Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಭಾನುವಾರ ಏನಾದ್ರು ನೀವು ಹುಟ್ಟಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ಕೆಲಸವನ್ನು ಮಾಡಿದ್ರೆ ಸಾಕು ಯಶಸ್ಸು ನಿಧಾನವಾದರೂ ಕೂಡ ಅದು ಇತಿಹಾಸ ಪುಟ ಸೇರುವಂತೆ ಯಶಸ್ಸು ಪಡೆಯುತ್ತೀರಾ …!!!

ಭಾನುವಾರದ ದಿವಸದಂದು ಹುಟ್ಟಿದಂತಹ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರುತ್ತದೆ ಮತ್ತು ಅವರು ಜೀವನದಲ್ಲಿ ಹೇಗೆ ಇರುತ್ತಾರೆ ಭವಿಷ್ಯದ ದಿನಗಳಲ್ಲಿ ಅವರಿಗೆ ಯಾವ ಅವಕಾಶಗಳು ದೊರೆಯಬಹುದು,ಅವರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ಅವರು ವಿಜಯವನ್ನು ಸಾಧಿಸಬಹುದು. ಹಾಗೆ ಇವರ ಅದೃಷ್ಟ ಸಂಖ್ಯೆ ಯಾವುದು ಅದೃಷ್ಟ ದೇವರು ಯಾವುದು ಯಾವ ದೇವರನ್ನು ಪೂಜೆ ಮಾಡುವುದರಿಂದ.ಇವರಿಗೆ ಅದೃಷ್ಟ ಒಲಿದು ಬರುತ್ತದೆ ಅನ್ನುವ ಪ್ರತಿ ಮಾಹಿತಿಯನ್ನು ತಿಳಿದುಕೊಳ್ಳೋಣ, ಇವತ್ತಿನ ಈ ಮಾಹಿತಿಯಲ್ಲಿ. ನೀವು ಕೂಡ ಭಾನುವಾರದ ದಿವಸದಂದು ಜನಿಸಿದ್ದರೆ, ಈ ಮಾಹಿತಿ ಸಂಪೂರ್ಣವಾಗಿ ತಿಳಿಯಿರಿ, ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆ ಅನ್ನು ಕಮೆಂಟ್ ಮಾಡಿ.

ಭಾನುವಾರದ ದಿವಸದಂದು ಜನಿಸಿದಂತಹ ವ್ಯಕ್ತಿಗಳ ಅದೃಷ್ಟ ಸಂಖ್ಯೆ ಒಂದು ಆಗಿರುತ್ತದೆ, ಈ ಭಾನುವಾರದ ದಿವಸದಂದು ಜನಿಸಿದಂತಹ ವ್ಯಕ್ತಿಗಳ ವ್ಯಕ್ತಿತ್ವದ ಬಗ್ಗೆ ಹೇಳಬೇಕೆಂದರೆ ಇವರು ಕ್ರಮ ಶಿಸ್ತನ್ನ ಹೆಚ್ಚಾಗಿ ಪಾಲಿಸುತ್ತಾರೆ,ತಮ್ಮ ಎದುರು ಇರುವವರು ಕೂಡ ಅಷ್ಟೇ ಶಿಸ್ತಾಗಿ ಇರಬೇಕು ಅನ್ನುವ ಮನೋಭಾವವನ್ನು ಇವರು ಹೊಂದಿರುತ್ತಾರೆ. ಯಾವುದೆ ಕೆಲಸವನ್ನಾಗಲಿ ಪೂರ್ಣವಾಗಿ ಮುಗಿಸುವ ಒಂದು ವ್ಯಕ್ತಿತ್ವ ಇವರದ್ದಾಗಿರುತ್ತದೆ.ಮತ್ತು ಆತ್ಮವಿಶ್ವಾಸ ಹೆಚ್ಚಾಗಿರುವ ಈ ವ್ಯಕ್ತಿಗಳು, ಎಲ್ಲಿಯೆ ಕೆಲಸ ಮಾಡುತ್ತಿದ್ದರೂ ಬೇರೆಯವರ ಮಾತನ್ನು ಕೇಳಬೇಕು ಅನ್ನೊ ಒಂದು ಸನ್ನಿವೇಶ ಬಂತು ಅಂದರೆ, ಅಂಥವರು ಆ ಜಾಗದಲ್ಲಿ ಕೆಲಸವನ್ನೆ ಮಾಡಲು ಇಷ್ಟಪಡುವುದಿಲ್ಲ.

