ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸಂದಾನಕ್ಕೆಂದು ಇಬ್ಬರನ್ನು ಕರೆಸಿ ಮಾತಾಡುವ ಪ್ರಯತ್ನವನ್ನು ಮಾಡಿಯು ವಿಷ್ಯ ಕೈತಪ್ಪಿದೆ ಎಂದು ತಿಳಿದು ಸುಮ್ಮಾನಾಗಿದೆ, ಇನ್ನು ನಟ ಅರ್ಜುನ್ ಸರ್ಜಾ ಅವರು ಯಾವುದೇ ಕಾರಣಕ್ಕೂ ಸಂಧಾನದ ಮಾತೆ ಇಲ್ಲ, ನಾನೇನಾದರೂ ಈ ಸಂಧಾನಕ್ಕೆ ಒಪ್ಪಿ ಕೊಂಡರೆ ನನ್ನ ಮೇಲೆ ಇರುವ ಈ ಆರೋಪ ನಿಜವಾಗುತ್ತದೆ, ಕರ್ನಾಕಟ ಅಷ್ಟೇ ಅಲ್ಲದೆ ತಮಿಳುನಾಡು, ಅಂದ್ರ ಪ್ರದೇಶ ಹಾಗು ಕೇರಳ ನಾಡಿನಲ್ಲೂ ಈ ವಿಷ್ಯ ಹರಡಿದ್ದು ಬರಿ ನನ್ನ ಹೆಸರಷ್ಟೇ ಅಲ್ಲ ನನ್ನ ಕುಟುಂಬದ ಹೆಸರನ್ನ ನಾಶ ಮಾಡಿದ ಹಾಗೆ ಯಾಗುತ್ತದೆ ನಾನು ಮಾತ್ರ ಆಕೆಯ ಮೇಲೆ ದೂರು ದಾಖಲಿಸುತ್ತೇನೆ ಎಂದಿದ್ದಾರೆ.
ಆದ್ರೆ ಶ್ರುತಿ ಅವರು ಮಾತ್ರ ನಾನು ಅರ್ಜುನ್ ಸರ್ಜಾ ಅವರ ಮೇಲೆ ದೂರು ದಾಖಲಿಸುವ ಬದಲಾಗಿ ಅವರ ( ಅರ್ಜುನ್ ) ಸ್ನೇಹಿತ ಹಾಗು ಆಪ್ತರ ಮೇಲೆ ದೂರು ನೀಡಿದ್ದರು, ಆದರೆ ಅರ್ಜುನ್ ಸರ್ಜಾ ಅವರು ದೂರು ನೀಡಲು ಮುಂದಾದಾಗ ನಾನು ಕರ್ನಾಟಕ ವಾಣಿಜ್ಯ ಮಂಡಳಿಗೆ ಗೌರವ ಕೊಟ್ಟು ಅರ್ಜುನ್ ರ ಮೇಲೆ ದೂರು ನೀಡಿರಲಿಲ್ಲ ಆದರೆ ಈಗ ನಾನು ಚೆನ್ನೈ ನಲ್ಲಿ ಶೂಟಿಂಗ್ ನಲ್ಲಿ ಇದ್ದು ಬಂಡ ಕೂಡಲೇ ಅರ್ಜುನ್ ರವರ ಮೇಲೆ ಕಮೀಷನರ್‍ಗೆ ಹಾಗೂ ಮಹಿಳಾ ಆಯೋಗಕ್ಕೆ ಅರ್ಜುನ್ ಸರ್ಜಾ ಅವರ ಕಿರುಕುಳದ ಕುರಿತು ದೂರು ನೀಡಲು ನಿರ್ಧರಿಸಿದ್ದಾರೆ, ಸದ್ಯ ಇಂದು ಮಧ್ಯಾಹ್ನ ಸುದ್ದಿ ಗೋಷ್ಠಿ ನಡೆಸಿ ಈ ಬಗ್ಗೆ ಖುದ್ದು ಶ್ರುತಿ ಆಪ್ತರಿಂದ ಅರ್ಜುನ್ ಸರ್ಜಾ ವಿರುದ್ಧ ದೂರಿನ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಸದ್ಯ ಶೃತಿ, ಅರ್ಜುನ್ ವಿರುದ್ಧ ದೂರುಗಳ ಮೇಲೆ ದೂರು ದಾಖಲಿಸಲು ಮುಂದಾಗಿದ್ದಾರೆ, ಸೇರಿಗೆ ಸವ್ವಾಸೇರು ಅನ್ನುವಂತೆ ಅರ್ಜುನ್ ಮಾನನಷ್ಟ ಮೊಕದ್ದಮ್ಮೆಗೆ ಶ್ರುತಿ ಪ್ರತಿ ದೂರು ನೀಡಲಿದ್ದಾರೆ, ಅಲ್ಲದೇ ಅರ್ಜುನ್ ವಿರುದ್ಧ ಲೈಂಗಿಕ ಕಿರುಕುಳ ದೂರು ಹಾಗೂ ಮಹಿಳಾ ಆಯೋಗಕ್ಕೆ ಪ್ರತ್ಯೇಕ ದೂರು ನೀಡಲು ಶ್ರುತಿ ಅಂಡ್ ಟೀಂ ಸಜ್ಜಾಗಿದ್ದಾರೆ ಎನ್ನಲಾಗಿದೆ.
ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನ ಮರೆಯದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಹಾಗು ಹೆಚ್ಚಿನ ತಾಜಾ ಸುದ್ದಿಗಾಗಿ ನಮ್ಮ ಪೇಜ್ ಮರೆಯದೆ ಲೈಕ್ ಮಾಡಿ.