ಹಿಂದಿನ ಕಾಲದಲ್ಲಿ ಉಪ್ಪು ತುಂಬಾ ಮಹತ್ವವನ್ನ ಪಡೆದಿತ್ತು ಹಾಗು ಅದರ ಮೌಲ್ಯವು ಹೆಚ್ಚಿತ್ತು, ಉಪ್ಪಿನ ಹಿತಿಹಾಸ ನೋಡಿದರೆ, ಉಪ್ಪಿಗೋಸ್ಕರ ಎಷ್ಟೋ ಯುದ್ಧಗಳೇ ನಡೆದು ಹೋಗಿದೆ ಯಾಕೆಂದರೆ ಉಪ್ಪಿನ ಮಹತ್ವ, ಅರಿವು, ಉಪಯೋದ ಬಗ್ಗೆ ಅರಿವಿತ್ತು ಎಂದರೆ ತಪ್ಪಾಗಲಾರದು ಹಾಗಾದರೆ ರುಚಿಗೆ ಬಿಟ್ಟು ಉಪ್ಪನ್ನು ಇನ್ನು ಯಾವರೀತಿಯಲ್ಲಿ ಬಳಸ ಬಹುದು ಮುಂದೆ ಓದಿ.
ಹಣ್ಣು ಹಾಗು ತರಕಾರಿ ಶುದ್ದೀಕರಿಸಲು : ಒಂದು ಪಾತ್ರೆಯಲ್ಲಿ ನೀರನ್ನು ತುಂಬಿ ಅದರಲ್ಲಿ ಸ್ವಲ್ಪ ಉಪ್ಪನ್ನು ಹಾಕಿ ಅದರಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಇಟ್ಟು ಎರಡು ನಿಮಿಷ ಬಿಟ್ಟು ಶುದ್ಧ ನೀರಿನಲ್ಲಿ ತೊಳೆಯುವುದರಿಂದ ಹಣ್ಣುಗಳು ಹಾಗು ತರಕಾರಿಗಳು ತನ್ನ ತಾಜಾತನವನ್ನು ಕಾಯ್ದುಕೊಳ್ಳುತ್ತದೆ ಹಾಗು ಶುದ್ಧವಾಗುತ್ತದೆ.
ಲೋಹದ ಪಾತ್ರೆಗಳ ಕಲೆ ತೆಗೆಯಲು : ತಾಮ್ರ ಹಾಗು ಹಿತ್ತಾಳೆಯ ಪಾತ್ರೆಗಳ ಹಾಗು ಸಾಮಗ್ರಿಗಳ ಮೇಲೆ ಉಂಟಾಗುವ ಕಲೆಗಳನ್ನು ಉಪ್ಪು ಮತ್ತು ಇದ್ದಿಲು ಅಥವಾ ನಿಂಬೆ ರಸ ಅಥವಾ ಉಪ್ಪು ಮತ್ತು ಹುಣಸೆ ಹಣ್ಣಿನ ಮಿಶ್ರಣದಿಂದ ಉಜ್ಜಿ ತೊಳೆಯುವುದರಿಂದ ಕಲೆ ಮಾಯವಾಗುತ್ತದೆ.
ಮರದ ಪೀಠೋಪಕರ ನಿರ್ವಹಣೆ : ಸ್ವಲ್ಪ ಬೆಚ್ಚನೆಯ ನೀರಿನಲ್ಲಿ ಸ್ವಲ್ಪ ಉಪ್ಪನ್ನು ಬೆರೆಸಿ, ಒಂದು ಬಟ್ಟೆಯನ್ನು ನೆನೆಸಿ ಅದರಿಂದ ಮರದ ಪೀಠೋಪಕರಣ ಶುದ್ದಿ ಮಾಡುವುದರಿಂದ ಗೆದ್ದಲು ಹಿಡಿಯುವುದಿಲ್ಲ.
ಇರುವೆಗಳನ್ನು ದೂರವಿಡುತ್ತದೆ : ಇರುವೆಗಳು ಸಿಹಿ ಪದಾರ್ಥ ಇದ್ದಲ್ಲಿ ಅಥವಾ ಅಡುಗೆಮನೆಯಲ್ಲಿ ಕಾಣಿಸಿ ಕೊಳ್ಳುತ್ತದೆ, ಅಂತಹ ಅಥವಾ ನಿಮಗೆ ಇರುವೆ ಕಂಡ ಕಡೆಯಲ್ಲಿ ಉಪ್ಪನ್ನು ಸುರಿದರೆ ಇರುವೆ ಮಾಯವಾಗುತ್ತದೆ.
ಹಲ್ಲಿನ ರಕ್ಷಣೆ : ನೀವು ದಿನ ನಿತ್ಯ ಬಳಸುವ ಉಪ್ಪಿನ ಜೊತೆಯಲ್ಲಿ ಸ್ವಲ್ಪ ಉಪ್ಪನ್ನು ಬೆರೆಸಿ ಉಜ್ಜಿದರೆ ಹಲ್ಲಿನ ಮೇಲೆ ಇರುವ ಹಳದಿ ಲೇಪನ ಮಾಯವಾಗುತ್ತದೆ ಹಾಗು ಒಸಡು ಗಟ್ಟಿಯಾಗುತ್ತದೆ.