ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ನೋಡುವುದು ಸಧ್ಯದ ಕಣ್ಣಿನ ಸಮಸ್ಯೆಗೆ ದೊಡ್ಡ ಕಾರಣವಾಗಿದೆ, ಅಷ್ಟೇ ಅಲ್ಲದೆ ಸಾಫ್ಟ್ವೇರ್ ಉದ್ಯಮಿಗಳು ಕಂಪ್ಯೂಟರ್ ಮುಂದೆಯೇ ಇಡೀ ದಿನ ಕುಳಿತು ಕೆಲಸ ಮಾಡುವುದರಿಂದ ಅವರರಿಗೆ ಕಣ್ಣಿನ ಸಮಸ್ಯೆ ಕಾಡುವುದು ಖಚಿತ, ಅತಿ ಮುಖ್ಯವಾಗಿ ಚಿಕ್ಕಮಕ್ಕಳಿಗೆ ಮೊಬೈಲ್ ಕೊಡುವುದರಿಂದ ಅಥವಾ ಅತಿಯಾದ ಪುಸ್ತಕಗಳನ್ನು ಓದಲು ಕೊಡುವುದರಿಂದ ಚಿಕ್ಕ ವಯಸ್ಸಿನಲ್ಲೇ ಕಣ್ಣಿಗೆ ಕನ್ನಡಕ ಕಟ್ಟಿಟ್ಟ ಬುತ್ತಿ, ಅಗಾದರೆ ಏನು ಮಾಡಬೇಕು ಈ ಕಣ್ಣಿನ ಸಮಸ್ಯೆಗೆ ಪರಿಹಾರ ಆದರು ಏನು ಎಂಬುದಕ್ಕೆ ಕೆಲವು ಸೂತ್ರಗಳನ್ನು ಇಂದು ನಿಮಗೆ ನೀಡುತ್ತಿದ್ದೇವೆ.
ಕಣ್ಣಿನ ನೋವು, ಕಣ್ಣಿನಲ್ಲಿ ಕಿರಿಕಿರಿ, ಕಣ್ಣು ಕೆಂಪಾಗುವುದು, ಕಣ್ಣುರೆಪ್ಪೆಗಳು ಆಂಟಿಕೊಳ್ಳುವಂತಹ ಬಾದೆಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ, ಏಕೆಂದರೆ ಮುಂದೆ ಅದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ.
ಕಣ್ಣಿಗೆ ಬಿದ್ದ ಕಸವನ್ನು ನೀವೇ ತೆಗೆಯಲು ಪ್ರಯತ್ನಿಸಬೇಡಿ, ಇದರಿಂದ ಕಣ್ಣು ಗಾಯವಾಗುವ ಸಂಭವ ಹೆಚ್ಚು, ಅದರ ಬದಲಿಗೆ ಒಂದು ಹನಿ ಹರಳೆಣ್ಣೆಯನ್ನು ಕಣ್ಣಿಗೆ ಬಿಟ್ಟು ಪಟ್ಟಿಕಟ್ಟಿಕೊಂಡು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯ ಉಪಾಯ.
ಕಣ್ಣಿಗೆ ದೂಳು, ಹೊರಗಡೆಯ ಕಣಗಳು ಪ್ರವೇಶಿಸಿದಲ್ಲಿ ಕಣ್ಣನ್ನು ಬೆರಳುಗಳಿಂದ ಅಥವಾ ಬಟ್ಟೆಯ ಚುಂಗಿನಿಂದ ಉಜ್ಜಬೇಡಿ, ಇದರಿಂದ ಕನ್ನಿಕೆ ಬೆರಳಿಂದ ಒತ್ತಡ ಬಿದ್ದು ಕಣ್ಣು ಕೆಪಾಗುತ್ತದೆ, ಬದಲಾಗಿ ಸಮೃದ್ಧವಾದ ಸ್ವಚ್ಛವಾದ ನೀರಿನಿಂದ ತೊಳೆಯಿರಿ ಕಣ್ಣಿನಲ್ಲಿ ಬಿದ್ದ ದೂಳು ಸುಲಭ ವಾಗಿ ಸ್ವಚ್ಛವಾಗುತ್ತದೆ.
ಪ್ರತಿ ಬಾರಿ ವೈದ್ಯರು ಹೇಳುವಂತೆ ಇತರರು ಉಪಯೋಗಿಸಿದ ಕರವಸ್ತ್ರ ಮತ್ತು ಟವೆಲ್ ಗಳನ್ನು ಎಂದು ಉಪಯೋಗಿಸಬೇಡಿ.
ದಿನಕ್ಕೆ ಎರಡು ಮೂರು ಸಲ ಸ್ವಚ್ಛ ಹಾಗೂ ಸಮೃದ್ಧ ನೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳುವುದು ರೂಢಿಸಿಕೊಳ್ಳಿ, ದೂಳು ಬಿದ್ದಾಗ ಮಾತ್ರ ವಲ್ಲದೆ ದಿನ ಸ್ವಚ್ಛ ಮಾಡುವುದು ಒಳ್ಳೆ ವಿಷ್ಯ.
ಪ್ರಖರ ಬೆಳಕನ್ನು ತಪ್ಪಿಸಿ ಮಾಡುವ ಕೆಲಸಗಳಿಗನುಗುಣವಾಗಿ ಬೆಳಕನ್ನು ಹೊಂದಿಸಿಕೊಳ್ಳಿ, ಅಂದರೆ ಕಂಪ್ಯೂಟರ್ ನೋಡುತ್ತಾ ಕೆಲಸ ಮಾಡುವಾಗ ಅದರಿಂದ ಹೊರ ಬರುವ ಬೆಳಕಿನ ಸಮಾನವಾಗಿ ನಿಮ್ಮ ವಾತಾವರಣದಲ್ಲೂ ಬೆಳಕಿರುವಂತೆ ನೋಡಿಕೊಳ್ಳ ಬೇಕು.
ಮಕ್ಕಳು ಅಥವಾ ದೊಡ್ಡವರು ಯಾರೇ ಆದರೂ ಪುಸ್ತಕ ಓದುವಾಗ ಕಣ್ಣಿಗೂ ಮತ್ತು ಪುಸ್ತಕಕ್ಕೂ ಮೂವತ್ತರಿಂದ ಮೂವತ್ತೈದು ಸೆಂಟಿಮೀಟರ್ ಅಂತರ ಕಾಯ್ದುಕೊಳ್ಳಿ.
ಅಷ್ಟೇ ಅಲ್ಲದೆ ಓದುವ ಪುಸ್ತಕದ ಮುದ್ರಣ ಉತ್ತಮವಾಗಿರಬೇಕು ಮತ್ತು ಹೊಳೆಯುವ ಪೇಪರ್ನಿಂದ ಬೆಳಕು ಪ್ರತಿಫಲಿಸಬಾರದು.
ಸಾಕಷ್ಟು ಬಿ ಮತ್ತು ಸಿ ಜೀವಸತ್ವ ಒದಗಿಸುವಂತೆ ಆಹಾರವನ್ನು ಸೇವಿಸಿ.
ದೃಷ್ಟಿ ದೋಷಗಳನ್ನು ಪ್ರಾರಂಭದಿಂದಲೇ ಸರಿಪಡಿಸಲು ಕನ್ನಡಕಗಳನ್ನು ಅಥವಾ ತಜ್ಞರ ಭೇಟಿ ಮಾಡುವು ಒಳ್ಳೆಯದು.
ಕಣ್ಣಿನ ಸಂಭಂದ ಪಟ್ಟ ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.