ನಿಮಗೆ ಗೊತ್ತಿರಬಹುದು ಅದರಲ್ಲೂ ರಾಜಕಾರಣಿಗಳು ರಾಹುಕಾಲದ ಬಗ್ಗೆ ತುಂಬಾ ಮಹತ್ವವನ್ನು ಕೊಡುತ್ತಾರೆ ರಾಹುಕಾಲದಲ್ಲಿ ಮನೆಯಿಂದ ಹೊರಗಡೆ ಹೋಗುವುದೇ ಆಗಲಿ ಅಥವ ಯಾವುದಾದರೂ ಶುಭ ಕಾರ್ಯವನ್ನು ಮಾಡುವುದೇ ಆಗಲಿ ಮಾಡುವುದಿಲ್ಲ, ರಾಹುಕಾಲ ಎಂದರೆ ಇನ್ನೂ ಕೆಲವರು ತುಂಬಾ ಹೆದರುತ್ತಾರೆ ರಾಹುಕಾಲದಲ್ಲಿ ಕೆಲವೊಬ್ಬರು ಊಟವನ್ನು ಕೂಡ ಮಾಡುವುದಿಲ್ಲ ರಾಹುಕಾಲದಲ್ಲಿ ಏನನ್ನೂ ಮಾಡುವುದಿಲ್ಲ, ಆ ತರದ ಒಂದು ಮನೋಭಾವನೆಯನ್ನು ಕೆಲಜನರು ಹೊಂದಿರುತ್ತಾರೆ. ಇದಕ್ಕೆಲ್ಲ ಕಾರಣ ಏನಪ್ಪಾ ಅಂದರೆ ರಾಹುಕಾಲದಲ್ಲಿ ಆಗುವಂತಹ ತೊಂದರೆಗಳು ರಾಹುಕಾಲದಲ್ಲಿ ಆಗುವಂತಹ ಅನಾನುಕೂಲಗಳು. ಹಾಗಾದರೆ ನಾವು ಬನ್ನಿ ಇವತ್ತು ನಾವು ಈ ಲೇಖನದ ಮುಖಾಂತರ ರಾಹುಕಾಲದ ಮಹತ್ವವೇನು ಹಾಗೂ ರಾಹುಕಾಲ ಎನ್ನುವುದು ಒಳ್ಳೆಯದ ಅಥವಾ ಕೆಟ್ಟದ್ದ ಎನ್ನುವುದರ ಬಗ್ಗೆ ಸಂಪೂರ್ಣವಾದ ವಿಶ್ಲೇಷಣೆಯನ್ನು ಮಾಡೋಣ ಬನ್ನಿ.

