ನಾವು ನಿಮಗೆ ಅನೇಕ ಮಾಹಿತಿಗಳಲ್ಲಿ ಅನೇಕ ಪರಿಹಾರಗಳನ್ನು ತಿಳಿಸಿ ಕೊಟ್ಟಿದ್ದೇವೆ ಜೊತೆಗೆ ಮನೆಯಲ್ಲಿ ನೇರ ದೃಷ್ಟಿ ಆಗಿದ್ದರೆ ಅಥವಾ ಮನೆಯಲ್ಲಿ ಮನೆಯ ಸದಸ್ಯರಿಗೆ ಏನಾದರೂ ಈ ದೃಷ್ಟಿ ದೋಷ ಆಗಿದ್ದರೆ ಅದನ್ನೆಲ್ಲಾ ಹೇಗೆ ನಿವಾರಣೆ ಮಾಡಿಕೊಳ್ಳಬಹುದು ಮತ್ತು ಈ ದೃಷ್ಟಿ ದೋಷ ನಿವಾರಣೆಗಾಗಿ ನಮ್ಮ ಪೂರ್ವಜರು ಮಾಡುತ್ತಿದ್ದಂತಹ ಪರಿಹಾರಗಳೇನು ಅನ್ನೋದನ್ನು ತಿಳಿಸಿ ಕೊಟ್ಟಿದ್ದೇವೆ ಆದರೆ ಇವತ್ತಿನ ಮಾಹಿತಿಯಲ್ಲಿ ನಾವು ವಿಶೇಷವಾಗಿ ಒಂದು ವಿಚಾರವನ್ನು ತಿಳಿಯೋಣ,ಅದೇನೆಂದರೆ ಸ್ನೇಹಿತರೆ ಮನೆಯಲ್ಲಿ ದೃಷ್ಟಿ ದೋಷ ಆಗಿದ್ದರೆ,
ಮನೆಗೆ ಈ ನರ ದೃಷ್ಟಿ ತಗುಲಿದ್ದರೆ ಇದರ ಸಂಕೇತಗಳನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳಬೇಕು ಅನ್ನುವುದನ್ನು ತಿಳಿಯೋಣ.ಮನೆಗೆ ಮಾತ್ರ ಅಲ್ಲ ಒಬ್ಬ ವ್ಯಕ್ತಿ ಜೀವನದಲ್ಲಿ ಬೆಳೆಯುತ್ತಿದ್ದಾನೆ ಅಂದರೆ ಏಳಿಗೆಯ ಆಗುತ್ತಿದ್ದಾರೆ ಅಂದರೆ ಒಬ್ಬ ವ್ಯಕ್ತಿ ಖುಷಿಯಾಗಿದ್ದಾರೆ ಅಂದರೆ ಬೇರೆಯವರು, ಮುಂದೆ ಚೆನ್ನಾಗಿಯೆ ಇರುತ್ತಾರೆ,ಆದರೆ ಹಿಂದೆ ಹೊಟ್ಟೆ ಉರಿದುತ್ತಿರುತ್ತಾರೆ, ಅಂತಹವರ ಕಣ್ಣು ನಮ್ಮ ಏಳಿಗೆಗಾಗಿ ಅಡ್ಡಿಪಡಿಸಬಹುದು. ಹಾಗಾದರೆ ನರ ದೃಷ್ಟಿಯಾಗಿದೆ ಅನ್ನುವುದನ್ನು ನಾವು ಹೇಗೆ ಯಾವ ಸೂಚನೆಗಳ ಮುಖಾಂತರ ಯಾವ ಸಂಕೇತಗಳಿಂದ ತಿಳಿದುಕೊಳ್ಳಬಹುದು ಅನ್ನೋದನ್ನೇ ನಾನು ಈ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇನೆ.
