ಶುಂಠಿ ಆಹಾರದಲ್ಲಿ ಬಳಸಲಾಗುವ ಒಂದು ಸಂಬಾರ ವಸ್ತು. ಶುಂಠಿಯನ್ನು ಔಷಧಿಗಳಲ್ಲಿ ಸಹ ಬಳಸುವರು. ಶುಂಠಿಯ ಗಿಡದ ನೆಲದೊಳಗಿನ ಭಾಗದ ಕಾಂಡವು ಶುಂಠಿಯೆನಿಸಿಕೊಳ್ಳುತ್ತದೆ, ಶುಂಠಿಯ ಕೃಷಿಗೆ ಸುದೀರ್ಘ ಇತಿಹಾಸವಿದೆ, ಇನ್ನು ನೀರಿನಲ್ಲಿ ಶುಂಠಿಯನ್ನು ಬೆರಿಸಿ ಕುಡಿಯುವುದರಿಂದ ಇರುವ ಉಪಯೋಗಗಳನ್ನ ಒಮ್ಮೆ ಓದಿ.
ಚರ್ಮ ಮತ್ತು ಕೂದಲುಗಳಿಗೆ : ಶುಂಠಿಯಲ್ಲಿರುವ ಪೋಷಕ ಸತ್ವಗಳು ಚರ್ಮವನ್ನು ಕಾಂತಿಯುತವಾಗಿ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಎ ಮತ್ತು ಸಿ ಗುಣವು ಕೂದಲುಗಳು ಸೊಂಪಾಗಿ ಬೆಳೆಯಲು ಕಾರಣವಾಗುತ್ತದೆ.
ಮಧುಮೇಹ : ಶುಂಠಿ ಮತ್ತು ನಿಂಬೆ ರಸ ಹಾಕಿದ ನೀರು ಕುಡಿಯುವುದರಿಂದ ಮೂತ್ರಪಿಂಡದ ಸಮಸ್ಯೆ ಮತ್ತು ಮಧುಮೇಹವನ್ನು ದೂರ ಮಾಡಬಹುದು.
ಜೀರ್ಣಕ್ರಿಯೆ : ಪ್ರತಿದಿನ ಶುಂಠಿ ಹಾಕಿದ ನೀರು ಸೇವಿಸುವುದರಿಂದ ಜೀರ್ಣಕ್ರಿಯೆ ಸುಗಮವಾಗಿಸುವುದಲ್ಲದೆ, ತಲೆ ಸುತ್ತುವುದು, ಎದೆಯುರಿ ಮುಂತಾದ ಸಮಸ್ಯೆ ನಿವಾರಣೆಯಾಗಬಹುದು. ಅಷ್ಟೇ ಅಲ್ಲದೆ, ಶುಂಠಿ ನೀರಿಗೆ ಸ್ವಲ್ಪ ಪುದಿನಾ ಸೊಪ್ಪು, ಜೇನು ತುಪ್ಪ ಹಾಕಿ ಸೇವಿಸುವುದರಿಂದ ಗರ್ಭಿಣಿಯರಿಗೆ ಬೆಳಗಿನ ಸಂಕಟದಿಂದ ಪಾರಾಗಬಹುದು.
ತೂಕ ಇಳಿಸಲು : ಶುಂಠಿ ಹಾಕಿದ ನೀರು ಸಕ್ಕರೆ ಅಂಶ ನಿಯಂತ್ರಿಸುವುದರಿಂದ ಅತಿಯಾಗಿ ಆಹಾರ ಸೇವಿಸುವ ಮೋಹವೂ ಕಡಿಮೆಯಾಗುವುದು. ಇದು ಕೊಬ್ಬು ಹೀರಿಕೊಳ್ಳುವ ಶಕ್ತಿ ವೃದ್ಧಿಸುವುದರಿಂದ ತೂಕ ಇಳಿಕೆಗೆ ಸಹಕಾರಿ.
ಜೊತೆಯಲ್ಲಿ ಇದನ್ನು ಒಮ್ಮೆ ಓದಿ ಪ್ರತಿದಿನದ ಟಿ ಒಳ್ಳೆಯದ ಕೆಟ್ಟದ್ದಾ.
ಟೀ ಉತ್ತೇಜಕ ಪಾನೀಯ ಟೀ ಸೇವಿಸುವುದರಿಂದ ಆಯಾಸ ಪರಿಹಾರವಾಗುವುದು ಅಲ್ಪಾಂಶ ಮೂತ್ರ ವಿಸರ್ಜನೆ ದಮ್ಮು ಅತಿ ನಿದ್ರಾವಸ್ಥೆ ಈ ಸಂದರ್ಭದಲ್ಲಿ ಟೀ ಸೇವಿಸುವುದು ಉತ್ತಮ.
ಬಿಸಿಲಿನ ಬೇಗೆಯಿಂದ ಬಹಳ ಬಳಲಿದಾಗ ಬಿಸಿಯಾದ ಟೀಗೆ ನಿಂಬೆರಸ ಹಿಂಡಿ ಸೇವಿಸುವುದರಿಂದ ಬಾಯಾರಿಕೆ ಪರಿಹಾರವಾಗುವುದು ಲವಲವಿಕೆ ಉಂಟಾಗುವುದು ಮತ್ತು ದೇಹ ತಂಪಾಗುವುದು.
ಅತಿಸಾರವುಂಟಾದಾಗ ದೇಹದಿಂದ ಹೆಚ್ಚು ಜಲಾಂಶ ನಷ್ಟವಾಗುವುದು ಈ ನಷ್ಟ ತುಂಬಲು ರೋಗಿಗೆ ದುರ್ಬಲ ಟೀ ಕುಡಿಸುವುದು ಉತ್ತಮ.
ಒಂದು ಬಾಳೆಹಣ್ಣು ತಿಂದು ಒಂದು ಬಟ್ಟಲು ಪ್ರಬಲ ಟೀ ಕಷಾಯ ಸೇವಿಸುವುದರಿಂದ ಆಮಶಂಕೆಯಾಗಲಿ ಆತ್ತಿಸಾರವಾಗಲಿ ಹತೋಟಿಗೆ ಬರುವುದು.
ಬಿಸಿಬಿಸಿಯಾದ ಒಂದು ಕಪ್ ಟೀಗೆ ನಿಂಬೆಹಣ್ಣಿನ ರಸ ಹಿಂಡಿ ಸೇವಿಸುವುದರಿಂದ ನೆಗಡಿ ಗುಣವಾಗುವುದು.
ಟೀ ಕಷಾಯ ಇಳಿಸಿದ ನಂತರ ಉಳಿಯುವ ಟೀ ಸೊಪ್ಪನ್ನು ಕಟ್ಟುವುದರಿಂದ ಹುಳುಕಡ್ಡಿ ಇಸಬು ಕರಪಾಣಿ ಇತ್ಯಾದಿ ಚರ್ಮರೋಗಗಳು ಗುಣವಾಗುವುದು.