Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ವೃಶ್ಚಿಕ ರಾಶಿಯವರು ಈ ಒಂದು ಚಿಕ್ಕ ಕೆಲಸವನ್ನು ಮಾಡಿಕೊಂಡರೆ ಸಾಕು ಇವರು ಜೀವನದಲ್ಲಿ ಉತ್ತುಂಗ ಸ್ಥಾನವನ್ನು ತಲುಪುತ್ತಾರೆ ….!!!

ರಾಶಿಗಳಲ್ಲಿ ಈ ರಾಶಿಯವರಿಗೆ ತುಂಬಾ ಅಮೋಘವಾದ ಶಕ್ತಿ ಇರುತ್ತದೆ ಹಾಗಾದರೆ ಈ ರಾಶಿ ಯಾವುದು ಮತ್ತು ಈ ರಾಶಿಯವರ ಸ್ವಭಾವ ಏನು ನೋಡಿ ತಿಳಿದುಕೊಳ್ಳಿ.12 ರಾಶಿಗಳಿಗೆ 12 ರೀತಿಯ ಮನುಷ್ಯರು.ಜ್ಯೋತಿಷ್ಯದಲ್ಲಿ ಇಪ್ಪತೇಳು ನಕ್ಷತ್ರ, ನೂರಾ ಎಂಟು ಪಾದ, ಹನ್ನೆರಡು ರಾಶಿಗಳಿವೆ. ಇಂಥ ರಾಶಿಯವರ ಗುಣ ಹೀಗೆ ಎಂದು ಹೇಳುವಂತೆಯೇ ನಕ್ಷತ್ರ ಹಾಗೂ ಲಗ್ನದ ಆಧಾರದಲ್ಲಿಯೂ ವ್ಯಕ್ತಿಯ ಗುಣ, ಶಕ್ತಿ, ದೌರ್ಬಲ್ಯಗಳನ್ನು ತಿಳಿಯಬಹುದು.
ಎಲ್ಲಾ ರಾಶಿಗಳಿಗೂ ಅದರದ್ದೇ ಆದ ವಿಶೇಷ ಲಕ್ಷಣಗಳಿವೆ.

ಅದರಲ್ಲೂ ವೃಶ್ಚಿಕ ರಾಶಿಯವರು ತುಂಬಾ ಅಮೋಘ ಶಕ್ತಿ ಉಳ್ಳವರು. ಹಾಗಾದರೆ ವೃಶ್ಚಿಕ ರಾಶಿಯ ಗುಣಲಕ್ಷಣ ನಾವೀಗ ತಿಳಿದುಕೊಳ್ಳೋಣ. ವೃಶ್ಚಿಕ ರಾಶಿಯ ಜಲ ತತ್ವವನ್ನು ಸೂಚಿಸುತ್ತದೆ. ಈ ವೃಶ್ಚಿಕ ರಾಶಿಗೆ ಬಲಿಷ್ಠವಾದ ಕುಜಗ್ರಹ ಅಧಿಪತಿ. ಹಾಗಾಗಿ ವೃಶ್ಚಿಕ ರಾಶಿಯಲ್ಲಿ ಹುಟ್ಟಿದವರು ತುಂಬಾ ಧೈರ್ಯವಂತರು ಇಷ್ಟವಾದವರು ಮತ್ತು ನಿಷ್ಠಾವಂತರು ಆಗಿರುತ್ತಾರೆ. ಹಾಗೆಯೇ ಈ ರಾಶಿಯವರು ಎಂಥ ಕಷ್ಟದ ಸಮಯದಲ್ಲೂ ಇವರು ಅಂದುಕೊಂಡಂತೆ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ ಹಾಗೆಯೇ ಇವರು ಯಾರಿಗೂ ಸೋಲುವುದಿಲ್ಲ ಒಂದು ಸಲ ನಿರ್ಧಾರ ಮಾಡಿದರೆ ಅದು ಎಂತಹದೇ ಕೆಲಸವಾದರೂ ಮಾಡಿ ತೋರಿಸುತ್ತಾರೆ.

