Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನನ್ನ ಗಂಡನನ್ನು ಸಾಯಲಿ ಎಂದು ಬನಶಂಕರಿಯ ಹುಂಡಿಗೆ ಒಂದು ಪತ್ರವು ಬಿದ್ದಿದೆ ….!!! ಎರಡು ನಿಮಿಷ ಟೈಮ್ ಇದ್ರೆ ಈ ವಿಚಿತ್ರ ಭಕ್ತಿಯ ಕುರಿತು ಸ್ವಲ್ಪ ಹೊತ್ತು ಓದಿ ಬನ್ನಿ …

ಬೆಂಗಳೂರಿನಲ್ಲಿ ಇರುವಂತಹ ಬನಶಂಕರಿ ದೇವಸ್ಥಾನದಲ್ಲಿ ಒಂದು ವಿಚಿತ್ರವಾದ ಘಟನೆ ನಡೆದಿದೆ ಅದು ಏನಪ್ಪ ಅಂದರೆ ಆ ದೇವಸ್ಥಾನದಲ್ಲಿ ಇರುವಂತಹ ಒಂದು ಹುಂಡಿಯಲ್ಲಿ  ಕೆಲವೊಂದು ಪತ್ರಗಳು ದೊರಕಿವೆ. ಆ ಪತ್ರವನ್ನು ನೀವೇನಾದರೂ ಓದಿದರೆ ಗಾಬರಿ ಆಗ್ತೀರಾ ಯಾಕೆಂದರೆ ಒಬ್ಬಳು ಹೆಂಡತಿ ತನ್ನ ಗಂಡನ ಮೇಲೆ ಅತಿಯಾಗಿ ರೋಸಿ ಹೋಗಿದ್ದಾರೆ ಅನ್ಸುತ್ತೆ. ಹಾಗಾದರೆ ಅವರು ಬರೆದಂತಹ ಪತ್ರವಾದರೂ ಏನು, ಆ ಬನಶಂಕರಿಗೆ ಅವಳು ಹೇಳುತ್ತಿರುವ ಅಂತಹ ಪ್ರಶ್ನೆಗಳು ಅದು ಯಾವುವು ಅವಳಿಗೆ ಬೇಕಾದಂತಹ ವರ ವಾದರೂ ಯಾವುದು ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಇಲ್ಲೊಬ್ಬ ಮಹಿಳೆ ಗಂಡನಿಂದ ಅತಿಯಾಗಿ ರೋಸಿ ಹೋಗಿದ್ದಾರೆ ಅನ್ಸುತ್ತೆ, ಅದಕ್ಕಾಗಿ ಬೆಂಗಳೂರಿನಲ್ಲಿ ಇರುವಂತಹ ಬನಶಂಕರಿಯಲ್ಲಿ ಇರುವಂತಹ ಬನಶಂಕರಿಯ ದೇವಿಯ ದೇವಸ್ಥಾನದ ಹುಂಡಿಯಲ್ಲಿ ಒಂದು ಲೆಟರ್ ಅನ್ನು ಹಾಕಿದ್ದಾಳೆ ಆ ಲೆಟರ್ ನಲ್ಲಿ ನನಗೆ ಗಂಡ ತುಂಬಾ ಕಿರುಕುಳ ಕೊಡುತ್ತಿದ್ದಾನೆ ಅವನನ್ನು ಹೇಗಾದರೂ ಮಾಡು ಸಾಯಿಸಿ , ಅವನು ಸತ್ತು ಹೋದರೆ ನಾನು ವಿಧವೆಯಾಗಿ ಆರಾಮಾಗಿ ಬದುಕುತ್ತೇನೆ, ಅವನ ಕಿರುಕುಳ ನನಗೆ ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ ಅವನನ್ನು ಹೇಗಾದರೂ ಮಾಡಿ ಕೊಂದು ಬಿಡು ಎಂದು ಬನಶಂಕರಿ ದೇವಿಗೆ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