ತಂದೆ ತಾಯಿಯನ್ನು ಹೆಚ್ಚು ಪ್ರೀತಿ ಮಾಡುವ ಈ ವ್ಯಕ್ತಿಗಳು ಬಹಳ ಗೌರವವನ್ನು ಕೂಡ ತಮ್ಮ ಪೋಷಕರಿಗೆ ನೀಡ್ತಾರೆ. ಅಷ್ಟೆ ಅಲ್ಲ ಸ್ವಚ್ಛತೆಗೆ ಬಹಳ ಪ್ರಾಮುಖ್ಯತೆಯನ್ನು ನೀಡುವ ಇವರು ಸೌಂದರ್ಯಕ್ಕೂ ಬಹಳ ಪ್ರಾಮುಖ್ಯತೆಯನ್ನು ಇವರು ನೀಡುತ್ತಾರೆ.ಭಾನುವಾರ ಧರಿಸಿದಂತಹ ವ್ಯಕ್ತಿಗಳು ಕಬ್ಬಿಣದ ವ್ಯಾಪಾರವನ್ನು ಮಾಡಬೇಕು ಇದರಲ್ಲಿ ಇವರು ಹೆಚ್ಚು ಲಾಭವನ್ನು ಪಡೆದು ಕೊಳ್ತಾರೆ, ಇದರ ಜೊತೆಗೆ ವ್ಯವಸಾಯವನ್ನು ಕೂಡ ಇಂಥವರು ಮಾಡಿದರೆ ವ್ಯವಸಾಯದ ಕ್ಷೇತ್ರದಲ್ಲಿ ಕೂಡ ಇವರು ದೊಡ್ಡ ಹೆಸರನ್ನು ಮಾಡಬಹುದು.ಕ್ರೀಡೆ ಅಲ್ಲಿಯೂ ಕೂಡ ಹೆಚ್ಚು ಹೆಸರನ್ನು ಮಾಡುವಂತಹ ಒಂದು ಅವಕಾಶವನ್ನು ಈ ವ್ಯಕ್ತಿಗಳು ಪಡೆದು ಕೊಳ್ತಾರೆ ಅಷ್ಟೇ ಅಲ್ಲದೆ ಇವರು ಭಾನುವಾರದ ದಿವಸದಂದು ಸೂರ್ಯದೇವನನ್ನು ಕುರಿತು ಪೂಜೆ ಮಾಡುವುದರಿಂದ ಇವರಿಗೆ ಅದೃಷ್ಟವೂ ಒಲಿದು ಬರಲಿದೆ

ಸೂರ್ಯದೇವನ ಅನುಗ್ರಹವನ್ನು ಕೂಡ ಇವರು ಪಡೆದುಕೊಳ್ಳಬಹುದು.ಆರೋಗ್ಯ ಪರ ವಿಚಾರಕ್ಕೆ ಬಂದರೆ ಇವರು ಹೃದಯ ಮತ್ತು ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳಿಂದ ಬಳಲುತ್ತಾರೆ, ಆದ ಕಾರಣ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುವುದು ಉತ್ತಮ.ನೀವು ಉತ್ತಮವಾದ ಆರೋಗ್ಯವನ್ನು ಹೊಂದಿರುತ್ತೀರಿ. ನೀವು ಸೋಮಾರಿಗಳಂತೆ ಕೈ ಕಟ್ಟಿ ಕೂರುವವರಲ್ಲ. ಹಿಡಿದ ಕೆಲವನ್ನು ಮುಗಿಸಿಯೇ ತೀರುತ್ತೇನೆಂಬ ಹಂಬಲ ನಿಮ್ಮಲ್ಲಿರುತ್ತದೆ. ಯಾವ ಕೆಲಸವೇ ಆಗಲಿ, ಕೆಟ್ಟದ್ದಾಗಲಿ ಅಥವಾ ಒಳ್ಳೆಯದೇ ಆಗಲಿ ಒಮ್ಮೆ ನಿಮ್ಮ ಮನಸ್ಸಿನಲ್ಲಿ ಅದು ಬಂತೆಂದರೆ ನೀವು ಅದನ್ನು ಮುಗಿಸದೆ ಬಿಡುವವರಲ್ಲ. ಬುದ್ಧಿವಂತಿಕೆಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನೀವು ನಿಸ್ಸೀಮರು.

