ಹುರಿಗಡಲೆಯನ್ನು ಮಿತವಾಗಿ ಬಳಸುವುದರಿಂದ ಬಲವೃದ್ಧಿ ಆಗುವುದು ಮತ್ತು ವೀರ್ಯ ವೃದ್ಧಿಯಾಗುವುದು, ಖರ್ಜೂರವನ್ನು ಸಣ್ಣಗೆ ಚೂರು ಮಾಡಿ ಹುರಿಗಡಲೆ ಹಿಟ್ಟಿನೊಂದಿಗೆ ಮಿಶ್ರ ಮಾಡಿ ಈ ಮಿಶ್ರಣವನ್ನು ಹಾಲು ಮತ್ತು ಸಕ್ಕರೆಯೊಂದಿಗೆ ಬೆರೆಸಿ ಸೇವಿಸಿದರೆ ದೇಹದ ತೂಕ ಹೆಚ್ಚುವುದು, ಪುರುಷತ್ವ ವೃದ್ಧಿ ಆಗುವುದು ಮತ್ತು ವೀರ್ಯಸ್ಖಲನ ಆಗುವುದು.
ನೀರಿನಲ್ಲಿ ನೆನೆಸಿದ ಕಡಲೆ ಆರೋಗ್ಯಕರ, ಅತಿಯಾಗಿ ಸೇವಿಸಿದರೆ ಮಲಬದ್ಧತೆ ಉಂಟಾಗುವುದು ಮತ್ತು ಜಠರದಲ್ಲಿ ಗಾಳಿ ತುಂಬಿಕೊಂಡು ಅನಾರೋಗ್ಯ ಉಂಟಾಗುವುದು, ಕಡಲೆ ಹಿಟ್ಟಿನಿಂದ ತಯಾರಿಸಿದ ಕರಿದ ತಿಂಡಿಗಳನ್ನು ಹಿತವಾಗಿ ಬಳಸುವುದು ಉತ್ತಮ.
ಕಡಲೆಹಿಟ್ಟನ್ನು ಪಶು ಪ್ರಕಾರವಾಗಿ ಉಪಯೋಗಿಸಬಹುದು, ಮೈತೊಳೆಯಲು ಸಾಬೂನಿಗೆ ಬದಲು ಈ ಹಿಟ್ಟನ್ನು ಬಳಸುವುದರಿಂದ ಚರ್ಮದ ಕಾಂತಿ ಹೆಚ್ಚುವುದು ಮತ್ತು ಚರ್ಮ ಮೃದುವಾಗುವುದು, ಕಡಲೆಹಿಟ್ಟಿನಿಂದ ತಲೆ ತೊಳೆಯುವುದರಿಂದ ಕೂದಲು ಶುಭವಾಗುವುದು ಮತ್ತು ರೇಷ್ಮೆಯಂತೆ ನುಣುಪಾಗುವುದು, ಚರ್ಮರೋಗಗಳಲ್ಲಿ ಅನ್ನ ಬೇಯಿಸಿ ಬಸಿದ ಕಂಚಿಯಲ್ಲಿ ಕಲಸಿದ ಕಡಲೆಹಿಟ್ಟಿನಿಂದ ದೇಹವನ್ನು ತೊಳೆಯುವುದರಿಂದ ಗುಣ ಉಂಟು.
ನುಣ್ಣನೆಯ ಕಡಲೆ ಹಿಟ್ಟಿಗೆ ಒಂದು ಚಿಟಿಕೆ ಅರಿಶಿನ ಮತ್ತು ಸ್ವಲ್ಪ ಕೊಬ್ಬರಿ ಎಣ್ಣೆ ಸೇರಿಸಿ ಚೆನ್ನಾಗಿ ಮಸೆಯಿರಿ, ಈ ಸರಿಯನ್ನು ಅಂಗಾಂಗಗಳಿಗೆ ಹಚ್ಚಿ ಚೆನ್ನಾಗಿ ಮಾಲೀಶು ಮಾಡಿ, ಹತ್ತರಿಂದ ಹದಿನೈದು ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ, ಹೀಗೆ ಮಾಡುವುದರಿಂದ ಚರ್ಮ ಒಡೆಯುವುದನ್ನು ತಡೆಗಟ್ಟಬಹುದು.
ದೇಹದ ಚರ್ಮ ಶುಷ್ಕವಾಗಿದ್ದರೆ ಕಡಲೆ ಹಿಟ್ಟನ್ನು ಹಾಲಿನಲ್ಲಿ ಚೆನ್ನಾಗಿ ಮತ್ತು ನಿಂಬೆ ರಸ ಹಿಂಡಿ ಚರ್ಮದ ಮೇಲೆ ಹಚ್ಚಿದರೆ ಚರ್ಮ ಮೃದುವಾಗುವುದು.
ಹೊಟ್ಟಿಲ್ಲದ ಹುರಿಗಡಲೆ ಅನ್ನು ಬಿಸಿ ಮಾಡಿ ನೋಡುವುದರಿಂದ ಕಫಾ ನಿವಾರಣೆಯಾಗುವುದು, ಅದೇ ಹುರಿಗಡಲೆಯನ್ನು ತಿನ್ನುವುದರಿಂದ ನಗಡಿ ಕಡಿಮೆಯಾಗುವುದು, ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.