ವೃಶ್ಚಿಕ ರಾಶಿಯವರು ತುಂಬಾ ಸ್ವಾಭಿಮಾನಿಗಳು ಹಾಗೂ ಸ್ವಾವಲಂಬಿಗಳು ಕೂಡ ಆಗಿರುತ್ತಾರೆ. ಅಷ್ಟೇ ಮುಂಗೋಪಿಗಳು ಕೂಡ ಆಗಿರುತ್ತಾರೆ ಅವರ ತನವನ್ನು ಅವರು ಎಂದಿಗೂ ಯಾರ ಮುಂದೆ ಬಿಟ್ಟುಕೊಡುವುದಿಲ್ಲ. ಈ ರಾಶಿಯವರು ಮುಂಗೋಪಿ ಆಗಿರುವುದರಿಂದ ಇವರು ಸಣ್ಣ ಸಣ್ಣ ವಿಷಯಗಳಿಗೂ ಕೂಡ ತುಂಬಾ ಟೆನ್ಶನ್ ಮಾಡಿಕೊಳ್ಳುತ್ತಾರೆ. ಈ ರಾಶಿಯವರು ತಮ್ಮಲ್ಲಿರುವ ರಹಸ್ಯವನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ. ಹಾಗೆಯೇ ಇವರು ಯಾರಾದರೂ ಬೇರೆಯವರೊಂದಿಗೆ ಚೆನ್ನಾಗಿದ್ದರೆ ಹೊಟ್ಟೆಕಿಚ್ಚು ಪಡುತ್ತಾರೆ ಅಂದರೆ ಅಷ್ಟು ಇಷ್ಟ ಪಡುತ್ತಾರೆ

ಅವರು ಪ್ರೀತಿಸುವ ವ್ಯಕ್ತಿ ಅವರನ್ನು ಮಾತ್ರ ಪ್ರೀತಿಸಬೇಕು ಎಂದು ಪೊಸೆಸ್ಸಿವ್ ಇಟ್ಟುಕೊಂಡಿರುತ್ತಾರೆ. ಈ ರಾಶಿಯವರು ಎಷ್ಟು ಬಲಿಷ್ಠವಾಗಿ ಇರುತ್ತಾರೆ ಅಷ್ಟೇ ಒಳಗೆ ಭಯವನ್ನು ತುಂಬಿ ಕೊಂಡಿರುತ್ತಾರೆ ಏಕೆಂದರೆ ಅವರು ಬೇರೆಯವರ ಮುಂದೆ ಸೋಲಲು ಇಷ್ಟಪಡುವುದಿಲ್ಲ. ಕುಟುಂಬದಲ್ಲಿ ಹಾಗೂ ಎಲ್ಲರ ಹತ್ತಿರ ಅವರದ್ದೇ ಆಗಬೇಕು ಅವರು ಹೇಳಿದ್ದೆ ಆಗಬೇಕು ಎಂದುಕೊಳ್ಳುತ್ತಾರೆ ಅಂದರೆ ಇವರು ಸರ್ವಾಧಿಕಾರಿಗಳಾಗಿ ಇರುತ್ತಾರೆ. ಭಾವನಾತ್ಮಕವಾಗಿ ತುಂಬಾ ಹತ್ತಿರವಾಗಿ ಇರುವುದಿಲ್ಲ ಈ ರಾಶಿಯವರು.

ಹಾಗೆಯೇ ಇವರು ಯಾರರ ಮುಂದೆ ಸೋತರೆ ಅವರನ್ನು ದ್ವೇಷಿಸುತ್ತಾರೆ. ಛಲ ಹಟ ಎಂಬುದು ಇವರಿಗೆ ತುಂಬಾ ಇರುತ್ತದೆ ಮತ್ತು ಇವರು ತುಂಬಾ ಇನ್ನೋಸೆಂಟ್ ಆಗಿರುವುದಿಲ್ಲ. ಹಾಗೆಯೇ ಎಲ್ಲಾ ಜನರೊಂದಿಗೆ ಪುಟ್ಟ ಪುಟ್ಟ ವಿಷಯಗಳಿಗೂ ಅನುಮಾನ ಪಡುತ್ತಾರೆ. ಯಾರನ್ನು ಅಷ್ಟು ಬೇಗ ನಂಬೋದಿಲ್ಲ. ಬೇರೆಯವರನ್ನು ಅಪಹಾಸ್ಯ ಮಾಡುವುದು ಮತ್ತು ಅವರನ್ನು ನೋಯಿಸುವುದು ಮಾಡುತ್ತಾರೆ. ವೃಶ್ಚಿಕ ರಾಶಿಯವರಿಗೆ ಆರೋಗ್ಯ ವಿಷಯ ಬಂದರೆ ಇವರಿಗೆ ರಕ್ತದೊತ್ತಡ ಮತ್ತು ಕಿಡ್ನಿ ಸಮಸ್ಯೆ ಹೆಚ್ಚಾಗಿ ಇರುತ್ತದೆ ಹಾಗೆಯೇ ಮೂಳೆಯ ವಿಷಯಕ್ಕೆ ಬಂದರೆ ಕೈ ಮೂಲೆ ಹಾಗೂ ಕಾಲು ಮೂಲೆಗಳಲ್ಲಿ ಅಥವಾ ಸಂದುಗಳಲ್ಲಿ ನೋವುಗಳು ಕಾಣಿಸುತ್ತವೆ.