ನೀವು ಶಾಂತ ಸ್ವಭಾವದವರು ಹಾಗೂ ಕಳಂಕರಹಿತರು. ನಿಮಗೆ ಇಂದು ಬೇಕಾಗಿದ್ದದ್ದು ನಾಳೆ ಬೇಡವಾಗಬಹುದು. ಮಕ್ಕಳೆಂದರೆ ನಿಮಗೆ ತುಂಬಾ ಇಷ್ಟ. ಜೀವನದಲ್ಲಿ ಜನಪ್ರಿಯತೆ ಹಾಗೂ ಹಣ ಗಳಿಸುವ ಹಂಬಲ ತುಂಬಿದ ವ್ಯಕ್ತಿಗಳಾಗಿರುತ್ತಿರಿ. ನೀವು ದಾನ ಧರ್ಮ ಮಾಡುವ ಮನಸ್ಸುಳ್ಳವರಾಗಿರುತ್ತೀರಿ.ಭಾನುವಾರ ಜನಿಸಿದಂತಹ ವ್ಯಕ್ತಿಗಳು ಸೂರ್ಯದೇವನನ್ನು ಕುರಿತು ಪೂಜೆ ಮಾಡುವಾಗ, ಈ ಒಂದು ಮಂತ್ರವನ್ನು ಪಠಿಸಬೇಕು ಪೂಜೆ ಮಾಡುವಾಗ ಮಾತ್ರ ಅಲ್ಲ, ಪ್ರತಿ ದಿನ ಒಂದು ಮಂತ್ರವನ್ನು ಪಠಿಸುತ್ತಾ ಬರುವುದರಿಂದ ಒಳ್ಳೆಯ ಅವಕಾಶಗಳನ್ನು ಜೀವನದಲ್ಲಿ ಪಡೆದು ಕೊಳ್ತಾರೆ.ಸೂರ್ಯದೇವನನ್ನು ಪೂಜಿಸುವಾಗ ಪಡಿಸ ಬೇಕಾಗಿರುವ ಆ ಮಂತ್ರ ಹೀಗಿದೆ ಓಂ ಸಾವಿತ್ರಿ ನಮಃ ಈ ಒಂದು ಮಂತ್ರವನ್ನು ಪ್ರತಿದಿನ ಹನ್ನೊಂದು ಬಾರಿ ಪಠಿಸುವುದರಿಂದ ಒಳ್ಳೆಯದಾಗುತ್ತದೆ.

ಹಾಗೆ ಕುಟುಂಬ ಕಲಹಗಳು ಆದರೆ ಕುಟುಂಬದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವುದಕ್ಕಾಗಿ, ಭಾನುವಾರ ಜನಿಸಿದಂತಹ ವ್ಯಕ್ತಿಗಳು ತಮ್ಮ ರಾಶಿ ನಕ್ಷತ್ರ ಯಾವ ದಿವಸ ಬರುತ್ತದೆ ಎಂದು ನೋಡಿಕೊಂಡು,ಆ ದಿವಸದಂದು ಸೂರ್ಯದೇವನ ಆದಿ ದೇವತೆಯಾಗಿರುವ ನಾರಾಯಣನ ದೇವಾಲಯಕ್ಕೆ ಹೋಗಿ ಬರುವುದರಿಂದ ಸಮಸ್ಯೆಗಳು ನಿವಾರಣೆ ಆಗುತ್ತದೆ.ಇವರು ತಂದೆ ತಾಯಿಗೆ ಗೌರವ ಕೊಡುತ್ತಾರೆ. ಭಾನುವಾರ ಹುಟ್ಟಿದವರು ಕಬ್ಬಿಣದ ವ್ಯಾಪಾರ ಮಾಡಿದರೆ ಲಾಭ ಗಳಿಸುತ್ತಾರೆ. ಹಾಗೇ ರಾಜಕೀಯಕ್ಕೆ ಹೋದರೆ ಇವರಿಗೆ ಜಯ ಖಚಿತ. ಇವರಿಗೆ ಹೃದಯದ ಸಮಸ್ಯೆ ಮತ್ತು ಕಣ್ಣಿನ ಸಮಸ್ಯೆ ಎದುರಾಗುವ ಸಂಭವವಿದೆ.ಇರುವುದನ್ನು ಇರುವ ಹಾಗೆ ಹೇಳುವ ಈ ವ್ಯಕ್ತಿಗಳಿಗೆ, ಶತ್ರುಗಳು ಹೆಚ್ಚು.

ಆದರೆ ಇವರಿಗೆ ಶತ್ರುಗಳನ್ನು ಮಿತ್ರರಾಗಿಸಿಕೊಳ್ಳುವಂತಹ, ಒಂದು ಶಕ್ತಿ ಇವರಲ್ಲಿದೆ. ಇದು ಭಾನುವಾರ ಜನಿಸಿದಂತಹ ವ್ಯಕ್ತಿಗಳ ವ್ಯಕ್ತಿತ್ವ ಆಗಿರುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