ಪಿತೃ ಶ್ರಾದ್ದ ಮಾಡಲಾಗಲಿಲ್ಲ ಎಂದರೆ ಇಲ್ಲಿದೆ ಸುಲಭ ಪರಿಹಾರ..!!

260

ದೇವಕಾರ್ಯ ಮತ್ತು ಷಿತೃಕಾರ್ಯಗಳನ್ನು ಎಂದೂ ಬಿಟ್ಟಿರ ಬಾರದು.ಆದರೆ ಅನಿವಾರ್ಯವಾಗಿ ಕೆಲವೊಮ್ಮೆ ಶ್ರಾದ್ಧವನ್ನು ಮಾಡಲಾಗದ ಸಂದರ್ಭ ಬರಬಹುದು, ಧರ್ಮಸಿಂದುವಿನಲ್ಲಿ ಇದಕ್ಕೊಂದು ಪರಿಹಾರವನ್ನು ಹೇಳಲಾಗಿದೆ.

ಶ್ರಾದ್ಧದಿನದಂದು ಉಪವಾಸವಿದ್ದು ಯೋಗ್ಯ ಬ್ರಹ್ಮಣರಿಗೆ ಏನಾದರು ದಾನ ಮಾಡಬೇಕು. ಅದು ಅಕ್ಕಿ ,ತರಕಾರಿ, ಹಣ್ಣುಗಳಾಗಿರಬಹುದು ನೀರು ತುಂಬಿಗೆಯೂ ಆದೀತು.

ಹಸುವಿಗೆ ಹುಲ್ಲನ್ನು ತಿನ್ನಿಸಬಹುದು, ಸ್ನಾನಮಾಡಿ ಆಮಂತ್ರಕವಾಗಿ ಹಸುವಿಗೆ ನೀಡಬಹುದು, ಎಳ್ಳು ದರ್ಭೆಗಳಿಂದ ತರ್ಪಣ ಕೊಡಬಹುದು.

ಶ್ರಾದ್ಧ ವಿಧಿಯ ಪುಸ್ತಕವನ್ನು ಸಂಕಲ್ಪದಿಂದ ಆರಂಭಿಸಿ ಕಷ್ಣಾಪರ್ಣದವರೆಗೆ ಓದಿ ಮುಗಿಸಬಹುದು.

ಇದಾವುದು ಸಾಧ್ಯವಿಲ್ಲದಿದ್ದರೆ ಕಾಡಿಗೆ ಹೋಗಿ ಎಲರಡೂ ಕೈಗಳನ್ನು ಎತ್ತಿ ಈ ಮಂತ್ರವನ್ನು ಜಪಿಸಬಹುದು, ನನಗೆ ಶ್ರಾಧ್ಧಕ್ಕೆ ಬೇಕಾದ ದ್ರವ್ಯ ಸಂಪತ್ತಿಲ್ಲ, ನನ್ನ ಭಕ್ತಿಗೆ ಪಿತೃ ದೇವತೆಗಳು ತೃಪ್ತರಾಗಲಿ. ಗಾಳಿ,ಆಡುವ ಈ ಜಾಗದಲ್ಲಿ ಕೈ ಎತ್ತಿ ಸಾರುತ್ತಿದ್ದೇನೆ.

ಪಿತೃ ಶ್ರಾದ್ಧವನ್ನು ಮಾಡಲಾಗದಿದ್ದಲ್ಲಿ ಬ್ರಾಹ್ಮಣರಿಂದ ಸಂಕಲ್ಪ ಮಾತ್ರದಿಂದ ಶ್ರಾದ್ಧ ಫಲ ಬರಲಿ ಎಂದು ಆಶೀರ್ವಾದ ಪಡೆಯಬೇಕು.ಸಂಕಲ್ಪವೆಂದರೆ ತಿನ್ನಲು ಯೋಗ್ಯವಾದುದನ್ನು ಯೋಗ್ಯರಿಗೆ ದಾನಮಾಡುವುದೇ ಸಂಕಲ್ಪ. ಮನೆಗೆ ಕರೆದು ಊಟ ಬಡಿಸಿದರೂ ಆದೀತು. ಅಕ್ಕಿ ತರಕಾರಿಗಳನ್ನು ದಾನ ಕೊಟ್ಟರು ಆದೀತು, ಯಾವುದೇ ವಿಧದಿಂದ ಪಿತೃದಿನವನ್ನು ಆಚರಿಸದೆ ಬಿಡಬಾರದು.

ಎಚ್ಚರ ನೀವೇನಾದರೂ ಈ ತಪ್ಪುಗಳನ್ನ ಮಾಡಿದರೆ ಪಾಪ ಸುತ್ತಿ ಕೊಳ್ಳುವುದು ಖಂಡಿತ.

