ನಮಸ್ಕಾರ ಸ್ನೇಹಿತರೆ.. ಸಾಯಿಬಾಬಾ ಎಂದರೆ ಎಲ್ಲರಿಗೂ ಕೂಡ ಇಷ್ಟವಾದ ಅಂತಹ ದೇವರು.ಸಾಯಿಬಾಬನ ಅನುಗ್ರಹ ನಮ್ಮ ಮೇಲೆ ಆದರೆ ನಮಗೆ ಅಂದರೆ ನಮ್ಮ ಜೀವನದಲ್ಲಿ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯೂ ಕೂಡ ಇದೆ.ಈ ಸಾಯಿಬಾಬಾ ತಮ್ಮ ಭಕ್ತರಿಂದ ಅವರವರ ವೈಯಕ್ತಿಕ ಒಲವುಗಳು ಹಾಗೂ ನಂಬಿಕೆಗಳ ಪ್ರಕಾರ ಒಬ್ಬ ಸಂತ ಪಕೀರ ಅವತಾರ ಅಥವಾ ಸದ್ಗುರು ಎಂದು ಪರಿಗಣಿಸಲಾಗಿದ್ದ ಅಥವಾ ಪರಿಗಣಿಸಲಾಗುವ ಒಬ್ಬ ಮಹಾನ್ ಆಧ್ಯಾತ್ಮಕ ಗುರುಗಳಾಗಿದ್ದರು.ಅವರು ತಮ್ಮ ಮುಸ್ಲಿಂ ಮತ್ತು ಹಿಂದೂ ಭಕ್ತರಿಂದ ಗೌರವಿಸಲ್ಪಡುತ್ತಿದ್ದರು .
ಯಾವುದೇ ವ್ಯಕ್ತಿಯಾದರೂ ಸರಿ ಜನಿಸಿದ ಮೇಲೆ ತನ್ನನ್ನು ತಾನು ಗುರುವಿಗೆ ಸಮರ್ಥಿಸಿಕೊಳ್ಳುದ್ದಿದ್ದರೆ ಅಥವಾ ಶರಣಾಗತನಾಗದ್ದಿದ್ದರೆ ಆತನಿಗೆ ಮುಕ್ತಿ ಮತ್ತು ಜೀವನದಲ್ಲಿ ಏಳಿಗೆಗಳು ಇರುವುದಿಲ್ಲ ಎಂಬ ಅಂಶವನ್ನು ಶಿರಡಿ ಸಾಯಿಬಾಬಾ ಬಲವಾಗಿ ನಂಬಿದ್ದರು.ಹಾಗೂ ಇಡೀ ದೇಶಕ್ಕೆ ಸಾರಿದರು.ಬಾಬಾರವರು ತಮ್ಮ ಜೀವಿತಾವಧಿಯಲ್ಲಿ ಯಾವುದೇ ಒಂದು ಜಾತಿ ಆಗಲಿ ಅಥವಾ ಧರ್ಮವಾಗಲೀ ಬೆಲೆಯನ್ನು ಕೊಟ್ಟವರಲ್ಲ ಅವರು ಕೊಡುತ್ತಿದ್ದ ಬೆಲೆ ಒಂದಕ್ಕೆ ಮಾತ್ರ ಅದು ಧರ್ಮ ಯಾವುದೆಂದರೆ ಎಂದರೆ ಮನುಷ್ಯ ಧರ್ಮ ಒಂದೇ.ಶ್ರೀ ಸಾಯಿಬಾಬಾ ಅವರ ಪ್ರಸಿದ್ಧ ವಾದಂತಹ ಉಕ್ತಿ ಯಾವುದೆಂದರೆ ಸರ್ವರ ಮಾಲೀಕನು ಒಬ್ಬನೆಂದು.
ಇವರು ಭಾರತದ ಉದ್ದಗಲಕ್ಕೂ ಕೂಡ ಸಾರ್ವಕಾಲಿಕ ಅಧ್ಯಾತ್ಮಿಕ ರಾಗಿ ಹೊರಹೊಮ್ಮಿದ್ದರು.ಅಪಾರವಾದಂತಹ ಭಕ್ತಸಮೂಹಕ್ಕೆ ಜೀವನದ ಏರಿಳಿತಗಳ ಬಗ್ಗೆ ಜೀವಮಾನದ ಆಧ್ಯಾತ್ಮಿಕ ಸಾಧನೆಗಳ ಬಗ್ಗೆ ಅಷ್ಟೇ ಅಲ್ಲ ಸಮರ್ಪಣಾ ಮನೋಭಾವದ ಸೇವಾ ಮನೋಭಾವದ ಪರೋಪಕಾರದ ದಯಾ ಮನೋಭಾವದ ಭಕ್ತಿ ಕರ್ತವ್ಯನಿಷ್ಠೆ ಹೀಗೆ ಮುಂತಾದ ಮಾನವೀಯ ಗುಣಗಳ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಇವರು ಒಬ್ಬ ಶ್ರೇಷ್ಠ ಗುರುವಾಗಿದ್ದಾರೆ.ಇನ್ನು ಆಧ್ಯಾತ್ಮಿಕ ಸಾಧನೆಯಲ್ಲಿ ಸದ್ಗುರುವಿನ ಪಾತ್ರ ಅಪಾರವಾಗಿದ್ದು ಆತನಿಲ್ಲದೆ ಆಧ್ಯಾತ್ಮಿಕ ಸಾಧನೆ ಸುಲಭವಲ್ಲ ಎನ್ನುವುದು ಪ್ರತಿಯೊಬ್ಬ ಸಾಯಿಬಾಬಾನ ಭಕ್ತರು ಮನಗಂಡಿದ್ದಾರೆ.
