ಮನೇಲಿ ದಟ್ಟ ದಾರಿದ್ರ ಇದ್ದರೆ ಪರಮೇಶ್ವರನ ಅನುಗ್ರಹದಿಂದ ಆ ಸಮಸ್ಯೆಗಳನ್ನು ಪರಿಹಾರಮಾಡಿಕೊಳ್ಳಿ, ಹಾಗಾದರೆ ಆ ಪರಿಹಾರವೇನು ತಿಳಿಯೋಣ ಬನ್ನಿ ಇವತ್ತಿನ ಈ ಲೇಖನದಲ್ಲಿ…ನಮಸ್ತೆ ಪ್ರಿಯ ಸ್ನೇಹಿತರೆ ಕೆಲವೊಂದು ಮಾನವ ಮಾಡುವ ತಪ್ಪುಗಳಿಂದ ಎಂತಹ ಅಪರಾಧವಾಗುತ್ತದೆ ಅಂದರೆ ಹಿರಿಯರು ಮಾಡಿದ ತಪ್ಪುಗಳಿಂದ ಕಿರಿಯರು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಇಂತಹ ಉದಾಹರಣೆಗಳು ಬಹಳಷ್ಟು ಇವೆ ಹೌದು ಸ್ನೇಹಿತರೆ ದೊಡ್ಡವರು ಮಾಡಿದ ತಪ್ಪುಗಳಿಂದ ಇಂದು ಅವರ ಮುಂದಿನ ಪೀಳಿಗೆಯವರು ಬಹಳಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ ಮಾಡಿದ ಕೆಲಸದಲ್ಲಿ ಯಶಸ್ಸು ಸಿಗದ ಎಷ್ಟೇ ಶ್ರಮ ಹಾಕಿದರೂ ತಾವು ಅಂದುಕೊಂಡ ಫಲಿತಾಂಶ ಸಿಗದೇ ಏನು ಮಾಡಬೇಕೆಂದು ಗೊತ್ತಾಗದೆ, ಮುಂದೇನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಜೀವನದಲ್ಲಿ ಸೋತು ಹೋಗುತ್ತಾರೆ.
ಆದರೆ ದೈವಾನುಗ್ರಹದಿಂದ ಎಲ್ಲವೂ ಸಾಧ್ಯ ಯಾವುದೇ ಸಮಸ್ಯೆಗಳನ್ನು ಪರಿಹಾರ ಕೂಡ ಮಾಡಿಕೊಳ್ಳಬಹುದು, ಹಾಗಾಗಿ ಇವತ್ತಿನ ಈ ಲೇಖನಿಯಲ್ಲಿ ಪ್ರಕೃತಿಯಲ್ಲಿ ದೊರೆಯುವ ಚಿಕ್ಕ ವಸ್ತುವನ್ನು ಬಳಸಿಕೊಂಡು ನಿಮ್ಮ ಮನೆಯ ಸಮಸ್ಯೆಗಳಿಗೆ ಹೇಗೆ ಪರಿಹಾರ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಆಲದ ಮರ ಕೇಳಿರ್ತಿರಾ ಈ ಆಲದ ಮರದ ಬೇರಿನಿಂದ ನಿಮ್ಮ ಸಮಸ್ಯೆಗಳ ಪರಿಹಾರ ಮಾಡಿಕೊಳ್ಳಬಹುದು ಹೇಗೆ ಗೊತ್ತಾ ಹೌದು ಹಿಂದೂ ಸಂಪ್ರದಾಯದಲ್ಲಿ ಆಲದ ಮರವನ್ನು ಪರಮೇಶ್ವರನ ಸ್ವರೂಪವಾಗಿ ಕಾಣ್ತಾರೆ, ಹೌದು ಸ್ನೇಹಿತರೇ ಈ ಆಲದ ಮರದ ಬೇರನ್ನು ಒಮ್ಮೆ ನೋಡಿದಾಗ ಅದು ಪರಮೇಶ್ವರನ ಕೂದಲಿನ ಹಾಗೆ ಕಾಣಸಿಗುತ್ತದೆ ಹಾಗಾಗಿ ಆಲದ ಮರವನ್ನು ಪರಮೇಶ್ವರನಿಗೆ ಹೋಲಿಸುತ್ತಾರೆ
ಹಾಗೆ ಈ ಆಲದ ಮರದ ಬೇರಿನಿಂದ ಮಾಡುವ ಈ ಪರಿಹಾರ ನಿಮ್ಮ ಮನೆಯಲ್ಲಿರುವ ದುಷ್ಟಶಕ್ತಿಯನ್ನು ಪರಿಹಾರ ಮಾಡುತ್ತದೆ ಮತ್ತು ಆರ್ಥಿಕ ಸಮಸ್ಯೆಗಳ ದೂರಮಾಡುತ್ತದೆ ಹೇಗೆಂದರೆ ಆಲದ ಮರದ ಬಳಿ ಹೋಗಿ ಆ ಬೇರನ್ನು 8 ತುಂಡುಗಳಾಗಿ ಕತ್ತರಿಸಿ ಮನೆಗೆ ತಂದು ಅದನ್ನು ಅಕ್ಕಿ ಮತ್ತು ಅರಿಷಿಣ ಕುಂಕುಮದೊಂದಿಗೆ ಮಿಶ್ರ ಮಾಡಿ ಶಿವನ ವಿಗ್ರಹ ಅಥವಾ ಶಿವನ ಫೋಟೋ ಬಳಿ ಇಟ್ಟು ಮೊದಲು ಬಳಿಕ ಅದನ್ನು ಒಂದು ದಿವಸಗಳ ಕಾಲ ಅಲ್ಲಿಯೇ ಬಿಟ್ಟು ಮಾರನೇ ದಿನ ನಿಮ್ಮ ಹಣ ಇಡುವ ಸ್ಥಳದಲ್ಲಿ ಆ ಬೇರು ಅಕ್ಕಿ ಅರಿಷಿಣ ಕುಂಕುಮದ ಸಹಿತ ಕೆಂಪು ಬಟ್ಟೆಯೊಂದರಲ್ಲಿ ಕಟ್ಟಿ ಅದನ್ನು ಹಣ ಇಡುವ ಸ್ಥಳದಲ್ಲಿ ಇಡಿ ಇದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ.
