ಎರಡು ಕುಟುಂಬಗಳ ಗಲಾಟೆಯಿಂದಾಗಿ ದೇವರ ಗರ್ಭಗುಡಿಗೆ ಬೀಗ… ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ …

103

ನಮಸ್ಕಾರ ಸ್ನೇಹಿತರೇ ಬಿಜಾಪುರದಲ್ಲಿರುವ ಗೋಳಗುಮ್ಮಟ ಯಾರಿಗೆ ತಾನೇ ತಿಳಿದಿಲ್ಲ ಇನ್ನು ಈ ಗೋಲಗುಮ್ಮಟದ ಬಳಿ ಇರುವ ಪವಾಡ ಪುರುಷ ಬಸವೇಶ್ವರ ದೇವಾಲಯವು ಕೂಡ ಎಲ್ಲರಿಗೂ ತಿಳಿದಿದೆ ತನ್ನ ಪವಾಡದಿಂದ ಜನರನ್ನು ಸೆಳೆಯುತ್ತಿರುವ ಈ ದೇವಾಲಯವು ಈಗ ಒಂದು ವಿವಾದಕ್ಕೆ ಒಳಗಾಗಿದೆ ಅದೇನೆಂದರೆ ಈ ದೇವಾಲಯದಲ್ಲಿ ಪೂಜೆ ಮಾಡುವ ಎರಡು ಕುಟುಂಬದ ಪೂಜಾರಿಗಳ ನಡುವೆ ಜಗಳವಾಡಿ ದೇವಾಲಯಕ್ಕೆ ಬೀಗ ಹಾಕಿದೆ . ಇದರಿಂದಾಗಿ ಆಕ್ರೋಶಗೊಂಡ ಭಕ್ತಾದಿಗಳು ವಿಜಯಪುರ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟನ್ನು ದಾಖಲಿಸಿದ್ದಾರೆ ಹಾಗೂ ಇದೀಗ ಕೋರ್ಟ್ ಮೆಟ್ಟಿಲೇರಿರುವ ಈ ಎರಡೂ ಕುಟುಂಬದವರು ದೇವರ ಪೂಜೆಯನ್ನು ಮಾಡುತ್ತಿಲ್ಲ ಇವರನ್ನು ಬಿಟ್ಟು ಮೂರನೆಯವರಿಗೆ ಪೂಜಾರಿಕೆ ಮಾಡಲು ದೇವಸ್ಥಾನ ಟ್ರಸ್ಟ್ ನಿಗದಿಪಡಿಸಿದೆ ಮತ್ತು ಈ ದೇವಾಲಯವು ಅತ್ಯಂತ ಪ್ರಸಿದ್ಧ ದೇವಾಲಯವಾಗಿದ್ದು ದೇವಸ್ಥಾನದ ಆದಾಯವೂ ಕೂಡ ಹೆಚ್ಚಾಗಿದ್ದು ಇದೇ ಕಾರಣದಿಂದಾಗಿ ಎರಡು ಕುಟುಂಬಗಳ ನಡುವೆ ಜಗಳವಾಗಿದೆ ಎಂದು ಕೂಡ ಹೇಳಲಾಗಿದೆ .

ಚಿನ್ನಿ ಕೊಳ ಮತ್ತು ನಂದಿಕೋಲ ಎಂಬ ಎರಡು ಗುಂಪಿನ ಕುಟುಂಬದವರು ಜಗಳವಾಡಿಕೊಂಡು ದೇವಸ್ಥಾನಕ್ಕೆ ಬೀಗ ಬಿಗಿದಿದ್ದರು ಇನ್ನೂ ಇದೀಗ ಈ ಪ್ರಕರಣವು ಕೋರ್ಟ್ ನಲ್ಲಿ ಚರ್ಚೆಗೆ ಒಳಗಾಗಿದೆ .
ಸುಮಾರು ವರ್ಷಗಳಿಂದ ಈ ಎರಡು ಕುಟುಂಬದವರು ಪವಾಡ ಪುರುಷ ಬಸವೇಶ್ವರ ದೇವಸ್ಥಾನದಲ್ಲಿ ಪೂಜಾರಿಕೆ ಮಾಡಿಕೊಂಡು ಬಂದಿದ್ದರೂ ಹನ್ನೊಂದು ತಿಂಗಳು ಒಂದು ಕುಟುಂಬಕ್ಕೆ ಇನ್ನೂ ಹನ್ನೊಂದು ತಿಂಗಳು ಒಂದು ಕುಟುಂಬದವರು ಪೂಜೆಯನ್ನು ಮಾಡುತ್ತಿದ್ದರು ಆದರೆ ನಂದಿಕೋಲ ಮಠದವರು ಬೀಗದ ಕೈಯನ್ನು ಕೊಡಲಿಲ್ಲವೆಂದು ಎರಡೂ ಕುಟುಂಬದವರ ನಡುವೆ ಜಗಳ ಪ್ರಾರಂಭವಾಗಿತ್ತು ಇನ್ನು ಈ ಪ್ರಕರಣವು ದೊಡ್ಡದಾಗಿ ದೇವಸ್ಥಾನದ ಬಾಗಿಲಿಗೆ ಎರಡು ಕುಟುಂಬದವರು ಸಹ ಚಾವಿಯನ್ನು ಬಿಗಿದಿದ್ದರು ಆದರೆ ದೇವಸ್ಥಾನದ ಟ್ರಸ್ಟ್ ನವರು ಈ ಬೀಗವನ್ನು ಹೊಡೆದು ಹಾಕಿ ಭಕ್ತಾದಿಗಳಿಗೆ ಮೂರನೇ ವ್ಯಕ್ತಿಗಳಿಂದ ದೇವರ ಪೂಜಾರಿಕೆಯನ್ನು ಮಾಡಿಸುತ್ತಿದ್ದಾರೆ ಎಂದು ಸ್ವತಃ ಟ್ರಸ್ಟ್ ನಲ್ಲಿ ಕೆಲಸ ಮಾಡುವವರು ಮಾಹಿತಿಯನ್ನು ನೀಡಿದ್ದಾರೆ .