ದುರ್ಗುಣ ಗಳಿಗೆ ವಿಮುಖರಾಗಿ ಆತ್ಮಸಾಕ್ಷಾತ್ಕಾರಕ್ಕೆ ಮೊದಲಾಗಿ ಎಂಬುದು ಸಾಯಿಬಾಬಾ ಭಕ್ತರಿಗೆ ಕೊಡುತ್ತಿದ್ದ ಒಂದು ಮುಖ್ಯವಾದ ಉಪದೇಶ.ಈ ಬಾಬಾನ ಅನುಗ್ರಹಕ್ಕಾಗಿ ಪ್ರತಿಯೊಬ್ಬರೂ ಸಾಕಷ್ಟು ಒಂದಲ್ಲ ಒಂದು ಪ್ರಯತ್ನವನ್ನು ಮಾಡುತ್ತಾ ಇರುತ್ತಾರೆ.ಬಾಬಾನ ಕೃಪೆ ಕಟಾಕ್ಷವು ಆಗಬೇಕೆಂದರೆ ಗುರುವಾರ ದಿನ ನೀವು ಈ ಒಂದು ಪರಿಹಾರವನ್ನು ಮಾಡಿಕೊಂಡರೆ ಸಾಕು ಯಾವುದೇ ಸಮಸ್ಯೆ ಇರಲಿ ಆರೋಗ್ಯ ಸಮಸ್ಯೆ ಉದ್ಯೋಗದಲ್ಲಿ ಸಮಸ್ಯೆ ಹಾಗೂ ಹಣಕಾಸಿನ ಸಮಸ್ಯೆ ಇದ್ದಲ್ಲಿ ಸಮಸ್ಯೆಗಳಿಗೆ ಪರಿಹಾರ ಬಲು ಸುಲಭವಾಗಿ ಸಿಗುತ್ತದೆ.ಇನ್ನು ಸಮಸ್ಯೆಗಳು ಶಾರೀರಿಕವಾಗಿ ಅಲ್ಲದೆ ಮಾನಸಿಕವಾಗಿಯೂ ಕೂಡ ನಮ್ಮನ್ನು ಬಹಳ ಚಿಂತೆಗೀಡಾಗುವಂತೆ ಮಾಡುತ್ತವೆ.
ಶ್ರೀ ಸಾಯಿಬಾಬನ ಆತ್ಮಚರಿತ್ರೆಯ ಪಾರಾಯಣವನ್ನು ನೀವು ಗುರುವಾರ ದಿನ ಈ ಪಾರಾಯಣವನ್ನು ಆರಂಭಿಸಿದರೆ ನಿಮಗೆ ಈ ಸಾಯಿಬಾಬನ ಅನುಗ್ರಹ ಸಿಗುತ್ತದೆ.ಹೀಗೆ ಸಾಯಿಬಾಬನ ಸಂಪೂರ್ಣ ಅನುಗ್ರಹದಿಂದ ಸಾಧನೆಗಳು ಸಂಪತ್ತು ಗಳಾಗುತ್ತವೆ. ಕೆಲವರಿಗೆ ಸಾಯಿಬಾಬನ ಜೀವನಚರಿತ್ರೆಯನ್ನು ಪಾರಾಯಣ ಮಾಡಲು ಆಗುವುದಿಲ್ಲ ಯಾಕೆಂದರೆ ಕೆಲಸದ ಒತ್ತಡವಿರುತ್ತದೆ.ಯಾರೋ ಸಾಯಿಬಾಬಾ ಜೀವನಚರಿತ್ರೆಯನ್ನು ಪಾರಾಯಣ ಮಾಡಲು ಆಗುವುದಿಲ್ಲ ಎಂದು ಕೊರಗುತ್ತಾ ಇದ್ದಾರೋ ಅಂತವರು ಈ ಒಂದು ಮಂತ್ರವನ್ನು ಪಡಿಸಿದರೆ ನಿಮ್ಮ ಸಕಲ ಕಷ್ಟಗಳು ಪರಿಹಾರವಾಗುತ್ತವೆ. ಮಂತ್ರ ಯಾವುದೆಂದರೆ
