ಹಣ್ಣುಗಳು ಎಂದರೆ ಅರೋಗ್ಯ ಎಂದರೆ ತಪ್ಪಾಗಲಾರದು ಪ್ರತಿಯೊಂದು ಹಣ್ಣಿಗಳು ತನ್ನದೇ ಆದ ಗುಣ ಹಾಗು ಶಕ್ತಿಯನ್ನು ಹೊಂದಿರುತ್ತವೆ, ಪ್ರತಿಯೊಂದು ಹಣ್ಣನ್ನು ತಿನ್ನಲು ಕೆಲವು ಸಮಯಾಗು ಇರುತ್ತದೆ ಅಂತ ಏನು ಇಲ್ಲ ಯಾವಾಗ ಬೇಕಾದರೂ ಮನಸೋ ಇಚ್ಛೆ ತಿನ್ನಬಹುದು ಆದರೆ ಪಪ್ಪಾಯ ಹಣ್ಣಿನ ಅಧ್ಯನ ಹೇಳುವ ಪ್ರಕಾರ ಈ ಹಣ್ಣನ್ನು ನಿಮ್ಮ ಊಟದ ಜೊತೆ ಸೇರಿಸಿ ದಿನವೂ ತಿನ್ನುವ ಅಭ್ಯಾಸ ಮಾಡಿಕೊಂಡರೆ ಎಷ್ಟೆಲ್ಲಾ ಲಾಭ ಇದೆ ಅಂತ ಇಂದು ತಿಳಿಯೋಣ.
ಮೊದಲನೆಯದಾಗಿ ಪಪ್ಪಾಯದಲ್ಲಿ ಅಧಿಕ ಫೈಬರ್ ಅಂಶವಿದೆ ಇದು ನಿಮ್ಮ ಆಹಾರ ಪಚನಕ್ರಿಯೆಯನ್ನ ಸುಲಭ ಮಾಡುತ್ತದೆ, ಇದರಿಂದ ಆಹಾರ ಉತ್ತಮವಾಗಿ ಜೀರ್ಣವಾಗುತ್ತದೆ, ಮಲ ಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
ನಿಮ್ಮ ದಿನ ನಿತ್ಯದ ಆಹಾರದಲ್ಲಿ ಸರಿಯಾದ ಪೌಷ್ಟಿಕಾಂಶ ದೊರೆತಿಲ್ಲ ಅಂದರೆ ಚಿಂತೆ ಬೇಡ ಕಾರಣ ಪಪ್ಪಾಯದಲ್ಲಿ ವಿಟಮಿನ್ಗಳು ಸಮೃದ್ಧವಾಗಿವೆ. ಆ್ಯಂಟಿಆಕ್ಸಿಡೆಂಟ್ ಆಗಿರುವ ವಿಟಮಿನ್ ಎ, ಇ ಹಾಗೂ ಸಿ ಪಪ್ಪಾಯದಲ್ಲಿವೆ ಜೊತೆಗೆ ವಿಟಮಿನ್ ಬಿ, ಮಿನರಲ್ಸ್ಗಳು ಕೂಡ ಇರುವುದರಿಂದ ಇದು ಜೀವಕೋಶಗಳ ಮರುಹುಟ್ಟಿಗೆ ಸಹಾಯ ಮಾಡುತ್ತದೆ.
ಪಪ್ಪಾಯಾದಲ್ಲಿ ಪಾಪಿನ್ ಹಾಗೂ ಕೈಮೊಪಾಪಿನ್ ಎಂಬ ಕಿಣ್ವಗಳಿರುತ್ತವೆ ಇವು ಉರಿಯೂತವನ್ನು ಕಡಿಮೆ ಮಾಡಿ ದೀರ್ಘಕಾಲದ ಸಮಸ್ಯೆಯನ್ನು ಶಮನಗೊಳಿಸುತ್ತದೆ ಜೊತೆಗೆ ಆರ್ಥರೈಟಿಸ್ನಂತಹ ಸಮಸ್ಯೆಯನ್ನೂ ಕಡಿಮೆ ಮಾಡುತ್ತದೆ.
ಅಂದದ ತ್ವಚೆಗೂ ಪಪ್ಪಾಯ ಸಹಾಯ ಮಾಡುತ್ತದೆ, ವಿಟಮಿನ್ ಇ ಅಂಶ ಜೀವಕೊಶಗಳು ಹಾನಿಗೊಳಗಾಗುವುದನ್ನು ತಡೆಯುತ್ತದೆ, ಜೊತೆಗೆ ವಯಸ್ಸಿಗೂ ಮುಂಚೆ ನೆರಿಗೆಗಳು ಮೂಡುವುದನ್ನು ತಡೆಯುತ್ತದೆ, ಪಪ್ಪಾಯದಲ್ಲಿರುವ ಅಗತ್ಯ ಎಣ್ಣೆಯಂಶವು ತ್ವಚೆಯನ್ನು ಮಾಯಿಶ್ಚರೈಸ್ ಮಾಡುತ್ತದೆ.
ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ರಕ್ತ ಸಂಚಾರಕ್ಕೆ ತೊಡಕು ಉಂಟಾಗುತ್ತದೆ ಕೆಲವೊಂದು ಸಲ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ಹಾರ್ಟ್ ಅಟ್ಯಾಕ್ ಆಗುವ ಸಂಭವ ಇರುತ್ತದೆ, ಪಪ್ಪಾಯದಲ್ಲಿ ಫೈಬ್ರಿನ್ ಎನ್ನುವ ಪದಾರ್ಥ ಇರುವುದರಿಂದ ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ.