ಕಾಲ ಬದಲಾಗಿದೆ ಯಾರು ಎಲ್ಲದ ಸಮಯ ನೋಡಿ ಕಳ್ಳತನ ಮಾಡುತ್ತಿದ್ದ ಕಳ್ಳರು ಹೀಗ ಎಲ್ಲರ ಎದುರೇ ಕಳ್ಳತನ ಮಾಡುವ ಪರಿಸ್ತಿತಿ ಬಂದೊದಗಿದೆ, ಯಾಕೆ ನಾವು ಈ ಮಾತನ್ನು ಹೇಳುತ್ತಿದ್ದೇವೆ ಅಂದರೆ ಒಮ್ಮೆ ಚೆನ್ನೈ ನಲ್ಲಿ ನಡೆದ ಈ ನೈಜ ಸಿನಿಮಾ ರೀತಿಯ ಕಳ್ಳತನದ ಒಮ್ಮೆ ಸಂಪೂರ್ಣವಾಗಿ ಓದಿ.
ಮೊಹಮ್ಮದ್ ಆಫ್ರೀನ್ ಎನ್ನುವ ವ್ಯಕ್ತಿ ಸುಮಾರು ಎರಡು ವರ್ಷದ ಹಿಂದೆ ಖರೀದಿ ಮಾಡಿದ್ದ ಹೈ ಎಂಡ್ ಬೈಕ್ ಅನ್ನು ಆರ್ಥಿಕ ಪರಿಸ್ಥಿತಿ ಎಡವಿದ ಕಾರಣ ತಮ್ಮ ಬೈಕ್ ಅನ್ನು ಮಾರಲು ಮುಂದಾಗಿದ್ದಾರೆ, ಎಲ್ಲರಂತೆ ಅವರು ಸಹ OLX ನೆರವನ್ನ ಪಡೆದು, ತಮ್ಮ ಬೈಕ್ ಮಾರುವುದಾಗಿ ಜಾಹಿರಾತನ್ನು ನೀಡಿದ್ದಾರೆ, ಜಾಹಿರಾತು ನೀಡಿದ ತಕ್ಷಣವೇ ಒಮ್ಮ ವ್ಯಕ್ತಿ ಕರೆ ಮಾಡಿ ಬೈಕ್ ಅನ್ನು ಒಮ್ಮೆ ನೋಡಬೆಂದು ಹೇಳಿ ಈಗಲೇ ಸಿಗಬೇಕಾಗಿ ಒತ್ತಾಯಿಸಿದ್ದಾನೆ.
ಬರುವಾಗ ದಾರಿಯಲ್ಲಿ ಆಟೋ ದಲ್ಲಿ ಬರುವಾಗ, ಆಟೋ ಡ್ರೈವರ್ ಗೆ ನಾನು ನನ್ನ ಸ್ನೇಹಿತನನ್ನು ನೋಡಲು ಹೋಗುತ್ತಿದ್ದೇನೆ ನೀವು ನಮ್ಮ ಮಾವನ ತರ ನಟಿಸಬೇಕು ಅಂತ ಕೇಳಿಕೊಂಡಿದ್ದಾನೆ ಹಾಗು ಅವನಿಗೆ ಎರಡು ಸಾವಿರ ರುಪಾಯಿಯ ಆಸೆಯನ್ನು ತೋರಿಸಿ ಒಪ್ಪಿಸಿದ್ದಾನೆ.
ನಂತರ ಬೈಕ್ ಮಾಲಿಕನ್ನು ಅತ್ತಿರದ ಸರ್ಕಾರಿ ಆಸ್ಪತ್ರೆ ಬಳಿ ಬರಲು ಹೇಳಿ, ಬೈಕ್ ನ ಡಾಕ್ಯುಮೆಂಟ್ ಅನ್ನು ಪರೀಕ್ಷಿಸಿ, ಒಮ್ಮೆ ಟೆಸ್ಟ್ ಡ್ರೈವ್ ಮಾಡುವುದಾಗಿ ಹೇಳಿದ್ದಾನೆ, ಆಟೋ ಚಾಲಕನ್ನು ಅಲ್ಲೇ ಬಿಟ್ಟು ಬೈಕ್ ಅತ್ತಿ ಕುಳಿತು, ಬೈಕ್ ಮಾಲಿಕನ್ನು ಹಿಂದೆ ಕೂರಿಸಿಕೊಂಡು ಡ್ರೈವ್ ಶುರು ಮಾಡಿದ್ದಾನೆ.
ರಸ್ತೆ ಮಧ್ಯದಲ್ಲಿ ಬೈಕ್ ಟೈಯರ್ ನಲ್ಲಿ ಗಾಳಿ ಕಮ್ಮಿ ಅದೇ ಅಂತ ಅನುಸ್ತಾ ಇದೆ ಒಮ್ಮೆ ನೋಡಿ ಎಂದು ಬೈಕ್ ನಿಲ್ಲಿಸಿ ನೋಡಲು ಹೇಳಿ, ಪಟ್ ಅಂತ ಬೈಕ್ ಜೊತೆ ಕಣ್ಣ ಮುಂದೆಯೇ ಕ್ಷಣದಲ್ಲಿ ಪರಾರಿಯಾಗಿದ್ದಾನೆ, ತಿರುಗಿ ಆಟೋ ಡ್ರೈವರ್ ಬಳಿ ಬಂದಾಗ ಅಲ್ಲಿಯೂ ಮೋಸ ಮಾಡಿರುವುದು ತಿಳಿದು ಬಂದಿದೆ.
ತಕ್ಷಣ ನಗರದ ಪೊಲೀಸ್ ಠಾಣೆಗೆ ದೂರು ಧಾಖಲಿಸಿದ್ದಾರೆ, ತನಿಖೆ ನಡೆಯ ಬೇಕಿದೆ, ಬೈಕ್ ಅಥವಾ ಯಾವುದೇ ಬೆಲೆ ಬಾಳುವ ವಸ್ತುವನ್ನ ಮಾರುವಾಗ ದಯವಿಟ್ಟು ಅಪರಿಚಿತರೊಂದಿಗೆ ಎಚ್ಚರವನ್ನು ವಹಿಸಿ, ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.