ಚಂಢಿಗಡ್ ನ ಫಝಿಲ್ಕಾ ಜಿಲ್ಲೆಯ ಕುಂದಾಲ್ ಹಳ್ಳಿಯ ಶಾಲೆಯಲ್ಲಿ ಗುರುವಾರ ಟಾಯ್ಲೆಟ್ ಒಂದರಲ್ಲಿ ಸ್ಯಾನಿಟರಿ ಪ್ಯಾಡ್ ದೊರೆತ ಕಾರಣ ಕೋಪಗೊಂಡ ಶಿಕ್ಷಕನ ಇದು ಯಾರ ಸ್ಯಾನಿಟರಿ ಪ್ಯಾಡ್ ಎಂದು ತಿಳಿಯಲು ಶಾಲೆಯ ಮುಖ್ಯ ಆವರಣದಲ್ಲಿಯೇ ವಿದ್ಯಾರ್ಥಿನಿಯರ ಬಟ್ಟೆ ಕಳಚಿದ ಅಮಾನವೀಯ ಕೃತ್ಯವನ್ನು ನಡೆದಿದೆ, ಈ ಕೃತ್ಯದ ವಿಡಿಯೋ ಲೀಕ್ ಆಗಿದ್ದು, ಶಾಲೆಯ ಮಕ್ಕಳು ಆವರಣದಲ್ಲಿ ಬಟ್ಟೆ ಬಿಚ್ಚಿಸಿದ ಕಾರಣ ಅವಮಾನದಿಂದ ಬಿಕ್ಕಿಬಿಕ್ಕಿ ಅಳುತ್ತಿರುವುದು ಸೆರೆಯಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪಂಜಾಬ್ ನ ಮುಖ್ಯಮಂತ್ರಿ ಆದ ಅಮರಿಂದರ್ ಸಿಂಗ್ ಅವರವರೆಗೂ ತಲುಪಿದೆ, ಈ ವಿಡಿಯೋ ನೋಡಿ ಕುಪಿತರಾದ ಅವರು ತಕ್ಷಣವೇ ಆ ಶಾಲೆಯಲ್ಲಿ ತನಿಖೆ ನಡೆಸುವಂತೆ ಹಾಗೂ ಸೂಕ್ತ ನಿರ್ಧಾರವನ್ನ ತೆಗೆದುಕೊಳ್ಳಬೇಕೆಂದು ರಾಜ್ಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಕ್ರಿಶನ್ ಕುಮಾರ್ ಅವರಿಗೆ ಆದೇಶ ನೀಡಿದ್ದಾರೆ.
ಈ ಸಂಬಂಧ ತನಿಖಾ ವರದಿ ಬಂದ ತಕ್ಷಣ ಆ ಶಿಕ್ಷಕರ ವಿರುದ್ಧ ಕಠಿಣ ಶಿಸ್ತಿನ ಕ್ರಮವನ್ನ ತೆಗೆದುಕೊಳ್ಳುತ್ತೇವೆ ಎಂದು ಪಂಜಾಬ್ ಸರ್ಕಾರ ತಿಳಿಸಿದೆ, ಅಂತಿಮ ವಿಚಾರಣೆಯ ವರದಿಯನ್ನ ವೈಯಕ್ತಿಕವಾಗಿ ತಿಳಿಸಲು ಕ್ರಿಶನ್ ಕುಮಾರ್ ಅವರಿಗೆ ಮುಖ್ಯಮಂತ್ರಿ ಅವರು ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಟಾಯ್ಲೆಟ್ ನಲ್ಲಿ ಸ್ಯಾನಿಟರಿ ಪ್ಯಾಡ್ ದೊರೆತಾಗ, ಅದರ ಬಗ್ಗೆ ಅಥವಾ ಸ್ವಚ್ಛತೆಯ ಬಗ್ಗೆ ಮಕ್ಕಳಿಗೆ ತಿಳಿ ಹೇಳುವ ಕಾರ್ಯವನ್ನು ಮಾಡಬೇಕಾದ ಶಿಕ್ಷಕರು ಈ ರೀತಿಯ ಕ್ರೌರ್ಯವನ್ನು ಮೆರೆದಿರುವುದು ನಿಜವಾಗಲೂ ಶೋಚನೀಯ ಸಂಗತಿ, ಈ ಶಿಕ್ಷಕನನ್ನು ಎತ್ತಂಗಡಿ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದರು, ಇಂತಹ ಕೀಳು ಮನಸ್ಥಿತಿ ಯನ್ನು ಹೊಂದಿರುವ ರನ್ನು ಶಾಲೆಯ ಶಿಕ್ಷಕನಾಗಿ ನೇಮಿಸುವುದು ಎಷ್ಟು ಸರಿ ಎಂಬುದನ್ನು ಹಾಗೂ ನಿಮ್ಮ ಅನಿಸಿಕೆಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.