ಇಂದು ಹರೆಯದ ಹುಡುಗ ಹುಡುಗಿಯರಿಗೆ ಕೂದಲು ಉದುರುವುದು ತುಂಬಾ ಸಾಮಾನ್ಯವಾಗಿ ಕಾಡುವಂತಹ ಕಾಯಿಲೆಯಾಗಿದೆ, ಕೂದಲಿನಲ್ಲಿ ಅತಿಯಾದ ಹೊಟ್ಟು ಇರುವುದರಿಂದ ಕೂದಲು ಉದುರುವುದು, ಸರಿಯಾದ ಆರೈಕೆ ಪೋಷಣೆ ಇಲ್ಲದೆ ಇರುವುದರಿಂದ ಕೂದಲು ಉದುರುತ್ತದೆ ಎಂದು ಹೇಳಬಹುದು, ಅಂತಹ ಕೂದಲು ಉದುರುವ ಸಮಸ್ಯೆಗೆ ಕೆಲವು ಪರಿಹಾರಗಳನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ.
ವಾರಕ್ಕೆ ಎರಡು ಬಾರಿಯಾದರೂ ಕೂದಲನ್ನು ತೊಳೆಯಬೇಕು, ಕೂದಲಿಗೆ ರಾಸಾಯನಿಕ ವಸ್ತುಗಳಿಂದ ತಯಾರಿಸಿದ ಶಾಂಪೂಗಳನ್ನು ಉಪಯೋಗಿಸಬಾರದು.
ಒದ್ದೆ ಕೂದಲನ್ನು ಬಾಚಬಾರದು, ಒದ್ದೆ ಕೂದಲನ್ನು ಬಾಚುವುದರಿಂದ ಉಂಟಾಗುವುದು, ಹೊಟ್ಟಿನಿಂದ ಕೂದಲು ಉದುರುವುದು ಕೂದಲಿನ ಬೆಳವಣಿಗೆ ಕುಂಠಿತವಾಗುವುದು.
ಇಂದು ಬಿಳಿ ಕೂದಲಿನ ಸಮಸ್ಯೆ ಯು ಅತಿಯಾಗಿ ಚಿಕ್ಕ ವಯಸ್ಸಿನವರನ್ನು ಸಹ ಕಾಡುತ್ತಿದೆ, ಕೊಬ್ಬರಿ ಎಣ್ಣೆ ಮೆಂತ್ಯ ಬೆರೆಸಿ ಚೆನ್ನಾಗಿ ಕಾಯಿಸಿ ಪ್ರತಿದಿನ ಕೂದಲಿಗೆ ಮೆಂತ್ಯ ಬೆರೆಸಿದ ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಕೂದಲು ಬೆಳ್ಳಗಾಗುವುದಿಲ್ಲ.
ದಂಟಿನ ಸೊಪ್ಪಿನ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುವುದು, ಪ್ರತಿದಿನ ತಣ್ಣೀರಿನಲ್ಲಿ ತಲೆ ಸ್ನಾನ ಮಾಡಿದರೆ ಕೂದಲು ಉದುರುವುದಿಲ್ಲ.
ನಾವು ತಾಂಬೂಲ ವಾಗಿ ಬಳಸುವ ಅನಿಲ ಬೆಲೆಯನ್ನು ಚೆನ್ನಾಗಿ ಅರೆದು ಕೊಬ್ಬರಿ ಎಣ್ಣೆ ಬೆರೆಸಿ ಸ್ವಲ್ಪ ಕಾಯಿಸಿ ಉಗುರು ಬೆಚ್ಚಗಿನ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಕೂದಲು ಬಿಳಿಯಾಗುವುದಿಲ್ಲ.
ಮೆಂತ್ಯೆಯನ್ನು ಹಾಲಿನಲ್ಲಿ ನೆನೆಸಿ ಮರುದಿನ ನುಣ್ಣಗೆ ರುಬ್ಬಿ ಕೂದಲಿಗೆ ಹಚ್ಚಬೇಕು, ಹಾಗೆ ಮಾಡುವುದರಿಂದ ಕೂದಲು ರೇಷ್ಮೆಯಂತೆ ನುಣುಪಾಗಿರುವುದು.
ದಳದ ಎಲೆಯನ್ನು ಅರೆದು ತಲೆಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುವುದು, ಎಳ್ಳಿನ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಕೂದಲು ಉದುರುವುದಿಲ್ಲ.
ಗಮನಿಸಿ : ಕೂದಲು ಬೆಳೆಯಲು ದೇಹದಲ್ಲಿ ಉತ್ಕೃಷ್ಟವಾದ ಜೀವಸತ್ವಗಳು ಇರಬೇಕು, ಕೂದಲು ಬೆಳೆಯಲು ಸಮತೋಲನ ಆಹಾರವನ್ನು ಸೇವಿಸಬೇಕು.
ಕೂದಲಿನ ಸಮಸ್ಯೆ ಬಗ್ಗೆ ತಿಳಿಸಿಕೊಟ್ಟರು ಉಪಯುಕ್ತ ಮಾಹಿತಿ ಯು ನಿಮಗೆ ಇಷ್ಟವಾದಲ್ಲಿ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಏಕೆಂದರೆ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಒಂದು ಒಳ್ಳೆಯ ವಿಷಯ.