬಜ್ಜಿ ತಯಾರಿಸುವಂತೆಯೇ ಕಲಸಿದ ಕಡಲೆಹಿಟ್ಟಿನಲ್ಲಿ ಪುದೀನಾ ಎಲೆಗಳನ್ನು ಅದ್ದಿ ಎಣ್ಣೆಯಲ್ಲಿ ಕರೆದು ತಿನ್ನಬಹುದು, ಪಕೋಡ ತಯಾರಿಸುವ ಆಗಲು ಪುದಿನಾ ಸೊಪ್ಪು ಬಳಸಬಹುದು, ಒಟ್ಟಿನಲ್ಲಿ ಈ ಸೊಪ್ಪನ್ನು ಯಾವ ರೂಪದಲ್ಲಿ ಸೇವಿಸಿ ಜೀರ್ಣ ಶಕ್ತಿ ಹೆಚ್ಚಿಸುವುದು.
ಗಂಟಲು ಒಡೆದಿದ್ದರೆ ಪುದೀನಾ ಸೊಪ್ಪಿನ ಕಷಾಯಕ್ಕೆ ಉಪ್ಪು ಸೇರಿಸಿ ಬಾಯಿ ಮುಕ್ಕಳಿಸಿದರೆ ಉತ್ತಮ ಪರ ಕಂಡು ಬರುವುದು ಭಾಷಣಕಾರರಿಗೆ ಸಂಗೀತಗಾರರಿಗೆ ಶಿಕ್ಷಕರಿಗೆ ಇದು ವರಪ್ರಸಾದ.
ಪ್ರತಿದಿನವೂ ನಾಲ್ಕೈದು ಹಸಿರು ಪುದೀನಾ ಎಲೆಗಳನ್ನು ಚೆನ್ನಾಗಿ ಅಗಿದು ತಿಂದರೆ ಜೀರ್ಣಶಕ್ತಿ ಹೆಚ್ಚುವುದು ಬಾಯಿಯಲ್ಲಿ ಹುಟ್ಟುವ ದುರ್ನಾತ ನಾಶವಾಗುವುದು, ಬಾಯಿಯಲ್ಲಿ ರೋಗಕಾರಕ ಅಣುಜೀವಿಗಳು ಬೆಳೆಯಲು ಅವಕಾಶವಾಗುವುದಿಲ್ಲ, ವಸಡು ಗಟ್ಟಿಯಾಗುವುದು ಹಲ್ಲುಗಳ ಸವಕಳಿ ನಿಲ್ಲುವುದು, ಹಲ್ಲುಗಳು ದೀರ್ಘಕಾಲ ಗಟ್ಟಿಯಾಗಿರುವುದು.
ಟೊಮೆಟೋ ಹಣ್ಣು ಈರುಳ್ಳಿ ಸೌತೆಕಾಯಿ ಹಚ್ಚಿ ಹೋಳು ಮಾಡಿ ಪುದೀನಾ ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಇದರೊಂದಿಗೆ ಬೆರೆಸಿ ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಕಾಳುಮೆಣಸಿನ ಪುಡಿ ಉಪ್ಪು ಸೇರಿಸಿ ನಿಂಬೆ ರಸ ಹಿಂಡಿ ಪ್ರತಿದಿನವು ಬಳಸಿರಿ ಇದು ಆರೋಗ್ಯವರ್ಧಕ ಕೋಸಂಬರಿ.
ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.