ಹಾಗೆಯೇ ಕೋರ್ಟ್ನಲ್ಲಿ ಪ್ರಕರಣವನ್ನು ಚರ್ಚೆ ಮಾಡಿ ಕೋರ್ಟಿನ ತೀರ್ಪಿನ ನಂತರ ಕೋರ್ಟ್ ಹೇಗೆ ಹೇಳುತ್ತದೋ ಹಾಗೆ ದೇವಸ್ಥಾನದ ಪೂಜಾರಿಕೆಯನ್ನು ಮಾಡಿಸಲಾಗುತ್ತದೆ ಎಂದು ಪ್ರೆಸ್ನವರು ತಿಳಿಸಿದ್ದಾರೆ . ಈ ಎರಡು ಕುಟುಂಬಗಳ ನಡುವೆ ಯಾವ ವೈಯಕ್ತಿಕ ವಿಷಯಕ್ಕೂ ಜಗಳವಾಗಿಲ್ಲ ಆದರೆ ದೇವಸ್ಥಾನದ ಪೂಜಾರಿಗೆ ವಿಷಯದಲ್ಲಿ ಈ ಎರಡು ಕುಟುಂಬದವರು ಜಗಳ ಮಾಡಿಕೊಂಡಿದ್ದಾರೆ . ಈ ಇವೆರಡೂ ಕುಟುಂಬದ ಜಗಳವೂ ಕೋರ್ಟ್ನಲ್ಲಿ ಇತ್ಯರ್ಥ ಆಗುವವರೆಗೂ ನಾವು ಮೂರನೇ ವ್ಯಕ್ತಿಗಳಿಂದ ದೇವರ ಪೂಜಾರಿಕೆಯನ್ನು ಮಾಡಿಸುತ್ತೇವೆ ಅಲ್ಲಿಯವರೆಗೂ ಎಂದು ಟ್ರಸ್ಟ್ ಸಿಬ್ಬಂದಿಗಳು ತಿಳಿಸಿದ್ದಾರೆ .

ವಿಡಿಯೋ ಕೆಳಗೆ ಇದೆ …

ನಿಜಕ್ಕೂ ಅಲ್ಲಿ ಆಗಿದ್ದೇನೆಂದರೆ ಚೀನಿ ಕೇಳದವರು ದೇವಸ್ಥಾನದ ಚಾವಿಯನ್ನು ಕೇಳಲು ಹೋದಾಗ ನಂದಿ ಕೇಳದವರು ಕಲ್ಲಿನಿಂದ ಹೊಡೆದರೂ ಎಂಬ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಜಗಳವೂ ಶುರುವಾಗಿ ಇದೀಗ ಈ ಜಗಳವು ಕೋರ್ಟಿನ ಮೆಟ್ಟಿಲಿಗೆ ಏರಿದೆ ಸ್ನೇಹಿತರೇ . ಹೆಚ್ಚಿನ ಮಾಹಿತಿಗೆ ಕೆಳಗೆ ಅಥವಾ ಮೇಲೆ ನೀಡಿರುವ ವಿಡಿಯೋವನ್ನು ನೀವೂ ಸಹ ಒಮ್ಮೆ ನೋಡಿ .
ಇದರ ಕುರಿತು ನಿಮ್ಮ ಅಭಿಪ್ರಾಯವನ್ನು ತಿಳಿಸಿ ಮತ್ತು ಈ ಮಾಹಿತಿಯನ್ನು ಶೇರ್ ಮಾಡಿ ಲೈಕ್ ಮಾಡಿ ಧನ್ಯವಾದಗಳು ಶುಭ ದಿನ ಶುಭವಾಗಲಿ

LEAVE A REPLY

Please enter your comment!
Please enter your name here