ಪಾಪ ಪುಣ್ಯಗಳು ಕೇವಲ ಮನುಷ್ಯನಿಗೆ ಮಾತ್ರ ಮತ್ತಾವ ಜೀವಿಗೂ ಈ ಪಾಪ ಪುಣ್ಯಗಳ ಹೊರೆ ಇರುವುದಿಲ್ಲ, ಇನ್ನು ಮನುಷ್ಯ ಮಾಡುವ ಪಾಪ ಮತ್ತು ಪುಣ್ಯಗಳು.

ಪಾಪಗಳು.

ವೇಧಗಳನ್ನು ಖಂಡಿಸುವುದು, ಸ್ವಧರ್ಮವನ್ನು ಬಿಟ್ಟು ಅನ್ಯ ಧರ್ಮವನ್ನು ಪಾಲನೆ ಮಾಡುವುದು.

ತಂದೆತಾಯಿಗಳನ್ನು ಅವಮಾನ ಮಾಡುವವನು, ಶ್ರಾದ್ದ ಕಾರ್ಯ ಮುಗಿದಮೇಲೆ ಬ್ರಾಹ್ಮಣನಿಗೆ ದಕ್ಷಿಣೆ ಕೊಡದಿರುವವನು.

ಅಪವಿತ್ರನಾಗಿ ಪವಿತ್ರಗ್ರಂಥಗಳ ಪಠನ ಇವುಗಳು ಪಾಪ ಕಾರ್ಯಗಳು.

ಹಸಿದವನಿಗೆ ಆಹಾರ ಕೊಡದಿರುವುದು ಮತ್ತು ಬಾಯಾರಿದವನಿಗೆ ನೀರು ಕೊಡದಿರುವುದು ಬ್ರಹ್ಮ ಹತ್ಯ ಮಾಡಿದಷ್ಟೆ ಪಾಪ.

ನಂಬಿಕೆ ದ್ರೋಹ, ಇತರರಲ್ಲಿ ತಪ್ಪು ಕಂಡು ಹಿಡಿಯುವುದು, ಇನ್ನೋಬ್ಬರ ಸ್ವತ್ತನ್ನು ಕಬಳಿಸುವುದು, ಪ್ರಾಣಿವದೆ.

ಹೆಂಡತಿಯನ್ನು ಬಿಟ್ಟು ಪರ ಸ್ತ್ರೀ ಸಹವಾಸ, ಸುಳ್ಳು ಹೇಳುವುದು, ಅತಿಥಿಗಳನ್ನು ಅವಮಾನಮಾಡುವುದು ಇದೆಲ್ಲಾ ಪಾಪಕಾರ್ಯಗಳು.

ಪುಣ್ಯ ಕಾರ್ಯಗಳು.

ಅಹಿಂಸೆ, ಕ್ಷಮಾಶೀಲತೆ, ದೇವರಲ್ಲಿ ಭಕ್ತಿ, ಓದಾರ್ಯ, ಧ್ಯಾನ ಸಮರ್ಪಣೆ, ಇಂದ್ರಿಯನಿಗ್ರಹ, ಮನಿಸ್ಸಿನಲ್ಲಿ ಶುದ್ದತೆ ಇವುಗಳು ಸದ್ಗುಣಗಳು.

ದಾನ್ಯದಾನ, ಪ್ರಾಣಿಗಳನ್ನು ಸಾಕುವುದು, ಬಾಯಾರಿದವನಿಗೆ ನೀರು ಕೋಡುವುದು ಪುಣ್ಯಕಾರ್ಯಗಳು.

ಬ್ರಾಹ್ಮಣರಿಗೆ ಪಾದುಕೆಗಳನ್ನು ದಾನ ಮಾಡುವುದರಿಂದ ಸ್ವರ್ಗ ಪ್ರಾಪ್ತವಾಗುತ್ತದೆ.

ಶಿವ ಮತ್ತು ವಿಷ್ಣು ಪೂಜೆಯಿಂದ ಶಿವಲೋಕ ಅಥವಾ ವಿಷ್ಣುಲೋಕ ಪ್ರಾಪ್ತವಾಗುತ್ತದೆ.

ಈ ವಿಚಾರವು ಯಯಾತಿ ಮತ್ತು ಮಾಥಿಲಿ ಅವರ ಸಂವಾದ – ಪದ್ಮಪುರಾಣ – ಭೂಮಿ ಕಾಂಡದಲ್ಲಿ ಉಲ್ಲೇಖಿತ.

LEAVE A REPLY

Please enter your comment!
Please enter your name here