ನರ ದೃಷ್ಟಿಗೆ ಮರವೇ ಸಿಡಿಯಿತು ಅಂತ ಗಾದೆ ಮಾತೇ ಇದೆ, ಅಂತಹದ್ದರಲ್ಲಿ ಮನುಷ್ಯನ ಕಥೆ ಏನಾಗಬಹುದು ಅನ್ನೋದನ್ನು ಒಮ್ಮೆ ಯೋಚಿಸಿ, ಹಾಗಾದರೆ ಈ ನೇರ ದೃಷ್ಟಿ ಯಾದಾಗ ಅದರಲ್ಲಿಯೂ ಮನೆಯ ಮೇಲೆ ನೇರ ದೃಷ್ಟಿ ಯಾದರೆ ಇದರ ಪರಿಣಾಮ ಬಹಳ ಕೆಟ್ಟದಾಗಿರುತ್ತದೆ ಮನೆಯ ಮೇಲೆ ದೃಷ್ಟಿ ಆಗಿದೆ ಅನ್ನುವುದನ್ನು ಹೇಗೆ ತಿಳಿದುಕೊಳ್ಳುವುದು ಅಂದರೆ ಮನೆಯಲ್ಲಿ ಎಲ್ಲಿ ಇದ್ದರೂ ನೆಮ್ಮದಿಯೇ ಇರುವುದಿಲ್ಲ ಏನೋ ಒಂಥರಾ ಅನುಭವ ಆಗುತ್ತಾ ಇರುತ್ತದೆ ಯಾವ ಕೆಲಸ ಮಾಡುವುದಕ್ಕೂ ಮನಸ್ಸು ಬರುತ್ತಾ ಇರುವುದಿಲ್ಲ,ಮನೆಯ ಮೇಲೆ ದೃಷ್ಟಿ ದೋಷದ ಪರಿಣಾಮ ಹೆಚ್ಚಾದರೆ ಇದು ಮತ್ತೊಂದು ಸಂಕೇತವನ್ನು ನೀಡುತ್ತಾ ಇರುತ್ತದೆ
ಅದೇನೆಂದರೆ ಅಡುಗೆ ಮನೆಯಲ್ಲಿ ಇರುವ ಉಪ್ಪು ಬೇಗಾನೆ ಕರಗಿ ಹೋಗುತ್ತಿರುತ್ತದೆ ಈ ಉಪ್ಪು ಅಷ್ಟಾಗಿ ಬೇಗ ಕರಗುವುದಿಲ್ಲ ಆದರೆ ನಮಗೆ ತಿಳಿಯದೆ ಬೇಗ ಬೇಗ ಉಪ್ಪು ಕರಗುತ್ತಾ ಇರುತ್ತದೆ.ಇನ್ನು ಮನೆಗೆ ದೃಷ್ಟಿ ನಿವಾರಣೆಗಾಗಿ ಮನೆಯ ಮುಂದೆ ಕಟ್ಟಿರುವ ಕುಂಬಳಕಾಯಿ ಯಾಗಲಿ ಅಥವಾ ನಿಂಬೆ ಹಣ್ಣು ಆಗಲಿ ಬೇಗನೆ ಒಣಗಿ ಹೋಗುತ್ತಿರುತ್ತದೆ ಅಥವಾ ಕೊಳೆತು ಹೋಗುತ್ತಿರುತ್ತದೆ ಕೆಟ್ಟು ಹೋಗುತ್ತಿರುತ್ತದೆ ಇಂತಹ ಎಲ್ಲ ಸೂಚನೆಗಳು ಸಂಕೇತಗಳು ಮನೆಯ ಮೇಲೆ ಬಹಳಾನೇ ಕೆಟ್ಟ ದೃಷ್ಟಿಯ ಪ್ರಭಾವ ಬೀರುತ್ತಿದೆ ಅನ್ನೋದು ಆಗಿರುತ್ತದೆ.
ವ್ಯಕ್ತಿಯ ಮೇಲೆ ಈ ನೇರ ದೃಷ್ಟಿಯ ಪ್ರಭಾವ ಬೀರಿದರೆ ಆ ವ್ಯಕ್ತಿಯಲ್ಲಿ ಆಗುವ ಬದಲಾವಣೆಗಳು ಅಥವಾ ದೃಷ್ಟಿ ಆದಾಗ ಕಂಡುಬರುವ ಸಂಕೇತಗಳು ಯಾವುವು ಅಂದರೆ ಪಿರಿಪಿರಿ ಮಾಡುತ್ತಿರುವುದು ಮತ್ತು ಯಾರೇ ಮಾತಾಡಿಸಿದರೂ ಇರಿಟೇಷನ್ ಆಗುತ್ತಿರುತ್ತದೆ ಎಲ್ಲರ ಮೇಲೆಯೂ ಸುಮ್ಮನೆ ಕಾರಣವಿಲ್ಲದೆ ಜಗಳ ಆಡುತ್ತಾ ಇರುತ್ತೇವೆ ಅಥವಾ ಎಲ್ಲರ ಮೇಲೆಯೂ ಕೂಗಾಡುತ್ತಾ ಇರುತ್ತೇವೆ, ಕಾರಣವಿಲ್ಲದೆ ಕೋಪ ಬರುತ್ತಿರುತ್ತದೆ ಸೋಂಬೇರಿತನ ಹೆಚ್ಚಾಗಿರುತ್ತದೆ
ಮನಸ್ಸಿನಲ್ಲಿ ಆಲಸ್ಯತನ ಹೆಚ್ಚಾಗಿರುತ್ತದೆ ಗೊಂದಲಗಳು ಕಾಡುತ್ತಿರುತ್ತದೆ.ಈ ರೀತಿಯಾಗಿ ಮನೆಯ ಮೇಲೆ ಮತ್ತು ವ್ಯಕ್ತಿಯ ಮೇಲೆ ನೇರ ದೃಷ್ಟಿಯ ಪ್ರಭಾವ ಆದರೆ ಇಂತಹ ಲಕ್ಷಣಗಳು ಸೂಚನೆಗಳು ನಮಗೆ ಕಾಣಿಸಿಕೊಳ್ಳುತ್ತದೆ. ಇವತ್ತಿನ ಮಾಹಿತಿ ಎಷ್ಟೋ ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ, ಹಾಗೆ ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಮತ್ತು ಲೈಕ್ ಮಾಡಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