ಓಂ ಸಾಯಿ ನಮೋ ನಮಃ ಶ್ರೀ ಸಾಯಿ ನಮೋ ನಮಃ ಜೈ ಜೈ ಸಾಯಿ ನಮೋ ನಮಃ ಸದ್ಗುರು ಸಾಯಿ ನಮೋ ನಮಃಈ ಮಂತ್ರಗಳು ಚಿಕ್ಕ-ಚಿಕ್ಕ ವಾದಂತಹ ಪದ್ಯರೂಪದಲ್ಲಿ ಇರುವಂತಹ ಮಂತ್ರಗಳು. ಮಂತ್ರಗಳನ್ನು ಪಾರಾಯಣ ಮಾಡಿಕೊಂಡರೆ ಸಾಕು ನಿಮ್ಮ ಕೋರಿಕೆಗಳು ಈಡೇರುತ್ತವೆ.ನೀವು ನಿಮಗೆ ತಕ್ಕಂತಹ ಸಂಕಲ್ಪವನ್ನು ಮಾಡಿ ನಂತರ ಸಾಯಿಬಾಬನ ಮಂತ್ರವನ್ನು ಪಾರಾಯಣಮಾಡಬೇಕು. ಐದು ದಿನ ಏಳು ದಿನ ಒಂಬತ್ತು ದಿನ ಹಾಗೂ 11 ದಿನದಂತೆ ಸಂಕಲ್ಪ ಮಾಡಿಕೊಂಡು ಪಾರಾಯಣವನ್ನು ಮಾಡಿ.
ಹೀಗೆ ಪಾರಾಯಣವನ್ನು ಮಾಡಿದರೆ ನಿಮಗೆ ಸಂಕಲ್ಪಗಳು ಆದಷ್ಟು ಬೇಗ ನೆರವೇರುತ್ತವೆ. ಗುರುವಾರ ದಿನ ನೀವು ಸಾಯಿಬಾಬಾಗೆ ಪ್ರಸಾದವನ್ನು ಸಮರ್ಪಿಸಿದರೆ ನಿಮ್ಮ ಎಂತಹ ಬೇಡಿಕೆಗಳು ಕೂಡ ಈಡೇರುತ್ತವೆ.ಮೊದಲು ನಾವು ಯಾವುದೇ ಭಗವಂತನನ್ನು ಪೂಜಿಸುವಾಗ ಮೊದಲು ಹೂವು ಹಣ್ಣನ್ನು ಇಟ್ಟು ಪೂಜಿಸುತ್ತೇವೆ. ಸಾಯಿಬಾಬಾ ಯಾವುದೇ ಬಗೆಯ ಹಣ್ಣುಗಳನ್ನು ಸಮರ್ಪಿಸಿದರು ಕೂಡ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತಾರೆ.ಹಾಗೆಯೇ ನೈವೇದ್ಯವನ್ನು ಸಮರ್ಥಿಸುವಾಗ ಹಲ್ವಾ ಸಾಯಿಬಾಬನಿಗೆ ಅತ್ಯಂತ ಪ್ರಿಯಕರ ವಾದಂತಹ ಖಾದ್ಯ ಎಂದು ಹೇಳಲಾಗುತ್ತದೆ.
ಹಾಗೆಯೇ ಪಾಲಾಕ್ ಸೊಪ್ಪಿನ ಇಂದ ತಯಾರಿಸಿದಂತಹ ಯಾವುದೇ ಪದಾರ್ಥ ಆತನಿಗೆ ಇಷ್ಟವಾದ ಅಂತಹ ನೈವೇದ್ಯ.ಹಾಗೆಯೇ ಕಿಚಡಿಯನ್ನು ನೈವೇದ್ಯ ಮಾಡಿದರೂ ಕೂಡ ಆಗ ಸಂತುಷ್ಟನಾಗಿ ನಿಮ್ಮ ಸಂಕಷ್ಟ ಬೇಡಿಕೆಗಳನ್ನು ನೆರವೇರಿಸುತ್ತಾನೆ ಎಂದು ಭಕ್ತರಲ್ಲಿ ನಂಬಿಕೆಯಿದೆ. ಈ ರೀತಿಯಾಗಿ ಸಾಯಿಬಾಬಾ ಹೀಗೆ ಈ ರೀತಿಯಾದಂತಹ ಪ್ರಸಾದವನ್ನು ಸಮರ್ಪಿಸಿದರೆ ನಿಮ್ಮ ಎಂತಹ ಬೇಡಿಕೆಗಳು ಕೂಡ ಈಡೇರುತ್ತವೆ ಸ್ನೇಹಿತರೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.