ನಿಮ್ಮ ಜೀವನದಲ್ಲಿ ಕಷ್ಟಗಳು ಹೆಚ್ಚಾಗಿದ್ದರೆ, ನಿಮಗೆ 24 ಗಂಟೆಯಲ್ಲೇ ಪರಿಹಾರ ಬೇಕು ಎನ್ನುವುದಾದರೆ, ನೀವು ಅಂದುಕೊಂಡತಹ ಕೆಲಸಗಳು ಯಾವುದೇ ತೊಂದರೆ ಇಲ್ಲದೆ ಆಗಬೇಕು ಎಂದರೆ, ಅರಳಿ ಮರದ ಮುಂದೆ ನಿಂತು ಈ ಒಂದು ಮಾತನ್ನು 11 ಬಾರಿ ಹೇಳಿಕೊಳ್ಳಬೇಕು. ಈ ಒಂದು ಮಾತನ್ನು 11 ಬಾರಿ ನೀವು ಹೇಳಿಕೊಳ್ಳುವುದರಿಂದ ವಿಶೇಷವಾಗಿ ನಿಮ್ಮ ಮೇಲೆ ದೈವ ಬಲ ಹೆಚ್ಚಾಗುತ್ತದೆ. ನೀವು ಅಂದುಕೊಂಡಂತಹ ಕೆಲಸಗಳು ಈಡೇರುತ್ತದೆ. ಯಾವುದೇ ಸಮಯವಾದರೂ ಯಾವುದೇ ದಿನವಾದರೂ ಅರಳಿ ಮರದ ಮುಂದೆ ನಿಂತು ನಿಮ್ಮ ಎಲ್ಲಾ ಕಷ್ಟಗಳನ್ನು ಹೇಳಿಕೊಳ್ಳುವುದರಿಂದ ನಿಮ್ಮ ಎಲ್ಲಾ ಕಷ್ಟಗಳು 24 ಗಂಟೆಗಳಲ್ಲಿ ಪರಿಹಾರವಾಗುತ್ತದೆ. ಹಾಗಾದರೆ ಆ ಮಾತು ಯಾವುದೇ, ಯಾವ ರೀತಿ ಆ ಮಾತನ್ನು ಹೇಳಬೇಕು ಎನ್ನುವುದನ್ನು ತಿಳಿಸುತ್ತೇವೆ ಬನ್ನಿ..
ನಿಮ್ಮ ಮನಸ್ಸಿಗೆ ತುಂಬಾ ಬೇಸರವಾದಾಗ, ಜೀವನ ಸಾಕು ಎನ್ನುವ ಭಾವನೆ ನಿಮಗೆ ಬಂದಿದೆಯಾ, ಅಥವಾ ಇನ್ಯಾವುದೋ ಸಮಸ್ಯೆ ನಿಮ್ಮ ಮನಸ್ಸಿಗೆ ಬಹಳ ದುಃಖ ಉಂಟು ಮಾಡುತ್ತಿದ್ದರೆ. ಅರಳಿ ಮರದ ಮುಂದೆ ನಿಂತು 11 ಬಾರಿ ಈ ಒಂದು ನಾಮವನ್ನು ಜಪಿಸಬೇಕಾಗುತ್ತದೆ. ಬಹಳ ಭಕ್ತಿ, ಶ್ರದ್ಧೆ, ಹಾಗೂ ಮಡಿಯಿಂದ ಈ ಒಂದು ನಾಮವನ್ನು ಜಪಿಸುತ್ತಾ ವಿಶೇಷವಾಗಿ ದೇವರ ಸಂಕಲ್ಪವನ್ನು ಮಾಡಿಕೊಳ್ಳಬೇಕು. ಅರಳಿ ಮರವನ್ನು ಮುಟ್ಟಿ ನಮಸ್ಕರಿಸಿ ಈ ಒಂದು ನಾಮವನ್ನು 11 ಬಾರಿ ಜಪಿಸಿ, ನಿಮ್ಮ ಎಲ್ಲಾ ಕಷ್ಟಗಳನ್ನು, ಆ ಮರದ ಮುಂದೆ ಹೇಳಿಕೊಳ್ಳುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.