ಮನೆಯಲ್ಲಿ ಆಗಾಗ ಮಕ್ಕಳು ಅಥವಾ ಮನೆಯ ಸದಸ್ಯರು ಅನಾರೋಗ್ಯ ಸಮಸ್ಯೆಗೆ ಒಳಗಾಗುತ್ತಲೇ ಇದ್ದಾರೆ ಅಥವಾ ಮನೆಯಲ್ಲಿರುವ ಯಜಮಾನ ಅಥವಾ ಗಂಡು ಮಕ್ಕಳು ಮಾಡಿದ ಕೆಲಸ ಯಶಸ್ವಿಯಾಗುತ್ತಿಲ್ಲ ಲಾಭ ಆಗುತ್ತಾ ಇಲ್ಲ ಬರಿ ನಷ್ಟದ ಸಂಭವಿಸುತ್ತದೆ ಅಂದಾಗ ಅದು ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುವುದರ ಸಂಕೇತವಾಗಿರುತ್ತದೆ. ಆಗ ಈ ಪರಿಹಾರವನ್ನು ಮಾಡಿಕೊಳ್ಳಿ ಖಂಡಿತ ಉತ್ತಮ ಫಲಿತಾಂಶ ದೊರೆಯುತ್ತದೆ ಅದೇನೆಂದರೆ ಆಲದ ಮರದ ಎಲೆಯನ್ನು ತಂದು ಅದನ್ನು ಏಲಕ್ಕಿ ಲವಂಗ ಮತ್ತು ಕರ್ಪೂರದೊಂದಿಗೆ ಇರಿಸಿ ಕರ್ಪೂರದಿಂದ ಬೆಂಕಿಯಲ್ಲಿ ಅದನ್ನು ಉರಿಸಿ ಅದರಿಂದ ಬರುವದು ಪವನ ಮನೆಯೆಲ್ಲಾ ತೋರಿಸಬೇಕು ಈ ಆಲದ ಮರದ ಎಲೆಯಿಂದ ಬರುವ ಹೊಗೆಯು ಮನೆಯಲ್ಲಿರುವ ದುಷ್ಟ ಶಕ್ತಿಯನ್ನು ದೂರ ಮಾಡುತ್ತದೆ ಹಾಗೂ ನಕಾರಾತ್ಮಕ ಶಕ್ತಿಯನ್ನು ಪರಿಹಾರ ಮಾಡುತ್ತದೆ.
ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಪರಿಹಾರವಾಗಿ ನಿಮ್ಮ ಸಮಸ್ಯೆಗಳಿಗೆ ಉತ್ತಮ ಫಲಿತಾಂಶ ದೊರೆಯುತ್ತದೆ ಮತ್ತು ಇದನ್ನು ವಾರಕ್ಕೊಮ್ಮೆ ಮಾಡುವುದರಿಂದ ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ ಹಾಗೂ ಮನೆಯ ವಾತಾವರಣ ಮನೆಯ ಸದಸ್ಯರಿಗೆ ಸಕಾರಾತ್ಮಕ ಭಾವನೆಯನ್ನು ಉಂಟು ಮಾಡಿ ತಾವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ತೋರುವಂತೆ ಮನಸ್ಸನ ಪ್ರೇರೇಪಿಸುವಂತೆ ಮಾಡುತ್ತದೆ ಹೀಗೆ ಚಿಕ್ಕ ಪರಿಹಾರದಿಂದ ಮನೆಯ ಹಲವು ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.