ಹಾಗಾಗಿ ಇವರು ಆರೋಗ್ಯ ವಿಷಯದಲ್ಲಿ ತುಂಬಾ ಜಾಗೃತೆಯಿಂದ ಇರಬೇಕು. ಇವರು ಬಲಿಷ್ಠರು ಆದ್ದರಿಂದ ಇವರು ಯಾವುದೇ ಕಷ್ಟಕರವಾದ ಕೆಲಸಗಳನ್ನು ಕೂಡ ಮಾಡುತ್ತಾರೆ ಉದಾಹರಣೆಗೆ ಮೆಕ್ಯಾನಿಕಲ್ ವರ್ಕ್ ಹಾಗೂ ಯಾವುದೇ ಕಾಂಟ್ರಾಕ್ಟ್ ವರ್ಕ್ ಗಳನ್ನು ಕೂಡ ಮಾಡಬಹುದು ಮತ್ತು ಅದರಿಂದ ಇವರಿಗೆ ಅನುಕೂಲವಾಗಿರುತ್ತದೆ ಏಕೆಂದರೆ ತುಂಬಾ ಶಕ್ತಿವಂತರಾಗಿ ಇರುತ್ತಾರೆ. ಅಪ್ಪಿತಪ್ಪಿ ಇವರು ಕ್ರೀಡಾಕ್ಷೇತ್ರಕ್ಕೆ ಹೋದರೆ ತುಂಬಾ ಒಳ್ಳೆಯದು ಏಕೆಂದರೆ ಇವರು ಗಟ್ಟಿಯಾಗಿರುತ್ತಾರೆ. ಹಾಗೆ ಇವರಿಗೆ ಶುಭ ಸಂಖ್ಯೆಗಳು ಯಾವವು ಎಂದರೆ 1,3 5,6 ಆಗಿರುತ್ತವೆ.

ಹಸಿರು ಕೇಸರಿ ಬಿಳಿ ಬಣ್ಣ ಇವರಿಗೆ ತುಂಬಾ ಶುಭವಾಗಿರುತ್ತದೆ. ಕೆಂಪು ಮತ್ತು ಕಪ್ಪು ಬಣ್ಣವನ್ನು ಇವರು ಧರಿಸಬಾರದು. ಏಕೆಂದರೆ ಕಪ್ಪು ಮತ್ತು ಕೆಂಪು ಬಣ್ಣ ಕುಜನಿಗೆ ವಿರುದ್ಧವಾದದ್ದು. ಧನಹಾನಿ ಆರೋಗ್ಯ ಹಾನಿ ಆಗುತ್ತವೆ. ಹಾಗೆಯೇ ವೃಶ್ಚಿಕ ರಾಶಿಯವರಿಗೆ ಜೀವನದಲ್ಲಿ ಅಭಿವೃದ್ಧಿ ಆರೋಗ್ಯದಲ್ಲಿ ತೊಂದರೆ ನಷ್ಟ ಉಂಟಾದರೆ ಇದಕ್ಕೆ ಪರಿಹಾರ ನೀವು ಪ್ರತಿ ಮಂಗಳವಾರ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ ಮಾಡಿಸುವುದು ಮತ್ತು ಶನೈಶ್ಚರ ಸ್ವಾಮಿಯನ್ನು ಆರಾಧಿಸುವುದನ್ನು ಮಾಡಬೇಕು ಕಪ್ಪು ಮತ್ತು ಕೆಂಪು ಬಣ್ಣದ ಬಟ್ಟೆಯನ್ನು ದಾನಮಾಡುವುದರಿಂದ ನಿಮಗೆ ಪರಿಹಾರ ಸಿಗುತ್ತದೆ. ಹಾಗಾದರೆ ಸ್ನೇಹಿತರೆ ವೃಶ್ಚಿಕ ರಾಶಿ ಅವರ ಸ್ವಭಾವ ಗುಣಲಕ್ಷಣ ನಿಮಗೀಗ ತಿಳಿದಿದೆ ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಆಗಲಿ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