Categories
ಭಕ್ತಿ ಮಾಹಿತಿ

ಪಾಕಿಸ್ತಾನದಲ್ಲಿ ಇರುವಂತಹ 1500 ವರ್ಷಗಳ ಹಿಂದಿನ ಹಳೆಯ ಹನುಮಂತನ ದೇವಸ್ಥಾನ ಇನ್ನೂ ಇದೆ ? ಯಾಕೆ ಇನ್ನು ನಾಶ ಆಗಿಲ್ಲ ಎನ್ನುವುದಕ್ಕೆ ಉತ್ತರ ಇಲ್ಲಿದೆ .. ಎಲ್ಲ ಹನುಮಂತನ ಭಕ್ತರು ಇದರ ಬಗ್ಗೆ ಖಂಡಿತವಾಗಿ ತಿಳಿದುಕೊಳ್ಳಬೇಕು.

ನಿಮಗೆ ಗೊತ್ತಿರುವ ಹಾಗೆ ನಮ್ಮ ನೆರೆ ದೇಶ ಆಗಿರುವಂತಹ ಪಾಕಿಸ್ತಾನದಲ್ಲಿ ಈ ತರಹ ಹಳೆಯ ದೇವಸ್ಥಾನ ಇರುವುದು ನಿಜವಾಗಲೂ ನಮಗೆ ಹೆಮ್ಮೆ ತರುವಂತಹ ವಿಚಾರ. ಅದರಲ್ಲೂ ಸಾವಿರದ ಐನೂರು ವರ್ಷದ ಹಿಂದಿನ ಹಳೆಯ  ಹನುಮಂತನ ದೇವಸ್ಥಾನ ಇರುವುದು ನಿಜಕ್ಕೂ ಹೆಮ್ಮೆ ತರುವಂತಹ ವಿಚಾರವಾಗಿದೆ. ಈ ದೇವಸ್ಥಾನ ವಿಶೇಷತೆ ಏನಪ್ಪಾ ಅಂದರೆ ಪ್ರಪಂಚದಲ್ಲಿ ಏಕೈಕ ನೈಸರ್ಗಿಕವಾಗಿ ಸೃಷ್ಟಿ ಆಗಿರುವಂತಹ ದೇವಸ್ಥಾನ ಎಂದು ಕರೆಯುತ್ತಾರೆ. ಹಾಗೆ ಈ ದೇವಸ್ಥಾನವನ್ನು ಯಾವುದೇ ಮನುಷ್ಯನ ಆಗಲಿ ಅಥವಾ ದೇಶವನ್ನು ಹಾಗೂ ಪ್ರಾಂತ್ಯವನ್ನು ಆಳಿದ ರಾಜರು ಇದನ್ನು ಕಟ್ಟಿಸಿಲ್ಲ.

ಈ ದೇವಸ್ಥಾನದಲ್ಲಿ ಇರುವಂತಹ ಹನುಮಂತನ ವಿಗ್ರಹವು 8  ಅಡಿ ಎತ್ತರ, ಹಳದಿ ಮತ್ತು ನೀಲಿ ಬಣ್ಣದಿಂದ ಕೂಡಿದೆ. ಹಾಗೆ ಈ ಹನುಮಂತನ ವಿಗ್ರಹ ಪಂಚಮುಖಿ ವಿಗ್ರಹ. ಈ  ಪಂಚಮುಖಿ ಯಾರು ಯಾರು ದೇವರು ಇದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ನರಸಿಂಹ,ಹಯಗ್ರೀವ,ಗರುಡ, ಆದಿ ವರಾಹ ಹಾಗೂ ಹನುಮಂತ. ಹೀಗೆ ಈ ವಿಗ್ರಹವು ಪಂಚಮುಖಿ ಯಾಗಿಯೇ ಇಲ್ಲಿ ನೆಲೆಸಿದೆ.