ನಿಮಗೆ ಗೊತ್ತಿದಿಯೋ ಅಥವಾ ಗೊತಿಲ್ಲವೋ ವಾರದ ಪ್ರತಿದಿನವು ರಾಹು ಕುದುರೆ ರೀತಿ ಹೋರಾಡುತ್ತಾ ಇರುತ್ತಾನೆ, ಪ್ರತಿಕ್ಷಣದಲ್ಲೂ ತಿರುಗುವಂತಹ ಈ ರಾಹು ಪ್ರತಿದಿನ ಒಂದೇ ಕ್ರಮದ ದಿಕ್ಕಿನಲ್ಲಿ ಸಂಚರಣೆ ಮಾಡುವುದಿಲ್ಲ. ಒಂದೊಂದು ದಿನ ಒಂದೊಂದು ದಿಕ್ಕಿನಲ್ಲಿ ತಿರುಗುತ್ತಾನೆ. ಆದ್ದರಿಂದ ರಾಹುಕಾಲ ಯಾವ ಸಮಯದಲ್ಲಿ ಬರುತ್ತದೆ ಎನ್ನುವುದಕ್ಕೆ ನಮಗೆ ನಿಖರವಾದ ಮಾಹಿತಿ ಇರುವುದಿಲ್ಲ ಅದನ್ನು ದಿನ ದಿನಕ್ಕೆ ಕ್ಯಾಲೆಂಡರ್ ನೋಡಿ ಸಮಯ ನಿಗದಿ ಮಾಡಿಕೊಳ್ಳುತ್ತೇವೆ.  ಹೀಗೆ ಒಂದೊಂದು ದಿಕ್ಕಿನಲ್ಲಿ ಸಂಚರಿಸುತ್ತಿರುವ ಅಂತಹ ರಾಹುಕಾಲದ ಸಮಯದಲ್ಲಿ ಯಾವುದೇ ಕಾರ್ಯವನ್ನು ಮಾಡಬಾರದು ಹಾಗೂ ಕಾರ್ಯವನ್ನು ಮಾಡಿದರೆ ಅವುಗಳು ಸಿದ್ಧಿಯನ್ನು ಕೊಡುವುದಿಲ್ಲ ಎನ್ನುವ ಮಾತು ಕೂಡ ಹಿರಿಯರು ನಮಗೆ ಹೇಳಿದ್ದಾರೆ. ಹಾಗೂ ಪುರಾಣದ ಪ್ರಕಾರ ಯಾವುದಾದರೂ ಒಳ್ಳೆ ಕಾರ್ಯಕ್ಕೆ ಹೋಗುವಂತಹ ಸಮಯದಲ್ಲಿ ರಾಹುಕಾಲವನ್ನು ನೋಡಿಕೊಂಡು ಹೋಗುವುದು ತುಂಬಾ ಒಳ್ಳೆಯದು ಎಂದು ಕೆಲವರು ಹೇಳುತ್ತಾರೆ. ಎಲ್ಲರೂ ಕಾರ್ಯಗಳು ಕೆಟ್ಟದ್ದು ಇರುವುದಿಲ್ಲ ಕೆಲವೊಂದು ರಾಹುಕಾಲ ಗಳು ನಮಗೆ ಒಳ್ಳೆಯದು ಸಹ ಮಾಡುವಂತಹ ಸ್ಥಿತಿಯನ್ನು ಹೊಂದಿರುತ್ತವೆ ಆದರೆ ನೀವು ಪಂಡಿತರನ್ನು ಬಳಕೆ ಮಾಡಿಕೊಂಡು ಇದರ ಬಗ್ಗೆ ಆಗುವಂತಹ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ವಿಶ್ಲೇಷಣೆ ಮಾಡಿ ಹೋಗುವುದು ಒಳ್ಳೆಯದು.

ವೈಜ್ಞಾನಿಕವಾಗಿ ಹೇಳುವುದಾದರೆ ರಾಹುಕಾಲ ಎನ್ನುವುದು ಯಾವುದೇ ಕಾರಣಕ್ಕೂ ಮನುಷ್ಯನಿಗೆ ಅನಾನುಕೂಲ ತಂದುಕೊಡುವುದಿಲ್ಲ ಆದರೆ ವೈಜ್ಞಾನಿಕವಾಗಿ ನಮ್ಮ ಹಿರಿಯರು ಇದನ್ನು ರಾಹುಕಾಲ ಅಂತ ಯಾಕೆ ಕರೆದಿದ್ದಾರೆ ಎಂದರೆ ಆ ಸಮಯದಲ್ಲಿ, ಭೂಮಿಯ ವಾತಾವರಣ ಹಾಗೂ ಹೊರಗಡೆಯ ವಾತಾವರಣ ಚೆನ್ನಾಗಿರುವುದಿಲ್ಲ ಹೆಚ್ಚಾಗಿ ಬಿಸಿ ವಾತಾವರಣ ಇರುತ್ತದೆ ಹಾಗೂ ಸೂಕ್ಷ್ಮ ಕಣಗಳು ಹೊರಗಡೆ ಇರುವ ಸಮಯ ಅದು, ಆದುದರಿಂದ ನಮ್ಮ ಹಿರಿಯರು ಇದನ್ನು ರಾಹುಕಾಲ ಎಂದು ಹೇಳಿದ್ದಾರೆ ಇದು ವೈಜ್ಞಾನಿಕವಾಗಿಯೂ ಕೂಡ ನಮಗೆ ಒಳ್ಳೆಯ ರೀತಿಯ ಲಾಭವನ್ನು ತಂದುಕೊಡುವಂತಹ ಒಂದು ಆಚರಣೆ ಅಂತ ಹೇಳಬಹುದು. ಈ ಲೇಖನ  ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಮಿಸ್ ಮಾಡದೆ ಲೈಕ್ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *

%d bloggers like this: