ನಮಸ್ಕಾರ ವೀಕ್ಷಕರೇ ನಮ್ಮ ಜೀವನದಲ್ಲಿ ನಾವು ಅನೇಕ ವಿಧವಾದಂತಹ ಆಚಾರ ವಿಚಾರಗಳನ್ನು ಆಚರಿಸಿಕೊಂಡು ಬಂದಿರುತ್ತೇವೆ. ಮತ್ತು ಅಂತಹ ಆಚಾರ ವಿಚಾರಗಳು ನಮ್ಮ ದೈನಂದಿನ ಜೀವನದಲ್ಲಿ ನಾವು ಒಂದು ಒಂದು ಚಟುವಟಿಕೆಯಾಗಿ ಉಳಿದುಬಿಡುತ್ತದೆ. ಅಂತ ಚಟುವಟಿಕೆಗಳನ್ನು ನಾವು ಮಾಡಿಕೊಳ್ಳುತ್ತಾ ಹೋಗಬೇಕು ಅದನ್ನು ಯಾವುದೇ ಕಾರಣಕ್ಕೂ ತಪ್ಪಿಸಿಬಿಡಬಾರದು ಆ ರೀತಿಯಾಗಿ ತಪ್ಪಿಸಿದಾಗ ಅನೇಕ ರೀತಿಯಾದಂತಹ ಸಮಸ್ಯೆಗಳು ಬಂದು ಒದಗುತ್ತದೆ. ಸಮಸ್ಯೆ ಎನ್ನುವುದು ಮನುಷ್ಯ ಅಲ್ಲದೆ ಮರಕ್ಕೆ ಬರುತೇದೆಯೇ ಹೇಳಿ, ಆದರೆ ಅದೇ ಕಷ್ಟಗಳು ವಿಪರೀತವಾದರೆ ಅದನ್ನು ತಡೆದುಕೊಳ್ಳುವ ಶಕ್ತಿ ಆ ದೇವರು ನಮಗೆ ಕೊಡಲಿ ಎಂದು ಪ್ರಾರ್ಥಿಸೋಣ.
ಇಂತಹ ಸಮಸ್ಯೆಗಳಿಂದ ದೂರವಾಗಲು ನಾವು ಇಂದು ನಿಮಗೆ ತಿಳಿಸುವ ಈ ಎರಡು ಮಂತ್ರಗಳನ್ನು ಪಟಿಸಿ ನೋಡಿ, ಸಾಕ್ಷಾತ್ ಲಕ್ಷ್ಮೀ ದೇವಿಗೆ ಸಂಭಂದ ಪಟ್ಟ ಈ ಎರಡು ಮಂತ್ರಗಳನ್ನು ನೀವು ಪಟ್ಟಿಸಿದ್ದೆ ಆದರೆ ನಿಮ್ಮ ಜೀವನ ಸಂಪೂರ್ಣವಾಗಿ ಬದಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಈ ಮಂತ್ರವನ್ನು ಪ್ರತಿನಿತ್ಯ ಜಪಿಸುವುದರಿಂದ ಮನೆಯಿಂದ ದಾರಿದ್ರ್ಯ ದೂರವಾಗಿ ಮನೆಯಲ್ಲಿ ಮಹಾಲಕ್ಷ್ಮೀಯೂ ಸ್ಥಿರವಾಗಿ ನೆಲೆಸುತ್ತಾಳೆ.