ಹನುಮಾನ್ ಟೆಂಪಲ್ ಬಗೆಗಿನ ವಿವರವಾದ  ವಿವರಗಳಿಗಾಗಿ ಈ ವಿಡಿಯೋನ ತಪ್ಪದೆ ನೋಡಿ

ಇದು ನೈಸರ್ಗಿಕವಾಗಿ ದೇವಸ್ಥಾನ ಹುಟ್ಟಿದವರಿಂದ ದೇವರು ಆರಾಧಕರಿಗೆ ಭೂಮಿಯ ಮೇಲೆ ಬಂದು ಆಶೀರ್ವಾದ ಮಾಡುತ್ತಾನೆ ಎನ್ನುವುದು ಇಲ್ಲಿಯ ಭಕ್ತರ ಒಂದು ನಂಬಿಕೆಯಾಗಿದೆ. ನೀವೇನಾದರೂ ಈ ದೇವಸ್ಥಾನದ ಒಳಗೆ ಹೋದರೆ ನಿಮಗೆ ಈ ದೇವಸ್ಥಾನದಲ್ಲಿ ಒಂದು ಬಿರುಕು ಬಿಟ್ಟ ಹಂತಹ ಹಳದಿ ಕಲ್ಲಿನ ರಚನೆ ನಿಮಗೆ ಕಂಡುಬರುತ್ತದೆ. ಹಾಗೆಯೇ ಈ ದೇವಸ್ಥಾನವನ್ನು ಅಲ್ಲಿನ  ಭಕ್ತಾದಿಗಳು 2012ರಲ್ಲಿ ನವೀಕರಣಗೊಳಿಸಿ ದರು. ಈ ದೇವಸ್ಥಾನವನ್ನು ಕಟ್ಟಲು ಇಲ್ಲಿನ ಭಕ್ತರು ಹಳದಿ ಕಲ್ಲುಗಳನ್ನು ಹಾಗೂ ಅಮೃತ ಶಿಲೆಗಳು ಬಳಸಿದ್ದಾರೆ ಹೀಗೆ ಬಳಸಿದಂತಹ ಹಳದಿ ಕಲ್ಲುಗಳು ದೇವಸ್ಥಾನದ ಅಂದವನ್ನು ಹೆಚ್ಚಿಸುತ್ತವೆ. ಹಾಗೂ ಇಲ್ಲಿನ ಭಕ್ತರಿಗೆ ಒಂದು ಪ್ರತೀತಿ ಇದೆ ಯಾವುದಾದರೂ ಭಕ್ತರು 108 ಸುತ್ತುಗಳನ್ನು ಈ ದೇವಸ್ಥಾನದ ಪ್ರದಕ್ಷಿಣೆ ಹಾಕಿದರೆ ಅವರಿಗೆ ಇರುವಂತಹ ಎಲ್ಲಾ ಕಷ್ಟಗಳು ಹಾಗೂ ನೋವುಗಳು ನಿವಾರಣೆ ಆಗುತ್ತವೆ ಎನ್ನುವುದು ಇಲ್ಲಿನ ಭಕ್ತರ ಒಂದು ನಂಬಿಕೆಯಾಗಿದೆ.

