ನಮಗೆ ನಿಮಗೆ ಗೊತ್ತಿರುವ ಹಾಗೆ ಸುಮಲತಾ ಅವರಿಗೆ ಬಿಜೆಪಿಯಿಂದ ಬೆಂಬಲ ಸಿಕ್ಕಿರುವುದು ಒಂದು ದೊಡ್ಡದಾದ ಬೆಂಬಲ ಅಂತ ನಾವು ಹೇಳಬಹುದು, ಯಾಕೆಂದರೆ ಮಂಡ್ಯ ಕ್ಷೇತ್ರದಲ್ಲಿ ಕೇವಲ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳಿಗೆ ಮಾತ್ರವೇ ಸಿಕ್ಕಾಪಟ್ಟೆ ಬೆಂಬಲವಿದೆ ಆದರೆ ಅಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಬರುವಂತಹ ಚಾನ್ಸೇ ಇರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಅಂಬರೀಶ್ ಅವರ ನಿಧನದ ನಂತರ ಸುಮಲತಾ ಅವರಿಗೆ ಅಲ್ಲಿನ ಜನರು ತುಂಬಾ ಒಲವನ್ನು ನೀಡಿದ್ದಾರೆ ಹಾಗೂ ಅವರು ನಮ್ಮ ಸೊಸೆ ಅವರನ್ನು ನಾವು ಗೆಲ್ಲಿಸುತ್ತೇವೆ ಎನ್ನುವಂತಹ ಭರವಸೆಯ ಮಾತುಗಳನ್ನು ಅಲ್ಲಿನ ಜನರು ನೀಡಿದ್ದಾರೆ.
ಆದರೆ ಸುಮಲತಾ ಅವರಿಗೆ ಕಾಂಗ್ರೆಸ್ ಕಡೆಯಿಂದ ಅಭ್ಯರ್ಥಿಯ ಟಿಕೆಟ್ ಅನ್ನು ಕೊಡಲ್ಲ ಹಾಗೂ ಅವರು ಕೊನೆಯದಾಗಿ ನಾನು ಪಕ್ಷಾಂತರವಾಗಿ ನಿಂತು ಕೊಳ್ಳುತ್ತೇನೆ ಎನ್ನುವಂತಹ ನಿರ್ಧಾರಕ್ಕೆ ಬಂದಿದ್ದರು ಹಾಗೂ ಕಾರ್ಯಾಚರಣೆಯನ್ನು ಕೂಡ ಇತ್ತೀಚೆಗೆ ಇವರು ತುಂಬಾ ಚೆನ್ನಾಗಿ ಮಾಡಿದ್ದರು. ಆದರೆ ಇವರ ಕೈಗೆ ಇನ್ನಷ್ಟು ಬಲ ಬಂದಂತೆ ಆಗಿದೆ ಅದು ಏನಪ್ಪಾ ಅಂದರೆ ನಮ್ಮ ಕೇಂದ್ರದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು ಎನ್ನುವುದು ಎನ್ನುವುದು ಕೆಲವು ಯುವಕರ ಮಾತು ಎಷ್ಟೋ ಜನರು ಮೋದಿ ಗೋಸ್ಕರ ಫ್ರೀ ಪ್ರಚಾರ ಮಾಡ್ತಾ ಇರೋದು ನಿಮಗೆ ಈಗಾಗಲೇ ಗೊತ್ತ ವಿಚಾರ ಆಗಿದೆ. ಪ್ರತಿಯೊಬ್ಬರ ಕನಸನ್ನು ಪುಷ್ಟಿ ನೀಡುವ ಹಾಗೆ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಜನರನ್ನು ಕೇಳುವ ಹಾಗೆ ಅವರಿಗೆ ಕೇಂದ್ರದಲ್ಲಿ ನರೇಂದ್ರ ಮೋದಿ ಬರಲಿ ಎನ್ನುವ ಆಸೆಯೊಂದಿಗೆ ಹಾಗೂ ಮಂಡ್ಯದಲ್ಲಿ ಸುಮಲತಾ ಅವರು ಬೇಕು ಅಂತ ಅಂದರು. ಅದೇ ಕಾರಣಕ್ಕೋ ಏನೋ ಇವತ್ತು ಬಿಜೆಪಿ ಸಂಪೂರ್ಣವಾಗಿ ಸುಮಲತಾ ಅವರಿಗೆ ನಾವು ಸಪೋರ್ಟ್ ಮಾಡುತ್ತೇವೆ ಅಂತ ಮುಂದೆ ಬಂದಿದ್ದಾರೆ.
ಕಾದು ನೋಡಬೇಕಾಗಿದೆ ಏಪ್ರಿಲ್ ನಲ್ಲಿ ನಡೆಯುವಂತಹ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಆಗಿರುವಂತಹ ಸುಮಲತಾ ಅವರು ಗೆಲ್ಲುತ್ತಾರೋ ಅಥವಾ ಜೆಡಿಎಸ್ ಕುಮಾರಸ್ವಾಮಿಯವರ ಪುತ್ರ ಆಗಿರುವಂತಹ ನಿಖಿಲ್ ಕುಮಾರಸ್ವಾಮಿ ಗೆಲ್ಲುತ್ತಾರೋ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ನಾವು ಏಪ್ರಿಲ್ನಲ್ಲಿ ಪಡೆಯಬಹುದು. ಒಂದು ವಿಷಯ ಹೇಳೋಕೆ ಇಷ್ಟ ಪಡ್ತೀನಿ ಜನ ಯಾರೂ ಕೂಡ ಕಣ್ಣು ಮುಚ್ಚಿಕೊಂಡು ಕೂತ್ಕೊಂಡ್ ಇಲ್ಲ, ಜಗತ್ತಿನಲ್ಲಿ ಆಗುತ್ತಿರುವ ಅಂತಹ ವಿದ್ಯಮಾನವನ್ನು ಅವರು ಮನೆಯಲ್ಲೇ ಕೂತುಕೊಂಡು ನೋಡುತ್ತಿದ್ದಾರೆ ಅವರಿಗೆ ಗೊತ್ತು ಯಾರನ್ನು ಗೆಲ್ಲಿಸಬೇಕು ಹಾಗೂ ಯಾರನ್ನು ಗೆಲ್ಲಿಸಬಹುದು ಎನ್ನುವ ಒಂದು ನಿರ್ಣಯ ಅವರು ಏಪ್ರಿಲ್ ನಲ್ಲಿ ಮಾಡೇ ಮಾಡ್ತಾರೆ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಲೈಕ್ ಮಾಡುವುದಾಗಲಿ ಅಥವಾ ನಮ್ಮ ಪೇಜನ್ನು ಲೈಕ್ ಮಾಡುವುದಾಗಲಿ ಮರೆಯಬೇಡಿ ಯಾಕೆಂದರೆ ನೀವು ಲೈಕ್ ಮಾಡಿದರೆ ನಿಮಗೆ ಇನ್ನಷ್ಟು ಹೆಚ್ಚು, ಪ್ರೋತ್ಸಾಹ ನೀಡಿದಂತೆ ಆಗುತ್ತದೆ.ಆದ್ದರಿಂದ ನಮಗೆ ಲೈಕ್ ಮಾಡಿ.