ಶಬರಿ ಮಲೈ ದೇವಾಲಯಕ್ಕೆ ಮಹಿಳೆಯರು ಹೋದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆಯರಿಂದಲೇ ಎಚ್ಚರಿಕೆ..!!

71

ಪ್ರವಾಹದ ಕಾರಣ ಜನರ ದರ್ಶನ ನಿಲ್ಲಿಸಲಾಗಿದ್ದ ಶಬರಿ ಮಲೈ ದೇವಸ್ಥಾನವು ಇದೆ ಅಕ್ಟೊಬರ್ 17 ರಂದು ದೇವಾಲಯ ಭಕ್ತಾದಿಗಳ ದರ್ಶನಕ್ಕೆ ತಾರೆಯಲಿದ್ದು ಬಾರಿ ಕುತೂಹಲವನ್ನು ಮೂಡಿಸಿದೆ, ದೇವಾಲಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಪ್ರವೇಶಿಸಿದರೆ ತನ್ನ ಆತ್ಮಹತ್ಯಾ ದಳದ 7 ಮಹಿಳಾ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಕೇರಳ ಶಿವಸೇನಾ ಘಟಕ ಎಚ್ಚರಿಕೆ ನೀಡಿದೆ.

ಪಂಪಾ ನದಿ ತೀರದಲ್ಲಿ ಈ ಏಳು ಜನ ಮಹಿಳೆಯರು ಪ್ರತಿಭಟನೆ ಮಾಡಲಿದ್ದು ಏನಾದಳು ಮಹಿಳಾ ಭಕ್ತರು ದೇವಾಲಯ ಪ್ರವೇಶಿಸಿದರೆ ತಕ್ಷಣ ಪಾಪ ನದಿಗೆ ಬಿದ್ದು ತಮ್ಮ ಪ್ರಾಣವನ್ನು ಬಿಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ಕೇರಳ ಶಿವಸೇನಾ ನಾಯಕ ಪೆರಿಂಗಮ್ಮಾಳ್‌ ಆಜಿ ಶನಿವಾರ ತಿಳಿಸಿದ್ದಾರೆ.

ಈನು ಈ ಕಡೆ ದೇವಾಲಯದ ಶಬರಿಮಲೆ ಅಯ್ಯಪ್ಪ ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಪ್ರಯರ್‌ ಗೋಪಾಲಕೃಷ್ಣನ್‌ ಕೂಡ ಆಘಾತಕಾರಿ ಹೇಳಿಕೆ ನೀಡಿದ್ದಾರೆ, ಅದೇನೆಂದರೆ ದೇಗುಲ ಪ್ರವೇಶಿಸುವ ಮಹಿಳೆಯರನ್ನು ಹುಲಿಗಳು ಹಾಗೂ ಪುರುಷರು ಹಿಡಿಯಲಿದ್ದಾರೆ, ಮಹಿಳೆಯರು ಒಳಗೆ ಬರುವ ಪ್ರಯತ್ನ ಮಾಡಬೇಡಿ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಇನ್ನು ಈ ಶಬರಿ ಮಲೈ ದೇವಾಲಯಕ್ಕೆ ಮಹಿಳೆಯರಿಗೂ ದರ್ಶನ ಆದೇಶ ನೀಡಿರುವ ಕೋರ್ಟ್ನ ತೀರ್ಪಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನ ಮರೆಯದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಇದನ್ನು ಒಮ್ಮೆ ಓದಿ ನಿಮಗೆ ಇಷ್ಟವಾಗಬಹುದು ಯಾವುದೇ ದೇವಸ್ಥಾನಕ್ಕೆ ಹೋದರು ಮೊದಲು ಈ ನಿಯಮಗಳನ್ನ ಪಾಲಿಸಲೇಬೇಕೆ.

ನೀವು ಯಾವುದೇ ದೇವಸ್ಥಾನಕ್ಕೆ ಹೋದರೂ ಮೊದಲಿಗೆ ದೇವರ ಮುಂದೆ ಇರುವ ಧ್ವಜಸ್ತಂಭವನ್ನು ದರ್ಶನ ಮಾಡಬೇಕು.

ಶಿವಾಲಯಕ್ಕೆ ಹೋಗಿದ್ದಾಗ ಮೊದಲಿಗೆ ನವಗ್ರಹವನ್ನು ಪ್ರದರ್ಶನಮಾಡಿಕೊಂಡು ಕಾಲನ್ನು ತೊಳೆದು ನಂತರ ಶಿವದರ್ಶನ ಪಡೆಯಬೇಕು.