ನಿಮ್ಮ ಯಾವುದೇ ಕಷ್ಟವಾದರೂ ಸಹ ಈ ಒಂದು ನಾಮವನ್ನು ಅರಳಿ ವೃಕ್ಷದ ಮುಂದೆ ಹೇಳಿಕೊಂಡರೆ ಎಲ್ಲವೂ ಪರಿಹಾರವಾಗುತ್ತದೆ. ನಿಮ್ಮ ಮನೆಯಲ್ಲಿ ನೆಮ್ಮದಿ ಇಲ್ಲವಾದರೆ, ಅಥವಾ ಗಂಡ ಹೆಂಡತಿ ನಡುವೆ ದಿನಾಲೂ ಜಗಳ ನಡೆಯುತ್ತಿದೆ, ಉದ್ಯೋಗದಲ್ಲಿ ತೊಂದರೆ, ಮಾಡುವ ಯಾವುದೇ ಕೆಲಸದಲ್ಲಿ ಯಶಸ್ಸು ಕಾಣಲಾಗುತ್ತಿಲ್ಲವಾದರೆ, ವಿದ್ಯಾಭ್ಯಾಸ ಅಥವಾ ಇನ್ಯಾವುದೋ ಸಮಸ್ಯೆಯಾದರೂ ಸಹ ಈ ಒಂದು ಕೆಲಸ ಮಾಡುವುದರಿಂದ ಎಲ್ಲವೂ ನಿವಾರಣೆಯಾಗುತ್ತದೆ. ನಾವು ಇಂದು ಹೇಳುವ ಈ ಒಂದು ನಾಮವನ್ನು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಿ, ಇನ್ನು ಈ ನಾಮವನ್ನು ಅರಳಿ ವೃಕ್ಷದ ಮುಂದೆ ನಿಂತು ಹೇಳಬೇಕು.
ಶ್ರೀ ರಾಮ ಜಯ ರಾಮ ಜಯ ಜಯ ರಾಮ ಎನ್ನುವ ಈ ಒಂದು ನಾಮವನ್ನು ಅರಳಿ ವೃಕ್ಷವನ್ನು ನಿಮ್ಮ ಎರಡು ಕೈಗಳಿಂದ ಮುಟ್ಟಿ ಹೇಳಿಕೊಳ್ಳಬೇಕಾಗುತ್ತದೆ. ಇನ್ನು ರಾಮ ಜಪ ಮಾಡುತ್ತಾ ರಾಮನ ಸಂಕಲ್ಪ ಮಾಡಿಕೊಳ್ಳಬೇಕು, ಹೀಗೆ ಮಾಡುವುದರಿಂದ ಶ್ರೀ ರಾಮನ ಜೊತೆಗೆ ಶ್ರೀ ಆಂಜನೇಯ ಸ್ವಾಮಿಯ ಕೃಪೆ ಕೂಡ ನಿಮಗೆ ಲಭಿಸುತ್ತದೆ. ಇನ್ನು ಕೇವಲ 24 ಗಂಟೆಯಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ದಾರಿ ಕಾಣುತ್ತದೆ. ಹೀಗೆ ವಾರಕ್ಕೆ ಒಮ್ಮೆಯಾದರೂ ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಈ ರೀತಿ ನೀವು ಒಮ್ಮೆ ಪ್ರಯತ್ನಿಸಿ ನೋಡಿ ನಿಮ್ಮ ಎಲ್ಲಾ ಕಷ್ಟಗಳು ಬಗೆಹರಿಯುವುದರ ಜೊತೆಗೆ ನಿಮ್ಮ ಮನಸ್ಸಿಗೆ ಶಾಂತಿ ಲಭಿಸುತ್ತದೆ. ಅರಳಿ ಮರವನ್ನು ಶ್ರೀ ರಾಮ ಎಂದು ಭಾವಿಸಿ ಅದನ್ನು ಪೂಜಿಸುವುದರಿಂದ ಅರಳಿ ವೃಕ್ಷ ನಿಮ್ಮ ಕಷ್ಟಗಳನ್ನು ಪರಿಹರಿಸುವಲ್ಲಿ ನಿಮಗೆ ಸಹಾಯ ಮಾಡುತ್ತದೆ. ಕೋಟಿ ದೇವರು ವಾಸವಿರುವ ಈ ಅರಳಿ ವೃಕ್ಷದ ಮುಂದೆ ನಿಂತು ನಿಮ್ಮ ಎಲ್ಲಾ ಕಷ್ಟಗಳನ್ನು ಹೇಳಿಕೊಳ್ಳುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಬಗೆ ಹರಿಯುತ್ತದೆ. ಇನ್ನು ಈ ಒಂದು ಸಂಕಲ್ಪವನ್ನು ಯಾರು ಬೇಕಾದರೂ ಯಾವಾಗ ಬೇಕಾದರೂ ಮಾಡಬಹುದು.