ಚಿತ್ರ ನಟಿ ಪ್ರಿಯಾಂಕಾ ಉಪೇಂದ್ರ ಫೈರ್ ಸಂಸ್ಥೆ ಇಂದ ಹೊರಬಂದಿದ್ದು ಮಾಧ್ಯಮಗಳೊಂದಿ ತಮ್ಮ ಅನಿಸಿಕೆಗಳನ್ನ ಹಂಚಿಕೊಂಡಿದ್ದಾರೆ, ನಾನು ಆರು ತಿಂಗಳ ಹಿಂದೆಯೇ ಈ ಫೈರ್ ಸಂಸ್ಥೆಯನ್ನ ಬಿಡಬೇಕಿತ್ತು, ಅದರ ಬಗ್ಗೆ ಯೋಚನೆಯನ್ನು ಮಾಡಿದ್ದೆ ಎಂದರು.
ಚೇತನ್ ಅವರು ಫೈರ್ ತಂಡದಲ್ಲಿ ಯಾರ ಬಳಿಯೂ ಯಾವುದೇ ವಿಚಾರ ಚರ್ಚೆ ಮಾಡದೆ ಬಹಳಷ್ಟು ಬದಲಾವಣೆಗಳನ್ನು ತಂದಿದ್ದಾರೆ ಅಂತೇ, ಈ ವಿಚಾರ ಪ್ರಿಯಾಂಕಾ ಅವರಿಗೆ ಬಲು ಬೇಸರವನ್ನು ಮೂಡಿಸಿದ್ದು, ಫೈರ್ ಸಂಸ್ಥೆಯ ಉದ್ದೇಶ ತುಂಬಾ ಚೆನ್ನಾಗಿದ್ದ ಕಾರಣ ನಾನು ಆ ಸಂಸ್ಥೆಯನ್ನು ಸೇರಿದ್ದೇ.
ಏನೇ ಸಮಸ್ಯೆಯಾದಾಗ ಮೊದಲು ನಮ್ಮಲ್ಲಿ ಅಂದರೆ ಸದಸ್ಯರಲ್ಲಿ ಚರ್ಚೆಯಾಗಿ ಅದನ್ನು ಬಗೆ ಹರಿಸುವ ಪ್ರಯತ್ನ ಮಾಡಬೇಕಿತ್ತು, ಅಕಸ್ಮಾತ್ ನಾಲ್ಕು ಗೋಡೆಯ ಮಧ್ಯೆ ಪರಿಹಾರವಾಗದೇ ಇದ್ದಾಗ ಕೋರ್ಟ್, ಮಾಧ್ಯಮದ ಮುಂದೆ ಹೋಗಬೇಕಿತ್ತು, ಆದರೆ ಈ ಪ್ರಕರಣದಲ್ಲಿ ಶುರುವಿನಲ್ಲೇ ನೇರವಾಗಿ ಮಾಧ್ಯಮಕ್ಕೆ ಹೋಗಿದ್ದು ಸರಿ ಕಾಣಲಿಲ್ಲ ಹಾಗು ನನಗೆ ಇಷ್ಟವಾಗಿಲ್ಲ, ಈ ಕಾರಣಕ್ಕೆ ನಾನು ಫೈರ್ ನಿಂದ ಹೊರ ಬಂದಿದ್ದೇನೆ ಎಂದು ಪ್ರಿಯಾಂಕಾ ಉಪೆಂಡಾರ ಅವರು ವಿವರಿಸಿದರು.
ನಾನು ಹೊರದೇಶದಲ್ಲಿ ಇದ್ದಾಗಲೇ ಈ ಬೆಳವಣಿಗೆಗಳ ಬಗ್ಗೆ ಫೈರ್ ಸಂಸ್ಥೆಯ ಉಳಿದ ಕಾರ್ಯ ಕರ್ತೆಯರಿಂದ ನನಗೆ ಕರೆ ಬಂದಿತ್ತು, ಇನ್ನು ಹಲವರು ಈ ಸಂಸ್ಥೆಯನ್ನು ತ್ಯಜಿಸಲಿದ್ದಾರೆ ಎಂದು ತಿಳಿಸಿದ್ದಾರೆ, ಇನ್ನು ಮೀಟು ಪ್ರಕರಣದ ಬಗ್ಗೆ ಮಾತನಾಡಿದ ಅವರು ಅರ್ಜುನ್ ಸರ್ಜಾ ಹಾಗು ಶ್ರುತಿ ಇಬ್ಬರನ್ನು ತುಂಬಾ ಅತ್ತಿರ ದಿಂದ ನೋಡಿದ್ದೇನೆ ನನಗೆ ಇಬ್ಬರು ಗೊತ್ತು, ನಾನು ಯಾರ ಪರಾನು ಅಲ್ಲ ಸಧ್ಯ ವಿಷ್ಯ ಕೋರ್ಟ್ ಮೆಟ್ಟಿಲಿಗೆ ಹೋಗಿರುವಾಗ ಕೋರ್ಟ್ ನಿರ್ದಾರಕ್ಕೆ ನಾನು ಬದ್ಧನಾಗಿರುತ್ತೀನಿ, ಬೇರೆ ಯಾವ ಅನಿಸಿಕೆಗಳಿಗೆ ಇಲ್ಲಿ ಅವಕಾಶ ಇಲ್ಲ ಎಂದರು.
ಫೈರ್ ಸಂಸ್ಥೆ ಬಿಟ್ಟ ನಂತರ ಉಪ್ಪಿ ಫೌಂಡೇಶನ್ ಹಾಗು ಪ್ರಜಾಕೀಯ ಸಂಸ್ಥೆಯಲ್ಲಿ ನಾನು ಸಮಾಜ ಅನುಕೂಲ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದ್ದಾರೆ.
ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನ ಮರೆಯದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಹಾಗು ಹೆಚ್ಚಿನ ತಾಜಾ ಸುದ್ದಿಗಾಗಿ ನಮ್ಮ ಪೇಜ್ ಮರೆಯದೆ ಲೈಕ್ ಮಾಡಿ.