ವಿಷ್ಣು ಆಲಯಕ್ಕೆ ಹೋಗಿದ್ದಾಗ ಮೊದಲಿಗೆ ವಿಷ್ಣು ದೇವರ ದರ್ಶನ ಮಾಡಿ ನಂತರ ಬೇರೆ ದೇವರ ದರ್ಶನ ಪಡೆಯಬೇಕು, ಹಾಗೆಯೇ ಮೊದಲಿಗೆ ದೇವರ ಪಾದವನ್ನು ದರ್ಶನ ಮಾಡಿದ ನಂತರ ವಿಗ್ರಹದ ದರ್ಶನ ಪಡೆಯಬೇಕು.

ಎಷ್ಟು ಪ್ರದಕ್ಷಿಣೆ ಹಾಕಬೇಕೆಂದರೆ.

ವಿನಾಯಕನಿಗೆ – 1

ಈಶ್ವರನಿಗೆ – 3

ಹೆಣ್ಣು ದೇವತೆಗಳಿಗೆ – 4

ವಿಷ್ಣು ಮೂರ್ತಿಗೆ – 4

ಆಲದ ಮರಕ್ಕೆ – 7

ಶಿವನಿಗೆ ಅಭಿಷೇಕ, ಸೂರ್ಯನಿಗೆ ನಮಸ್ಕಾರ, ವಿಷ್ಣುವಿಗೆ ಅಲಂಕಾರ, ವಿನಾಯಕನಿಗೆ ನೈವೇದ್ಯ, ಹೆಣ್ಣು ದೇವತೆಗಳಿಗೆ ಕುಂಕುಮ ಅರ್ಚನೆ ಅಂದರೆ ತುಂಬಾ ಇಷ್ಟ ಶಿವಲಿಂಗಕ್ಕೆ ಮತ್ತು ನಂದೀಶ್ವರ ಮಧ್ಯದಲ್ಲಿ ಸಾಮಾನ್ಯ ಮನುಷ್ಯರು ನಡೆಯಬಾರದು.

ದೇವಸ್ಥಾನಕ್ಕೆ ಹೋಗಿದ್ದಾಗ ವಿಗ್ರಹಕ್ಕೆ ನೇರವಾಗಿ ನಿಂತುಕೊಂಡು ನಮಸ್ಕಾರ, ಸ್ತ್ರೋತ್ರ ಹೇಳಬಾರದು ಪಕ್ಕದಲ್ಲಿ ನಿಂತು ಕೈ ಜೋಡಿಸಿ ನಮಸ್ಕಾರ ಮಾಡಬಾರದು, ಪುರುಷರು ದೇವರಿಗೆ ಸಾಷ್ಟಂಗ ನಮಸ್ಕಾರ ಮಾಡಬಹುದು, ಆದರೆ ಸ್ತ್ರೀಯರು ಮಾಡಬಾರದು. ಅರ್ಧ ಮಂಡಿ ಊರಿ ಹಣೆಯನ್ನು ನೆಲಕ್ಕೆ ತಾಗುವಂತೆ ನಮಸ್ಕಾರ ಮಾಡಬೇಕು, ಸ್ತ್ರೀಯರು ದೇವಾಲಯದಲ್ಲಿ ಓಂಕಾರ ಜಪಿಸಬಾರದು.

ಭಾನುವಾರ ಸೂರ್ಯನ ದೇವಸ್ಥಾನ, ಸೋಮವಾರ ಈಶ್ವರ ಮತ್ತು ಗೌರಿಯ ದೇವಸ್ಥಾನ, ಮಂಗಳವಾರ ಆಂಜನೇಯ ಸ್ವಾಮಿ ಮತ್ತು ಸುಬ್ರಹ್ಮಣ್ಯ ಸ್ವಾಮಿ, ಬುಧವಾರ ವಿನಾಯಕ ಮತ್ತು ಅಯ್ಯಪ್ಪ ಸ್ವಾಮಿ, ಗುರುವಾರ ಸಾಯಿಬಾಬ ಮತ್ತು ದತ್ತಾತ್ರೇಯ ಸ್ವಾಮಿ, ಶುಕ್ರವಾರ ಹೆಣ್ಣು ದೇವರುಗಳು, ಶನಿವಾರ ವೆಂಕಟೇಶ ಸ್ವಾಮಿ ಮತ್ತು ವೈಷ್ಣವ ದೇವಾಲಯಗಳಿಗೆ ದರ್ಶನ ಮಾಡಿದರೆ ಒಳ್ಳೆಯದು.

ನಾವು ದೇವಸ್ಥಾನಕ್ಕೆ ಹೋಗಿದ್ದಾಗ ಈ ನಿಯಮಗಳನ್ನು ಭಕ್ತಿ ಶ್ರದ್ಧೆ ಇಂದ ಪಾಲಿಸಿದರೆ ಸಾಕ್ಷಾತ್ ಆ ಭಗವಂತನು ನಮ್ಮ ಹಿಂದೆಯೇ ನಮ್ಮ ಮನೆಗೆ ಬರುವುದು ಖಂಡಿತಾ.

LEAVE A REPLY

Please enter your comment!
Please enter your name here