ಅದಲ್ಲದೆ ಇನ್ನೊಂದು ವಿಚಿತ್ರ ವಿಷಯ ಏನಪ್ಪಾ ಅಂದರೆ ತನ್ನ ಮಗ ಮೊದಲ ಸೆಂ ನಲ್ಲೆ ಫೇಲ್  ಆಗಿದ್ದಾರಂತೆ. ನನ್ನ ಮಗ ಎಕ್ಸಾಮ್ ಇನ್ ಅಲ್ಲಿ ಫೇಲಾಗುವುದು ಚಾನ್ಸೇ ಇಲ್ಲ ಯಾಕೆ ಈ ತರ ಆಗಿದ್ದಾನೆ, ಅವನ ಪೇಪರ್ ಮತ್ತೆ ಉತ್ತರವನ್ನು ಚೆಕ್ ಮಾಡಲು ಅಪಿಲ್ ಮಾಡಿದ್ದೇನೆ. ಅದನ್ನು ಹೇಗಾದರೂ ಮಾಡಿ ಸರಿ ಮಾಡು ದೇವರೇ ಅಂತ ಬನಶಂಕರಿ ದೇವರಿಗೆ ಈ ಮಹಿಳೆ ಕೇಳಿಕೊಂಡಿದ್ದಾರೆ. ಈ ವಿಚಾರ ತಿಳಿದ ತಕ್ಷಣ ಅಲ್ಲಿನ ಪೂಜಾರಿಯವರು ಸ್ವಲ್ಪ ಹೊತ್ತು ನಕ್ಕು ತದನಂತರ ಅದನ್ನು ಬಹಿರಂಗವಾಗಿ ಎಲ್ಲರಿಗೂ ಹೇಳಿದ್ದಾರೆ.

ಈ ತರಹ ವಿಚಿತ್ರ ವಾದಂತಹ ವಿಚಾರಗಳು ನಮ್ಮ ನಮ್ಮ ಸುತ್ತಮುತ್ತಲಿನಲ್ಲೇ ನಡೆಯುತ್ತಲೇ ಇರುತ್ತವೆ, ಅವನ್ನು ನೋಡಿ ನಾವು ಸ್ವಲ್ಪ ಹೊತ್ತು ನಕ್ಕು ಬಿಡಬೇಕು ಆದರೆ. ಇದರ ಹಿಂದೆ ಅವರ ಕಷ್ಟಗಳು ಎಷ್ಟಿದೆಯೋ ಗೊತ್ತಿಲ್ಲ. ಮಹಿಳೆ ಯಾವುದನ್ನು ಬೇರೆಯವರಿಗೆ ಹೇಳುವುದಕ್ಕೆ ಆಗದೆ ಸಂಕಟಪಟ್ಟು ಕೊಂಡು ದೇವರಿಗೆ ತಿಳಿಸಲು ಈ ರೀತಿ ಮಾಡಿದ್ದಾಳೆ ಅನ್ನಿಸುತ್ತೆ. ಪಾಪ ಅವಳಿಗೆ ನನ್ನ ಗಂಡ ಕೊಡುವಂತಹ ಕಷ್ಟವು ದೂರವಾಗಲಿ ಎಂದು ನಾನು ಕೇಳಿಕೊಳ್ಳುತ್ತೇನೆ ನೀವು ಕೂಡ ದೇವರ ಹತ್ತಿರ ಒಮ್ಮೆ ಪ್ರಾರ್ಥನೆ ಮಾಡಿಕೊಳ್ಳಿ. ಹಾಗೂ ನಮ್ಮ ಲೇಖನವನ್ನು ಇವಾಗಲೇ ನಿಮ್ಮ ಸ್ನೇಹಿತರಿಗೆ ಮುಟ್ಟುವ ಹಾಗೆ ನೋಡಿಕೊಳ್ಳಿ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಈ ಪೇಜನ್ನು ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.

Leave a Reply

Your email address will not be published. Required fields are marked *