ಹೀಗೆ ಪ್ರದಕ್ಷಿಣೆ ಹಾಕುವ ಮುಖಾಂತರ ತಮ್ಮ ತಮ್ಮ ನೋವುಗಳನ್ನು ನಿವಾರಣೆ ಮಾಡಿಕೊಳ್ಳುತ್ತಿದ್ದಾರೆ ಹಾಗೆ ಇನ್ನೊಂದು ವಿಶೇಷತೆ ಏನಪ್ಪಾ ಅಂದರೆ ಈ ದೇವಸ್ಥಾನಕ್ಕೆ ಬರುವಂತ ಅವರು ಕೇವಲ ಹಿಂದು ವ್ಯಕ್ತಿಗಳು ಮಾತ್ರ ಅಲ್ಲ ಮುಸಲ್ಮಾನರು ಕೂಡ ಈ ದೇವಸ್ಥಾನಕ್ಕೆ ಬಂದು ತಮ್ಮ ಕಷ್ಟ ನೋವುಗಳನ್ನು ಹೇಳಿಕೊಂಡು ಪೂಜೆಯನ್ನು ಮಾಡುತ್ತಾರೆ. ನಿಜವಾಗಲೂ ಧರ್ಮ ವಿರೋಧಿ ರಾಷ್ಟ್ರದಲ್ಲಿ ಈ ತರದ ದೇವಸ್ಥಾನ ಇದ್ದು ಹಾಗೂ ಎಲ್ಲಾ ತರದ ಆಚರಣೆಗಳು ಇನ್ನೂ ಕೂಡ ನಡೆದುಕೊಂಡು ಹೋಗುತ್ತಿರುವುದು ನಿಜವಾಗಲೂ ನಮಗೆ ಹೆಮ್ಮೆ ತರುವಂತಹ ವಿಚಾರವಾಗಿದೆ. ನೋಡಿದರೆ ಎಲ್ಲರೂ ಕೂಡ ಭಾರತ ಪಾಕಿಸ್ತಾನ ಎಂದು ಹೊಡೆದಾಡುತ್ತಿದ್ದ ಕೆಲವೇ ಜನರು ಮಾತ್ರವೇ ತಮ್ಮ ಮನಸ್ಸಿನಲ್ಲಿ ಕೆಟ್ಟ ವಿಚಾರವನ್ನು ಇಟ್ಟುಕೊಂಡು ಕೆಟ್ಟ ಕೆಟ್ಟ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಆ ದೇವಸ್ಥಾನವನ್ನು ಹಾಗೂ  ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಮಾಡುತ್ತಿರುವ ಹಾಗೂ ಮಾಡುತ್ತಿರುವಂತಹ ಮುಸಲ್ಮಾನರು ನಿಜವಾಗಲೂ ಒಳ್ಳೆಯವರು ಅಂತ ನನಗೆ ಅನಿಸುತ್ತದೆ.

ನಮ್ಮ ಹನುಮಂತ ಹಾಗೂ ಆಂಜನೇಯ ದೇವಸ್ಥಾನವು ಕೇವಲ ಪಾಕಿಸ್ತಾನದಲ್ಲಿ ಮಾತ್ರವೇ ಅಲ್ಲ ಅಮೆರಿಕದಲ್ಲೂ ಕೂಡ ಹಲವಾರು ಜನರು ನಮ್ಮ ಆಂಜನೇಯನನ್ನು ನಂಬುತ್ತಾರೆ ಹಾಗೆ ಆರಾಧನೆಯನ್ನು ಮಾಡುತ್ತಾರೆ. ಗೊತ್ತಾಯ್ತು ಆದರೆ ಈ ವಿಷಯದಲ್ಲಿ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಹಾಗೆ ನಮಗೆ ಕಮೆಂಟ್ ಮಾಡುವುದರ ಮುಖಾಂತರ ನಿಮ್ಮ ಅಭಿಪ್ರಾಯವನ್ನು ತಿಳಿಸಲು ಮರೆಯಬೇಡಿ.

ಪ್ರತೀಯೊಬ್ಬ ಮನುಶ್ಯ ಭಗವದ್ಗೀತಾ ಓದುವುದು ಅಥವಾ ಮಾಯೆಯಲ್ಲಿ ಇಡುವುದು ತುಂಬ ಮುಖ್ಯ , ಇವತ್ತೇ ಖರೀದಿಸಿ ನಿಮ್ಮ ಮನಸ್ಸನ್ನು ಹತೋಟಿಯನ್ನು ಇಟ್ಟುಕೊಳ್ಳಲು ಹಾಗು ನಿಮ್ಮ ಉನ್ನತಿಗೆ ಇದು ನಿಮಗೆ ಸಹಾಯಕಾರಿ ..

ಇನ್ನೇಕೆ ತಡ ಖರೀದಿ ಮಾಡಿ

 

Originally posted on December 3, 2018 @ 12:53 am

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