ಗಂಡು ಮಕ್ಕಳಾಗಲಿ ಹೆಣ್ಣು ಮಕ್ಕಳಾಗಲಿ ಈ ರೀತಿಯಾದಂತಹ ವಿಧಾನಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಹೋಗುವುದನ್ನು ಯಾವಾಗಲೂ ಕೂಡ ರೂಢಿ ಮಾಡಿಕೊಳ್ಳಬೇಕು. ಹೌದು ಬೆಳ್ಳಿಗೆ ಎದ್ದ ತಕ್ಷಣ ಸ್ನಾನ ಮಾಡಿ ಶುದ್ಧವಾಗಿ, ದೃಢ ಮನಸ್ಸಿನಿಂದ ಈ ಮಂತ್ರವನ್ನು ಬೆಳ್ಳಿಗೆ 6 ರಿಂದ 7 ಗಂಟೆಯ ಒಳಗೆ ಒಂದು ಮಂತ್ರವನ್ನು ಪಟಿಸಬೇಕು. ಮತ್ತೊಂದು ಮಂತ್ರವನ್ನು ಸಾಯಂಕಾಲದ ವೇಳೆ ಅಂದರೆ ಸಂಜೆ 6 ರಿಂದ 7 ಗಂಟೆಯ ಒಳಗಾಗಿ ಮತ್ತೊಂದು ಮಂತ್ರವನ್ನು ಪಟಿಸಬೇಕು. ಈ ರೀತಿಯಾಗಿ ಪ್ರತಿ ನಿತ್ಯ ಈ ಒಂದು ಮಂತ್ರವನ್ನು ನೀವು ಪಠಿಸುತ್ತಾ ಬಂದರೆ ನಿಮ್ಮ ಮೇಲೆ ಮಹಾಲಕ್ಷ್ಮೀಯ ಅನುಗ್ರಹ ಸದಾ ಇರುತ್ತದೆ. ಅಲ್ಲದೆ ನಿಮ್ಮ ಮನಸ್ಸನ್ನು ಹಲವು ನಕಾರಾತ್ಮಕ ಕ್ರಿಯೆಗಳಿಂದ ದೂರವಿಡುತ್ತದೆ, ಹಾಗೆ ನಿಮಗೆ ರಕ್ಷಣೆಯನ್ನು ಸಹ ನೀಡುತ್ತದೆ.
ಈ ಮಂತ್ರವನ್ನು ಯಾರು ಬೇಕಾದರೂ ಸಹ ಪಠಿಸಬಹುದು, ಮಕ್ಕಳು ಕೂಡ ತಮ್ಮ ವಿದ್ಯಾಭ್ಯಾಸಕ್ಕಾಗಿ ಈ ಒಂದು ಮಂತ್ರವನ್ನು ಪಠಿಸಬಹುದು. ಇನ್ನು ಮಾಂಸಾಹಾರ ಸೇವಿಸಿದ ದಿನಗಳಲ್ಲಿ ಹಾಗೆ ಹೆಣ್ಣು ಮಕ್ಕಳು ತಮ್ಮ ಮುಟ್ಟಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಈ ಮಂತ್ರವನ್ನು ಜಪಿಸಬಾರದು. ಎಲ್ಲಾ ರೀತಿಯ ಕಷ್ಟಗಳನ್ನು ಕಳೆಯುವಂತಹ ಬಹಳ ಶಕ್ತಿಶಾಲಿ ಮಂತ್ರ ಇದಾಗಿದ್ದು, ಈ ಒಂದು ಮಂತ್ರವನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟು ಕೊಳ್ಳಿ, ಓಂ ಶ್ರೀo ಕ್ಲೀo ಲಕ್ಷ್ಮೀo ಶರಣಂ, ಈ ಮೊದಲನೇ ಮಂತ್ರವನ್ನು ಬೆಳ್ಳಿಗೆ 6 ರಿಂದ 7 ಗಂಟೆಯ ಒಳಗೆ ಪಠಿಸಬೇಕು.
ಇನ್ನು ಸಾಯಂಕಾಲದ ವೇಳೆ ಅಂದರೆ ಸಂಜೆ 6 ರಿಂದ 7 ಗಂಟೆಯ ಒಳಗೆ ಓಂ ಕ್ಲೀo ಶ್ರೀo ಲಕ್ಷ್ಮೀo ಶರಣಂ ಎನ್ನುವ ಈ ಮಂತ್ರವನ್ನು ಸಾಯಂಕಾಲ ಪಠಿಸಿ, ಇನ್ನು ಈ ಒಂದು ಮಂತ್ರವನ್ನು ಬೆಳ್ಳಿಗೆ ಹಾಗೂ ಸಂಜೆ ದೇವರಿಗೆ ಪೂಜೆಯನ್ನು ಸಲ್ಲಿಸಿ, 3 ಅಥವಾ 21 ಅಥವಾ 108 ಬಾರಿ ಪಠಿಸಬೇಕು. ಇನ್ನು ನೀವು ಕೆಲಸಗಳಲ್ಲಿ ತೊಡಗಿಕೊಂಡು ಮನೆಯಿಂದ ಹೊರಗೆ ಇದ್ದರೆ, ಅಥವಾ ಪ್ರಯಾಣ ಮಾಡುತ್ತಿದ್ದರೂ ಸರಿ, ನಾವು ಹೇಳಿದ ಸಮಯಕ್ಕೆ ದೇವಿಯನ್ನು ನೆನೆದು ಈ ಮಂತ್ರವನ್ನು ಪಠಿಸಿ ತಾಯಿ ಮಹಾಲಕ್ಷ್ಮೀಯ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾಗಿ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು, ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..